Honda CB500X: 1 ಲಕ್ಷ ರೂ. ಕಡಿಮೆ ಬೆಲೆಗೆ ಹೋಂಡಾ ಬೈಕ್

Honda CB500X: 1 ಲಕ್ಷ ರೂ. ಕಡಿಮೆ ಬೆಲೆಗೆ ಹೋಂಡಾ ಬೈಕ್
Honda CB500X

ಈ ಬೈಕ್‌ನಲ್ಲಿ ಸಂಪೂರ್ಣ ಎಲ್ಇಡಿ ಲೈಟ್​ ಅನ್ನು ಅಳವಡಿಸಲಾಗಿದೆ . ಇದು ಹೆಡ್‌ಲ್ಯಾಂಪ್‌ಗಳು ಮತ್ತು ಟೈಲ್ ಲ್ಯಾಂಪ್‌ಗಳು ಮತ್ತು ಕಾಂಪ್ಯಾಕ್ಟ್ ಸಿಗ್ನಲ್ ಇಂಡಿಕೇಟರ್ ಮತ್ತು ಕ್ಲಿಯರ್ ಸ್ಕ್ರೀನ್ ಟೈಲ್ ಲ್ಯಾಂಪ್‌ಗಳನ್ನು ಮತ್ತಷ್ಟು ಆಕರ್ಷಕವಾಗಿಸಿದೆ.

TV9kannada Web Team

| Edited By: Zahir PY

Feb 17, 2022 | 7:47 PM

ನೀವು ಟೂರಿಂಗ್ ಬೈಕ್ ಅಥವಾ ಅಡ್ವೆಂಚರ್ ಬೈಕ್ ಖರೀದಿಸಲು ಯೋಜಿಸುತ್ತಿದ್ದರೆ ನಿಮ್ಮ ಮುಂದೆ ಹೋಂಡಾ CB500X ಎಂಬ ಉತ್ತಮ ಆಯ್ಕೆಯೊಂದಿದೆ. ಏಕೆಂದರೆ ಹೋಂಡಾ ಟೂ-ವೀಲರ್ಸ್ ಇಂಡಿಯಾ ತನ್ನ ಜನಪ್ರಿಯ ಟೂರಿಂಗ್ ಬೈಕ್ ಹೋಂಡಾ CB500X ನ ಬೆಲೆಯನ್ನು ಒಂದು ಲಕ್ಷ ರೂಪಾಯಿಗಿಂತ ಹೆಚ್ಚು ಕಡಿತಗೊಳಿಸಿದೆ. ಹೋಂಡಾ CB500X ಅನ್ನು ಕಳೆದ ವರ್ಷ ಮಾರ್ಚ್‌ನಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾಯಿತು. ಈ ವೇಳೆ ಹೋಂಡಾ CB500X ಹಿಂದೆ ಬೆಲೆ 6.87 ಲಕ್ಷ ರೂ. (ಎಕ್ಸ್ ಶೋ ರೂಂ). ಇದೀಗ, ಜಪಾನಿನ ದ್ವಿಚಕ್ರ ವಾಹನ ಬ್ರಾಂಡ್‌ ಹೋಂಡಾ ತನ್ನ ಬೈಕ್​ ಮೇಲೆ 1.08 ಲಕ್ಷ ರೂ.ಗಳಷ್ಟು ಕಡಿತಗೊಳಿಸಿದೆ. ಅದರಂತೆ ಹೊಸ ಹೋಂಡಾ CB500X ಬೆಲೆ 5.79 ಲಕ್ಷ ರೂ. ಹೀಗಾಗಿ ನೀವು ಅಡ್ವೆಂಚರ್ ಅಥವಾ ಲಾಂಗ್​ ರೈಡ್​ಗಾಗಿ ಬೈಕ್ ಖರೀದಿಸಲು ಬಯಸಿದ್ದರೆ ಹೋಂಡಾ CB500X ಮೇಲೆ ಒಮ್ಮೆ ಕಣ್ಣಾಡಿಸುವುದು ಉತ್ತಮ.

