
ಬೆಂಗಳೂರು, ಜುಲೈ 9: ಸಿಲಿಕಾನ್ ಸಿಟಿ ಮೂಲದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಿಕಾ ಕಂಪನಿಯಾದ ಓಬೆನ್ ಎಲೆಕ್ಟ್ರಿಕ್, ತನ್ನ ಇತ್ತೀಚಿನ ಪ್ರೀಮಿಯಂ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಮಾಡಲ್ ಆದ ‘ಓಬೆನ್ ರೋರ್ ಇವೊ’ (Oben Rorr Evo) ವಿತರಣೆಯನ್ನು (Deliveries) ತನ್ನ ತವರು ನಗರಿ ಬೆಂಗಳೂರಿನಲ್ಲಿ ಅಧಿಕೃತವಾಗಿ ಪ್ರಾರಂಭಿಸಿದೆ. ಮಾರುಕಟ್ಟೆಗೆ ಬಂದ ಕೆಲವೇ ದಿನಗಳಲ್ಲಿ ಈ ಬೈಕ್ ಗ್ರಾಹಕರಿಂದ ಭರ್ಜರಿ ಪ್ರತಿಕ್ರಿಯೆ ಪಡೆದಿದ್ದು, ದೇಶಾದ್ಯಂತ ಈಗಾಗಲೇ 25,000ಕ್ಕೂ ಹೆಚ್ಚು ಬುಕ್ಕಿಂಗ್‌ಗಳನ್ನು ದಾಖಲಿಸಿದೆ.
ಬಲಿಷ್ಠ ಬ್ಯಾಟರಿ ತಂತ್ರಜ್ಞಾನ: ಈ ಬೈಕ್‌ನಲ್ಲಿ ಸುರಕ್ಷಿತ ಮತ್ತು ದೀರ್ಘಕಾಲ ಬಾಳಿಕೆ ಬರುವ LFP (Lithium Iron Phosphate) ಬ್ಯಾಟರಿ ತಂತ್ರಜ್ಞಾನವನ್ನು ಬಳಸಲಾಗಿದೆ. ಇದು ಭಾರತದ ಹವಾಮಾನಕ್ಕೆ ಅತ್ಯಂತ ಸೂಕ್ತವಾಗಿದೆ.
ಇದನ್ನೂ ಓದಿ: ಟಿಸಿಎಸ್ನಲ್ಲಿ ಭರ್ಜರಿ ನೇಮಕಾತಿ; ಮೊದಲ ತ್ರೈಮಾಸಿಕದಲ್ಲಿ 9,200 ಉದ್ಯೋಗಿಗಳ ಸೇರ್ಪಡೆ; ಕಂಪನಿಯ ಆದಾಯವೂ ನಿರೀಕ್ಷೆಗಿಂತ ಹೆಚ್ಚು
ಕಂಪನಿಯು ತನ್ನ ಮೊದಲ ಹಂತದ ವಿತರಣೆಯನ್ನು ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್ (HSR Layout) ನಲ್ಲಿರುವ ತನ್ನ ಪ್ರಮುಖ ಶೋರೂಮ್ ಮೂಲಕ ಆರಂಭಿಸಿದೆ. ಮುಂಬರುವ ವಾರಗಳಲ್ಲಿ ಮುಂಬೈ, ಪುಣೆ, ದೆಹಲಿ ಸೇರಿದಂತೆ ದೇಶದ ಇತರ ಪ್ರಮುಖ ನಗರಗಳಿಗೂ ಈ ವಿತರಣೆಯನ್ನು ವಿಸ್ತರಿಸಲು ಕಂಪನಿ ಯೋಜಿಸಿದೆ. ಶೋರೂಮುಗಳ ಸಂಖ್ಯೆ 150 ದಾಟಿಸುವ ಗುರಿ ಹೊಂದಿದೆ.
ಓಬೆನ್ ರೋರ್ ಇವೊ ಎಲೆಕ್ಟ್ರಿಕ್ ಬೈಕ್‌ನ ಎಕ್ಸ್ ಶೋರೂಮ್ ಬೆಲೆ 1,25,000 ರೂ ಇದೆ. ಇದಕ್ಕೆ ಇನ್ಷೂರೆನ್ಸ್, ರೋಡ್ ಟ್ಯಾಕ್ಸ್ ಇತ್ಯಾದಿ ಶುಲ್ಕ ಸೇರಿಸಿದರೆ 1.30 ಲಕ್ಷ ರೂ ದಾಟುತ್ತದೆ.
