Multibagger: ಈ ಫಾರ್ಮಾ ಸ್ಟಾಕ್ನಿಂದ ಆರು ತಿಂಗಳಲ್ಲಿ ಹೂಡಿಕೆದಾರರಿಗೆ 650 ಪರ್ಸೆಂಟ್ ಗಳಿಕೆ
Multibagger: ಈ ಫಾರ್ಮಾ ಸ್ಟಾಕ್ನಿಂದ ಆರು ತಿಂಗಳಲ್ಲಿ ಹೂಡಿಕೆದಾರರಿಗೆ 650 ಪರ್ಸೆಂಟ್ ಗಳಿಕೆ ಎನ್ಎಸ್ಇ ನಿಫ್ಟಿ (NSE Nifty), ಬಿಎಸ್ಇ ಸೆನ್ಸೆಕ್ಸ್ (BSE Sensex)ನಲ್ಲಿ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕಗಳು ದಾಖಲೆ ಗರಿಷ್ಠ ಮಟ್ಟಕ್ಕೆ ಏರಿದರೆ, ಬೆರಳೆಣಿಕೆಯಷ್ಟು ಷೇರುಗಳು 2021ರಲ್ಲಿ ಮಲ್ಟಿಬ್ಯಾಗರ್ ಷೇರುಗಳ ಎಲೈಟ್ ಪಟ್ಟಿಗೆ ಸೇರಿವೆ. ಎಎನ್‌ಜಿ ಲೈಫ್ ಸೈನ್ಸ್ ಷೇರುಗಳು ಅವುಗಳಲ್ಲಿ ಒಂದಾಗಿದೆ. ಈ ಫಾರ್ಮಾ ಸ್ಟಾಕ್ ಕಳೆದ ಆರು ತಿಂಗಳಲ್ಲಿ ಒಂದಕ್ಕೆ ರೂ. 85.50 ರಿಂದ ರೂ. 642.10ಕ್ಕೆ ಏರಿದೆ […]
Multibagger: ಈ ಫಾರ್ಮಾ ಸ್ಟಾಕ್ನಿಂದ ಆರು ತಿಂಗಳಲ್ಲಿ ಹೂಡಿಕೆದಾರರಿಗೆ 650 ಪರ್ಸೆಂಟ್ ಗಳಿಕೆ ಎನ್ಎಸ್ಇ ನಿಫ್ಟಿ (NSE Nifty), ಬಿಎಸ್ಇ ಸೆನ್ಸೆಕ್ಸ್ (BSE Sensex)ನಲ್ಲಿ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕಗಳು ದಾಖಲೆ ಗರಿಷ್ಠ ಮಟ್ಟಕ್ಕೆ ಏರಿದರೆ, ಬೆರಳೆಣಿಕೆಯಷ್ಟು ಷೇರುಗಳು 2021ರಲ್ಲಿ ಮಲ್ಟಿಬ್ಯಾಗರ್ ಷೇರುಗಳ ಎಲೈಟ್ ಪಟ್ಟಿಗೆ ಸೇರಿವೆ. ಎಎನ್‌ಜಿ ಲೈಫ್ ಸೈನ್ಸ್ ಷೇರುಗಳು ಅವುಗಳಲ್ಲಿ ಒಂದಾಗಿದೆ. ಈ ಫಾರ್ಮಾ ಸ್ಟಾಕ್ ಕಳೆದ ಆರು ತಿಂಗಳಲ್ಲಿ ಒಂದಕ್ಕೆ ರೂ. 85.50 ರಿಂದ ರೂ. 642.10ಕ್ಕೆ ಏರಿದೆ (ಇಂದು (ಸೆ.17) ಬಿಎಸ್‌ಇಯಲ್ಲಿ ಮಧ್ಯಾಹ್ನ 12.44ಕ್ಕೆ)- ಈ ಅವಧಿಯಲ್ಲಿ ತನ್ನ ಷೇರುದಾರರಿಗೆ ಸುಮಾರು ಶೇ 650ರಷ್ಟು ಲಾಭವನ್ನು ದಾಖಲಿಸಿದೆ.
ANG ಲೈಫ್ ಸೈನ್ಸ್ ಬೆಲೆ ಇತಿಹಾಸ ಈ ಮಲ್ಟಿಬ್ಯಾಗರ್ ಸ್ಟಾಕ್ ಪ್ರಾಫಿಟ್-ಬುಕಿಂಗ್ ಒತ್ತಡದಲ್ಲಿದೆ. ಏಕೆಂದರೆ ಇದು ಇಂಟ್ರಾಡೇ ಟ್ರೇಡ್ ಸೆಷನ್‌ನಲ್ಲಿ ಶೇಕಡಾ 5ರಷ್ಟು ಕಡಿಮೆ ಆಗಿದೆ. ಕಳೆದ 5 ಟ್ರೇಡ್ ಸೆಷನ್‌ಗಳಲ್ಲಿ ಇದು ಅತಿ ಹೆಚ್ಚು ಮೊತ್ತವಾದ ರೂ. 744.70ನಲ್ಲಿ ಮುಕ್ತಾಯ ಆಗಿತ್ತು. ಆದರೆ ಆ ಗರಿಷ್ಠ ಮಟ್ಟವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಹಾಗೂ ಈ ಮಟ್ಟದಿಂದ ಈಕ್ವಿಟಿ ಷೇರಿಗೆ ರೂ. 642.10ಕ್ಕೆ ಇಳಿದಿದೆ. ಆದರೆ ಕಳೆದ ಒಂದು ತಿಂಗಳಲ್ಲಿ ಈ ಫಾರ್ಮಾ ಸ್ಟಾಕ್ ಪ್ರತಿ ಷೇರಿಗೆ 527 ರೂಪಾಯಿಯಿಂದ ರೂ.642.10ಕ್ಕೆ ಏರಿದೆ – ಸುಮಾರು ಶೇ 22ರಷ್ಟು ಏರಿಕೆಯಾಗಿದೆ. ಅದೇ ರೀತಿ, ಕಳೆದ ಆರು ತಿಂಗಳಲ್ಲಿ ಈ ಮಲ್ಟಿಬ್ಯಾಗರ್ ಸ್ಟಾಕ್ ರೂ. 85.50ರಿಂದ ರೂ. 642.10 ಕ್ಕೆ ಜಿಗಿದಿದ್ದು, ಷೇರುದಾರರಿಗೆ ಸುಮಾರು ಶೇ 650ರಷ್ಟು ಲಾಭವನ್ನು ದೊರಕಿಸಿದೆ.
