Ola Electric: ಓಲಾ ಎಲೆಕ್ಟ್ರಿಕ್ ಸ್ಕೂಟರ್​ ಮಾರಾಟದಿಂದ ಎರಡು ದಿನದಲ್ಲಿ ರೂ. 1100 ಕೋಟಿ ಸಂಗ್ರಹ

| Updated By: Srinivas Mata

Updated on: Sep 17, 2021 | 7:12 PM

ಓಲಾ ಎಲೆಕ್ಟ್ರಿಕ್​ನಿಂದ ಎರಡು ದಿನದಲ್ಲಿ ಸ್ಕೂಟರ್​ ಮಾರಾಟದ ಮೂಲಕ 1100 ಕೋಟಿ ರೂಪಾಯಿ ಸಂಗ್ರಹ ಮಾಡಲಾಗಿದೆ.

Ola Electric: ಓಲಾ ಎಲೆಕ್ಟ್ರಿಕ್ ಸ್ಕೂಟರ್​ ಮಾರಾಟದಿಂದ ಎರಡು ದಿನದಲ್ಲಿ ರೂ. 1100 ಕೋಟಿ ಸಂಗ್ರಹ
ಭವಿಷ್ ಅಗರ್​ವಾಲ್
Follow us on

ಬೆಂಗಳೂರು: ಓಲಾ ಕ್ಯಾಬ್ಸ್​ನ ಮಾತೃ ಸಂಸ್ಥೆಯಾದ ಎಎನ್ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್​ನ ಎಲೆಕ್ಟ್ರಿಕ್ ವಾಹನ ಅಂಗ ಸಂಸ್ಥೆಯಾದ ಓಲಾ ಎಲೆಕ್ಟ್ರಿಕ್​ನಿಂದ ಎಲೆಕ್ಟ್ರಿಕ್ ಸ್ಕೂಟರ್‌ಗಳಾದ ಓಲಾ S1 ಮತ್ತು S1 ಪ್ರೊಗಳ ಮಾರಾಟದಿಂದ ಎರಡು ದಿನಗಳಲ್ಲಿ ರೂ. 1,100 ಕೋಟಿಗಳಷ್ಟು ಸಂಗ್ರಹಿಸಲಾಗಿದೆ ಎಂದು ಸಂಸ್ಥಾಪಕ ಭವಿಷ್ ಅಗರ್‌ವಾಲ್ ತಿಳಿಸಿದ್ದಾರೆ. ಬುಧವಾರ ಖರೀದಿಯ ಮೊದಲ ದಿನ, ಓಲಾ ಎಲೆಕ್ಟ್ರಿಕ್ 600 ಕೋಟಿ ರೂಪಾಯಿಯಷ್ಟು ಮಾರಾಟ ಮಾಡಿತು ಮತ್ತು ಮೊದಲ 24 ಗಂಟೆಗಳಲ್ಲಿ ಪ್ರತಿ ಸೆಕೆಂಡಿಗೆ ನಾಲ್ಕು ಸ್ಕೂಟರ್‌ಗಳನ್ನು ಮಾರಾಟ ಮಾಡಲು ಸಾಧ್ಯವಾಯಿತು ಎಂದು ಹೇಳಿಕೊಳ್ಳಲಾಗಿದೆ.

“ಗುರುವಾರ ಓಲಾ S1 ಮತ್ತು S1 ಪ್ರೊ ಖರೀದಿಯ ಎರಡನೇ ಮತ್ತು ಅಂತಿಮ ದಿನವಾಗಿತ್ತು. ನಮ್ಮ ಶ್ರೇಣಿಯ ಎಲೆಕ್ಟ್ರಿಕ್ ಸ್ಕೂಟರ್ […] ಒಟ್ಟು 2 ದಿನಗಳಲ್ಲಿ, 1100 ಕೋಟಿ ರೂಪಾಯಿಗಳಷ್ಟು ಮಾರಾಟ ಮಾಡಿದ್ದೇವೆ! ಇದು ಕೇವಲ ಆಟೋಮೋಟಿವ್ ಉದ್ಯಮದಲ್ಲಿ ಮಾತ್ರವೇ ಅಲ್ಲ, ಆದರೆ ಭಾರತೀಯ ಇ-ಕಾಮರ್ಸ್ ಇತಿಹಾಸದಲ್ಲಿ ಒಂದೇ ಒಂದು ಉತ್ಪನ್ನದ ಒಂದು ದಿನದ (ಮೌಲ್ಯದ ಪ್ರಕಾರ) ಅತ್ಯಧಿಕ ಮಾರಾಟಗಳಲ್ಲಿ ಒಂದಾಗಿದೆ! ನಾವು ನಿಜವಾಗಿಯೂ ಡಿಜಿಟಲ್ ಭಾರತದಲ್ಲಿ ವಾಸಿಸುತ್ತಿದ್ದೇವೆ,” ಎಂದು ಅಗರ್‌ವಾಲ್ ಹೇಳಿದ್ದಾರೆ.

