ನವದೆಹಲಿ, ಡಿಸೆಂಬರ್ 4: ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಅಫ್ ಬರೋಡಾ ಪರಿವಾರ್ ಅಕೌಂಟ್ (Bank of Baroda Parivar Account) ಸ್ಕೀಮ್ ಅನ್ನು ಆರಂಭಿಸಿದೆ. ಬ್ಯಾಂಕ್ನ ಫೆಸ್ಟಿವ್ ಸೀಸನ್ ಅಭಿಯಾನದ ಭಾಗವಾಗಿ ‘ಮೈ ಫ್ಯಾಮಿಲಿ, ಮೈ ಬ್ಯಾಂಕ್’ ಹೆಸರಿನಲ್ಲಿ ಪರಿವಾರ್ ಅಕೌಂಟ್ ಶುರು ಮಾಡಲಾಗಿದೆ. ಒಂದು ಕುಟುಂಬದ ಎಲ್ಲ ಸದಸ್ಯರ ಬ್ಯಾಂಕ್ ಖಾತೆಗಳನ್ನು ಒಂದೇ ಗುಂಪಿನಲ್ಲಿ ಇರಿಸಲಾಗುತ್ತದೆ. ಈ ರೀತಿ ಬ್ಯಾಂಕ್ ಖಾತೆಗಳನ್ನು ಕುಟುಂಬ ಸದಸ್ಯರ ಮಧ್ಯೆ ಮಾತ್ರವಲ್ಲ, ಒಬ್ಬರಿಗೆ ಸೇರಿದ ವಿವಿಧ ಬಿಸಿನೆಸ್ ಅಕೌಂಟ್ಗಳನ್ನೂ ಒಂದೇ ಗುಂಪಿಗೆ ಸೇರಿಸಬಹುದು. ಈ ರೀತಿ ಗ್ರೂಪ್ ಅಕೌಂಟ್ಗಳಿಂದ ಸಾಕಷ್ಟು ಲಾಭಗಳನ್ನು, ಅನುಕೂಲತೆಗಳನ್ನು ಬಾಬ್ ಆಫರ್ ಮಾಡಿದೆ.
ಪರಿವಾರ್ ಅಕೌಂಟ್ನಲ್ಲಿರುವ ಪ್ರತಿಯೊಂದು ಖಾತೆಯನ್ನೂ ಮುಖ್ಯ ಖಾತೆದಾರನೇ ನಿರ್ವಹಣೆ ಮಾಡಬಹುದು. ಆದರೆ, ಎಲ್ಲಾ ಖಾತೆಗಳಿಗೆ ಪ್ರತ್ಯೇಕವಾಗಿ ಮಿನಿಮಮ್ ಬ್ಯಾಲನ್ಸ್ ಇರಿಸುವ ಅವಶ್ಯಕತೆ ಇರುವುದಿಲ್ಲ. ಅಷ್ಟೂ ಖಾತೆಗಳನ್ನು ಸೇರಿಸಿ ಸರಾಸರಿ ತ್ರೈಮಾಸಿಕ ಬ್ಯಾಲನ್ಸ್ ಇಟ್ಟುಕೊಂಡರೆ ಸಾಕು.
ಬ್ಯಾಂಕ್ ಆಫ್ ಬರೋಡಾದ ಪರಿವಾರ್ ಅಕೌಂಟ್ ಸ್ಕೀಮ್ ಹೊಂದಬೇಕಾದರೆ ಕನಿಷ್ಠ ಇಬ್ಬರು ಸದಸ್ಯರ ಬ್ಯಾಂಕ್ ಖಾತೆಗಳಿರಬೇಕು. ಗರಿಷ್ಠ ಆರು ಸದಸ್ಯರನ್ನು ಒಳಗೊಳ್ಳಬಹುದು. ಮುಖ್ಯ ಖಾತೆದಾರನ ಖಾತೆ ಜೊತೆಗೆ ಅವ್ ಸಂಗಾತಿ, ತಂದೆ ತಾಯಿ, ಮಕ್ಕಳು, ಅತ್ತೆ ಮಾವ, ಅಳಿಯ, ಸೊಸೆ ಇವರು ಪರಿವಾರ್ ಅಕೌಂಟ್ಗೆ ಅರ್ಹರಾಗಿರುತ್ತಾರೆ.
ಇದನ್ನೂ ಓದಿ: ನಿಮ್ಮ ಖಾತೆಯಲ್ಲಿರುವ ಹಣಕ್ಕೆ ಯಾವ್ಯಾವ ಬ್ಯಾಂಕುಗಳಲ್ಲಿ ಎಷ್ಟೆಷ್ಟು ಬಡ್ಡಿ ಸಿಗುತ್ತದೆ, ಇಲ್ಲಿದೆ ಡೀಟೇಲ್ಸ್
ಬ್ಯಾಂಕ್ ಆಫ್ ಬರೋಡಾದ ಪರಿವಾರ್ ಅಕೌಂಟ್ ಮೂರು ರೀತಿ ಇರುತ್ತದೆ: ಡೈಮಂಡ್, ಗೋಲ್ಡ್ ಮತ್ತು ಸಿಲ್ವರ್. ಎಲ್ಲಾ ಸದಸ್ಯರ ಖಾತೆ ಸೇರಿ ತ್ರೈಮಾಸಿಕ ಸರಾಸರಿ ಬ್ಯಾಲನ್ಸ್ ಹಣ ಕ್ರಮವಾಗಿ 5 ಲಕ್ಷ ರೂ, 2 ಲಕ್ಷ ರೂ ಮತ್ತು 50,000 ರೂ ಎಂದಿದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:46 am, Mon, 4 December 23