AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಗೆ ಡೆಲಿವರಿ ಬರುತ್ತವೆ ಪತಂಜಲಿ ಉತ್ಪನ್ನಗಳು; ಪತಂಜಲಿ ವೆಬ್​ನಲ್ಲಿ ಆನ್ಲೈನ್ ಶಾಪಿಂಗ್

Book Patanjali products online and get delivered: ಪತಂಜಲಿ ಆಯುರ್ವೇದದ ವೆಬ್‌ಸೈಟ್ ಮೂಲಕ ನಿಮ್ಮ ನೆಚ್ಚಿನ ಉತ್ಪನ್ನಗಳನ್ನು ಮನೆಯಿಂದಲೇ ಆರ್ಡರ್ ಮಾಡಬಹುದು. ಕಂಪನಿಯು ಅನೇಕ ನಗರಗಳಲ್ಲಿ ಹೋಮ್ ಡೆಲಿವರಿ ನೀಡುತ್ತದೆ. ಗ್ರಾಹಕರು ತಮ್ಮ ಮನೆಯಿಂದಲೇ ಆರ್ಡರ್ ಮಾಡುವುದರ ಜೊತೆಗೆ ಶೇ. 10ರವರೆಗೆ ಡಿಸ್ಕೌಂಟ್ ಕೂಡ ಪಡೆಯಬಹುದು.

ಮನೆಗೆ ಡೆಲಿವರಿ ಬರುತ್ತವೆ ಪತಂಜಲಿ ಉತ್ಪನ್ನಗಳು; ಪತಂಜಲಿ ವೆಬ್​ನಲ್ಲಿ ಆನ್ಲೈನ್ ಶಾಪಿಂಗ್
ಪತಂಜಲಿ ಆನ್ಲೈನ್ ಪ್ಲಾಟ್ಫಾರ್ಮ್​ನಲ್ಲಿರುವ ಕೆಲ ಉತ್ಪನ್ನಗಳು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 28, 2025 | 3:08 PM

Share

ಯೋಗ ಗುರು ಬಾಬಾ ರಾಮದೇವ್ ಅವರ ಪತಂಜಲಿ ಸಂಸ್ಥೆ (Patanjali Ayurveda) ತನ್ನ ಗ್ರಾಹಕರಿಗೆ ಆನ್‌ಲೈನ್ ಶಾಪಿಂಗ್ ಸೌಲಭ್ಯ ನೀಡುತ್ತಿದೆ. ಪತಂಜಲಿ ಉತ್ಪನ್ನಗಳನ್ನು ಕೊಳ್ಳಲು ನೀವು ಅಂಗಡಿಗೆಯೇ ತೆರಳಬೇಕಿಲ್ಲ. ನಿಮ್ಮ ಮನೆಯಲ್ಲೇ ಕೂತು ಬೇಕಾದ ಉತ್ಪನ್ನಗಳನ್ನು ಆನ್​ಲೈನ್​ನಲ್ಲಿ ಆರ್ಡರ್ ಮಾಡಬಹುದು. ಅಮೇಜಾನ್, ಫ್ಲಿಪ್​ಕಾರ್ಟ್​ನಂತಹ ಆನ್ಲೈನ್ ಪ್ಲಾಟ್​ಫಾರ್ಮ್​ಗಳಲ್ಲಿ (Online platform) ಶಾಪಿಂಗ್ ಮಾಡುವ ರೀತಿಯಲ್ಲಿ ಪತಂಜಲಿ ವೆಬ್​ಸೈಟ್​ನಿಂದಲೇ ನೀವು ಖರೀದಿಸಬಹುದು. ಈ ಪತಂಜಲಿ ವೆಬ್​ನಲ್ಲಿ ನೀವು ಉತ್ಪನ್ನಗಳನ್ನು ಖರೀದಿಸಿದರೆ ಶೇ. 10ರವರೆಗೂ ರಿಯಾಯಿತಿ ಪಡೆಯಲು ಅವಕಾಶ ಇರುತ್ತದೆ.

ಪತಂಜಲಿಯ ಅಧಿಕೃತ ಆನ್‌ಲೈನ್ ಪ್ಲಾಟ್​ಫಾರ್ಮ್​ನಲ್ಲಿ ಜನರು ಪತಂಜಲಿಯ ವಿವಿಧ ಉತ್ಪನ್ನಗಳನ್ನು ಖರೀದಿಸಿ ತಮ್ಮ ಮನೆ ಬಾಗಿಲಿಗೆ ತರಿಸಿಕೊಳ್ಳಬಹುದು. ಪತಂಜಲಿಯ ವಿವಿಧ ಸೋಪುಗಳು, ಟೂತ್​ಪೇಸ್ಟ್, ಹಿಟ್ಟು, ತುಪ್ಪ, ಹರ್ಬಲ್ ಜ್ಯೂಸ್ ಸೇರಿದಂತೆ ನೂರಾರು ಉತ್ಪನನ್ಗಳನ್ನು ವೆಬ್​ಸೈಟ್​ನಲ್ಲಿ ಆರ್ಡರ್ ಮಾಡಬಹುದು. ಪತಂಜಲಿ ಆ್ಯಪ್​ನಲ್ಲೂ ಕೂಡ ಇವುಗಳನ್ನು ಖರೀದಿಸಿ, ಮನೆಗೆ ಡೆಲಿವರಿ ತರಿಸಬಹುದು. ಈ ಆನ್ಲೈನ್ ಪ್ಲಾಟ್​ಫಾರ್ಮ್​ನಿಂದ ಪತಂಜಲಿ ಉತ್ಪನ್ನಗಳು ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳ ಗ್ರಾಹಕರನ್ನೂ ತಲುಪಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: ಪಶ್ಚಿಮ ಯುಪಿ ಅಭಿವೃದ್ಧಿಗೆ ಪತಂಜಲಿ ಸಹಕಾರ; ಏರ್​ಪೋರ್ಟ್ ಸಮೀಪ ಅಗ್ರಿ ಎಕ್ಸ್​ಪೋರ್ಟ್ ಹಬ್

