ಭಾರತದಲ್ಲಿ ಕಲ್ಲಿದ್ದಲು, ಕಬ್ಬಿಣ ಅದಿರು ಉತ್ಪಾದನೆ, ವಿದ್ಯುತ್ ಬಳಕೆ ಹೆಚ್ಚಳ; ಪ್ರಬಲ ಆರ್ಥಿಕತೆಯ ಸೂಚಕ

India's economic update: ಭಾರತದಲ್ಲಿ ವಿದ್ಯುತ್ ಅನುಭೋಗದ ಪ್ರಮಾಣ ಅಕ್ಟೋಬರ್​ನಲ್ಲಿ 14,047 ಕೋಟಿ ಯುನಿಟ್​ನಷ್ಟಾಗಿದೆ. ಇದೇ ತಿಂಗಳಲ್ಲಿ ಕಲ್ಲಿದ್ದಲು ಉತ್ಪಾದನೆ ಶೇ. 7.4ರಷ್ಟು ಏರಿಕೆ ಆಗಿ 84.45 ಮಿಲಿಯನ್ ಟನ್ ಮುಟ್ಟಿದೆ. ಕಬ್ಬಿಣ ಅದಿರು ಉತ್ಪಾದನೆ ಏಪ್ರಿಲ್​ನಿಂದ ಸೆಪ್ಟೆಂಬರ್​ವರೆಗೆ ಶೇ. 5.5ರಷ್ಟು ಏರಿದೆ.

ಭಾರತದಲ್ಲಿ ಕಲ್ಲಿದ್ದಲು, ಕಬ್ಬಿಣ ಅದಿರು ಉತ್ಪಾದನೆ, ವಿದ್ಯುತ್ ಬಳಕೆ ಹೆಚ್ಚಳ; ಪ್ರಬಲ ಆರ್ಥಿಕತೆಯ ಸೂಚಕ
ಕಲ್ಲಿದ್ದಲು ಉತ್ಪಾದನೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 03, 2024 | 2:00 PM

ನವದೆಹಲಿ, ನವೆಂಬರ್ 3: ದೇಶದಲ್ಲಿ ವಿದ್ಯುತ್ ಬಳಕೆ ಪ್ರಮಾಣ ಅಕ್ಟೋಬರ್​ನಲ್ಲಿ ಅಲ್ಪ ಪ್ರಮಾಣದಲ್ಲಿ ಹೆಚ್ಚಿದೆ. ಕಲ್ಲಿದ್ದಲು ಉತ್ಪಾದನೆ ಅಕ್ಟೋಬರ್ ತಿಂಗಳಲ್ಲಿ ಗಣನೀಯವಾಗಿ ಹೆಚ್ಚಿದೆ. ಏಪ್ರಿಲ್​ನಿಂದ ಸೆಪ್ಟೆಂಬರ್​ವರೆಗಿನ ಆರು ತಿಂಗಳ ಅವಧಿಯಲ್ಲಿ ದೇಶದಲ್ಲಿ ಕಬ್ಬಿಣ ಅದಿರು ಉತ್ಪಾದನೆ ಏರಿಕೆ ಆಗಿದೆ. ಕಬ್ಬಿಣ ಅದಿರು ಮಾತ್ರವಲ್ಲ ಮ್ಯಾಂಗನೀಸ್, ಅದಿರು ಅಲುಮಿನಿಯಮ್, ಸಂಸ್ಕರಿತ ತಾಮ್ರ ಇತ್ಯಾದಿಯ ಉತ್ಪಾದನೆ ಹೆಚ್ಚಾಗಿದೆ. ಇವೆಲ್ಲವೂ ಆರ್ಥಿಕತೆಯ ಬೆಳವಣಿಗೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿರುವುದರ ಸೂಚಕವಾಗಿದೆ.

ಅಕ್ಟೋಬರ್​ನಲ್ಲಿ ವಿದ್ಯುತ್ ಬಳಕೆ 14,047 ಕೋಟಿ ಯುನಿಟ್

ಭಾರತದಲ್ಲಿ ಅಕ್ಟೋಬರ್ ತಿಂಗಳಲ್ಲಿ 14,047 ಕೋಟಿ ಯುನಿಟ್​ನಷ್ಟು ವಿದ್ಯುತ್ ಬಳಕೆ ಇದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ವಿದ್ಯುತ್ ಬಳಕೆಯಲ್ಲಿ ಶೇ. 1ರಷ್ಟು ಹೆಚ್ಚಳವಾಗಿದೆ.