ಹೂಡಿಕೆದಾರರ ಮೇಲೆ ಪರಿಣಾಮ ಈ ಮಲ್ಟಿಬ್ಯಾಗರ್ ಸ್ಟಾಕ್‌ನ ಬೆಲೆ ಇತಿಹಾಸದಿಂದ ಒಂದು ತಿಂಗಳ ಹಿಂದೆ ಹೂಡಿಕೆದಾರರು ಈ ಕೌಂಟರ್‌ನಲ್ಲಿ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೆ, ಈ ಅವಧಿಯಲ್ಲಿ ಹೂಡಿಕೆದಾರರಿಗೆ 1.22 ಲಕ್ಷ ರೂಪಾಯಿ ಆಗುತ್ತಿತ್ತು. ಅದೇ ರೀತಿ 3 ತಿಂಗಳ ಹಿಂದೆ ಹೂಡಿಕೆ ಮಾಡಿದ್ದರೆ 1 ಲಕ್ಷ ರೂಪಾಯಿ ಮೊತ್ತವು 3.56 ಲಕ್ಷ ರೂಪಾಯಿ ಆಗಿರುತ್ತದೆ. ಈ ಸ್ಟಾಕ್ ಪ್ರತಿ ಷೇರಿಗೆ ರೂ. 180.35 ರಿಂದ 642.10 ರೂಪಾಯಿಗೆ ಏರಿಕೆ ಆಗಿರುವುದರಿಂದ ಆ 1 ಲಕ್ಷ ರೂಪಾಯಿ ಮೊತ್ತವು 3.56 ಲಕ್ಷ ರೂಪಾಯಿ ಆಗಿರುತ್ತಿತ್ತು (16ನೇ ಜೂನ್ 2021ಕ್ಕೆ ಮುಕ್ತಾಯ ಬೆಲೆ). ಅಂದರೆ ಹತ್ತಿರ ಹತ್ತಿರ 3.56 ಪಟ್ಟಾಗುತ್ತದೆ.
ಹೂಡಿಕೆದಾರರು ಆರು ತಿಂಗಳ ಹಿಂದೆ ಈ ಕೌಂಟರ್‌ನಲ್ಲಿ 1 ಲಕ್ಷ ರೂಪಾಯಿಯನ್ನು ಹೂಡಿಕೆ ಮಾಡಿದ್ದರೆ ಹಾಗೂ ಆ ಷೇರನ್ನು ಹಾಗೇ ಉಳಿಸಿಕೊಂಡಿದ್ದರೆ ಆ 1 ಲಕ್ಷ ರೂಪಾಯಿ ಇಂದು 7.50 ಲಕ್ಷ ರೂಪಾಯಿ ಆಗಿರುತ್ತಿತ್ತು.
ಎಎನ್‌ಜಿ ಲೈಫ್‌ಸೈನ್ಸಸ್ ಬೆಲೆ ಬಾಹ್ಯನೋಟ ಹೆಚ್ಚಿನ ಲಾಭಕ್ಕಾಗಿ ಈ ಮಲ್ಟಿಬ್ಯಾಗರ್ ಸ್ಟಾಕ್ ಖರೀದಿಸಲು ಹೂಡಿಕೆದಾರರಿಗೆ ಸೂಚಿಸುವಾಗ ಚಾಯ್ಸ್ ಬ್ರೋಕಿಂಗ್‌ನ ಕಾರ್ಯನಿರ್ವಾಹಕ ನಿರ್ದೇಶಕ ಸುಮೀತ್ ಬಗಾಡಿಯಾ, “ಈ ಕೌಂಟರ್ ಅನ್ನು ಪ್ರಸ್ತುತ ಮಾರುಕಟ್ಟೆ ಬೆಲೆಯಲ್ಲಿ ರೂ. 750ರಿಂದ 800 ರೂಪಾಯಿ ಗುರಿಗೆ ರೂ. 600ರಿಂದ 625ಕ್ಕೆ ಪ್ರಬಲ ಸಪೋರ್ಟ್ ಸಿಗಬಹುದು,” ಎನ್ನುತ್ತಾರೆ.
ಇದನ್ನೂ ಓದಿ: Indian Stock Market: ಇದೇ ಮೊದಲ ಬಾರಿಗೆ ಫ್ರಾನ್ಸ್ನ ಮೀರಿಸಿದ ಭಾರತದ ಷೇರು ಮಾರುಕಟ್ಟೆ; ಏನಿದು ಸಾಧನೆ ಗೊತ್ತೆ?
(Investment In This Pharma Stock Gives Return Of 650 Percent In 6 Months Of Time)