ಸ್ಥಿರತೆ ಮತ್ತು ಲಾಭ, ಎರಡೂ ಕೊಡಬಲ್ಲುದು ಕನ್ಸರ್ವೇಟಿವ್ ಹೈಬ್ರಿಡ್ ಫಂಡ್; ಟ್ರೆಂಡ್​ನಲ್ಲಿರುವ ಈ ಫಂಡ್ ಬಗ್ಗೆ ತಿಳಿಯಿರಿ

| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Aug 13, 2023 | 5:07 PM

Conservative Hybrid Fund: ಸರ್ಕಾರಿ ಬಾಂಡ್ ಅಥವಾ ಸಾಲಪತ್ರ, ಡಿಬಂಚರ್ ಇತ್ಯಾದಿಯ ಡೆಟ್ ಸ್ಕೀಮ್​ಗಳಲ್ಲಿ ಹಣ ಹಾಕುವುದು ಸುರಕ್ಷಿತ ಹೂಡಿಕೆಯಾದರೂ ರಿಟರ್ನ್ ನಿರೀಕ್ಷೆ ಬಹಳ ಇರುವುದಿಲ್ಲ. ಆದರೆ, ಕನ್ಸರ್ವೇಟಿವ್ ಹೈಬ್ರಿಡ್ ಫಂಡ್ ತುಸು ಭಿನ್ನ ಹಾದಿ ತುಳಿದು, ಹೂಡಿಕೆದಾರರಿಗೆ ಲಾಭ ತರಬಲ್ಲುದು.

ಸ್ಥಿರತೆ ಮತ್ತು ಲಾಭ, ಎರಡೂ ಕೊಡಬಲ್ಲುದು ಕನ್ಸರ್ವೇಟಿವ್ ಹೈಬ್ರಿಡ್ ಫಂಡ್; ಟ್ರೆಂಡ್​ನಲ್ಲಿರುವ ಈ ಫಂಡ್ ಬಗ್ಗೆ ತಿಳಿಯಿರಿ
ಹೂಡಿಕೆ
Follow us on

ಕನ್ಸರ್ವೇಟಿವ್ ಹೈಬ್ರಿಡ್ ಫಂಡ್​ಗಳು ಹೆಚ್ಚೆಚ್ಚು ಹೂಡಿಕೆದಾರರನ್ನು ಆಕರ್ಷಿಸುತ್ತಿವೆ. ಕನ್ಸರ್ವೇಟಿವ್ ಹೈಬ್ರಿಡ್ ಫಂಡ್ (Conservative Hybrid Fund) ಬಂದ ಬಳಿಕ ಕನ್ಸರ್ವೇಟಿವ್ ಫಂಡ್ ಬಗ್ಗೆ ಇದ್ದ ಬಿಗುಮಾನ ಬಹಳಷ್ಟು ಕಡಿಮೆ ಆಗುತ್ತಿದೆ. ಕನ್ಸರ್ವೇಟಿವ್ ಇನ್ವೆಸ್ಟರ್ ಯಾರು? ಕನ್ಸರ್ವೇಟಿವ್ ಇನ್ವೆಸ್ಟರ್ ಅಂದರೆ ಸಾಂಪ್ರದಾಯಿಕ ಹೂಡಿಕೆದಾರ. ಸರ್ಕಾರಿ ಬಾಂಡ್ ಇತ್ಯಾದಿ ಡೆಟ್ ಫಂಡ್​ಗಳಲ್ಲಿ ಹೂಡಿಕೆ ಮಾಡುವವರು ಇವರು. ಆದರೆ, ಸಾಂಪ್ರದಾಯಿಕ ಹೈಬ್ರಿಡ್ ಬಂದ ಬಳಿಕ ಮನೋಭಾವ ಬದಲಾಗಿದೆ. ಈ ಫಂಡ್​ಗಳು ಡೆಟ್ ಮತ್ತು ಈಕ್ವಿಟಿ ಎರಡರಲ್ಲೂ ಹೂಡಿಕೆ ಮಾಡುವ ಪ್ರಯೋಜನ ನೀಡುತ್ತದೆ. ಇದು ಹೂಡಿಕೆದಾರರಿಗೆ ಉತ್ತಮವಾಗಿದ್ದು, ಹೆಚ್ಚಿನ ರಿಟರ್ನ್ ಹಾಗೂ ಸ್ಥಿರತೆಗೂ ಆದ್ಯತೆ ನೀಡುವ ಹೂಡಿಕೆದಾರರಿಗೆ ಸೂಕ್ತ.

