
ಮಕ್ಕಳ ಮ್ಯೂಚುವಲ್ ಫಂಡ್ಗಳಿಂದ (Mutual Funds) ನಿರ್ವಹಿತವಾಗುತ್ತಿರುವ ಆಸ್ತಿ 25,675 ಕೋಟಿ ರೂ ಮುಟ್ಟಿದೆ. ಕಳೆದ ಐದು ವರ್ಷದಲ್ಲಿ ಎಯುಎಂನಲ್ಲಿ ಗಣನೀಯ ಹೆಚ್ಚಳ ಆಗಿದೆ. 2020ರ ನವೆಂಬರ್ನಲ್ಲಿ ಮಕ್ಕಳ ಮ್ಯುಚುವಲ್ ಫಂಡ್ಗಳ ಎಯುಎಂ 9,866 ಕೋಟಿ ರೂ ಇತ್ತು. ಈಗ ಅದು 25,675 ಕೋಟಿ ರೂ ಮುಟ್ಟಿದೆ. ಈ ವರ್ಷದಲ್ಲಿ ಶೇ. 160ರಷ್ಟು ಎಯುಎಂ ಏರಿದೆ. ಭಾರತದಲ್ಲಿ ಮಕ್ಕಳ ಭವಿಷ್ಯಕ್ಕೆ ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚುತ್ತಿರುವುದು ಗಮನಾರ್ಹ.
2020ರ ನವೆಂಬರ್ನಲ್ಲಿ ಮಕ್ಕಳ ಮ್ಯೂಚುವಲ್ ಫಂಡ್ಗಳಲ್ಲಿ 29 ಲಕ್ಷ ಫೋಲಿಯೋಗಳಿದ್ದವು. 2025ರ ನವೆಂಬರ್ನಲ್ಲಿ ಫೋಲಿಯೋಗಳ ಸಂಖ್ಯೆ 32 ಲಕ್ಷಕ್ಕೆ ಏರಿದೆ.
ಇದನ್ನೂ ಓದಿ: Mutual Fund Charges: ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡುವ ಮುನ್ನ ನೀವು ತಿಳಿಯಬೇಕಾದ ವಿವಿಧ ಶುಲ್ಕಗಳಿವು…
ಮಕ್ಕಳ ಮ್ಯೂಚುವಲ್ ಫಂಡ್ಗಳು ಕಳೆದ ಐದು ವರ್ಷದಲ್ಲಿ ಸರಾಸರಿ ಶೇ. 21.08 ಸಿಎಜಿಆರ್ನಲ್ಲಿ ಲಾಭ ತಂದಿವೆ. ಇದರೊಂದಿಗೆ, ಮಕ್ಕಳಿಗೆಂದು ಮಾಡಲಾಗುತ್ತಿರುವ ಹೂಡಿಕೆಗಳು ತಮ್ಮ ಗುರಿ ತಲುಪುತ್ತಿವೆ. ಶೇ. 10-15ರಷ್ಟು ವೇಗದಲ್ಲಿ ಶಿಕ್ಷಣ ವೆಚ್ಚ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಮಕ್ಕಳ ಮ್ಯೂಚುವಲ್ ಫಂಡ್ಗಳು ಉತ್ತಮ ಲಾಭ ತರುತ್ತಿರುವುದು ಗಮನಾರ್ಹ.
ಭಾರತದಲ್ಲಿ ಸುಮಾರು 12 ಮಕ್ಕಳ ಮ್ಯೂಚುವಲ್ ಫಂಡ್ಗಳಿವೆ. ಅವುಗಳ ಪೈಕಿ ಎಸ್ಬಿಐ ಮ್ಯಾಗ್ನಂ ಚಿಲ್ಡ್ರನ್ಸ್ ಬೆನಿಫಿಟ್ ಫಂಡ್ ಐದು ವರ್ಷದಲ್ಲಿ ಶೇ. 34.35 ಸಿಎಜಿಆರ್ನಲ್ಲಿ ಲಾಭ ತಂದಿದೆ. ಮಕ್ಕಳ ಮ್ಯೂಚುವಲ್ ಫಂಡ್ಗಳಲ್ಲಿ ಟಾಪ್-5 ಫಂಡ್ಗಳು ಹಾಗು ಅವುಗಳ 5 ವರ್ಷದ ರಿಟರ್ನ್ ವಿವರ ಈ ಕೆಳಕಂಡಂತಿವೆ:
ಇದನ್ನೂ ಓದಿ: ಈ ಪೋಸ್ಟ್ ಆಫೀಸ್ ಸ್ಕೀಮ್ನಲ್ಲಿ ತಿಂಗಳಿಗೆ 10,000 ರೂ ಹೂಡಿಕೆಯಿಂದ 7 ಲಕ್ಷ ರೂ ರಿಟರ್ನ್
18 ವರ್ಷ ವಯಸ್ಸಿನ ಮಕ್ಕಳ ಹೆಸರಿನಲ್ಲಿ ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡಬಹುದು. ಮಕ್ಕಳ ಹೆಸರಿನಲ್ಲಿ ಫಂಡ್ ಆರಂಭಿಸಬೇಕು. ಆದರೆ ಪಾಲಕರು ಅದನ್ನು ನಿರ್ವಹಿಸಬೇಕು. ಮಗು 18 ವರ್ಷ ವಯಸ್ಸಾದ ಬಳಿಕ ಅವರಿಗೆ ನಿರ್ವಹಣೆಯ ಅಧಿಕಾರ ಸಿಗುತ್ತದೆ. ಅಲ್ಲಿಯವರೆಗೂ ಫಂಡ್ ವಿತ್ಡ್ರಾ ಮಾಡಲು ಅವಕಾಶ ಇರುವುದಿಲ್ಲ. ಹೂಡಿಕೆಗೆ ಮಾತ್ರವೇ ಅವಕಾಶ ಇರುತ್ತದೆ. ಇದು ಬಿಟ್ಟರೆ ಮಕ್ಕಳ ಮ್ಯೂಚುವಲ್ ಫಂಡ್ಗಳಿಗೂ ರೆಗ್ಯುಲರ್ ಫಂಡ್ಗಳಿಗೂ ವ್ಯತ್ಯಾಸವೇನೂ ಇರುವುದಿಲ್ಲ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