ನವದೆಹಲಿ, ಏಪ್ರಿಲ್ 4: ಸರ್ಕಾರಿ ನಿಯಂತ್ರಣದ ಕೆನರಾ ಬ್ಯಾಂಕ್ (Canara Bank) ಹಲವು ಹೊಸ ಯೋಜನೆಗಳನ್ನು ಪ್ರಕಟಿಸಿದೆ. ಆರೋಗ್ಯವೆಚ್ಚಕ್ಕೆ ವಿಶೇಷ ಸಾಲದ ವ್ಯವಸ್ಥೆಯೂ ಇದರಲ್ಲಿ ಒಳಗೊಂಡಿದೆ. ಮಹಿಳಾ ಸೇವಿಂಗ್ಸ್ ಅಕೌಂಟ್, ಎಫ್ಡಿಗಳ ಮೇಲೆ ಆನ್ಲೈನ್ನಲ್ಲಿ ಸಾಲ, ಪೂರ್ವ ಅನುಮೋದಿತ ವೈಯಕ್ತಿಕ ಸಾಲ (Pre-approved personal loan) ಇತ್ಯಾದಿ ಹೊಸ ಸೇವೆಯನ್ನು ಕೆನರಾ ಬ್ಯಾಂಕ್ ಜಾರಿಗೆ ತಂದಿದೆ. ಕೆನರಾ ಬ್ಯಾಂಕ್ನ ಯುಪಿಐ ಪಾವತಿ ಆ್ಯಪ್ ಅನ್ನೂ ಹೊರತಂದಿದೆ. ತನ್ನ ಬ್ಯಾಂಕ್ ಉದ್ಯೋಗಿಗಳಿಗೆ ‘ಕೆನರಾ ಎಚ್ಆರ್ಎಂಎಸ್ ಮೊಬೈಲ್ ಆ್ಯಪ್’ ಅನ್ನೂ ಬಿಡುಗಡೆ ಮಾಡಿದೆ.
ಆಸ್ಪತ್ರೆಗಳಲ್ಲಿನ ವೆಚ್ಚ ಕೈಮೀರಿದರೆ ಕೆನರಾ ಬ್ಯಾಂಕ್ನಿಂದ ಸಾಲ ಸೌಲಭ್ಯ ಸಿಗುತ್ತದೆ. ಆರೋಗ್ಯ ವಿಮೆ ಮಾಡಿಸಿದ್ದು, ಅದರಲ್ಲಿ ಕ್ಲೈಮ್ ಆದ ಹಣಕ್ಕಿಂತಲೂ ಆಸ್ಪತ್ರೆ ವೆಚ್ಚ ಹೆಚ್ಚಾಗಿ ಹೋಗಿದ್ದರೆ ಆಗ ಕೆನರಾ ಹೀಲ್ ಸ್ಕೀಮ್ನಲ್ಲಿ ಬ್ಯಾಂಕ್ನಿಂದ ಆ ಮೊತ್ತಕ್ಕೆ ಸಾಲ ಪಡೆಯಲು ಅವಕಾಶ ಇದೆ.
ಇದನ್ನೂ ಓದಿ: ಹೂಡಿಕೆಯಲ್ಲಿ ಬುದ್ಧಿವಂತ ರಾಹುಲ್ ಗಾಂಧಿ; ಎಲ್ಲೆಲ್ಲಿ ಅವರ ಇನ್ವೆಸ್ಟ್ಮೆಂಟ್ ಇದೆ ನೋಡಿ
ಈ ಸಾಲಕ್ಕೆ ಶೇ. 11.55 ಮತ್ತು ಶೇ. 12.30ರಷ್ಟು ವಾರ್ಷಿಕ ಬಡ್ಡಿ ನಿಗದಿ ಮಾಡಲಾಗಿದೆ. ಫ್ಲೋಟಿಂಗ್ ರೇಟ್ ಇಂಟರೆಸ್ಟ್ ಆಯ್ಕೆ ಮಾಡಿಕೊಂಡರೆ ಶೇ. 11.55 ಬಡ್ಡಿಯಲ್ಲಿ ಸಾಲ ಸಿಗುತ್ತದೆ. ಫಿಕ್ಸೆಡ್ ಇಂಟರೆಸ್ಟ್ ರೇಟ್ ಆಯ್ಕೆ ಮಾಡಿಕೊಂಡರೆ ಬಡ್ಡಿ ಶೇ. 12.30ರಷ್ಟು ಇರುತ್ತದೆ.
ಮಹಿಳೆಯರಿಗೆ ಕೆನರಾ ಬ್ಯಾಂಕ್ನಲ್ಲಿ ಕೆನರಾ ಏಂಜೆಲ್ ಸೇವಿಂಗ್ಸ್ ಅಕೌಂಟ್ ತೆರೆಯುವ ಅವಕಾಶ ಕೊಡಲಾಗಿದೆ. ಇದರಲ್ಲಿ ಪೂರ್ವ ಅನುಮೋದಿತ ಪರ್ಸನಲ್ ಲೋನ್ ಸಿಗುತ್ತದೆ. ಕ್ಯಾನ್ಸರ್ ರೋಗದ ಚಿಕಿತ್ಸೆ ವೆಚ್ಚ ಭರಿಸಲು ಈ ಸಾಲ ಬಳಸಬಹುದು. ಟರ್ಮ್ ಡೆಪಾಸಿಟ್ ಅಥವಾ ನಿಶ್ಚಿತ ಠೇವಣಿಗಳ ಮೇಲೆ ಆನ್ಲೈನ್ ಸಾಲವನ್ನು ಕೆನರಾ ಏಂಜೆಲ್ ಉಳಿತಾಯ ಖಾತೆದಾರರು ಪಡೆಯಬಹುದು.
ಇದನ್ನೂ ಓದಿ: ಎನ್ಪಿಎಸ್ ಖಾತೆಗೆ ಲಾಗಿನ್ ಆಗಲು ಡಬಲ್ ಸೆಕ್ಯೂರಿಟಿ; ನ್ಯಾಷನಲ್ ಪೆನ್ಷನ್ ಸ್ಕೀಮ್ ಯಾರು ತೆರೆಯಬಹುದು, ಏನಿದರ ಲಾಭ
ಮಹಿಳೆಯರು ಉಚಿತವಾಗಿ ಈ ಉಳಿತಾಯ ಖಾತೆ ತೆರೆಯಬಹುದು. ಈಗಾಗಲೇ ಕೆನರಾ ಬ್ಯಾಂಕ್ನಲ್ಲೇ ರೆಗ್ಯುಲರ್ ಅಕೌಂಟ್ ಹೊಂದಿರುವ ಮಹಿಳೆಯರು, ತಮ್ಮ ಖಾತೆಯನ್ನು ಏಂಜೆಲ್ ಖಾತೆಗೆ ಅಪ್ಗ್ರೇಡ್ ಮಾಡಿಸಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