ಪ್ರತಿಷ್ಠಿತ ಕಾರು ಉತ್ಪಾದಕ ಕಂಪನಿಗಳ ಇಲೆಕ್ಟ್ರಿಕ್ ಕಾರು ಬಹಳ ದುಬಾರಿ, ವ್ಯವಹಾರವೆಲ್ಲ ಕೋಟಿಗಳಲ್ಲಿ!

ರೋಲ್ಸ್ ರಾಯ್ಸ್ ಜಗತ್ತಿನ ಅತ್ಯಂತ ಪ್ರತಿಷ್ಠಿತ ಕಾರುಗಳಲ್ಲಿ ಒಂದು ಅಂತ ನಿಮಗೆ ಗೊತ್ತಿದೆ. ಈ ಸಂಸ್ಥೆಯೂ ಇಷ್ಟರಲ್ಲೇ ಇಲೆಕ್ಟ್ರಿಕ್ ಕಾರನ್ನು ಲಾಂಚ್ ಮಾಡಲಿದೆ. ಭಾರತದಲ್ಲಿ ಅದರ ಬೆಲೆ ರೂ 3 ಕೋಟಿ ಆಗಲಿದೆಯೆಂದು ಹೇಳಲಾಗುತ್ತಿದೆ.

ಇಲೆಕ್ಟ್ರಿಕ್ ವಾಹನಗಳು ಜನರಲ್ಲಿ ಹುಟ್ಟಿಸುತ್ತಿರುವ ಕ್ರೇಜ್ ಕುರಿತು ನಾವು ಆಗಾಗ ಚರ್ಚಿಸುತ್ತಿದ್ದೇವೆ. ಇಲೆಕ್ಟ್ರಿಕ್ ಸ್ಕೂಟರ್ ಮತ್ತು ಬೈಕ್ ಒಂದೊಂದಾಗಿ ಭಾರತದ ಮಾರ್ಕೆಟ್ನಲ್ಲಿ ಬಿಡುಗಡೆಯಾಗುತ್ತಿವೆ. ಒಂದೆರಡು ಕಾರುಗಳು ಸಹ ಭಾರತೀಯ ರಸ್ತೆಗಳ ಮೇಲೆ ಕಾಣಿಸಿಕೊಳ್ಳುತ್ತಿವೆ. ಇಲೆಕ್ಟ್ರಿಕ್ ದ್ವಿಚಕ್ರ ವಾಹನಗಳಾಗಲೀ ಅಥವಾ ಕಾರುಗಳು; ಇತರ ವಾಹನಗಳಿಗಿಂತ ದುಬಾರಿ ಅನ್ನೋದರಲ್ಲಿ ಎರಡು ಮಾತಿಲ್ಲ. ನಮ್ಮಲ್ಲಿ ಒಂದಷ್ಟು ಇಲೆಕ್ಟ್ರಿಕ್ ಕಾರುಗಳ ಪಟ್ಟಿಯಿದೆ. ಅವುಗಳ ಬೆಲೆ ಗೊತ್ತಾದರೆ ನೀವು ದಿಗಿಲು ಬೀಳಬಹುದು. ಓದುತ್ತಾ ಹೋದಂತೆ ನಿಮಗೆ ಅದು ಗೊತ್ತಾಗಲಿದೆ.

ರೋಲ್ಸ್ ರಾಯ್ಸ್ ಜಗತ್ತಿನ ಅತ್ಯಂತ ಪ್ರತಿಷ್ಠಿತ ಕಾರುಗಳಲ್ಲಿ ಒಂದು ಅಂತ ನಿಮಗೆ ಗೊತ್ತಿದೆ. ಈ ಸಂಸ್ಥೆಯೂ ಇಷ್ಟರಲ್ಲೇ ಇಲೆಕ್ಟ್ರಿಕ್ ಕಾರನ್ನು ಲಾಂಚ್ ಮಾಡಲಿದೆ. ಭಾರತದಲ್ಲಿ ಅದರ ಬೆಲೆ ರೂ 3 ಕೋಟಿ ಆಗಲಿದೆಯೆಂದು ಹೇಳಲಾಗುತ್ತಿದೆ.

