ನವದೆಹಲಿ, ನವೆಂಬರ್ 3: ಹಬ್ಬದ ಋತುವಿನಲ್ಲಿ ಡಿಸ್ಕೌಂಟ್ ಇತ್ಯಾದಿ ಆಕರ್ಷಣೆ ದೆಸೆಯಿಂದಾಗಿ ವಾಹನಗಳ ಮಾರಾಟ ಪ್ರಮಾಣ ಹೆಚ್ಚಾಗಿದೆ. ದ್ವಿಚಕ್ರ ವಾಹನ ಮತ್ತು ಕಾರುಗಳ ರೀಟೇಲ್ ಮಾರಾಟ ಅಕ್ಟೋಬರ್ನಲ್ಲಿ ಗಣನೀಯವಾಗಿ ಹೆಚ್ಚಿದೆ. ಆದರೆ, ರೀಟೇಲ್ ಮಳಿಗೆಗಳಿಗೆ ವಾಹನಗಳ ಸರಬರಾಜು ಪ್ರಮಾಣದಲ್ಲಿ ಅಲ್ಪ ಹೆಚ್ಚಳವಾಗಿದೆ. ವರದಿ ಪ್ರಕಾರ ಕಾರುಗಳ ಹೋಲ್ಸೇಲ್ ಮಾರಾಟ ಪ್ರಮಾಣ 4,01,447 ಯುನಿಟ್ ಇದೆ. ಕಳೆದ ವರ್ಷದ ಅಕ್ಟೋಬರ್ ತಿಂಗಳಿಗೆ ಹೋಲಿಸಿದರೆ ಇದರ ಮಾರಾಟದಲ್ಲಿ ಹೆಚ್ಚಳ ಆಗಿರುವುದು ಶೇ. 1.8 ಮಾತ್ರ. ಆಟೊಮೊಬೈಲ್ ಕಂಪನಿಗಳು ಸರಕು ಸಂಗ್ರಹ ತಗ್ಗಿಸುವ ಉದ್ದೇಶದಿಂದ ಮುಂಗಡವಾಗಿ ಕಾರು ತಯಾರಿಕೆಯನ್ನು ಕಡಿಮೆ ಮಾಡಿದೆ. ಪರಿಣಾಮವಾಗಿ, ರೀಟೇಲ್ ಮಳಿಗೆಗಳಿಗೆ ಕಾರುಗಳ ಸರಬರಾಜು ಪ್ರಮಾಣದಲ್ಲಿ ಹೆಚ್ಚೇನೂ ಏರಿಕೆ ಆಗಿಲ್ಲ.
ಆದರೆ, ರೀಟೇಲ್ ಮಳಿಗೆಗಳಲ್ಲಿ ಕಾರುಗಳ ಮಾರಾಟ ಅಕ್ಟೋಬರ್ನಲ್ಲಿ ಏರಿದೆ. ಪ್ಯಾಸೆಂಜರ್ ವಾಹನ ವಿಭಾಗದಲ್ಲಿ ದೇಶದ ಅಗ್ರಗಣ್ಯ ಸಂಸ್ಥೆಯಾದ ಮಾರುತಿ ಸುಜುಕಿ ಅಕ್ಟೋಬರ್ನಲ್ಲಿ 2,02,402 ಯೂನಿಟ್ಗಳನ್ನು ಮಾರಾಟ ಮಾಡಿದೆ. ಇದು ಯಾವುದೇ ತಿಂಗಳಲ್ಲಿ ಭಾರತೀಯ ಸಂಸ್ಥೆಯೊಂದು ಮಾರಿದ ಗರಿಷ್ಠ ಪ್ಯಾಸೆಂಜರ್ ವಾಹನಗಳ ಸಂಖ್ಯೆ. ಮಾರುತಿಯ ರೀಟೇಲ್ ಮಾರಾಟ ಸಂಖ್ಯೆ 1,59,591 ಇದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 5ರಷ್ಟು ಕಡಿಮೆ ಆಗಿದೆ.
ಇದನ್ನೂ ಓದಿ: ಭಾರತದಲ್ಲಿ ಕಲ್ಲಿದ್ದಲು, ಕಬ್ಬಿಣ ಅದಿರು ಉತ್ಪಾದನೆ, ವಿದ್ಯುತ್ ಬಳಕೆ ಹೆಚ್ಚಳ; ಪ್ರಬಲ ಆರ್ಥಿಕತೆಯ ಸೂಚಕ
ಟೊಯೊಟಾ, ಕಿಯಾ ಮೋಟಾರ್ಸ್, ಮಹೀಂದ್ರ ಅಂಡ್ ಮಹೀಂದ್ರಾ ಸಂಸ್ಥೆಗಳು ಪ್ಯಾಸೆಂಜರ್ ವಾಹನಗಳ ಮಾರಾಟದಲ್ಲಿ ಶೇ. 25ರಿಂದ 41ರಷ್ಟು ಹೆಚ್ಚಳ ಕಂಡಿವೆ.
ಇದನ್ನೂ ಓದಿ: ಅಕ್ಟೋಬರ್ನಲ್ಲಿ 1.87 ಲಕ್ಷ ಕೋಟಿ ರೂ ಮೊತ್ತದ ಜಿಎಸ್ಟಿ ಸಂಗ್ರಹ; ಆರು ತಿಂಗಳಲ್ಲೇ ಗರಿಷ್ಠ ಮಟ್ಟ
ಪ್ಯಾಸೆಂಜರ್ ವಾಹನ ಮಾರುಕಟ್ಟೆಯಲ್ಲಿ ಎಸ್ಯುವಿಗಳ ಮಾರಾಟ ಭರ್ಜರಿಯಾಗಿದೆ. ಸಣ್ಣ ಕಾರುಗಳಿಗಿಂತ ಎಸ್ಯುವಿ ಕಾರುಗಳಿಗೆ ಬೇಡಿಕೆ ಹೆಚ್ಚಿದಂತಿದೆ. ಎಸ್ಯುವಿ ಮಾರಾಟದಲ್ಲಿ ಮಾರುತಿ ಸುಜುಕಿ ನಂಬರ್ ಒನ್ ಸ್ಥಾನದಲ್ಲಿ ಮುಂದುವರಿದಿದೆ. ಮಹೀಂದ್ರ ಅಂಡ್ ಮಹೀಂದ್ರ 54,000ಕ್ಕೂ ಹೆಚ್ಚು ಎಸ್ಯುವಿಗಳನ್ನು ಮಾರಾಟ ಮಾಡಿದೆ. ಯಾವುದೇ ತಿಂಗಳಲ್ಲಿ ಮಹೀಂದ್ರ ಕಾರುಗಳ ಅತಿಹೆಚ್ಚು ಮಾರಾಟವಾದ ದಾಖಲೆ ಅದು. ಥಾರ್ ರಾಕ್ಸ್ ಎನ್ನುವ ಹೊಸ ಮಾಡಲ್ನಿಂದಾಗಿ ಮಹೀಂದ್ರ ಕಾರುಗಳ ಮಾರಾಟ ಭರ್ಜರಿಯಾಗಿ ನಡೆದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