Tata Motors: ಟಾಟಾ ಮೋಟಾರ್ಸ್​ನಿಂದ ಎಲೆಕ್ಟ್ರಿಕ್ ಮತ್ತು ಪ್ರಯಾಣಿಕ ವಾಹನಗಳ ಹೊಸ ಡೀಲರ್​ಶಿಪ್ ಆರಂಭ

| Updated By: Srinivas Mata

Updated on: Dec 11, 2021 | 11:29 AM

ಆರೆಂಜ್ ಆಟೊ ಸಹಯೋಗದಲ್ಲಿ ಟಾಟಾ ಮೋಟಾರ್ಸ್​ನಿಂದ ಹೊಸ ಡೀಲರ್​ಷಿಪ್​ ಅನ್ನು ಹೈದರಾಬಾದ್​ನ ಅತ್ತಾಪುರದಲ್ಲಿ ಶುರು ಮಾಡಲಾಗಿದೆ. ಆ ಬಗ್ಗೆ ವಿವರ ಇಲ್ಲಿದೆ.

Tata Motors: ಟಾಟಾ ಮೋಟಾರ್ಸ್​ನಿಂದ ಎಲೆಕ್ಟ್ರಿಕ್ ಮತ್ತು ಪ್ರಯಾಣಿಕ ವಾಹನಗಳ ಹೊಸ ಡೀಲರ್​ಶಿಪ್ ಆರಂಭ
ರತನ್ ಟಾಟಾ (ಸಂಗ್ರಹ ಚಿತ್ರ)
Follow us on

ಆರೆಂಜ್ ಆಟೋ ಸಹಭಾಗಿತ್ವದಲ್ಲಿ ಟಾಟಾ ಮೋಟಾರ್ಸ್​ನಿಂದ ಹೈದರಾಬಾದ್‌ನ ಅತ್ತಾಪುರದಲ್ಲಿ ಹೊಸ ಡೀಲರ್‌ಶಿಪ್ ಉದ್ಘಾಟಿಸಿದೆ. ಈ ಹೊಸ ಸೌಲಭ್ಯದೊಂದಿಗೆ ಕಂಪೆನಿಯು ತನ್ನ ಅಸ್ತಿತ್ವ ವಿಸ್ತರಿಸುವ ಮತ್ತು ನಗರದಲ್ಲಿ ಬಲವಾದ ನೆಲೆಯನ್ನು ಸ್ಥಾಪಿಸುವ ಗುರಿ ಹೊಂದಿದೆ. ಹೊಸ ಡೀಲರ್‌ಶಿಪ್ ಸೌಲಭ್ಯವು ಈ ಪ್ರದೇಶದ ಗ್ರಾಹಕರಿಗೆ ಟಾಟಾ ಮೋಟಾರ್ಸ್ ಪ್ರಯಾಣಿಕರ ಮತ್ತು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಅವಕಾಶವನ್ನು ಒದಗಿಸುತ್ತದೆ. ಡೀಲರ್‌ಶಿಪ್ ಉದ್ಯೋಗಿಗಳಿಗೆ ಟಾಟಾ ಮೋಟಾರ್ಸ್ ತಜ್ಞರ ಮೇಲ್ವಿಚಾರಣೆಯಲ್ಲಿ ತರಬೇತಿ ನೀಡಲಾಗಿದೆ ಹಾಗೂ ಸಂದರ್ಶಕರಿಗೆ ಗುಣಮಟ್ಟದ ಗ್ರಾಹಕ ಅನುಭವವನ್ನು ನೀಡುತ್ತದೆ.

