FD Rates: ಆಕ್ಸಿಸ್ ಬ್ಯಾಂಕ್: 2 ಕೋಟಿ ರೂ ಒಳಗಿನ ಎಫ್​ಡಿಗಳಿಗೆ ಬಡ್ಡಿದರ 10 ಬೇಸಿಸ್ ಪಾಯಿಂಟ್ ಕಡಿಮೆ

Axis Bank Revises FD Rates: ಆಕ್ಸಿಸ್ ಬ್ಯಾಂಕ್ ಸಂಸ್ಥೆ ತನ್ನ ಎಫ್​ಡಿ ದರಗಳನ್ನು ಪರಿಷ್ಕರಿಸಿದ್ದು, 2 ಕೋಟಿ ರೂ ಒಳಗಿನ ಠೇವಣಿಗಳಿಗೆ ನೀಡುವ ಬಡ್ಡಿದರವನ್ನು 10 ಮೂಲಾಂಕಗಳಷ್ಟು ಕಡಿಮೆ ಮಾಡಿದೆ. ಶೇ. 7.20ರಷ್ಟಿದ್ದ ಗರಿಷ್ಠ ದರ ಇದೀಗ ಶೇ. 7.10ಕ್ಕೆ ಇಳಿದಿದೆ.

FD Rates: ಆಕ್ಸಿಸ್ ಬ್ಯಾಂಕ್: 2 ಕೋಟಿ ರೂ ಒಳಗಿನ ಎಫ್​ಡಿಗಳಿಗೆ ಬಡ್ಡಿದರ 10 ಬೇಸಿಸ್ ಪಾಯಿಂಟ್ ಕಡಿಮೆ
ಆಕ್ಸಿಸ್ ಬ್ಯಾಂಕ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 26, 2023 | 1:13 PM

ನವದೆಹಲಿ, ಜುಲೈ 26: ಖಾಸಗಿ ವಲಯ ಆಕ್ಸಿಸ್ ಬ್ಯಾಂಕ್ ಇದೀಗ ತನ್ನ ಫಿಕ್ಸೆಡ್ ಡೆಪಾಸಿಟ್ (Axis Bank FD Rates) ದರಗಳನ್ನು ಇಳಿಸಿದೆ. 2 ಕೋಟಿ ರೂ ಒಳಗಿನ ವಿವಿಧ ಅವಧಿಯ ಠೇವಣಿಗಳಿಗೆ ಬಡ್ಡಿ ದರಗಳನ್ನು 10 ಬೇಸಿಸ್ ಪಾಯಿಂಟ್​ಗಳಷ್ಟು ಕಡಿಮೆ ಮಾಡಲಾಗಿದೆ. ಇತ್ತೀಚೆಗಷ್ಟೇ ಆಕ್ಸಿಸ್ ಬ್ಯಾಂಕ್ ತನ್ನ ನಿಶ್ಚಿತ ಠೇವಣಿಗಳಿಗೆ ಬಡ್ಡಿದರವನ್ನು 10 ಬೇಸಿಸ್ ಅಂಕಗಳಷ್ಟು ಹೆಚ್ಚು ಮಾಡಿತ್ತು. ಈಗ ಮತ್ತೆ ದರ ಪರಿಷ್ಕರಣೆ ಮಾಡಿದೆ. 7 ದಿನಗಳಿಂದ ಹಿಡಿದು 10 ವರ್ಷದವರೆಗಿನ ವಿವಿಧ ಅವಧಿಯ ಠೇವಣಿಗಳಿಗೆ ಇದೀಗ ಬಡ್ಡಿ ದರ ಶೇ. 3.5ರಿಂದ ಶೇ. 7.10ರವರೆಗೂ ಇದೆ. ಇಂದಿನಿಂದಲೇ (ಜುಲೈ 26) ಹೊಸ ದರಗಳು ಚಾಲ್ತಿಗೆ ಬರಲಿವೆ.