ಕನ್ಸರ್ವೇಟಿವ್ ಹೈಬ್ರಿಡ್ ಫಂಡ್​ಗಳೆಂದರೇನು ಎಂದು ಅರ್ಥ ಮಾಡಿಕೊಳ್ಳೋಣ. ಕನ್ಸರ್ವೇಟಿವ್ ಹೈಬ್ರಿಡ್ ಫಂಡ್​ಗಳು ಮೂಲತಃ ಡೆಟ್​ನಲ್ಲಿ ಹೂಡಿಕೆ ಮಾಡುವ ಮ್ಯುಚ್ಯುಯಲ್ ಫಂಡ್​ಗಳಾಗಿವೆ. ತಮ್ಮ ಬಂಡವಾಳದ ಶೇಕಡಾ 75 ರಿಂದ 90ರಷ್ಟು ಭಾಗವನ್ನು ಡೆಟ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತವೆ. ಉಳಿದ ಭಾಗವನ್ನು (ಸುಮಾರು ಶೇಕಡಾ 10ರಿಂದ 25) ಈಕ್ವಿಟಿಗಳಲ್ಲಿ ಹೂಡಿಕೆ ಮಾಡಲಾಗುತ್ತದೆ.

ಇದನ್ನೂ ಓದಿ: ಕ್ಯಾಷ್​​ಬ್ಯಾಕ್ ಬಗ್ಗೆ ಹುಷಾರ್; ದುರಾಸೆಗೆ ಬಿದ್ದು ಮೋಸ ಹೋಗದಿರಿ; ಏನಿದೆ ಕ್ಯಾಷ್​ಬ್ಯಾಕ್ ಮರ್ಮ?

ಡೆಟ್ ಸೆಕ್ಯುರಿಟಿಗಳಾದ ಬಾಂಡ್​ಗಳು (ಸಾಲಪತ್ರ), ಡಿಬೆನ್ಚರ್​ಗಳು ಮತ್ತು ಟ್ರೆಷರಿ ಬಿಲ್​ಗಳಲ್ಲಿ ಇವುಗಳ ಹೆಚ್ಚಿನ ಬಂಡವಾಳದ ಹೂಡಿಕೆ ಮಾಡಲಾಗುತ್ತದೆ. ಡೆಟ್​ಗೆ ಹೆಚ್ಚಿನ Weightage ನೀಡುವುದರಿಂದ ಇದು ಸಾಂಪ್ರದಾಯಿಕ ಹೂಡಿಕೆದಾರರಿಗೆ ಸೂಕ್ತ. ಈಕ್ವಿಟಿ ಹಂಚಿಕೆ ಕಡಿಮೆ ಮಟ್ಟದಲ್ಲಿದೆ ಎಂದು ಪರಿಗಣಿಸಿದರೆ, ಕನ್ಸರ್ವೇಟಿವ್ ಹೈಬ್ರಿಡ್ ಫಂಡ್ ಗಳು ನಿಜವಾಗಲೂ ಸ್ವಭಾವದಿಂದ ಕನ್ಸರ್ವೇಟಿವ್ ಆಗಿವೆ. ಆದಾಗ್ಯೂ, ಶೇಕಡ 65ಕ್ಕಿಂತ ಈಕ್ವಿಟಿ ಹಂಚಿಕೆಯನ್ನು ಮಾಡುವುದರಿಂದ ಈಕ್ವಿಟಿ ಫಂಡ್ ಎಂದು ಕರೆಯಲ್ಪಡುತ್ತಿದ್ದು, ಈ ಕ್ಯಾಟಗೆರಿ ಡೆಟ್ ಫಂಡ್ ಆಗಿಯೂ ಅರ್ಹತೆ ಪಡೆಯುತ್ತದೆ.

ಹೈಬ್ರಿಡ್ ಫಂಡ್​ಗಳಲ್ಲಿ ಹೂಡಿಕೆಯಿಂದ ಲಾಭ ಸಿಗುತ್ತಾ?

