ನವದೆಹಲಿ, ನವೆಂಬರ್ 25: ಕೇಂದ್ರ ಸರ್ಕಾರ ಬ್ಯಾಂಕ್ ಖಾತೆ ಮತ್ತು ಫಿಕ್ಸೆಡ್ ಡೆಪಾಸಿಟ್ ಖಾತೆಗಳ ನಾಮಿನೇಶನ್ ನಿಯಮಗಳಲ್ಲಿ ಬದಲಾವಣೆ ತರಲು ಹೊರಟಿದೆ. ಬ್ಯಾಂಕಿಂಗ್ ಕಾನೂನು ತಿದ್ದುಪಡಿ ಮಸೂದೆಯನ್ನು ಸಂಸತ್ನಲ್ಲಿ ಮಂಡಿಸಲಾಗುತ್ತಿದೆ. ಇವತ್ತು ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಮಸೂದೆಯನ್ನು ಲೋಕಸಭೆಯಲ್ಲಿ ಪ್ರಸ್ತುತಪಡಿಸುವ ನಿರೀಕ್ಷೆ ಇದೆ. ಮುಂಗಾರು ಅಧಿವೇಶನದಲ್ಲೇ ಈ ಮಸೂದೆಯನ್ನು ಸಂಸತ್ಗೆ ಪರಿಚಯಿಸಲಾಗಿತ್ತು. ಬ್ಯಾಂಕಿಂಗ್ ಸೇವೆಯನ್ನು ಉತ್ತಮ ಪಡಿಸಲು ಕೆಲ ನಿಯಮ ಬದಲಾವಣೆ ಮಾಡಲಾಗಿದೆ. ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಈ ಸಮೂದೆಗೆ ಅನುಮೋದನೆ ಸಿಗುವ ಸಾಧ್ಯತೆ ಇದೆ.
ಒಂದು ಬ್ಯಾಂಕ್ ಖಾತೆಯಲ್ಲಿ ಸದ್ಯ ಒಬ್ಬ ನಾಮಿನಿಯನ್ನು ಹೆಸರಿಸುವ ಅವಕಾಶ ಇದೆ. ಈಗ ಬದಲಾದ ನಿಯಮದಲ್ಲಿ ನಾಲ್ಕು ನಾಮಿನಿಗಳನ್ನು ಹೆಸರಿಸುವ ಅವಕಾಶ ಸಿಗುತ್ತದೆ.
ಇದನ್ನೂ ಓದಿ: ನವೆಂಬರ್ನಲ್ಲಿ ಪಿಎಂಐ ಔಟ್ಪುಟ್ ಇಂಡೆಕ್ಸ್ 59.5; ಭಾರತದಲ್ಲಿ ಬಿಸಿನೆಸ್ ಚಟುವಟಿಕೆ ತೀವ್ರ
ಬ್ಯಾಂಕ್ ಅಕೌಂಟ್ ಮಾತ್ರವಲ್ಲ, ಫಿಕ್ಸೆಡ್ ಡೆಪಾಸಿಟ್ನಲ್ಲೂ ನಾಲ್ಕು ನಾಮಿನಿಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ. ಇಲ್ಲಿ ಎರಡು ರೀತಿಯ ನಾಮಿನೇಶನ್ಗಳ ಆಯ್ಕೆ ಇರುತ್ತದೆ. ಮೊದಲನೆಯದರಲ್ಲಿ ಯಾವ್ಯಾವ ನಾಮಿನಿಗೆ ಆಸ್ತಿಯಲ್ಲಿ ಎಷ್ಟು ಪಾಲು ಎಂದು ನಮೂದಿಸಬಹುದು.
ಎರಡನೆಯ ಆಯ್ಕೆಯಲ್ಲಿ, ಒಂದಕ್ಕಿಂತ ಹೆಚ್ಚು ಸಂಖ್ಯೆಯಯಲ್ಲಿ ನಾಮಿನಿಗಳಿದ್ದರೆ ಪ್ರೈಮರಿ ನಾಮಿನಿಯೊಬ್ಬರನ್ನು ಆರಿಸಬಹುದು. ಆ ಪ್ರಾಥಮಿಕ ನಾಮಿನಿ ನಿಧನರಾದರೆ ಆಗ ನಂತರದ ನಾಮಿನಿಗಳಿಗೆ ಹಕ್ಕು ವರ್ಗಾವಣೆ ಆಗುತ್ತದೆ.
ಆರ್ಬಿಐ ನಿಯಮಗಳ ಪ್ರಕಾರ ಫಿಕ್ಸೆಡ್ ಡೆಪಾಸಿಟ್ಗೆ ನಾಮಿನೇಶನ್ ಕಡ್ಡಾಯವಾಗಿದೆ. ಖಾತೆದಾರ ಮೃತಪಟ್ಟಾಗ ಹಣ ವರ್ಗಾವಣೆ ಸುಲಭವಾಗಿ ಆಗುತ್ತದೆ. ನಾಮಿನೇಶನ್ ಕಡ್ಡಾಯವಾದರೂ ನಾಮಿನಿ ಹೆಸರಿಸುವುದು ಕಡ್ಡಾಯವಲ್ಲ. ಯಾರೂ ನಾಮಿನಿ ಇಲ್ಲವಾದಲ್ಲಿ ಅದನ್ನು ಘೋಷಿಸಬಹುದು. ನಾಮಿನಿ ಇಲ್ಲದ ಠೇವಣಿಯ ಹೂಡಿಕೆದಾರರು ಮೃತಪಟ್ಟರೆ ಕಾನೂನು ಪ್ರಕಾರ ಅವರ ವಾರಸುದಾರರು ಸೂಕ್ತ ದಾಖಲೆ ನೀಡಿ ಹಣ ಪಡೆದುಕೊಳ್ಳಲು ಸಾಧ್ಯ.
ಇದನ್ನೂ ಓದಿ: ಬ್ಯಾಂಕ್ನಿಂದ ಕ್ಯಾಷ್ ಪಡೆದರೆ ತೆರಿಗೆ ಕಡಿತ ಆಗುತ್ತೆ… ನೀವು ತಿಳಿದಿರಲೇಬೇಕಾದ ನಿಯಮಗಳಿವು…
ಬ್ಯಾಂಕಿಂಗ್ ಕಾನೂನು ತಿದ್ದುಪಡಿ ಮಸೂದೆಯಲ್ಲಿ ಬದಲಾಗಿರುವ ನಿಯಮಗಳಲ್ಲಿ ಸಬ್ಸ್ಟ್ಯಾನ್ಷಿಯಲ್ ಇಂಟರೆಸ್ಟ್ ಎನ್ನುವ ಪದದ ವ್ಯಾಖ್ಯಾನವೂ ಇದೆ. ಸಬ್ಸ್ಟ್ಯಾನ್ಷಿಯಲ್ ಇಂಟರೆಸ್ಟ್ ಅಥವಾ ದೊಡ್ಡಮೊತ್ತದ ಬಡ್ಡಿ ಎಂದರೆ ಅದು 5 ಲಕ್ಷ ರೂಗಿಂತಲೂ ಹೆಚ್ಚು ಎಂದು ಪರಿಗಣಿಸಲಾಗುತ್ತದೆ. ಈಗ ಬದಲಾದ ನಿಯಮದ ಪ್ರಕಾರ, ಅದು 2 ಕೋಟಿ ರೂಗೆ ಏರಿಕೆ ಮಾಡಲಾಗಿದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