ಹೋಂಡಾ CB500X ಬೈಕ್​ನ ವೈಶಿಷ್ಟ್ಯಗಳೇನು? ಎಂಜಿನ್: ಹೋಂಡಾ ಈ ಬೈಕ್‌ನಲ್ಲಿ 8-ವಾಲ್ವ್ ಲಿಕ್ವಿಡ್-ಕೂಲ್ಡ್ ಪ್ಯಾರಲಲ್ ಟ್ವಿನ್ ಸಿಲಿಂಡರ್ ಎಂಜಿನ್ ಅನ್ನು ನೀಡಿದೆ. ಇದು 8500 rpm ನಲ್ಲಿ 35 kW ಶಕ್ತಿಯನ್ನು ಮತ್ತು 6500 rpm ನಲ್ಲಿ 43.2Nm ನ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಇನ್ನು ಈ ಬೈಕ್‌ನಲ್ಲಿ ಸಂಪೂರ್ಣ ಎಲ್ಇಡಿ ಲೈಟ್​ ಅನ್ನು ಅಳವಡಿಸಲಾಗಿದೆ . ಇದು ಹೆಡ್‌ಲ್ಯಾಂಪ್‌ಗಳು ಮತ್ತು ಟೈಲ್ ಲ್ಯಾಂಪ್‌ಗಳು ಮತ್ತು ಕಾಂಪ್ಯಾಕ್ಟ್ ಸಿಗ್ನಲ್ ಇಂಡಿಕೇಟರ್ ಮತ್ತು ಕ್ಲಿಯರ್ ಸ್ಕ್ರೀನ್ ಟೈಲ್ ಲ್ಯಾಂಪ್‌ಗಳನ್ನು ಮತ್ತಷ್ಟು ಆಕರ್ಷಕವಾಗಿ ಮತ್ತು ಪರಿಣಾಮಕಾರಿಯಾಗಿಸಿದೆ. ಹಾಗೆಯೇ ಈ ಬೈಕ್‌ನಲ್ಲಿ ನೀವು 181 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಪಡೆಯುತ್ತೀರಿ.

ಅದೇ ರೀತಿ ಈ ಬೈಕ್ ಅನ್ನು ಅಡ್ವೆಂಚರ್​ಗಾಗಿ ಎತ್ತರದ ಗಾತ್ರದಲ್ಲಿ ವಿನ್ಯಾಸಗೊಳಿಸಲಾಗಿದ್ದು, ಇದರಿಂದ ಉತ್ತಮ ಸವಾರಿ ಅನುಭವವನ್ನು ಪಡೆಯಬಹುದು. ಹಾಗೆಯೇ ಹ್ಯಾಂಡಲ್‌ಬಾರ್ ಮತ್ತು ಫೂಟ್ ಪೆಗ್ ಪ್ಲೇಸ್‌ಮೆಂಟ್ ಕೂಡ ದೀರ್ಘ ಪ್ರಯಾಣಕ್ಕೆ ಹೆಚ್ಚಿನ ಅನುಕೂಲಕರವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಇದರ ಸೂಪರ್ ರಿಫೈನ್ಡ್ ಇಂಜಿನ್, ಅತ್ಯುತ್ತಮ ಬ್ರೇಕಿಂಗ್ ಸಿಸ್ಟಂ ಮತ್ತು ಆರಾಮದಾಯಕ ಸೀಟ್ ಈ ಬೈಕ್ ಅನ್ನು ಇನ್ನಷ್ಟು ವಿಶೇಷವಾಗಿಸಿದೆ.

ಇದನ್ನೂ ಓದಿ: AB de Villiers: ಸಿಡಿಲಬ್ಬರದ ಸಿಡಿಲಮರಿ ABDಯ ಈ 3 ದಾಖಲೆ ಮುರಿಯುವವರು ಯಾರು?

ಇದನ್ನೂ ಓದಿ: Rohit Sharma: ಬಾಬರ್ ದಾಖಲೆ ಮುರಿದು ಹೊಸ ಇತಿಹಾಸ ನಿರ್ಮಿಸಿದ ರೋಹಿತ್ ಶರ್ಮಾ

ಇದನ್ನೂ ಓದಿ: Sunil narine: ಸಿಡಿಲಬ್ಬರದ ಅರ್ಧಶತಕ ಸಿಡಿಸಿ ದಾಖಲೆ ಬರೆದ ಸುನಿಲ್ ನರೈನ್

(Honda CB500X price slashed by ₹1 lakh in India)

Follow us on

Related Stories

Most Read Stories

Click on your DTH Provider to Add TV9 Kannada