ಕ್ರೆಡಿಟ್ ಕಾರ್ಡ್ ಪರ್ಸನಲ್ ಲೋನ್​ಗೆ ಜಿಎಸ್​ಟಿ ತೆರಿಗೆ ಇದೆಯಾ? ಇಲ್ಲಿದೆ ಡೀಟೇಲ್ಸ್

|

Updated on: Sep 25, 2024 | 2:25 PM

GST on personal loan: ಪರ್ಸನಲ್ ಲೋನ್​ಗಳು ಜಿಎಸ್​ಟಿ ವ್ಯಾಪ್ತಿಯಿಂದ ಹೊರಗಿರುತ್ತವೆ. ಸಾಲ ಪಡೆಯುವಾಗ ವಿಧಿಸಲಾಗುವ ಪ್ರೋಸಸಿಂಗ್ ಫೀ ಮೇಲಷ್ಟೇ ತೆರಿಗೆ ಇರುತ್ತದೆ. ಆದರೆ, ಕ್ರೆಡಿಟ್ ಕಾರ್ಡ್ ಆಧಾರಿತವಾಗಿ ಪಡೆದ ಸಾಲಗಳಲ್ಲಿ ಬಡ್ಡಿ ಮೊತ್ತಕ್ಕೆ ಜಿಎಸ್​ಟಿ ಹಾಕಲಾಗುತ್ತದೆ. ಅಸಲು ಹಣ ಅಥವಾ ಪ್ರಿನ್ಸಿಪಾಲ್ ಅಮೌಂಟ್​ಗೆ ತೆರಿಗೆ ಇರುವುದಿಲ್ಲ.

ಕ್ರೆಡಿಟ್ ಕಾರ್ಡ್ ಪರ್ಸನಲ್ ಲೋನ್​ಗೆ ಜಿಎಸ್​ಟಿ ತೆರಿಗೆ ಇದೆಯಾ? ಇಲ್ಲಿದೆ ಡೀಟೇಲ್ಸ್
ಜಿಎಸ್​ಟಿ
Follow us on

ಇವತ್ತು ಹೆಚ್ಚಿನ ಹಣಕಾಸು ಯೋಜನೆಗಳಿಗೆ ಆದಾಯ ತೆರಿಗೆ ಇರುತ್ತದೆ. ಠೇವಣಿಗಳಿಂದ ಬರುವ ಬಡ್ಡಿ ಆದಾಯಗಳಿಗೂ ಇನ್ಕಮ್ ಟ್ಯಾಕ್ಸ್ ವಿಧಿಸಲಾಗುತ್ತದೆ. ಆದರೆ, ಪರ್ಸನಲ್ ಲೋನ್​ಗೂ ಜಿಎಸ್​ಟಿ ಇದೆ ಎನ್ನುವ ಮಾತಿದೆ. ವಾಸ್ತವವಾಗಿ ಪರ್ಸನಲ್ ಲೋನ್ ಮೇಲೆ ಜಿಎಸ್​ಟಿ ಇರುವುದಿಲ್ಲ. ಅಸಲು ಹಣವಾಗಲೀ, ಇಎಂಐ ಹಣದ ಮೇಲಾಗಲೀ ಜಿಎಸ್​ಟಿ ಇರುವುದಿಲ್ಲ. ಆದರೆ, ಪರ್ಸನಲ್ ಲೋನ್​ನ ಪ್ರೋಸಸಿಂಗ್ ಫೀ ಮೇಲೆ ಮಾತ್ರವೇ ಜಿಎಸ್​ಟಿ ತೆರಿಗೆ ಇರುತ್ತದೆ.

