AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bill Gates: ಬಿಲ್​ ಗೇಟ್ಸ್​​ಗೆ ಪಾಕಿಸ್ತಾನದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಹಿಲಾಲ್-ಎ-ಪಾಕಿಸ್ತಾನ

ಪಾಕಿಸ್ತಾನದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಹಿಲಾಲ್-ಇ-ಪಾಕಿಸ್ತಾನ ಅನ್ನು ಮೈಕ್ರೋಸಾಫ್ಟ್ ಸ್ಥಾಪಕ ಬಿಲ್​ ಗೇಟ್ಸ್​ ಅವರಿಗೆ ನೀಡಲಾಗಿದೆ. ಆ ಬಗ್ಗೆ ವಿವರ ಇಲ್ಲಿದೆ.

Bill Gates: ಬಿಲ್​ ಗೇಟ್ಸ್​​ಗೆ ಪಾಕಿಸ್ತಾನದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಹಿಲಾಲ್-ಎ-ಪಾಕಿಸ್ತಾನ
ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್ ಜತೆಗೆ ಬಿಲ್​ ಗೇಟ್ಸ್​
TV9 Web
| Updated By: Srinivas Mata|

Updated on: Feb 18, 2022 | 7:55 AM

Share

ಮೈಕ್ರೋಸಾಫ್ಟ್ ಕಂಪೆನಿಯ ಸಂಸ್ಥಾಪಕರು ಮತ್ತು ದಾನಿಗಳಾದ ಬಿಲ್ ಗೇಟ್ಸ್   (Bill Gates) ಅವರಿಗೆ ಪಾಕಿಸ್ತಾನದಲ್ಲಿ ಪೋಲಿಯೊ ನಿರ್ಮೂಲನೆಗೆ ಸಹಾಯ ಮಾಡಿದ್ದಕ್ಕಾಗಿ ದೇಶದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ಹಿಲಾಲ್-ಎ-ಪಾಕಿಸ್ತಾನವನ್ನು ನೀಡಲಾಗಿದೆ ಎಂದು ಸಾಮಾ ಟಿವಿ ವರದಿ ಮಾಡಿದೆ. ಬಿಲ್​ ಗೇಟ್ಸ್ ಅವರು ಪಾಕಿಸ್ತಾನಕ್ಕೆ ಒಂದು ದಿನದ ಪ್ರವಾಸದಲ್ಲಿದ್ದು, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಭೇಟಿ ಮಾಡಿದ್ದಾರೆ. ಕೊವಿಡ್ -19 ಅನ್ನು ನಿಗ್ರಹಿಸುವ ಪ್ರಯತ್ನಗಳನ್ನು ಮೇಲ್ವಿಚಾರಣೆ ಮಾಡುವ ರಾಷ್ಟ್ರೀಯ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ (NCOC)ಗೆ ಭೇಟಿ ನೀಡಿದರು. ಪಾಕಿಸ್ತಾನಕ್ಕೆ ಗೇಟ್ಸ್​ ಅವರ ಮೊದಲ ಭೇಟಿ ಇದಾಗಿದೆ ಎಂದು ಪಾಕ್ ಪ್ರಧಾನಿ ಕಚೇರಿ ಹೇಳಿಕೆ ಗುರುವಾರ ತಿಳಿಸಿದೆ. ಪೋಲಿಯೊ ನಿರ್ಮೂಲನೆ ಮತ್ತು ಕೋವಿಡ್ ಸ್ಪಂದನೆಗಾಗಿ ಪಾಕಿಸ್ತಾನದ ಪ್ರಯತ್ನಗಳ ಕುರಿತು ವಿವರಿಸಿದ ಬಿಲಿಯನೇರ್ ಬಿಲ್​ ಗೇಟ್ಸ್​ ಅವರ ಗೌರವಾರ್ಥವಾಗಿ ಪಾಕ್ ಪ್ರಧಾನ ಮಂತ್ರಿಯ ಮನೆಯಲ್ಲಿ ಉಪಾಹಾರ ಕೂಟವನ್ನು ಆಯೋಜಿಸಲಾಗಿತ್ತು.

ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಷನ್ “ಗವಿ” ಎಂಬ ಲಸಿಕೆ ಒಕ್ಕೂಟದ ಮೂಲಕ ವಿಶ್ವಾದ್ಯಂತ ಪೋಲಿಯೊ ನಿರ್ಮೂಲನೆಗೆ ಪ್ರಮುಖ ಕೊಡುಗೆ ನೀಡಿದೆ ಎಂದು ವರದಿ ಹೇಳಿದೆ. ಗೇಟ್ಸ್ ಅವರು ಯೋಜನೆ ಮತ್ತು ಅಭಿವೃದ್ಧಿ ಸಚಿವ ಮತ್ತು ಎನ್​ಸಿಒಸಿ ಮುಖ್ಯಸ್ಥ ಅಸದ್ ಉಮರ್ ಮತ್ತು ಆರೋಗ್ಯದ ಕುರಿತು ಪ್ರಧಾನ ಮಂತ್ರಿ ವಿಶೇಷ ಸಹಾಯಕ (SAPM) ಡಾ. ಫೈಸಲ್ ಸುಲ್ತಾನ್ ಅವರನ್ನು ಭೇಟಿಯಾದರು. ಎನ್​ಸಿಒಸಿ ಹೇಳಿಕೆಯಲ್ಲಿ, ಬಿಲ್​ ಗೇಟ್ಸ್ ಮತ್ತು ಅವರ ನಿಯೋಗವು ವೇದಿಕೆಯ ಬೆಳಗಿನ ಅಧಿವೇಶನದಲ್ಲಿ ಹಾಜರಿದ್ದರು ಎಂದು ಹೇಳಿದೆ.

“ಎನ್‌ಸಿಒಸಿಯ ಪಾತ್ರ ಮತ್ತು ವಿಧಾನ, ಕೊವಿಡ್ -19 ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ಅದರ ಸಾಧನೆಗಳು, ಪಾಕಿಸ್ತಾನದಲ್ಲಿ ಕೊರೊನಾ ವೈರಸ್ ಪರಿಸ್ಥಿತಿ ಮತ್ತು ರೋಗದ ಹರಡುವಿಕೆಯನ್ನು ನಿಯಂತ್ರಿಸಲು ಫೋರಂನ ಔಷಧೇತರ ಮಧ್ಯಸ್ಥಿಕೆಗಳ ಬಗ್ಗೆ ಅವರಿಗೆ ತಿಳಿಸಲಾಯಿತು,” ಎಂದು ಅದು ಹೇಳಿದೆ. ಪಾಕಿಸ್ತಾನದಲ್ಲಿ ಜೀನೋಮ್ ಸೀಕ್ವೆನ್ಸಿಂಗ್ ನಡೆಸಲಾಗುತ್ತಿದೆ ಮತ್ತು ಇದುವರೆಗೆ ಪತ್ತೆಯಾದ ಕೊರೊನಾವೈರಸ್ ರೂಪಾಂತರಗಳ ಬಗ್ಗೆ ನಿಯೋಗಕ್ಕೆ ವಿವರಿಸಲಾಯಿತು. ಹೇಳಿಕೆ ಪ್ರಕಾರ, ಸಂಪನ್ಮೂಲ, ಸಾರ್ವಜನಿಕ ಆರೋಗ್ಯ ಸುರಕ್ಷತೆಗಾಗಿ ಉಪಕ್ರಮಗಳು ಮತ್ತು ಕ್ರಮಗಳ ಮಿತಿ- ಅಡೆ, ತಡೆಗಳ ಹೊರತಾಗಿಯೂ ಕೊವಿಡ್ -19 ವಿರುದ್ಧ ಪಾಕಿಸ್ತಾನದ ಯಶಸ್ಸನ್ನು ಗೇಟ್ಸ್ ಶ್ಲಾಘಿಸಿದರು.

ಇದನ್ನೂ ಓದಿ: Ratan Tata: ಉದ್ಯಮಿ ರತನ್ ಟಾಟಾಗೆ ಅಸ್ಸಾಂ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ ಅಸ್ಸಾಂ ಬೈಭವ್ ಪ್ರದಾನ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