ಇದನ್ನೂ ಓದಿ: ವಿಕಿಪೀಡಿಯಾ ಸಹ-ಸ್ಥಾಪಕನಿಗೇ ನಿಷೇಧ: ‘ಅನಾಮಧೇಯ ಗುಂಪುಗಳ’ ಕೈಯಲ್ಲಿದೆ ಜಗತ್ತಿನ ಅತಿ ದೊಡ್ಡ ಜ್ಞಾನಕೋಶ
“25,000ಕ್ಕೂ ಹೆಚ್ಚು ಬುಕ್ಕಿಂಗ್‌ಗಳು ನಮ್ಮ ಬೈಕ್‌ನ ವಿನ್ಯಾಸ ಮತ್ತು ತಂತ್ರಜ್ಞಾನದ ಮೇಲಿರುವ ಗ್ರಾಹಕರ ನಂಬಿಕೆಯನ್ನು ತೋರಿಸುತ್ತದೆ. ಬೆಂಗಳೂರಿನಿಂದ ಆರಂಭವಾಗಿರುವ ಈ ಪಯಣವನ್ನು ಶೀಘ್ರದಲ್ಲೇ ದೇಶದಾದ್ಯಂತ ವಿಸ್ತರಿಸಲಿದ್ದೇವೆ” ಎಂದು ಓಬೆನ್ ಎಲೆಕ್ಟ್ರಿಕ್‌ನ ಸಹ-ಸಂಸ್ಥಾಪಕಿ ಹಾಗೂ ಸಿಇಒ ಮಧುಮಿತಾ ಅಗರವಾಲ್ ತಿಳಿಸಿದ್ದಾರೆ.
ಐಐಟಿ ಮತ್ತು ಐಐಎಂನಲ್ಲಿ ಓದಿದ್ದ ದಿನಕರ್ ಅಗ್ರವಾಲ್ ಮತ್ತು ಮಧುಮಿತಾ ಅಗ್ರವಾಲ್ ಅವರು ಈ ಕಂಪನಿಯ ಸಂಸ್ಥಾಪಕರು. ದಿನಕರ್ ಅವರು ಸಿಒಒ ಆದರೆ, ಮಧುಮಿತಾ ಸಿಇಒ ಆಗಿದ್ದಾರೆ.
ಪ್ರಶ್ನೆ: ಓಬೆನ್ ಎಲೆಕ್ಟ್ರಿಕ್ ಕಂಪನಿ ಯಾವ ದೇಶದ್ದು?
ಉತ್ತರ: ಓಬೆನ್ ಎಲೆಕ್ಟ್ರಿಕ್ ಕಂಪನಿ ಭಾರತದ್ದು. ಅದೂ ಬೆಂಗಳೂರಿನಲ್ಲೇ ಹುಟ್ಟಿರುವುದು. ಮಧುಮಿತಾ ಅಗರ್ವಾಲ್ ಮತ್ತು ದಿನಕರ್ ಅಗರ್ವಾಲ್ ಇದರ ಸಂಸ್ಥಾಪಕರು.
ಪ್ರಶ್ನೆ: ಓಬೆನ್ ಎಲೆಕ್ಟ್ರಿಕ್ ಯಾವ್ಯಾವ ಉತ್ಪನ್ನಗಳನ್ನು ಹೊಂದಿದೆ?
ಉತ್ತರ: ಓಬೆನ್ ಎಲೆಕ್ಟ್ರಿಕ್ ಸಂಸ್ಥೆ ಎಲೆಕ್ಟ್ರಿಕ್ ಬೈಕ್ಗಳನ್ನು ತಯಾರಿಸುತ್ತದೆ. Rorr Evo ಮತ್ತು Rorr EZ Sigma ಎಂಬ 2 ಮಾಡಲ್ಗಳು ಸದ್ಯಕ್ಕಿವೆ. Rorr Evo ವಿತರಣೆ ಆರಂಭವಾಗಿದೆ.
ಪ್ರಶ್ನೆ: ಓಬೆನ್ ರೋರ್ ಇವೋ ಬೈಕ್ ಬೆಲೆ ಎಷ್ಟು?
ಉತ್ತರ: ಓಬೆನ್ ಎಲೆಕ್ಟ್ರಿಕ್ ರೋರ್ ಇವೋ ಬೈಕ್‌ನ ಎಕ್ಸ್ ಶೋರೂಮ್ ಬೆಲೆ 1,25,000 ರೂ ಇದೆ. ಇದರ ಬ್ಯಾಟರಿ ರೇಂಜ್ 180 ಕಿಮೀ ಇದೆ.
Published On - 10:34 pm, Thu, 9 July 26