Ratan Tata: ಉದ್ಯಮಿ ರತನ್ ಟಾಟಾಗೆ ಅಸ್ಸಾಂ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ ಅಸ್ಸಾಂ ಬೈಭವ್ ಪ್ರದಾನ

ಅಸ್ಸಾಂನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಅಸ್ಸಾಂ ಬೈಭವ್​ ಅನ್ನು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಬುಧವಾರದಂದು ಮುಂಬೈನ ಕೊಲಾಬದಲ್ಲಿ ಪ್ರಮುಖ ಉದ್ಯಮಿ ರತನ್​ ಟಾಟಾಗೆ ಪ್ರದಾನ ಮಾಡಿದರು.

Ratan Tata: ಉದ್ಯಮಿ ರತನ್ ಟಾಟಾಗೆ ಅಸ್ಸಾಂ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ ಅಸ್ಸಾಂ ಬೈಭವ್ ಪ್ರದಾನ
ಉದ್ಯಮಿ ರತನ್​ ಟಾಟಾಗೆ ಪ್ರಶಸ್ತಿ ಪ್ರದಾನ
Follow us
TV9 Web
| Updated By: Srinivas Mata

Updated on: Feb 17, 2022 | 8:07 AM

ಪ್ರಮುಖ ಉದ್ಯಮಿ ಹಾಗೂ ಟಾಟಾ ಟ್ರಸ್ಟ್​ನ ಅಧ್ಯಕ್ಷರಾದ ರತನ್ ಟಾಟಾ (Ratan Tata) ಅವರಿಗೆ ಅಸ್ಸಾಂ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬುಧವಾರ ಪ್ರದಾನ ಮಾಡಲಾಯಿತು. ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ರಾಜ್ಯದ ಅತ್ಯುನ್ನತ ಪ್ರಶಸ್ತಿಯಾದ “ಅಸ್ಸಾಂ ಬೈಭವ್” ನೀಡಿದರು. ಮುಂಬೈನ ಕೊಲಾಬದಲ್ಲಿ ಈ ಕಾರ್ಯಕ್ರಮ ನಡೆಯಿತು. ಅಸ್ಸಾಂನಲ್ಲಿ ಕ್ಯಾನ್ಸರ್​ ಚಿಕಿತ್ಸೆಗಾಗಿ ನೀಡಿದ ಅಮೋಘ ಕೊಡುಗೆಯನ್ನು ಪರಿಗಣಿಸಿ ರತನ್ ಟಾಟಾ ಅವರಿಗೆ ಈ ಗೌರವ ನೀಡಲಾಯಿತು. ಪ್ರಶಸ್ತಿಯು ಫಲಕ, ನಗದು ಮೊತ್ತವಾದ 5 ಲಕ್ಷ ರೂಪಾಯಿ ಹಾಗೂ ಪದಕವನ್ನು ಒಳಗೊಂಡಿದೆ. ಈ ಪ್ರಶಸ್ತಿಯನ್ನು ಜನವರಿ 24ರಂದು ಸಮಾರಂಭವೊಂದರಲ್ಲಿ ನೀಡಬೇಕಾಗಿತ್ತು. ಆದರೆ ವೈಯಕ್ತಿಕ ಕಾರಣಗಳಿಗಾಗಿ ರತನ್​ ಟಾಟಾ ಅವರಿಗೆ ಭಾಗವಹಿಸುವುದಕ್ಕೆ ಸಾಧ್ಯವಾಗಿರಲಿಲ್ಲ.

“ಉದ್ಯಮಿಯಾಗಿ ಹಾಗೂ ದಾನಿಯಾಗಿ ರತನ್​ ಟಾಟಾ ಅವರು ಅಸ್ಸಾಂನಲ್ಲಿ ಕ್ಯಾನ್ಸರ್ ಚಿಕಿತ್ಸೆಗಾಗಿ ಅಮೋಘವಾದ ಕೊಡುಗೆಯನ್ನು ನೀಡಿದ್ದಾರೆ,” ಎಂದು ಶರ್ಮಾ ಹೇಳಿದ್ದಾರೆ. ಜನವರಿ 24ನೇ ತಾರೀಕಿನಂದೇ ಅಸ್ಸಾಂ ರಾಜ್ಯಪಾಲರು ರಾಜ್ಯದ ಇತರ ಎರಡು ನಾಗರಿಕ ಪ್ರಶಸ್ತಿಗಳಾದ “ಅಸ್ಸಾಂ ಸೌರವ್” ಮತ್ತು “ಅಸ್ಸಾಂ ಗೌರವ್” ಅನ್ನು ವಿವಿಧ ಕ್ಷೇತ್ರದ 18 ಮಂದಿಗೆ ವಿತರಣೆ ಮಾಡಿದ್ದರು.

ಇದಕ್ಕೂ ಮುನ್ನ ಅಸ್ಸಾಂ ಸರ್ಕಾರವು ವಿವಿಧ ಕ್ಷೇತ್ರದ 18 ವಿವಿಧ ವ್ಯಕ್ತಿಗಳಿಗೆ ರಾಜ್ಯದ ಅತ್ಯುನ್ನತ ಮೂರು ನಾಗರಿಕ ಪ್ರಶಸ್ತಿಗಳನ್ನು ನೀಡಿದೆ. ಜನವರಿ 24ರಂದು ಗುವಾಹತಿಯ ಶ್ರೀಮಂತ ಶಂಕರ್​ದೇವ್ ಕಲಾಕ್ಷೇತ್ರದಲ್ಲಿ ನಡೆದ ಅಧಿಕೃತ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ರತನ್​ ಟಾಟಾ ಅವರು ಭಾಗವಹಿಸುವುದಕ್ಕೆ ಸಾಧ್ಯವಾಗಿರಲಿಲ್ಲ.

ಇದನ್ನೂ ಓದಿ: ನಮ್ಮ ಮೇಲಿನ ವಿಶ್ವಾಸವೇ ನಮ್ಮನ್ನು ಕಾಪಾಡುತ್ತದೆ: ಹೆಸರಾಂತ ಉದ್ಯಮಿ ರತನ್ ಟಾಟಾ ಹಿತವಚನ