ಟಾಟಾ ಮೋಟಾರ್ಸ್‌ನ ನೆಟ್‌ವರ್ಕ್ ಮ್ಯಾನೇಜ್‌ಮೆಂಟ್ ಮುಖ್ಯಸ್ಥ ಮತ್ತು ಹೆಡ್ – ಎಲೆಕ್ಟ್ರಿಕ್ ವೆಹಿಕಲ್ಸ್ (ಮಾರಾಟ, ಮಾರ್ಕೆಟಿಂಗ್ ಮತ್ತು ಗ್ರಾಹಕ ಸೇವೆ) ರಮೇಶ್ ದೊರೈರಾಜನ್, “ನಮ್ಮ ಅಧಿಕೃತ ಡೀಲರ್ ಆಗಿ ಆರೆಂಜ್ ಸಮೂಹದೊಂದಿಗೆ ಪಾಲುದಾರಿಕೆ ಹೊಂದಲು ತುಂಬಾ ಸಂತೋಷವಾಗಿದೆ. ಇದು ಹೈದರಾಬಾದ್‌ನಲ್ಲಿರುವ ಆರೆಂಜ್ ಟಾಟಾದ ಮೂರನೇ ಶೋರೂಮ್ ಆಗಿದೆ. ಇದು ನಮ್ಮ ಗ್ರಾಹಕ ಕೇಂದ್ರಿತ ವಿಧಾನವನ್ನು ಮತ್ತು ಅವರಿಗೆ ಹತ್ತಿರವಾಗಲು ನಿರಂತರ ಪ್ರಯತ್ನಗಳನ್ನು ಸೇರ್ಪಡೆ ಮಾಡುತ್ತದೆ. ನಾವು ತಿಂಗಳಿನಿಂದ ತಿಂಗಳು ಬೆಳವಣಿಗೆಗೆ ಸಾಕ್ಷಿಯಾಗಿದ್ದೇವೆ. ಈ ಡೀಲರ್‌ಶಿಪ್ ಈ ಪ್ರದೇಶದಲ್ಲಿ ಮಾರಾಟ, ಸೇವೆ ಮತ್ತು ಗ್ರಾಹಕರ ತೃಪ್ತಿಯಲ್ಲಿ ಹೊಸ ಮಾನದಂಡವನ್ನು ನಿಗದಿ ಮಾಡುತ್ತದೆ ಎಂದು ನಮಗೆ ವಿಶ್ವಾಸವಿದೆ. ಹೈದರಾಬಾದ್ ನಮಗೆ ಪ್ರಮುಖ ಮಾರುಕಟ್ಟೆಯಾಗಿದೆ. ರಾಜ್ಯವು ನಮ್ಮ ಬೆಳವಣಿಗೆಯ ಕಾರ್ಯತಂತ್ರದ ಪ್ರಮುಖ ಭಾಗವಾಗಿದೆ,” ಎಂದಿದ್ದಾರೆ.

ಆರೆಂಜ್ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಯಲಮಂಚಿಲಿ ರಾಮು ಮಾತನಾಡಿ, ತೆಲಂಗಾಣದಲ್ಲಿ ಟಾಟಾ ಮೋಟಾರ್ಸ್ ಪ್ರತಿನಿಧಿಸಲು ನಮಗೆ ತುಂಬ ಹೆಮ್ಮೆ ಇದೆ. ಎರಗಡ್ಡಾದಲ್ಲಿ ಕಾರ್ಖಾನೆ ಮತ್ತು ಅತ್ತಾಪುರದಲ್ಲಿ ಎರಡು ಡೀಲರ್‌ಶಿಪ್ ಮಾರಾಟ ಶೋರೂಮ್‌ಗಳನ್ನು ಹೊಂದಿರುವ ಕಂಪೆನಿಯೊಂದಿಗೆ ನಾವು ಸುದೀರ್ಘ ಒಡನಾಟವನ್ನು ಹೊಂದಿದ್ದೇವೆ. ಇಂದು ಹೈದರಾಬಾದ್‌ನಲ್ಲಿ 7000 ಚದರ ಅಡಿ ವಿಸ್ತೀರ್ಣದೊಂದಿಗೆ ಮತ್ತು ಹಫೀಜ್‌ಪೇಟ್‌ನಲ್ಲಿ ಸೇವಾ ಕೇಂದ್ರವನ್ನು ವಿಸ್ತರಿಸಲಾಗಿದೆ. ಟಾಟಾ ಮೋಟಾರ್ಸ್ ಬ್ರಾಂಡ್ ಕಾರ್ಯಾಚರಣೆಯ ಪ್ರಾರಂಭದಿಂದಲೂ ಈ ಪ್ರದೇಶದಲ್ಲಿ ಬಹಳ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆದಿದೆ. ನಮ್ಮ ಹೊಸ ಡೀಲರ್‌ಶಿಪ್‌ನೊಂದಿಗೆ, ಕಂಪೆನಿಯ ಉನ್ನತ ಗುಣಮಟ್ಟದ ಮಾರಾಟ ಮತ್ತು ಸೇವೆಯನ್ನು ಅನುಸರಿಸುವ ಮೂಲಕ ಟಾಟಾ ಪ್ರಯಾಣಿಕ ವಾಹನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ನಾವು ಉದ್ದೇಶಿಸಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Tata Motors: ಟಾಟಾ ಮೋಟಾರ್ಸ್​​ನಿಂದ 2022ರ ಜನವರಿಯಿಂದ ವಾಣಿಜ್ಯ ವಾಹನಗಳ ಬೆಲೆ ಏರಿಕೆ

Published On - 11:19 am, Sat, 11 December 21