“ಖರೀದಿಯ ಮೊದಲನೇ ದಿನವು ನಮಗೆ ಮತ್ತು ಆಟೋ ಉದ್ಯಮಕ್ಕೆ ಅಭೂತಪೂರ್ವವಾಗಿದ್ದರೂ, ಎರಡನೇ ದಿನ ಸರಳವಾಗಿ ಮುಂದುವರಿಯಿತು! ನಮ್ಮ ಉತ್ಪನ್ನಗಳಿಗಾಗಿ ಗ್ರಾಹಕರು ತೋರಿಸಿದ ಸಂಭ್ರಮ ಮತ್ತು ಉತ್ಸಾಹವು ಉದ್ದಕ್ಕೂ ಹೆಚ್ಚಾಗಿದೆ,” ಎಂದು ಅಗರ್‌ವಾಲ್ ಹೇಳಿದ್ದಾರೆ. ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಕಾಯ್ದಿರಿಸುವಿಕೆ ಮುಕ್ತವಾಗಿರುತ್ತದೆ ಎಂದು ಅಗರ್‌ವಾಲ್ ಹೇಳಿದ್ದು, ಕಂಪೆನಿಯು ನವೆಂಬರ್ 1ರಿಂದ ಎರಡನೇ ಖರೀದಿ ವಿಂಡೋವನ್ನು ತೆರೆಯಲು ಯೋಜಿಸುತ್ತಿದೆ.

“ಖರೀದಿ ವಿಂಡೋವನ್ನು ಈಗ ಮುಚ್ಚಲಾಗಿದ್ದರೂ ನಮ್ಮ ರಿಸರ್ವೇಷನ್ olaelectric.comನಲ್ಲಿ ತೆರೆದಿರುತ್ತವೆ ಮತ್ತು ದೀಪಾವಳಿಯ ಸಮಯಕ್ಕೆ ನಾವು ನವೆಂಬರ್ 1, 2021ರಂದು ಖರೀದಿ ವಿಂಡೋವನ್ನು ಪುನಃ ತೆರೆಯುತ್ತೇವೆ ಎಂದು ನಿಮ್ಮೆಲ್ಲರಿಗೂ ತಿಳಿಸಲು ನಾನು ಬಯಸುತ್ತೇನೆ. ಆದ್ದರಿಂದ ನೀವು ಓಲಾ S1 ಮತ್ತು S1 ಪ್ರೊ ಅನ್ನು ಖರೀದಿಸಲು ಬಯಸಿದರೆ, ಆದಷ್ಟು ಬೇಗ ಕಾಯ್ದಿರಿಸಿ. ಈಗಾಗಲೇ ಕಾಯ್ದಿರಿಸಿದ, ಆದರೆ ನಿನ್ನೆ ಕೊನೆಗೊಂಡ ವಿಂಡೋದಲ್ಲಿ ಖರೀದಿಸದವರು ಕೂಡ ನವೆಂಬರ್ 1ರಂದು ಖರೀದಿಸಬಹುದು,” ಎಂದು ಅಗರ್‌ವಾಲ್ ಹೇಳಿದ್ದಾರೆ.

ಸ್ಕೂಟರ್‌ಗಳ ವಿತರಣೆಯು ಅಕ್ಟೋಬರ್‌ನಲ್ಲಿ ದೇಶಾದ್ಯಂತ 1,000 ನಗರಗಳು ಮತ್ತು ಪಟ್ಟಣಗಳಲ್ಲಿ ಆರಂಭವಾಗುವ ನಿರೀಕ್ಷೆಯಿದೆ. ಓಲಾ ಆಗಸ್ಟ್‌ನಲ್ಲಿ ತನ್ನ ಸ್ಕೂಟರ್‌ಗಳನ್ನು ಆನ್‌ಲೈನ್ ಮತ್ತು ಆಫ್‌ಲೈನ್ ಅನುಭವ ಕೇಂದ್ರಗಳನ್ನು ಒಳಗೊಂಡಂತೆ ವಿವಿಧ ಚಾನೆಲ್ ಮಾದರಿಯ ಮೂಲಕ ಮಾರಾಟ ಮಾಡುವುದಾಗಿ ಹೇಳಿತ್ತು. ಓಲಾ ಎಲೆಕ್ಟ್ರಿಕ್ ತನ್ನ ಪಾಲುದಾರರೊಂದಿಗೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಚಾರ್ಜಿಂಗ್ ನೆಟ್​ವರ್ಕ್ ಅನ್ನು ನಿರ್ಮಿಸಲು ಮುಂದಿನ ಐದು ವರ್ಷಗಳಲ್ಲಿ 2 ಬಿಲಿಯನ್ ಅಮೆರಿಕನ್ ಡಾಲರ್​ ಹೂಡಿಕೆ ಮಾಡುವ ನಿರೀಕ್ಷೆಯಿದೆ.

ಇದನ್ನೂ ಓದಿ: ಮಾಡುತ್ತೇವೆ ಅಂತ ಹೇಳಿದ್ದನ್ನೇ ಮಾಡದ ನಾವು ಹೇಳದೆ ಮಾಡುವ ಓಲಾ ಸಂಸ್ಥೆ ಮಾಲೀಕ ಭಾವಿಶ್​​ರಿಂದ ಬಹಳಷ್ಟು ಕಲಿಯಬೇಕಿದೆ!

(Ola Electric Collected Rs 1100 Crores Within Two Days Of Sales)

Published On - 7:09 pm, Fri, 17 September 21