13 ತಿಂಗಳಿಂದ ಹಿಡಿದು 2 ವರ್ಷದೊಳಗಿನ ಅವಧಿಯವರೆಗೆ ಗರಿಷ್ಠ ಬಡ್ಡಿ ದರ ಕೊಡಲಾಗುತ್ತದೆ. ಅಂದರೆ ಶೇ. 7.10ರಷ್ಟು ಬಡ್ಡಿ ಸಿಗುತ್ತದೆ. 30 ತಿಂಗಳ ಮೇಲ್ಪಟ್ಟ ಅವಧಿಗೆ ಶೇ. 7ರಷ್ಟು ಬಡ್ಡಿ ಸಿಗುತ್ತದೆ. ಇನ್ನು 2 ಕೋಟಿ ರೂನಿಂದ 2.30 ಕೋಟಿ ರೂವರೆಗಿನ ಠೇವಣಿಯಾದರೆ 12 ತಿಂಳಿಂದ 15 ತಿಂಗಳ ಅವಧಿಯವರೆಗೆ ಶೇ. 7.25ರಷ್ಟು ಬಡ್ಡಿ ಸಿಗುತ್ತದೆ.

ಇದನ್ನೂ ಓದಿPhonePe: ಫೋನ್​ಪೇ ಆ್ಯಪ್​ನಲ್ಲಿ ಇನ್ಕಮ್ ಟ್ಯಾಕ್ಸ್ ಹೊಸ ಫೀಚರ್; ಇಲಾಖೆ ಪೋರ್ಟಲ್​ಗೆ ಹೋಗೋ ಅಗತ್ಯ ಇಲ್ಲ

ಆಕ್ಸಿಸ್ ಬ್ಯಾಂಕ್​ನಲ್ಲಿ 5 ಕೋಟಿ ರೂವರೆಗಿನ ಮೊತ್ತವನ್ನು ಎಫ್​ಡಿಯಲ್ಲಿ ಇಡಲು ಅವಕಾಶ ಇದೆ. 7 ದಿನಗಳಿಂದ 10 ವರ್ಷಗಳವರೆಗೆ ಠೇವಣಿ ಇಡಬಹುದು.

ಆಕ್ಸಿಸ್ ಬ್ಯಾಂಕ್, 2 ಕೋಟಿ ರೂ ಒಳಗಿನ ಠೇವಣಿಗಳಿಗೆ ಸಿಗುವ ಬಡ್ಡಿ

  • 7 ದಿನದಿಂದ 45 ದಿನದವರೆಗೆ: ಶೇ. 3.50
  • 46ದಿನದಿಂದ 60 ದಿನದವರೆಗೆ: ಶೇ. 4
  • 61 ದಿನದಿಂದ 3 ತಿಂಗಳಿಗಿಂತ ಕಡಿಮೆ ಅವಧಿಗೆ: ಶೇ. 4.50
  • 3 ತಿಂಗಳಿಂದ 6 ತಿಂಗಳವರೆಗೆ: ಶೇ. 4.75
  • 6 ತಿಂಗಳಿಂದ 9 ತಿಂಗಳವರೆಗೆ: ಶೇ. 5.75
  • 9 ತಿಂಗಳಿಂದ 1 ವರ್ಷಕ್ಕಿಂತ ಕಡಿಮೆ ಅವಧಿಗೆ: ಶೇ. 6
  • 1 ವರ್ಷದಿಂದ 1 ವರ್ಷ 4 ದಿನದವರೆಗೆ: ಶೇ. 6.75
  • 1 ವರ್ಷ 5ದಿನದಿಂದ 13 ತಿಂಗಳವರೆಗೆ: ಶೇ. 6.80
  • 13 ತಿಗಳಿಂದ 2 ವರ್ಷದ ಒಳಗಿನ ಅವಧಿ: ಶೇ. 7.10
  • 2 ವರ್ಷದಿಂದ 30 ತಿಂಗಳ ಒಳಗಿನ ಅವಧಿಗೆ: ಶೇ. 7.05
  • 30 ತಿಂಗಳಿಂದ 10 ವರ್ಷದವರೆಗೆ: ಶೇ. 7

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