ಆದರೆ, ಕ್ರೆಡಿಟ್ ಕಾರ್ಡ್ ಆಧಾರವಾಗಿ ಪ್ರೀ ಅಪ್ರೂವ್ಡ್ ಲೋನ್ ಸಿಕ್ಕಾಗ, ಆ ಸಾಲದ ಮೇಲಿನ ಬಡ್ಡಿ ಮೊತ್ತಕ್ಕೆ ಜಿಎಸ್​ಟಿ ಅನ್ವಯ ಆಗುತ್ತದೆ. ಇಡೀ ಸಾಲಕ್ಕೆ ಜಿಎಸ್​ಟಿ ಇರುವುದಿಲ್ಲ. ಬಡ್ಡಿ ಮೇಲೆ ಶೇ. 18ರಷ್ಟು ಜಿಎಸ್​ಟಿ ಇರುತ್ತದೆ. ಈ ಬಡ್ಡಿಯಿಂದಾಗಿ ಕ್ರೆಡಿಟ್ ಕಾರ್ಡ್ ಸಾಲದ ಇಎಂಐ ಮೊತ್ತ ತುಸು ಹಿಗ್ಗುತ್ತದೆ.

ಸಾಲದ ಮೇಲಿನ ಬಡ್ಡಿಗೆ ಜಿಎಸ್​ಟಿ ಹೇಗಿ ಅನ್ವಯ ಆಗುತ್ತೆ ನೋಡಿ…

ನೀವು ಶೇ. 12ರ ಬಡ್ಡಿಗೆ 3 ವರ್ಷದ ಮಟ್ಟಿಗೆ 3 ಲಕ್ಷ ರೂ ಸಾಲ ಪಡೆಯುತ್ತೀರಿ ಎಂದಿಟ್ಟುಕೊಳ್ಳಿ. ತಿಂಗಳ ಇಎಂಐ 9,964.29 ರೂ ಆಗಬಹುದು. ಇದರಲ್ಲಿ ಮೊದಲ ಕಂತಿನಲ್ಲಿ ಬಡ್ಡಿ ಹಣ 3,000 ರೂ ಎಂತಿದ್ದರೆ, ಈ ಮೂರು ಸಾವಿರ ರೂ ಹಣಕ್ಕೆ ಶೇ. 18ರಷ್ಟು ಜಿಎಸ್​ಟಿ ಪಾವತಿಸಬೇಕು. ಅಂದರೆ ಸುಮಾರು 540 ರೂ ಜಿಎಸ್​ಟಿ ಆಗುತ್ತದೆ. ಅಲ್ಲಿಗೆ ಇಎಂಐ ಮೊತ್ತವು 10,504.29 ರೂಗೆ ಏರುತ್ತದೆ.

ಇದನ್ನೂ ಓದಿ: ಏರ್ಟೆಲ್ ಬಳಕೆದಾರರಿಗೆ ಸಖತ್ ಆಫರ್; ತಿಂಗಳಿಗೆ ಸಾವಿರ ರೂಗೂ ಹೆಚ್ಚು ಕ್ಯಾಷ್​ಬ್ಯಾಕ್ ಪಡೆಯುವುದು ಹೇಗೆ?

ಎರಡನೇ ಕಂತಿನಲ್ಲಿ ಬಡ್ಡಿದರದ ಪ್ರಮಾಣ 2,930.36 ರೂಗೆ ಇಳಿದಿರುತ್ತದೆ. ಇದಕ್ಕೆ ಜಿಎಸ್​ಟಿ ದರ 527 ರೂ ಆಗುತ್ತದೆ. ಅಲ್ಲಿಗೆ ಇಎಂಐ ಮೊತ್ತ 10,491.29 ರೂ ಆಗುತ್ತದೆ.

ಪ್ರತೀ ತಿಂಗಳೂ ಇಎಂಐನಲ್ಲಿ ಬಡ್ಡಿ ಪಾಲು ಕಡಿಮೆ ಆಗುತ್ತಾ ಹೋಗುತ್ತದೆ. ಜಿಎಸ್​ಟಿಯೂ ಕಡಿಮೆ ಆಗುತ್ತಾ ಹೋಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