ನೀವು ಕಡಿಮೆ ಅಪಾಯದ ಹೂಡಿಕೆ ಮತ್ತು ನಿಯಮಿತ ರಿಟರ್ನ್ಸ್ ಜೊತೆಗೆ ನಿಮ್ಮ ಮಧ್ಯಮ ಹಾಗೂ ದೀರ್ಘಾವಧಿ ಹಣಕಾಸು ಗುರಿಯನ್ನು ಸಾಧಿಸುವಂತಹ ಆಯ್ಕೆಗಳನ್ನು ಹುಡುಕುತ್ತಿದ್ದರೆ ಆಗ ಖಂಡಿತವಾಗಿಯೂ ನೀವು ಕನ್ಸರ್ವೇಟಿವ್ ಹೈಬ್ರಿಡ್ ಫಂಡ್​ನಲ್ಲಿ ಹೂಡಿಕೆ ಮಾಡಬಹುದು. ಕನ್ಸರ್ವೇಟಿವ್ ಹೈಬ್ರಿಡ್ ಫಂಡ್ ಗಳು ಫ್ಯೂರ್ ಡೆಟ್ ಫಂಡ್ ಗಳಿಗಿಂತ ಉತ್ತಮ ರಿಟರ್ನ್ಸ್ ನೀಡುತ್ತವೆ. ಏಕೆಂದರೆ ಅವುಗಳು ಭಾಗಶಃ ಸ್ಟಾಕುಗಳಲ್ಲಿ ಹೂಡಿಕೆ ಮಾಡುತ್ತವೆ. ಅದರರ್ಥ ನೀವು ಬಾಂಡ್ ಫಂಡ್​ನ ಸ್ಥಿರತೆ ಹಾಗೂ ಸ್ಟಾಕ್ ಫಂಡ್​ನ ಅಧಿಕ ರಿಟರ್ನ್ಸ್ ಸಾಮರ್ಥ್ಯ ಎರಡನ್ನೂ ಒಟ್ಟಿಗೆ ಪಡೆಯುತ್ತೀರಿ.

ಇದನ್ನೂ ಓದಿ: Knowledge: ಕೆಲ ಲಿಸ್ಟೆಡ್ ಕಂಪನಿಗಳು ಯಾಕೆ ಸ್ಟಾಕ್ ಸ್ಪ್ಲಿಟ್ ಮಾಡುತ್ತವೆ? ಬೋನಸ್ ಷೇರುಗಳ ಹಂಚಿಕೆಯಿಂದ ಏನಾಗುತ್ತೆ?

“ಹೆಚ್ಚಿನ ಹಣವನ್ನು ಡೆಟ್​ಗಳಲ್ಲಿ, ಸಣ್ಣ ಮೊತ್ತವನ್ನು ಈಕ್ವಿಟಿಗಳಲ್ಲಿ ವಿನಿಯೋಗಿಸಲು ಬಯಸುವ ಮಂದಿಗೆ ಈ ರೀತಿಯ ಹೈಬ್ರಿಡ್ ಫಂಡ್ ಸೂಕ್ತವಾಗಿರುತ್ತದೆ” ಎಂದು ಬ್ರೋಕರೇಜ್ ಕಂಪನಿಯ ಅಮರ್ ರಾಣು ಹೇಳುತ್ತಾರೆ.

ಸಾಂಪ್ರದಾಯಿಕ ಹೂಡಿಕೆ ಯೋಜನೆಗಳಿಗೆ ಹೋಲಿಸಿದರೆ ಈಕ್ವಿಟಿ ಅಥವಾ ಷೇರುಗಳು ಹೆಚ್ಚಿನ ರಿಟರ್ನ್ಸ್ ನೀಡುತ್ತವೆ. ಆದರೆ, ಹೆಚ್ಚಿನ ಅಪಾಯದ ಕಾರಣ ಈಕ್ವಿಟಿ ಯೋಜನೆಗಳಿಂದ ಜನರು ದೂರ ಉಳಿಯುತ್ತಾರೆ. ಇಂತಹವರಿಗೆ ಕನ್ಸರ್ವೇಟಿವ್ ಫಂಡ್ ಒಂದು ಉತ್ತಮ ಪರ್ಯಾಯ ಆಯ್ಕೆ. ಏಕೆಂದರೆ ಡೆಟ್ ಭಾಗದಿಂದ ಅಪಾಯ ಕಡಿಮೆ. ಡೆಟ್ ಮತ್ತು ಈಕ್ವಿಟಿ ಎರಡರಲ್ಲೂ ಹೂಡಿಕೆ ಮಾಡುವ ಕಾರಣ, ನಿಮ್ಮ ಫೋರ್ಟ್ ಪೋಲಿಯೋ ಡೈವರ್ಸಿಫೈ ಆಗಿರಲಿದೆ. ಆದರೆ, ನೀವು ಹೂಡಿಕೆ ಮಾಡುವ ಮೊದಲು, ಅಪಾಯ ಸಾಧ್ಯತೆ ಬಗ್ಗೆ ಅರಿಯಬೇಕು. ನೀವು ಸಾಂಪ್ರದಾಯಿಕ ಹೂಡಿಕೆದಾರರಾಗಿದ್ದು, ಹೆಚ್ಚಿನ ರಿಟರ್ನ್ಸ್​ನತ್ತ ಬಯಸುತ್ತಿದ್ದರೆ ಈ ಯೋಜನೆಗಳಲ್ಲಿ ಹಣತೊಡಗಿಸಬಹುದು.

(ಮಾಹಿತಿ: ಮನಿ9)

ಇನ್ನಷ್ಟು ಮನಿ9 ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:53 pm, Thu, 10 August 23