ನವದೆಹಲಿ, ಫೆ. 4: ಯೂರೋಪ್ನ ಜರ್ಮನಿ ಮೂಲದ ಟೆಕ್ ಕಂಪನಿ ಎಸ್ಎಪಿ (SAP) ಈಗ ತನ್ನ ಹಲವು ಉದ್ಯೋಗಿಗಳ ವಿರೋಧ ಎದುರುಹಾಕಿಕೊಂಡಿದೆ. ಇಷ್ಟು ವರ್ಷ ವರ್ಕ್ ಫ್ರಂ ಹೋಮ್ (Work from Home) ಮಾಡಿ ಎಂದು ಪೀಡಿಸಿ ಈಗ ವಾಪಸ್ ಬನ್ನಿ ಎಂದು ಹೇಳುತ್ತಿರುವ ಕಂಪನಿ ವಿರುದ್ಧ 5,000ಕ್ಕೂ ಹೆಚ್ಚು ಉದ್ಯೋಗಿಗಳು ತಿರುಗಿಬಿದ್ದಿದ್ದಾರೆ. ಕಚೇರಿಗೆ ಹೋಗುವ ಬದಲು ಬೇರೆ ಕೆಲಸ ನೋಡಿಕೊಳ್ಳುತ್ತೇವೆ ಎನ್ನುತ್ತಿರುವ ಉದ್ಯೋಗಿಗಳು, ಇತರ ಕಂಪನಿಗಳಲ್ಲಿ ಕೆಲಸಕ್ಕೆ ಅರ್ಜಿ ಹಾಕುತ್ತಿದ್ದಾರೆ ಎಂದು ವರದಿಗಳು ಹೇಳುತ್ತಿವೆ.
‘ಇತ್ತೀಚಿನವರೆಗೂ ಮನೆಯಿಂದ ಕೆಲಸ ಮಾಡಲು ನಮಗೆ ಉತ್ತೇಜನ ಕೊಡುತ್ತಿದ್ದ ಕಂಪನಿಯ ವರಸೆ ಈಗ ತಿರುವು ಮುರುವಾಗಿದೆ. ಇದರಿಂದ ನಮಗೆ ವಂಚನೆ ಆದಂತಾಗಿದೆ’ ಎಂದು ಉದ್ಯೋಗಿಗಳು ಬರೆದಿರುವ ಪತ್ರವೊಂದು ಸಿಕ್ಕಿದೆ. ಕಚೇರಿಗೆ ಬಂದು ಕೆಲಸ ಮಾಡುವಂತೆ ಕಂಪನಿ ನೀಡಿರುವ ಕಾರಣ ಸಮಂಜಸವಾಗಿಲ್ಲ ಎಂದು ಉದ್ಯೋಗಿಗಳು ಕಂಪನಿಯ ಆಂತರಿಕ ಸಂವಹನದಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: ಫೆ. 29ರ ನಂತರ ಪೇಟಿಎಂನಲ್ಲಿ ನೀವು ಏನು ಬಳಸಬಹುದು, ಯಾವುದು ಸಾಧ್ಯವಿಲ್ಲ? ಇಲ್ಲಿದೆ ಡೀಟೇಲ್ಸ್
ಕೋವಿಡ್ ಕಾಲಘಟ್ಟದಲ್ಲಿ ಬಹುತೇಕ ಎಲ್ಲಾ ಟೆಕ್ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡುವಂತೆ ತಿಳಿಸಿದ್ದವು. ಈಗ್ಗೆ ಕಳೆದ ಒಂದು ವರ್ಷದಿಂದ ಒಂದೊಂದೇ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ವಾಪಸ್ ಕಚೇರಿಗೆ ಕರೆಸಿಕೊಳ್ಳತೊಡಗಿವೆ. ಎಸ್ಎಪಿ ಕೂಡ ತನ್ನ ಉದ್ಯೋಗಿಗಳಿಗೆ ಕಳೆದ ತಿಂಗಳು (ಜನವರಿ) ಫರ್ಮಾನು ಹೊರಡಿಸಿದೆ. ಜಾಗತಿಕವಾಗಿ ಎಲ್ಲಾ ಉದ್ಯೋಗಿಗಳು ಏಪ್ರಿಲ್ ತಿಂಗಳಿನಿಂದ ವಾರಕ್ಕೆ ಮೂರು ದಿನ ಸಮೀಪದ ಕಚೇರಿ ಅಥವಾ ಗ್ರಾಹಕ ಸ್ಥಳಕ್ಕೆ ಹೋಗಿ ಕೆಲಸ ಮಾಡುವುದು ಕಡ್ಡಾಯ ಎಂದು ಹೇಳಿದೆ.
ಇದನ್ನೂ ಓದಿ: ಇನ್ಕಮ್ ಟ್ಯಾಕ್ಸ್ ಜಾಸ್ತಿ ಕಟ್ಟುತ್ತಿದ್ದೀರಾ? ಇಲ್ಲಿವೆ ಹೊರೆ ಇಳಿಸುವ ಮಾರ್ಗಗಳು
ಉದ್ಯೋಗಿಗಳು ಮನೆಯಿಂದ ಕೆಲಸ ಮಾಡಿದರೆ ಎಸ್ಎಪಿಯ ಸಂಸ್ಕೃತಿ ಮತ್ತು ಸಾಂಘಿಕ ಕೆಲಸಕ್ಕೆ ಧಕ್ಕೆ ಆಗುತ್ತದೆ. ವಿಡಿಯೋ ಕಾನ್ಫೆರೆನ್ಸ್ನಲ್ಲಿ ನಮ್ಮ ಸಂಸ್ಕೃತಿ ಅರಿಯಲು ಆಗುವುದಿಲ್ಲ. ನಿಮ್ಮ ಕ್ಷಮತೆ ಹೆಚ್ಚಿಸಲು ಸಾಧ್ಯವಾಗುವುದಿಲ್ಲ ಎಂದು ಎಸ್ಎಪಿ ಸಿಇಒ ಕ್ರಿಸ್ಟಿಯಾನ್ ಕ್ಲೇನ್ ಹೇಳುತ್ತಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