
ಮುಂಬೈ, ಡಿಸೆಂಬರ್ 22: ಪತಂಜಲಿ ಫುಡ್ಸ್ (Patanjali Foods) ಫುಡ್ಸ್ ಷೇರು ಬೆಲೆ ಇಂದು ಸೋಮವಾರ ಅಲ್ಪ ಹಿನ್ನಡೆ ಪಡೆದರೂ ಕಳೆದ ವಾರದಿಂದ ಒಟ್ಟಾರೆಯಾಗಿ ಪಾಸಿಟಿವ್ ದೆಸೆಯಲ್ಲಿದೆ. ಡಿಸೆಂಬರ್ 15 ರಿಂದ, ಕಂಪನಿಯ ಷೇರುಗಳು ಸುಮಾರು 7% ರಷ್ಟು ಗಳಿಸಿದ್ದು, ಹೂಡಿಕೆದಾರರಿಗೆ ಸುಮಾರು ₹3,900 ಕೋಟಿ ಲಾಭವನ್ನು ತಂದುಕೊಟ್ಟಿವೆ. ಇದರಿಂದ ಮತ್ತೊಮ್ಮೆ ಕಂಪನಿಯ ವ್ಯಾಲ್ಯುಯೇಶನ್ ₹61,000 ಕೋಟಿ ರೂ ದಾಟಿಸಿದೆ. ಕಳೆದ ವಾರದ ಕೊನೆಯ ಟ್ರೇಡಿಂಗ್ ದಿನವಾದ ಶುಕ್ರವಾರ (ಡಿ. 19) ಪತಂಜಲಿ ಫುಡ್ಸ್ ಷೇರುಗಳ ಬೆಲೆ ಒಂದು ಹಂತದಲ್ಲಿ 2.75% ವರೆಗೆ ಏರಿಕೆ ಕಂಡಿತ್ತು. ಇಂದು ಸೋಮವಾರ ಬೆಳಗಿನ ವಹಿವಾಟಿನಲ್ಲಿ ಅದರ ಷೇರು ಬೆಲೆ ತುಸು ಇಳಿಕೆ ಕಂಡಿದೆ.
ವಾರದ ಕೊನೆಯ ಟ್ರೇಡಿಂಗ್ ದಿನದಂದು ಪತಂಜಲಿ ಷೇರುಗಳು ಗಮನಾರ್ಹ ಏರಿಕೆ ಕಂಡಿತು. ಟ್ರೇಡಿಂಗ್ ಅವಧಿ ಮುಗಿದಾಗ ಅದರ ಷೇರುಬೆಲೆ 560.65 ರೂನಲ್ಲಿ ಅಂತ್ಯಗೊಂಡಿತು. ಒಟ್ಟಾರೆ ಆ ದಿನ ಶೇ. 1.88ರಷ್ಟು ಏರಿತು. ಒಂದು ಹಂತದಲ್ಲಿ ಅದರ ಬೆಲೆ 566.85 ರೂಗೆ ಏರಿತ್ತು. ಶೇ. 2.75ರಷ್ಟು ಹೆಚ್ಚಳಗೊಂಡು ಗಮನ ಸೆಳೆಯಿತು. 52 ವಾರಗಳ ಕನಿಷ್ಠ ಮಟ್ಟವಾದ 521 ರೂಗೆ ಹೋಲಿಸಿದರೆ ಪತಂಜಲಿ ಷೇರುಬೆಲೆ ಗಮನಾರ್ಹವಾಗಿ ಹೆಚ್ಚಾಗಿದೆ.
ಕಂಪನಿಯ ಷೇರುಗಳು ಸತತ ನಾಲ್ಕು ದಿನ ಏರಿಕೆ ಕಂಡಿರುವುದು ವಿಶೇಷ. ಈ ವಾರಾದ್ಯಂತ ಅದರ ಬೆಲೆ ಸತತವಾಗಿ ಏರುತ್ತಿದೆ. ಬಿಎಸ್‌ಇ ದತ್ತಾಂಶದ ಪ್ರಕಾರ, ಕಂಪನಿಯ ಷೇರುಗಳು ಡಿಸೆಂಬರ್ 15 ರಂದು ₹531.20 ರೂ ಬೆಲೆ ಪಡೆದಿದ್ದವು. ಡಿಸೆಂಬರ್ 19 ರಂದು ₹560 ಕ್ಕೆ ಏರಿದೆ. ಇದರರ್ಥ ಕಂಪನಿಯ ಷೇರುಗಳು ಸುಮಾರು 6 ಪ್ರತಿಶತದಷ್ಟು ಗಳಿಸಿವೆ. ಆದಾಗ್ಯೂ, ಒಂದು ತಿಂಗಳಲ್ಲಿ, ಕಂಪನಿಯ ಷೇರುಗಳು ಶೇಕಡಾ 4 ಕ್ಕಿಂತ ಹೆಚ್ಚು ಕುಸಿದಿವೆ. ಕಳೆದ ಆರು ತಿಂಗಳಲ್ಲಿ, ಕಂಪನಿಯ ಷೇರುಗಳು ಶೇಕಡಾ 2 ಕ್ಕಿಂತ ಹೆಚ್ಚು ಗಳಿಸಿವೆ. ಕಳೆದ ಐದು ವರ್ಷಗಳಲ್ಲಿ, ಕಂಪನಿಯು ಹೂಡಿಕೆದಾರರಿಗೆ ಸುಮಾರು ಶೇ. 61 ರಷ್ಟು ರಿಟರ್ನ್ ಕೊಟ್ಟಿದೆ.
ಇದನ್ನೂ ಓದಿ: ಡೇಂಜರ್ ಮಾಲಿನ್ಯ, ಎಲ್ಲೆಲ್ಲೂ ಶೀತ, ಉಸಿರಾಟದ ತೊಂದರೆ; ಇಗೋ ಇಲ್ಲಿದೆ ಆಯುರ್ವೇದ ಪರಿಹಾರ
ಸತತ ನಾಲ್ಕು ದಿನಗಳ ಲಾಭದಿಂದಾಗಿ ಕಂಪನಿಯ ವ್ಯಾಲ್ಯುಯೇಶನ್ ಗಮನಾರ್ಹ ಏರಿಕೆ ಕಂಡಿದೆ. ಡಿಸೆಂಬರ್ 15 ರಂದು ಕಂಪನಿಯ ವ್ಯಾಲ್ಯುಯೇಶನ್ ₹57,785.44 ಕೋಟಿ ಇತ್ತು. ಈಗ ಅದು ₹61,663.54 ಕೋಟಿ ರೂ ತಲುಪಿದೆ ಎಂದು ಡೇಟಾ ತೋರಿಸುತ್ತದೆ. ಇದರರ್ಥ ಈ ಅವಧಿಯಲ್ಲಿ ಕಂಪನಿಯ ವ್ಯಾಲ್ಯೂಯೇಶನ್ ಅಥವಾ ಹೂಡಿಕೆದಾರರ ಲಾಭವು ₹3,878.1 ಕೋಟಿಗಳಷ್ಟು ಹೆಚ್ಚಾಗಿದೆ. ಕಂಪನಿಯು ಸ್ಥಿರವಾಗಿ ಬೆಳೆಯುತ್ತಿದೆ. ಮುಂಬರುವ ದಿನಗಳಲ್ಲಿ ಕಂಪನಿಯ ಷೇರುಗಳು ಮತ್ತಷ್ಟು ಲಾಭವನ್ನು ಪಡೆಯಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