Ola Electric: ಓಲಾ ಸ್ಕೂಟರ್​ ಒಂದೇ ದಿನದಲ್ಲಿ 600 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಮಾರಾಟ

| Updated By: Srinivas Mata

Updated on: Sep 16, 2021 | 2:06 PM

ಓಲಾ ಎಲೆಕ್ಟ್ರಿಕ್​ನಿಂದ 600 ಕೋಟಿ ರೂಪಾಯಿ ಮೌಲ್ಯದ ಸ್ಕೂಟರ್​ ಅನ್ನು ಒಂದೇ ದಿನದಲ್ಲಿ ಮಾರಾಟ ಮಾಡಲಾಗಿದೆ. ಆ ಬಗ್ಗೆ ವಿವರ ಇಲ್ಲಿದೆ.

Ola Electric: ಓಲಾ ಸ್ಕೂಟರ್​ ಒಂದೇ ದಿನದಲ್ಲಿ 600 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಮಾರಾಟ
ಸಾಂದರ್ಭಿಕ ಚಿತ್ರ
Follow us on

ಓಲಾ ಎಲೆಕ್ಟ್ರಿಕ್ (Ola Electric) ಕಂಪೆನಿಯು 600 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಓಲಾ S1 ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ ಎಂದು ಓಲಾ ಎಲೆಕ್ಟ್ರಿಕ್ ಘೋಷಣೆ ಮಾಡಿದೆ. ಮುಂಚಿತವಾಗಿಯೇ ಕಾಯ್ದಿರಿಸಿದವರಿಗೆ ಎಲೆಕ್ಟ್ರಿಕ್ ಸ್ಕೂಟರ್ ಕಂಪೆನಿಯು ಬುಧವಾರ ಮಾರಾಟವನ್ನು ಆರಂಭ ಮಾಡಿತು. ಮೊದಲ 24 ಗಂಟೆಗಳಲ್ಲಿ ಪ್ರತಿ ಸೆಕೆಂಡಿಗೆ 4 ಸ್ಕೂಟರ್‌ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಓಲಾ ಎಲೆಕ್ಟ್ರಿಕ್ ಹೇಳಿಕೊಂಡಿದೆ. ಮಾರಾಟವಾದ ಸ್ಕೂಟರ್‌ಗಳ ಮೌಲ್ಯವು ಇಡೀ ದ್ವಿಚಕ್ರ ವಾಹನ ಉದ್ಯಮವು ಒಂದು ದಿನದಲ್ಲಿ ಮಾರಾಟ ಮಾಡುವುದಕ್ಕಿಂತ ಹೆಚ್ಚಾಗಿದೆ ಎಂದು ಹೇಳಲಾಗಿದೆ.

ಓಲಾ ಸಿಇಒ ಭವಿಶ್ ಅಗರ್‌ವಾಲ್ ಟ್ವೀಟ್ ಮೂಲಕ ಈ ಮೈಲುಗಲ್ಲನ್ನು ಆಚರಿಸಿದರು, “ಭಾರತವು ಎಲೆಕ್ಟ್ರಿಕ್ ವಾಹನಗಳಿಗೆ ಬದ್ಧವಾಗಿದೆ ಮತ್ತು ಪೆಟ್ರೋಲ್ ಅನ್ನು ತಿರಸ್ಕರಿಸುತ್ತಿದೆ! ನಾವು 4 ಸ್ಕೂಟರ್‌ಗಳು/ಸೆಕೆಂಡ್​ಗೆ ಗರಿಷ್ಠ ಮಟ್ಟದಲ್ಲಿ ಮಾರಾಟ ಮಾಡಿದ್ದೇವೆ. 600 ಕೋಟಿ+ ಮೌಲ್ಯದ ಸ್ಕೂಟರ್‌ಗಳನ್ನು ಒಂದು ದಿನದಲ್ಲಿ ಮಾರಾಟ ಮಾಡಿದ್ದೇವೆ! ಇಂದು ಕೊನೆಯ ದಿನ, ಖರೀದಿ ಮಧ್ಯರಾತ್ರಿಯಲ್ಲಿ ಕೊನೆಯಾಗುತ್ತದೆ. ಆದ್ದರಿಂದ ಈ ಪರಿಚಯಾತ್ಮಕ ಬೆಲೆಯಲ್ಲಿ (Introductory Price) ಲಾಕ್ ಮಾಡಿ ಮತ್ತು ಮಾರಾಟವಾಗುವ ಮೊದಲು ಓಲಾ ಆ್ಯಪ್‌ನಲ್ಲಿ ಖರೀದಿಸಿ!”

