AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hyundai cars: ಹ್ಯುಂಡೈ ಕಾರುಗಳ ಮೇಲೆ 50,000 ರೂಪಾಯಿ ತನಕ ಬೆನಿಫಿಟ್​; ಯಾವ ಮಾಡೆಲ್​ಗೆ ಎಷ್ಟು ಮೊತ್ತ ತಿಳಿಯಿರಿ

ಹ್ಯುಂಡೈ ಕಾರುಗಳ ವಿವಿಧ ಮಾಡೆಲ್​ಗಳ ಮೇಲೆ 2021ರ ಡಿಸೆಂಬರ್​ನಲ್ಲಿ ಇರುವ ಆಫರ್​ಗಳ ಬಗ್ಗೆ ಈ ಲೇಖನದಲ್ಲಿ ಮಾಹಿತಿ ಇದೆ. ಕಾರ್ಪೊರೇಟ್​ ಹಾಗೂ ಸರ್ಕಾರಿ ನೌಕರರಿಗೆ ಇರುವ ರಿಯಾಯಿತಿ ಬಗ್ಗೆಯೂ ತಿಳಿಯಿರಿ

Hyundai cars: ಹ್ಯುಂಡೈ ಕಾರುಗಳ ಮೇಲೆ 50,000 ರೂಪಾಯಿ ತನಕ ಬೆನಿಫಿಟ್​; ಯಾವ ಮಾಡೆಲ್​ಗೆ ಎಷ್ಟು ಮೊತ್ತ ತಿಳಿಯಿರಿ
ಹ್ಯುಂಡೈ ಐ20 (ಸಾಂದರ್ಭಿಕ ಚಿತ್ರ)
TV9 Web
| Edited By: |

Updated on:Dec 06, 2021 | 7:34 PM

Share

ದಕ್ಷಿಣ ಕೊರಿಯಾದ ವಾಹನ ತಯಾರಕ ಕಂಪೆನಿಯಾದ ಹ್ಯುಂಡೈನಿಂದ ಔರ (Aura), ಗ್ರ್ಯಾಂಡ್ ಐ10 ನಿಯೋಸ್ (Grand i10 Nios), ಸ್ಯಾಂಟ್ರೋ (Santro) ಮತ್ತು i20 ಗಾಗಿ ವರ್ಷಾಂತ್ಯದ ರಿಯಾಯಿತಿಗಳನ್ನು ಘೋಷಿಸಿದೆ. ಇದರಲ್ಲಿ ನಗದು ರಿಯಾಯಿತಿಗಳು, ವಿನಿಮಯ ಬೋನಸ್‌ಗಳು ಮತ್ತು ಸರ್ಕಾರಿ ಅಥವಾ ಕಾರ್ಪೊರೇಟ್ ಉದ್ಯೋಗಿಗಳಿಗೆ ಬೆನಿಫಿಟ್​ಗಳು ಸೇರಿವೆ. ಈ ಬೆನಿಫಿಟ್​ಗಳು ಮತ್ತು ರಿಯಾಯಿತಿಗಳು ಮಾದರಿ ಹಾಗೂ ವೇರಿಯಂಟ್-ನಿರ್ದಿಷ್ಟವಾಗಿವೆ ಮತ್ತು ಸ್ಟಾಕ್‌ಗಳು ಕೊನೆಗೊಳ್ಳುವವರೆಗೆ- ಡಿಸೆಂಬರ್ 31ರವರೆಗೆ ಅನ್ವಯಿಸುತ್ತವೆ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ. 2021ರ ಡಿಸೆಂಬರ್​ನಲ್ಲಿ ಯಾವ ಮಾಡೆಲ್​ಗೆ ಏನು ಆಫರ್​ ಇದೆ ಎಂಬುದನ್ನು ತಿಳಿಯಲು ಮುಂದೆ ಓದಿ.

ಹುಂಡೈ ಔರಾ ಹ್ಯುಂಡೈ ಔರಾದ ಪೆಟ್ರೋಲ್ ಮತ್ತು ಡೀಸೆಲ್ ವೇರಿಯಂಟ್​ ಮೇಲೆ ರೂ. 50,000ವರೆಗಿನ ಆಫರ್​ಗಳಿವೆ. ಕಾಂಪ್ಯಾಕ್ಟ್ ಸೆಡಾನ್ ಎರಡು ಪೆಟ್ರೋಲ್ ಎಂಜಿನ್ ಮತ್ತು ಒಂದು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿದೆ. ಪೆಟ್ರೋಲ್ ಆವೃತ್ತಿಯು 1.2-ಲೀಟರ್ ಮತ್ತು 1.0-ಲೀಟರ್ ಟರ್ಬೋ GDi ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಆದರೆ ಡೀಸೆಲ್ ಆವೃತ್ತಿಯು 1.2-ಲೀಟರ್ CRDi ಎಂಜಿನ್ ಹೊಂದಿದೆ. ಇದರಲ್ಲಿ ಪ್ರಮಾಣಿತ ಐದು-ವೇಗದ ಮ್ಯಾನುಯೆಲ್ ಟ್ರಾನ್ಸ್​ಮಿಷನ್ ಮತ್ತು ಆಪ್ಷನಲ್ ಎಎಂಟಿ ಇದೆ. ಅಲ್ಲದೆ, ವಾಹನವು ಸಿಎನ್‌ಜಿ ಆಯ್ಕೆಯೊಂದಿಗೆ ಲಭ್ಯವಿದೆ.

