Tata Motors: ಟಾಟಾ ಮೋಟಾರ್ಸ್ನಿಂದ 2022ರ ಜನವರಿಯಿಂದ ವಾಣಿಜ್ಯ ವಾಹನಗಳ ಬೆಲೆ ಏರಿಕೆ
ಭಾರತದ ದೇಶೀಯ ಕಂಪೆನಿಯಾದ ಟಾಟಾ ಮೋಟಾರ್ಸ್ 2022ರ ಜನವರಿಯಿಂದ ವಾಣಿಜ್ಯ ವಾಹನಗಳ ಬೆಲೆ ಏರಿಕೆ ಮಾಡಲಿದೆ.
ಸರಕು ಮತ್ತು ಕಚ್ಚಾ ವಸ್ತುಗಳ ಬೆಲೆಯಲ್ಲಿನ ಹೆಚ್ಚಳವನ್ನು ಸರಿದೂಗಿಸಲು ಜನವರಿ 1ರಿಂದ ವಾಣಿಜ್ಯ ವಾಹನಗಳ ಬೆಲೆಯನ್ನು ಶೇಕಡಾ 2.5ರ ಆಸುಪಾಸು ಹೆಚ್ಚಿಸುವುದಾಗಿ ಸ್ವದೇಶಿ ವಾಹನ ತಯಾರಿಕೆ ಕಂಪೆನಿಯಾದ ಟಾಟಾ ಮೋಟಾರ್ಸ್ ಸೋಮವಾರ ಹೇಳಿದೆ. ಮಧ್ಯಮ ಮತ್ತು ಭಾರೀ ವಾಣಿಜ್ಯ ವಾಹನಗಳು (M&HCV), ಮಧ್ಯಮ ಮತ್ತು ಲಘು ವಾಣಿಜ್ಯ ವಾಹನಗಳು (I&LCV), ಸಣ್ಣ ವಾಣಿಜ್ಯ ವಾಹನಗಳು (SCV) ಮತ್ತು ಬಸ್‌ಗಳ ಪ್ರತ್ಯೇಕ ಮಾದರಿ ಮತ್ತು ವಾಹನದ ವೇರಿಯಂಟ್ ಆಧರಿಸಿ ಬೆಲೆ ಏರಿಕೆ ಆಗಲಿದೆ ಎಂದು ಟಾಟಾ ಮೋಟಾರ್ಸ್ ನಿಯಂತ್ರಕ ಫೈಲಿಂಗ್ನಲ್ಲಿ ತಿಳಿಸಿದೆ.
“ಉಕ್ಕು, ಅಲ್ಯೂಮಿನಿಯಂ ಮತ್ತು ಇತರ ಬೆಲೆಬಾಳುವ ಲೋಹಗಳಂತಹ ಸರಕುಗಳ ಬೆಲೆಗಳಲ್ಲಿನ ಹೆಚ್ಚಳ, ಇತರ ಕಚ್ಚಾ ವಸ್ತುಗಳ ಹೆಚ್ಚಿನ ವೆಚ್ಚಗಳ ಜೊತೆಗೆ, ವಾಣಿಜ್ಯ ವಾಹನಗಳಿಗೆ ಈ ಬೆಲೆ ಏರಿಕೆಯನ್ನು ಮಾಡುವಂತೆ ಒತ್ತಡ ತಂದಿದೆ,” ಎಂದು ಅದು ಸೇರಿಸಿದೆ. ಕಂಪೆನಿಯು ಉತ್ಪಾದನೆಯ ವಿವಿಧ ಹಂತಗಳಲ್ಲಿ ಹೆಚ್ಚಿದ ವೆಚ್ಚದ ಗಮನಾರ್ಹ ಭಾಗವನ್ನು ಭರಿಸುತ್ತಿರುವಾಗ, ಟಾಟಾ ಮೋಟಾರ್ಸ್ ಹೇಳಿದಂತೆ, “ಒಟ್ಟಾರೆ ಇಸ್ಪುಟ್ ವೆಚ್ಚಗಳಲ್ಲಿನ ತೀವ್ರ ಏರಿಕೆಯು ಕನಿಷ್ಟ ಬೆಲೆ ಏರಿಕೆಯ ಮೂಲಕ ಕೆಲವು ಭಾರದ ಅನುಪಾತವನ್ನು ಹೆಚ್ಚಿಸುವುದು ಅನಿವಾರ್ಯವಾಗಿದೆ”.
ಇನ್‌ಪುಟ್ ಮತ್ತು ಫೀಚರ್ಗಳ ವರ್ಧನೆಯ ವೆಚ್ಚಗಳ ಹೆಚ್ಚಳ ಉಲ್ಲೇಖಿಸಿ, ಈಗಾಗಲೇ ಕಾರು ಮಾರುಕಟ್ಟೆಯ ಮುಂಚೂಣಿಯಲ್ಲಿರುವ ಮಾರುತಿ ಸುಜುಕಿ ಇಂಡಿಯಾ, ಐಷಾರಾಮಿ ಕಾರು ತಯಾರಕರಾದ ಮರ್ಸಿಡಿಸ್-ಬೆಂಜ್ ಮತ್ತು ಔಡಿ ಮುಂದಿನ ತಿಂಗಳಿನಿಂದ ಬೆಲೆ ಏರಿಕೆಯನ್ನು ಘೋಷಿಸಿವೆ.
ಇದನ್ನೂ ಓದಿ: Hyundai cars: ಹ್ಯುಂಡೈ ಕಾರುಗಳ ಮೇಲೆ 50,000 ರೂಪಾಯಿ ತನಕ ಬೆನಿಫಿಟ್; ಯಾವ ಮಾಡೆಲ್ಗೆ ಎಷ್ಟು ಮೊತ್ತ ತಿಳಿಯಿರಿ