ಗ್ರಾಹಕರು ತಮ್ಮ ಓಲಾ S1 ಮತ್ತು S1 ಪ್ರೊ ಸ್ಕೂಟರ್ ಖರೀದಿಸಲು ಇಂದು ಕೊನೆಯ ದಿನವಾಗಿದೆ. ಈಗಾಗಲೇ ಕಾಯ್ದಿರಿಸಿದವರು ಇಂದು ಮಧ್ಯರಾತ್ರಿಯವರೆಗೆ ಖರೀದಿಸಬಹುದು. ಆ ಸಮಯದಲ್ಲಿ ಖರೀದಿ ವಿಂಡೋ ಮುಚ್ಚುತ್ತದೆ. ಗ್ರಾಹಕರು ಕ್ಯೂನಲ್ಲಿ ತಮ್ಮ ಸ್ಥಾನವನ್ನು ಕಾಯ್ದಿರಿಸುವುದು ಮುಂದುವರಿಸಬಹುದು. ಓಲಾ ಆ್ಯಪ್‌ನಲ್ಲಿ ಮಾತ್ರ ಖರೀದಿ ಲಭ್ಯವಿದೆ. ಓಲಾ S1ಗಾಗಿ ಇಎಂಐಗಳು ರೂ. 2,999ರಿಂದ ಆರಂಭವಾಗುತ್ತವೆ. ಆದರೆ ಓಲಾ S1 ಪ್ರೊಗೆ ಇಎಂಐಗಳು ರೂ. 3,199 ರಿಂದ ಆರಂಭವಾಗುತ್ತವೆ.

ಮುಂಗಡ ಪಾವತಿ ಮಾಡುವಾಗ, ಅಂದಾಜು ವಿತರಣಾ ತಿಂಗಳು (ಮಾಡೆಲ್-ವೇರಿಯಂಟ್-ಪಿನ್ ಕೋಡ್ ಸಂಯೋಜನೆ) ತಿಳಿಸಲಾಗುವುದು. ಓಲಾ ಫ್ಯೂಚರ್ ಫ್ಯಾಕ್ಟರಿಯಿಂದ ಖರೀದಿದಾರರ ಓಲಾ ಸ್ಕೂಟರ್ ಅನ್ನು ಕಳುಹಿಸಿದ ಮೇಲೆ ವಿತರಣೆಯ ನಿಖರವಾದ ದಿನಾಂಕವನ್ನು ತಿಳಿಸುವುದಾಗಿ ಓಲಾ ಭರವಸೆ ನೀಡಿದೆ. ಹೊಸ ಸ್ಕೂಟರ್ S1 ಪ್ರೊ 181 ಕಿ.ಮೀ.ವರೆಗೆ ಡ್ರೈವಿಂಗ್ ರೇಂಜ್ ಮತ್ತು 115 ಕಿಮೀ ವೇಗದ ಗರಿಷ್ಠ ವೇಗದೊಂದಿಗೆ ಬರುತ್ತದೆ.

ಇದನ್ನೂ ಓದಿ: Ola Electric Scooter: ಓಲಾ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಇಂದಿನಿಂದ, ಖರೀದಿದಾರರಿಗೆ ಗೊತ್ತಿರಬೇಕಾದ ಸಂಗತಿಗಳಿವು

Ola Electric Scooter: ಓಲಾ ಸ್ಕೂಟರ್​ ಖರೀದಿಸಬೇಕು ಅಂತಿದ್ದೀರಾ? ಸಾಲ ಸಿಗುತ್ತೆ ಈ ಬ್ಯಾಂಕ್, ಹಣಕಾಸು ಸಂಸ್ಥೆಗಳಿಂದ

(Ola Electric Sell Rs 600 Crore Worth Of Scooters Within One Day)

Published On - 2:04 pm, Thu, 16 September 21