ಹುಂಡೈ ಗ್ರಾಂಡ್ ಐ10 ನಿಯೋಸ್ ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಪೆಟ್ರೋಲ್ ಮತ್ತು ಡೀಸೆಲ್ ವೇರಿಯಂಟ್​ಗಳ ಮೇಲೆ 50,000 ರೂಪಾಯಿವರೆಗಿನ ಬೆನಿಫಿಟ್​ ಇವೆ. ಔರಾದಂತೆಯೇ ಗ್ರಾಂಡ್ ಐ10 ನಿಯೋಸ್ ಸಹ ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ನೀಡುತ್ತದೆ – 1.2-ಲೀಟರ್ ಮತ್ತು 1.0-ಲೀಟರ್ ಟರ್ಬೋ GDi. ಆದರೆ ಡೀಸೆಲ್ ಆವೃತ್ತಿಯು 1.2-ಲೀಟರ್ CRDi ಎಂಜಿನ್​ನಲ್ಲಿ ಲಭ್ಯ ಇದೆ. ಐದು-ವೇಗದ ಮ್ಯಾನುಯೆಲ್ ಟ್ರಾನ್ಸ್​ಮಿಷನ್ ಮತ್ತು ಆಪ್ಷನಲ್ ಎಎಂಟಿ ಜತೆ ಬರುತ್ತದೆ. ಹ್ಯಾಚ್‌ಬ್ಯಾಕ್ ಆಪ್ಷನಲ್ ಸಿಎನ್​ಜಿ ವೇರಿಯಂಟ್​ ಸಹ ನೀಡುತ್ತದೆ.

ಹುಂಡೈ ಸ್ಯಾಂಟ್ರೋ ಹ್ಯುಂಡೈನ ಸ್ಯಾಂಟ್ರೊ ಎಂಟ್ರಿ ಲೆವೆಲ್ ಮಾದರಿಗೆ ರೂ. 40,000ವರೆಗಿನ ಬೆನಿಫಿಟ್ ಇದೆ. ಹುಂಡೈ ಸ್ಯಾಂಟ್ರೋ ಐದು-ಸ್ಪೀಡ್ ಮ್ಯಾನುಯೆಲ್ ಮತ್ತು ಎಎಂಟಿ ಆಯ್ಕೆಗಳಲ್ಲಿ 1.1-ಲೀಟರ್ ಎಪ್ಸಿಲಾನ್ ಎಂಪಿಐ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸುತ್ತದೆ. ಹೆಚ್ಚುವರಿಯಾಗಿ, ಗ್ರಾಹಕರು CNG ಆಯ್ಕೆಯನ್ನು ಸಹ ಆರಿಸಿಕೊಳ್ಳಬಹುದು.

ಹುಂಡೈ ಐ20 ಹ್ಯುಂಡೈನ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಐ20 ಪೆಟ್ರೋಲ್ ಮತ್ತು ಡೀಸೆಲ್ ಎರಡರಲ್ಲೂ ರೂ. 40,000 ವರೆಗಿನ ಬೆನಿಫಿಟ್​ಗಳನ್ನು ನೀಡುತ್ತದೆ. ಪೆಟ್ರೋಲ್ ಎಂಜಿನ್ ಆಯ್ಕೆಗಳಲ್ಲಿ 1.2-ಲೀಟರ್ ಮತ್ತು 1.0-ಲೀಟರ್ ಟರ್ಬೋ ಸೇರಿವೆ. ಆದರೆ ಡೀಸೆಲ್ ಆವೃತ್ತಿಯು 1.5-ಲೀಟರ್ ಎಂಜಿನ್‌ ಹೊಂದಿದೆ. ವೇರಿಯಂಟ್ ಮತ್ತು ವೇರಿಯಂಟ್​ ಆಯ್ಕೆಗಳನ್ನು ಅವಲಂಬಿಸಿ ಮ್ಯಾನ್ಯುಯೆಲ್, IVT ಮತ್ತು 7DCT ಆಯ್ಕೆಗಳಲ್ಲಿ ಹೊಂದಬಹುದು.

ಇದನ್ನೂ ಓದಿ: ಪ್ರತಿಷ್ಠಿತ ಕಾರು ಉತ್ಪಾದಕ ಕಂಪನಿಗಳ ಇಲೆಕ್ಟ್ರಿಕ್ ಕಾರು ಬಹಳ ದುಬಾರಿ, ವ್ಯವಹಾರವೆಲ್ಲ ಕೋಟಿಗಳಲ್ಲಿ!

Published On - 7:33 pm, Mon, 6 December 21

ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಗೂಡಂಗಡಿಗಳು ನೆಲಸಮ
ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಗೂಡಂಗಡಿಗಳು ನೆಲಸಮ
ಚಳಿ ಎಂದು ಕ್ಯಾಬ್ ಚಾಲಕ ಕಾರಿನೊಳಗೆ ಮಾಡಿದ ಈ ತಪ್ಪಿನಿಂದ ಪ್ರಾಣವೇ ಹೋಯ್ತು
ಚಳಿ ಎಂದು ಕ್ಯಾಬ್ ಚಾಲಕ ಕಾರಿನೊಳಗೆ ಮಾಡಿದ ಈ ತಪ್ಪಿನಿಂದ ಪ್ರಾಣವೇ ಹೋಯ್ತು
ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ
ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