ಲ್ಯಾಂಬೋರ್ಜಿನಿ ಉರುಸ್ ಕಾರು ಪುನೀತ್ ರಾಜಕುಮಾರ್ ಅವರು ತಮ್ಮ ಪತ್ನಿ ಅಶ್ವಿನಿಗಾಗಿ ಖರೀದಿಸಿದ್ದರು. ಇದರ ಇಲೆಕ್ಟ್ರಿಕ್ ವರ್ಷನ್ ಕೂಡ ಭಾರತಕ್ಕೆ ಆಗಮಿಸಲಿದೆ. ಇದರ ಬೆಲೆಯೂ ಹೆಚ್ಚು ಕಡಿಮೆ 3 ಕೋಟಿ ರೂ. ಆಗಲಿದೆ.

ಪೋರ್ಶೆ ಸಂಸ್ಥೆಯು ಮೊನ್ನೆಯಷ್ಟೇ ಅಂದರೆ ನವೆಂಬರ್ 12 ರಂದು ತನ್ನ ಪೋರ್ಶೆ ಟೆಕಾನ್ ಟರ್ಬೋ ಇಲೆಕ್ಟ್ರಿಕ್ ಕಾರನ್ನು ಭಾರತದಲ್ಲಿ ಲಾಂಚ್ ಮಾಡಿತು. ಅದರ ಬೆಲೆ ರೂ. 2 ಕೋಟಿ.

ಆಡಿ ಎ-ಟ್ರಾನ್ ಜಿಟಿ ಇಲೆಕ್ಟ್ರಿಕ್ ಕಾರು ಸಹ ಭಾರತದಲ್ಲಿ ಇತ್ತೀಚಿಗೆ ಲಾಂಚ್ ಅಗಿದ್ದು ಅದರ ಬೆಲೆ 1.80 ಕೋಟಿ ರೂ. ಆಗಿದೆ. ಮರ್ಸಿಡಿಸ್ ಈಕ್ಯೂಸಿ ಇಲೆಕ್ಟ್ರಿಕ್ ಕಾರಿನ ಬೆಲೆ ರೂ. 1.7 ಕೋಟಿ.

ಅಂದಹಾಗೆ, ಜಾಗ್ವಾರ್ ಐ-ಪೇಸ್ ಇಲೆಕ್ಟ್ರಿಕ್ ಕಾರಿನ ಬೆಲೆ ಮೇಲಿನ ಕಾರುಗಳಿಗೆ ಹೋಲಿಸಿದರೆ ಕೊಂಚ ಕಡಿಮೆಯೇ. ಆದರೂ ಆದರ ಬೆಲೆ ರೂ. 1.5 ಕೋಟಿ. ಹಾಗೆಯೇ ಪಕ್ಕಾ ಮೇಕ್ ಇನ್ ಇಂಡಿಯ ಎಮ್ ಎಮ್ ಎಮ್ ಮೋಟಾರ್ಸ್ ಸಂಸ್ಥೆಯ ಅಜಾನಿ ಇಲೆಕ್ಟ್ರಿಕ್ ಸೂಪರ್ ಕಾರಿನ ಬೆಲೆ ರೂ. 90 ಲಕ್ಷ ಮಾತ್ರ.

ಇದನ್ನೂ ಓದಿ:  Shilpa Shetty: ಜಿಮ್​ನಲ್ಲಿ ಬೆವರಿಳಿಸಿದ ಶಿಲ್ಪಾ ಶೆಟ್ಟಿ; ಹೇಗಿದೆ ನೋಡಿ ವರ್ಕೌಟ್​ ವಿಡಿಯೋ

Click on your DTH Provider to Add TV9 Kannada