ಇದನ್ನೂ ಓದಿ: ಖರ್ಗೆ ಕಣ್ಣಿಗೆ ‘ಕಾಲ್ತುಳಿತ’ ಕಾಣುತ್ತೆ ಹೊರತು ಕಾರ್ಮಿಕ ಸಂಖ್ಯೆ ಹೆಚ್ಚಾಗಿದ್ದು ಕಾಣಲ್ಲ: ಸಚಿವ ಹರ್ದೀಪ್ ಸಿಂಗ್

ಕಲ್ಲಿದ್ದಲು ಉತ್ಪಾದನೆ ಶೇ. 7.4ರಷ್ಟು ಹೆಚ್ಚಳ

ಕಲ್ಲಿದ್ದಲು ಉತ್ಪಾದನೆ ಪ್ರಮಾಣ ಅಕ್ಟೋಬರ್​ನಲ್ಲಿ 84.45 ಮಿಲಿಯನ್ ಟನ್​ನಷ್ಟಾಗಿದೆ. ಹಿಂದಿನ ವರ್ಷದ ಅಕ್ಟೋಬರ್​ನಲ್ಲಿ 78.57 ಎಂಟಿಯಷ್ಟು ಕಲ್ಲಿದ್ದಲು ಉತ್ಪಾದನೆ ಆಗಿತ್ತು. ಅದಕ್ಕೆ ಹೋಲಿಸಿದರೆ ಈ ಬಾರಿ ಉತ್ಪಾದನಾ ಪ್ರಮಾಣ ಶೇ. 7.4ರಷ್ಟು ಹೆಚ್ಚಾದಂತಾಗಿದೆ.

ಏಪ್ರಿಲ್​ನಿಂದ ಅಕ್ಟೋಬರ್​ವರೆಗಿನ ಏಳು ತಿಂಗಳ ಅವಧಿಯಲ್ಲಿ 537.45 ಮಿಲಿಯನ್ ಟನ್​ನಷ್ಟು ಕಲ್ಲಿದ್ದಲು ಉತ್ಪಾದನೆ ಆಗಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಕಲ್ಲಿದ್ದಲು ಉತ್ಪಾದನೆ 506.56 ಎಂಟಿಯಷ್ಟಿತ್ತು. ಉತ್ಪಾದನೆಯಲ್ಲಿ ಶೇ. 6.1ರಷ್ಟು ಏರಿಕೆ ಆಗಿತ್ತು.

ಕಬ್ಬಿಣ ಅದಿರು ಉತ್ಪಾದನೆ ಶೇ. 5.5ರಷ್ಟು ಹೆಚ್ಚಳ

ದೇಶದಲ್ಲಿ ಈ ಹಣಕಾಸು ವರ್ಷದ ಮೊದಲಾರ್ಧದಲ್ಲಿ (ಏಪ್ರಿಲ್​ನಿಂದ ಸೆಪ್ಟೆಂಬರ್) 135 ಮಿಲಿಯನ್ ಟನ್​​ನಷ್ಟು ಕಬ್ಬಿಣ ಅದಿರಿನ ಉತ್ಪಾದನೆ ಆಗಿದೆ. ಹಿಂದಿನ ವರ್ಷದ ಈ ಅವಧಿಗೆ ಹೋಲಿಸಿದರೆ ಉತ್ಪಾದನಾ ಪ್ರಮಾಣ ಶೇ. 5.5ರಷ್ಟು ಹೆಚ್ಚಾಗಿದೆ.

ಇದನ್ನೂ ಓದಿ: ಬೆಳೆಯುತ್ತಿರುವ ಬಾಹ್ಯಾಕಾಶ ಉದ್ಯಮ; ಎಲ್ ಅಂಡ್ ಟಿ ಇನ್ನಷ್ಟು ಹೆಜ್ಜೆ ಇರಿಸಲು ನಿರ್ಧಾರ

ಮ್ಯಾಂಗನೀಸ್ ಅದಿರಿನ ಉತ್ಪಾದನೆಯು ಈ ಅವಧಿಯಲ್ಲಿ ಶೇ. 6.2ರಷ್ಟು ಹೆಚ್ಚಾಗಿ 1.7 ಮಿಲಿಯನ್ ಟನ್ ಮುಟ್ಟಿದೆ. ಅಲೂಮಿನಿಯಮ್ ಲೋಹದ ಉತ್ಪಾದನೆ 20.90 ಲಕ್ಷ ಟನ್ ಇದೆ. ಸಂಸ್ಕರಿತ ತಾಮ್ರದ ಉತ್ಪಾದನೆ ಎರಡೂವರೆ ಲಕ್ಷ ಟನ್​ಗೆ ಏರಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