ಗ್ರಾಹಕರಿಗೆ 10% ವರೆಗೆ ರಿಯಾಯಿತಿ

ಆನ್‌ಲೈನ್ ಪ್ಲಾಟ್‌ಫಾರ್ಮ್‌ನಿಂದ ಖರೀದಿಸುವಾಗ ಗ್ರಾಹಕರು 10% ವರೆಗೆ ರಿಯಾಯಿತಿ ಸಹ ಪಡೆಯುತ್ತಾರೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಪತಂಜಲಿ (PNB-ಪತಂಜಲಿ) ಕ್ರೆಡಿಟ್ ಕಾರ್ಡ್ ಮತ್ತು RBL ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನೊಂದಿಗೆ, ನೀವು 10% ಕ್ಯಾಶ್‌ಬ್ಯಾಕ್ ಪಡೆಯಬಹುದು. ಜೊತೆಗೆ, ಕೆಲವು ಉತ್ಪನ್ನಗಳಿಗೆ ಫ್ರೀ ಡೆಲಿವರಿ ಸೇವೆಯೂ ಇರುತ್ತದೆ. patanjaliayurved.net ವೆಬ್‌ಸೈಟ್‌ನಿಂದ ನೀವು ಪತಂಜಲಿಯ ಯಾವುದೇ ಉತ್ಪನ್ನವನ್ನು ಆರ್ಡರ್ ಮಾಡಬಹುದು. ಪತಂಜಲಿ ಆಯುರ್ವೇದವು ವಿವಿಧ ಔಷಧಗಳನ್ನೂ ಆನ್​ಲೈನ್ ಪ್ಲಾಟ್​ಫಾರ್ಮ್​ನಲ್ಲಿ ಲಭ್ಯ ಇರಿಸಿದೆ.

ಆನ್​ಲೈನ್​ನಲ್ಲಿ ಆರ್ಡರ್ ಮಾಡುವ ಕ್ರಮ

  • ಪತಂಜಲಿ ವೆಬ್​ಸೈಟ್​ನ ಅಧಿಕೃತ ವೆಬ್​ಸೈಟ್ www.patanjaliayurved.net ಗೆ ಹೋಗಿ
  • ಫ್ಲಿಪ್‌ಕಾರ್ಟ್ ಅಥವಾ ಅಮೆಜಾನ್‌ನಲ್ಲಿ ಲಾಗಿನ್ ಆಗುವ ರೀತಿಯಲ್ಲೇ ಪತಂಜಲಿ ವೆಬ್​ಸೈಟ್​ನಲ್ಲೂ ನಿಮ್ಮ ಖಾತೆ ವಿವರಗಳನ್ನು ನಮೂದಿಸುವ ಮೂಲಕ ಲಾಗಿನ್ ಆಗಬೇಕು,
  • ಹೆಸರು, ವಿಳಾಸ, ಮೊಬೈಲ್ ನಂಬರ್ ಇತ್ಯಾದಿಯನ್ನು ಕೇಳಲಾಗುತ್ತದೆ. ಅವನ್ನು ಸರಿಯಾಗಿ ನಮೂದಿಸಿ ಲಾಗಿನ್ ಆಗಬೇಕು.
  • ನಿಮಗೆ ಬೇಕಾದ ಉತ್ಪನ್ನಗಳನ್ನು ಆಯ್ಕೆ ಮಾಡಿಕೊಂಡು ಕಾರ್ಟ್​ಗೆ ಸೇರಿಸಿ
  • ಇದಾದ ಬಳಿಕ ‘ಆರ್ಡರ್ಸ್​’ಗೆ ಹೋಗಿ, ಅಲ್ಲಿ ವಿಳಾಸ ಆಯ್ಕೆ ಮಾಡಿಕೊಂಡು ಆನ್​ಲೈನ್​ನಲ್ಲಿ ಹಣವನ್ನೂ ಪಾವತಿಸಿ.

ಇದನ್ನೂ ಓದಿ: ಪತಂಜಲಿ ವೆಲ್ನೆಸ್​ನಿಂದ ಬದಲಾದ ಜೀವನ; ಜನರ ಅನುಭವಗಳ ಕಥೆ ಕೇಳಿ

ಹೀಗೆ ಬುಕ್ ಮಾಡಲಾದ ಸರಕುಗಳು ಕೆಲ ದಿನಗಳಲ್ಲೇ ನೀವು ನಮೂದಿಸಿದ ವಿಳಾಸಕ್ಕೆ ಡೆಲಿವರಿ ಆಗುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