ಬೆಂಗಳೂರು, ಜನವರಿ 31: ಇತ್ತೀಚಿನ ಕೆಲ ದಿನಗಳಿಂದ ದೇಶದ ವಿವಿಧ ಮಂದಿಗೆ ಇಪಿಎಫ್ಒ (EPFO) ವತಿಯಿಂದ ಮೆಸೇಜ್ವೊಂದು ಸಿಕ್ಕಿದೆ. ಇಪಿಎಫ್ ಖಾತೆ ಇರುವ ಪ್ರತಿಯೊಬ್ಬ ಉದ್ಯೋಗಿಗೂ ಈ ಸಂದೇಶವನ್ನು ಕಳುಹಿಸಲಾಗಿದೆ, ಅಥವಾ ಕಳುಹಿಸಲಾಗುತ್ತಿದೆ. ಈ ಮೆಸೇಜ್ನಲ್ಲಿ ಸಮೀಕ್ಷೆಯೊಂದರ ಲಿಂಕ್ ನೀಡಲಾಗಿದೆ. ಈ ಫಾರ್ಮ್ ಅನ್ನು ಭರ್ತಿ ಮಾಡಿ ಸಲ್ಲಿಸಬೇಕು. ಇವತ್ತು ಬಜೆಟ್ ಅಧಿವೇಶನ ಆರಂಭದಲ್ಲಿ ನರೇಂದ್ರ ಮೋದಿ ಅವರು ನಾರಿಶಕ್ತಿಯ (Nari Shakti) ಬಗ್ಗೆ ಮಾತನಾಡಿದರು. ದೇಶದ ಪ್ರಗತಿಗೆ ನಾರಿಶಕ್ತಿ ಬಹಳ ಮುಖ್ಯ ಎಂಬುದನ್ನು ಆರ್ಥಿಕ ತಜ್ಞರೂ ಹೇಳುತ್ತಾ ಬಂದಿದ್ದಾರೆ. ಬೆಳೆಯುತ್ತಿರುವ ಆರ್ಥಿಕತೆಯಲ್ಲಿ ಮಹಿಳೆಯರ ಪಾತ್ರ ಬಹಳ ಮುಖ್ಯವಾಗುತ್ತದೆ. ಆದರೆ, ಕೆಲಸದ ವಿಚಾರಕ್ಕೆ ಬಂದರೆ ಪುರುಷರು ಮತ್ತು ಮಹಿಳೆಯರ ಮಧ್ಯೆ ಅಸಮಾನತೆಯ ಅಂತರ ನಿರೀಕ್ಷಿತ ರೀತಿಯಲ್ಲಿ ಕಡಿಮೆ ಆಗಿಲ್ಲ. ಸರ್ಕಾರ ಇದೆಲ್ಲವನ್ನೂ ಗಮನಿಸುತ್ತಿದ್ದು, ಕಾರ್ಪೊರೇಟ್ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಕೆಲಸದ ವಾತಾವರಣ ಹೇಗಿದೆ ಎಂದು ತಿಳಿದುಕೊಳ್ಳಬಯಸುತ್ತಿರುವಂತಿದೆ. ಅಂತೆಯೇ, ಸಮೀಕ್ಷೆ ನಡೆಸಲಾಗುತ್ತಿದ್ದು, ಇದರ ಸಂಬಂಧ ಇಪಿಎಫ್ ಸದಸ್ಯರಿಗೆ ಅಥವಾ ಎಲ್ಲಾ ಉದ್ಯೋಗಿಗಳ ಮೊಬೈಲ್ಗೆ ಸಂದೇಶ ಕಳುಹಿಸಲಾಗಿದೆ.
ಈ ಫಾರ್ಮ್ನಲ್ಲಿ ಎರಡು ಭಾಗ ಇದೆ. ಮೊದಲೆಯದರಲ್ಲಿ ನೀವು ಕೆಲಸ ಮಾಡುವ ಸಂಸ್ಥೆಯ ಗುರುತು ಹಾಗೂ ಎರಡನೆಯದರಲ್ಲಿ ಆ ಸಂಸ್ಥೆಯಲ್ಲಿನ ಕೆಲಸದ ವಾತಾವರಣದ ಬಗ್ಗೆ ನಿಮ್ಮ ಅಭಿಪ್ರಾಯ, ಇವನ್ನು ಕೇಳಲಾಗಿದೆ.
ಮೊದಲಿಗೆ, ನೀವು ಕೆಲಸ ಮಾಡುವ ಸಂಸ್ಥೆಯ ಹೆಸರು, ಅದು ಯಾವ ವಲಯಕ್ಕೆ ಸೇರಿದ್ದು, ಹಾಗು ಅದರ ವಿಳಾಸ, ಪಿನ್ಕೋಡ್ ಇತ್ಯಾದಿ ವಿವರ ಕೇಳಲಾಗಿದೆ.
ಹಾಗೆಯೇ, ನೀವು ಕೆಲಸ ಮಾಡುವ ಸಂಸ್ಥೆಯಲ್ಲಿ ಮಹಿಳೆಯರಿಗೆ ಇರುವ ನೀತಿಗಳ ಬಗ್ಗೆ ಕೇಳಲಾಗಿದೆ:
ಈ ಮೇಲಿನ ಪ್ರಶ್ನೆಗಳಿಗೆ ನೀವು ಹೌದು ಅಥವಾ ಇಲ್ಲ ಎಂದು ಸರಳವಾಗಿ ಉತ್ತರಿಸಬಹುದು.
ಇದನ್ನು ಓದಿ: IBM: ಆಫೀಸ್ ಸಮೀಪ ಮನೆ ಮಾಡಿ, ಇಲ್ಲ ಕೆಲಸ ಬಿಟ್ಟುಹೋಗಿ: ಮ್ಯಾನೇಜರ್ಗಳಿಗೆ ನಿರ್ದೇಶನ ನೀಡಿದ ಐಬಿಎಂ
ಈ ಸರ್ವೆಯಲ್ಲಿ ನಿಮ್ಮ ಹೆಸರು ಮತ್ತು ಇಪಿಎಫ್ ಖಾತೆಯ ವಿವರ ಇತ್ಯಾದಿಯನ್ನು ಕೇಳಲಾಗುವುದಿಲ್ಲ. ಹೀಗಾಗಿ, ಕಂಪನಿ ಬಗ್ಗೆ ನಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದರೂ ನಿಮ್ಮ ಹೆಸರು ಬಹಿರಂಗಗೊಳ್ಳುವುದಿಲ್ಲ. ಹೀಗಾಗಿ ಧೈರ್ಯವಾಗಿ ಸತ್ಯವನ್ನು ಹೇಳಬಹುದು.
ಈ ಸರಳ ಸಮೀಕ್ಷೆಯು ದೇಶದ ಉದ್ಯೋಗ ಕ್ಷೇತ್ರದಲ್ಲಿರುವ ತಾರತಮ್ಯತೆಯ ವಾಸ್ತವ ಚಿತ್ರವನ್ನು ಅರಿಯಲು ಬಹಳ ಸಹಕಾರಿಯಾಗುತ್ತದೆ. ಮಹಿಳಾ ಉದ್ಯೋಗಿಗಳ ಬಗ್ಗೆ ಎಷ್ಟು ಕಂಪನಿಗಳು ಕಾಳಜಿ ತೋರುತ್ತಿಲ್ಲ ಎಂಬುದು ಸರ್ಕಾರಕ್ಕೆ ಮನವರಿಕೆ ಆಗುತ್ತದೆ. ಆ ನಂತರ ಯಾವ ರೀತಿ ಅಭಿಯಾನ ನಡೆಸಬಹುದು ಎಂದು ನಿರ್ಧರಿಸಲು ಈ ಸಮೀಕ್ಷೆ ಅನುವು ಮಾಡಿಕೊಡುತ್ತದೆ.
ನೀವೂ ಈ ಸಮೀಕ್ಷೆಯಲ್ಲಿ ಪಾಲ್ಗೊಳ್ಳಯಬಯಸಿದ್ದು ಇಪಿಎಫ್ಒದಿಂದ ಮೆಸೇಜ್ ಬಂದಿಲ್ಲದಿದ್ದರೆ, ಆ ಫಾರ್ಮ್ನ ಲಿಂಕ್ ಇಲ್ಲಿದೆ: forms.myscheme.gov.in/form/65b4ee9b71108aca25e620fd
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:15 pm, Wed, 31 January 24