ಬ್ಯಾಂಕ್ ಆಫ್ ಬರೋಡಾ, ಆಕ್ಸಿಸ್ ಬ್ಯಾಂಕ್, ಎಚ್ಡಿಎಫ್ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಐಡಿಎಫ್ಸಿ ಫಸ್ಟ್ ಬ್ಯಾಂಕ್, ಇಂಡಸ್ಇಂಡ್ ಬ್ಯಾಂಕ್, ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್, ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಕೊಟಕ್ ಮಹೀಂದ್ರಾ ಪ್ರೈಮ್, ಟಾಟಾ ಕ್ಯಾಪಿಟಲ್ ಮತ್ತು ಯೆಸ್ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕ್ಗಳು ಮತ್ತು ಹಣಕಾಸು ಸಂಸ್ಥೆಗಳೊಂದಿಗೆ ಓಲಾ ಎಲೆಕ್ಟ್ರಿಕ್ ಒಪ್ಪಂದ ಮಾಡಿಕೊಂಡಿದೆ. ಸಹಯೋಗದ ನಂತರ ದುಬೆ ಮಾತನಾಡಿ, ಓಲಾ ಸ್ಕೂಟರ್‌ಗೆ ಹಣಕಾಸು ಆಯ್ಕೆ ಮಾಡಲು ಇಚ್ಛಿಸುವ ಗ್ರಾಹಕರಿಗೆ ಆಯ್ಕೆಯನ್ನು ಒದಗಿಸಲಾಗುವುದು. ಸಂಪೂರ್ಣ ಖರೀದಿ ಪ್ರಕ್ರಿಯೆಯು ಆನ್‌ಲೈನ್‌ನಲ್ಲಿರುತ್ತದೆ, ಇದು "ಅತ್ಯಂತ ಸುಲಲಿತವಾಗಿರುತ್ತದೆ" ಎಂದು ಹೇಳಿದ್ದಾರೆ. "ಗ್ರಾಹಕರಿಗೆ ದೊರೆಯಲಿರುವ ಸಾಲದ ಅನುಮೋದನೆ ಮೊತ್ತ, ಅವರು ಏನು ಮಾಡಬೇಕೆಂಬುದರ ಬಗ್ಗೆ ಎಲ್ಲಾ ವಿವರಗಳನ್ನು ಸಹ ಪಡೆಯಲು ಸಾಧ್ಯವಾಗುತ್ತದೆ. ಅಲ್ಲದೆ, ನಾವು ಅತ್ಯಂತ ಆಕರ್ಷಕವಾದ ಹಣಕಾಸು ಆಯ್ಕೆಗಳನ್ನು ಪಡೆದುಕೊಂಡಿದ್ದೇವೆ, S1ಗೆ EMI ಕೇವಲ 2,999 ರೂಪಾಯಿಯಿಂದ ಪ್ರಾರಂಭವಾಗುತ್ತದೆ," ಎಂದು ಹೇಳಿದ್ದಾರೆ.