ಏರ್ಟೆಲ್ ಬಳಕೆದಾರರಿಗೆ ಸಖತ್ ಆಫರ್; ತಿಂಗಳಿಗೆ ಸಾವಿರ ರೂಗೂ ಹೆಚ್ಚು ಕ್ಯಾಷ್​ಬ್ಯಾಕ್ ಪಡೆಯುವುದು ಹೇಗೆ?

Airtel users can claim big cashback offer: ಏರ್ಟೆಲ್ ಮೊಬೈಲ್ ನಂಬರ್ ಹೊಂದಿರುವವರು ಒಂದು ತಿಂಗಳಲ್ಲಿ ಸಾವಿರ ರೂಗಿಂತ ಹೆಚ್ಚು ಮೊತ್ತದ ಕ್ಯಾಷ್​ಬ್ಯಾಕ್ ಪಡೆಯುವ ಅವಕಾಶ ಇದೆ. ಎರ್ಟೆಲ್ ಎಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಏರ್ಟೆಲ್ ಥ್ಯಾಂಕ್ ಆ್ಯಪ್​ನಲ್ಲಿ ನೀವು ವಹಿವಾಟು ನಡೆಸಿದರೆ ಈ ಅಪೂರ್ವವಾದ ಕ್ಯಾಷ್​ಬ್ಯಾಕ್ ಪಡೆಯಬಹುದು. ಮೊಬೈಲ್ ರೀಚಾರ್ಜ್​ನಿಂದ ಹಿಡಿದು ನೀರಿನ ಬಿಲ್​ವರೆಗೆ ನೀವು ಮಾಡುವ ಪಾವತಿಗೆ ನಿರ್ದಿಷ್ಟ ಹಣ ಮರಳಿಪಡೆಯಬಹುದು.

ಏರ್ಟೆಲ್ ಬಳಕೆದಾರರಿಗೆ ಸಖತ್ ಆಫರ್; ತಿಂಗಳಿಗೆ ಸಾವಿರ ರೂಗೂ ಹೆಚ್ಚು ಕ್ಯಾಷ್​ಬ್ಯಾಕ್ ಪಡೆಯುವುದು ಹೇಗೆ?
ಏರ್ಟೆಲ್
Follow us
|

Updated on:Sep 25, 2024 | 11:40 AM

ನವದೆಹಲಿ, ಸೆಪ್ಟೆಂಬರ್ 25: ಟೆಲಿಕಾಂ ದರಗಳು ಇತ್ತೀಚೆಗೆ ಬಹಳ ದುಬಾರಿಯಾಗಿವೆ. ಅದರಲ್ಲೂ ಏರ್ಟೆಲ್, ಜಿಯೋ, ವೊಡಾಫೋನ್ ಬಳಕೆದಾರರಿಗೆ ಕೈಸುಟ್ಟುಹೋಗುವಷ್ಟು ಬೆಲೆಗಳಿವೆ. ಇದೇ ಹೊತ್ತಲ್ಲಿ ಹೆಚ್ಚಿನ ಗ್ರಾಹಕರಿಗೆ ತಿಳಿಯದ ಹಣ ಉಳಿಸುವ ಟ್ರಿಕ್ಸ್ ಇವೆ. ನೀವು ಏರ್ಟೆಲ್ ಗ್ರಾಹಕರಾಗಿದ್ದರೆ ತಿಂಗಳಿಗೆ ಸಾವಿರ ರೂ ಹಣ ಗಳಿಸುವ ಅವಕಾಶ ಇದೆ. ಏರ್ಟೆಲ್​ನ ಮೊಬೈಲ್, ಡಿಟಿಎಚ್, ವೈಫೈ ಇತ್ಯಾದಿ ರೀಚಾರ್ಜ್​ಗೆ ಶೇ. 25ರಷ್ಟು ಕ್ಯಾಷ್​ಬ್ಯಾಕ್ ಸಿಗುತ್ತದೆ. ಎಲೆಕ್ಟ್ರಿಸಿಟಿ ಬಿಲ್, ನೀರಿನ ಬಿಲ್ ಕಟ್ಟಿದರೆ ಕ್ಯಾಷ್​ಬ್ಯಾಕ್ ಸಿಗುತ್ತದೆ. ಸ್ವಿಗ್ಗಿ, ಜೊಮಾಟೊ ಇತ್ಯಾದಿಗೆ ಹಣ ಪಾವತಿಸಿದರೂ ಕ್ಯಾಷ್​ಬ್ಯಾಕ್ ಸಿಗುತ್ತದೆ. ಇತರ ಯಾವುದೇ ಪಾವತಿಗೂ ಕ್ಯಾಷ್​ಬ್ಯಾಕ್ ಆಫರ್ ಇರುತ್ತದೆ.

ಇದು ಯಾರಿಗಾದರೂ ಅಚ್ಚರಿ ಆಗಬಹುದು. ನೀವು ಭಾವಿಸಿದಂತೆ ಕೆಲ ಷರತ್ತುಗಳೂ ಇಲ್ಲಿ ಅಡಕವಾಗಿವೆ. ಈ ಷರತ್ತಿನ ನಡುವೆಯೂ ಕ್ಯಾಷ್​ಬ್ಯಾಕ್ ಆಫರ್ ಮಹತ್ವದ್ದೇ. ನೀವು ಏರ್​ಟೆಲ್ ಎಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರಬೇಕು. ಈ ಕ್ರೆಡಿಟ್ ಕಾರ್ಡ್ ಇದ್ದು ನೀವು ಏರ್ಟೆಲ್ ಗ್ರಾಹಕರಾಗಿದ್ದರೆ ಸಾಕು ಭರಪೂರ ಕ್ಯಾಷ್​ಬ್ಯಾಕ್ ಮತ್ತಿತರ ಆಫರ್ ಪಡೆಯಬಹುದು.

ಇದನ್ನೂ ಓದಿ: ವೈಯಕ್ತಿಕ ಸಾಲಕ್ಕೆ ಯಾಕೆ ಬಡ್ಡಿ ಎಷ್ಟು? ತೀರಾ ಹೆಚ್ಚು ಮೊತ್ತದ ಸಾಲ ಯಾಕೆ ಸಿಗಲ್ಲ?

ಏರ್ಟೆಲ್ ಥ್ಯಾಂಕ್ಸ್ ಆ್ಯಪ್​ನಲ್ಲಿ ನೀವು ಏರ್ಟೆಲ್ ಎಕ್ಸಿಸ್ ಕ್ರೆಡಿಟ್ ಕಾರ್ಡ್ ಮೂಲಕ ವಿವಿಧ ಸೇವೆಗಳಿಗೆ ಹಣ ಪಾವತಿಸಿದರೆ ಕ್ಯಾಷ್​ಬ್ಯಾಕ್, ಕಾಂಪ್ಲಿಮೆಂಟರಿ ವೋಚರ್ಸ್ ಇತ್ಯಾದಿ ಪಡೆಯಬಹುದು. ಯಾವ್ಯಾವುದಕ್ಕೆ ಎಷ್ಟು ಕ್ಯಾಷ್​ಬ್ಯಾಕ್ ಸಿಗುತ್ತೆ ಎಂಬುದರ ವಿವರ ಈ ಕೆಳಗಿನ ಪಟ್ಟಿಯಲ್ಲಿದೆ ನೋಡಿ:

  • ಏರ್ಟೆಲ್ ಮೊಬೈಲ್, ಡಿಟಿಎಚ್, ಬ್ರಾಡ್​ಬ್ಯಾಂಡ್, ವೈಫೈ ಸೇವೆಗೆ ಹಣ ಪಾವತಿ: ಶೇ. 25 ಕ್ಯಾಷ್​ ಬ್ಯಾಕ್ (ಗರಿಷ್ಠ ತಿಂಗಳಿಗೆ 250 ರೂ)
  • ಎಲೆಕ್ಟ್ರಿಸಿಟಿ, ಗ್ಯಾಸ್, ನೀರಿನ ಬಿಲ್: ಶೇ. 10ರಷ್ಟು ಕ್ಯಾಷ್​ಬ್ಯಾಕ್ (ತಿಂಗಳಿಗೆ ಗರಿಷ್ಠ 250 ರೂ)
  • ಸ್ವಿಗ್ಗಿ, ಜೊಮಾಟೊ, ಬಿಗ್ ಬ್ಯಾಸ್ಕೆಟ್​​ಗೆ ಹಣ ಪಾವತಿ: ಶೇ. 10ರಷ್ಟು ಕ್ಯಾಷ್​ಬ್ಯಾಕ್ (ತಿಂಗಳಿಗೆ ಗರಿಷ್ಠ 500 ರೂ)
  • ಇತರ ಯಾವುದೇ ಪಾವತಿಗೆ ಶೇ. 1ರಷ್ಟು ಕ್ಯಾಷ್​ಬ್ಯಾಕ್
  • ಉಚಿತ ಏರ್​ಪೋರ್ಟ್ ಲಾಂಜ್ ಸೌಲಭ್ಯ: ವರ್ಷಕ್ಕೆ ನಾಲ್ಕು ಬಾರಿ

ಇಲ್ಲಿ ನೀವು ಏರ್ಟೆಲ್ ಎಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಪಡೆದು 30 ದಿನದೊಳಗೆ ಆ್ಯಕ್ಟಿವೇಶನ್ ಮಾಡಿದರೆ 500 ರೂ ಮೊತ್ತದ ಅಮೇಜಾನ್ ವೋಚರ್ ಅನ್ನು ಗಿಫ್ಟ್ ಆಗಿ ನೀಡಲಾಗುತ್ತದೆ. ನೀವು ಅಮೇಜಾನ್​ನಲ್ಲಿ ಮಾಡುವ ಖರೀದಿಗೆ ಈ ವೋಚರ್ ಮೂಲಕ 500 ರೂ ಡಿಸ್ಕೌಂಟ್ ಪಡೆಯಬಹುದು.

ಇದನ್ನೂ ಓದಿ:ಎನ್​ಪಿಎಸ್ ವಾತ್ಸಲ್ಯ ಅಕೌಂಟ್ ತೆರೆಯುವ ಮುನ್ನ ಸಾಧಕ, ಬಾಧಕಗಳೇನು ತಿಳಿದಿರಲಿ

ಏರ್ಪೋರ್ಟ್ ಲಾಂಜ್ ಆಫರ್ ಪಡೆಯಬೇಕಾದರೆ ಈ ಏರ್ಟೆಲ್ ಎಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್​ನಿಂದ ಕಳೆದ 3 ತಿಂಗಳಲ್ಲಿ ಕನಿಷ್ಠ 50,000 ರೂ ಮೊತ್ತದ ವಹಿವಾಟು ನಡೆಸಿರಬೇಕು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:38 am, Wed, 25 September 24

ಎಲೆಕ್ಟ್ರಾನಿಕ್ ಸಿಟಿಯಲ್ಲಿ ಓಡಾಡುತ್ತ ಜನರ ನಿದ್ದೆಗೆಡಿಸಿದ್ದ ಚಿರತೆ ಸೆರೆ
ಎಲೆಕ್ಟ್ರಾನಿಕ್ ಸಿಟಿಯಲ್ಲಿ ಓಡಾಡುತ್ತ ಜನರ ನಿದ್ದೆಗೆಡಿಸಿದ್ದ ಚಿರತೆ ಸೆರೆ
ಕ್ಷಣಾರ್ಧದಲ್ಲೇ ಜಲ ಸಮಾಧಿಯಾದ ಎರಡಂತಸ್ತಿನ ಮನೆ
ಕ್ಷಣಾರ್ಧದಲ್ಲೇ ಜಲ ಸಮಾಧಿಯಾದ ಎರಡಂತಸ್ತಿನ ಮನೆ
ಕೋಲಾರದಲ್ಲಿ ಅನುಮಾನಾಸ್ಪದ ಸೂಟ್​ಕೇಸ್​ ಪತ್ತೆ, ಸ್ಥಳೀಯರಿಗೆ ಆತಂಕ
ಕೋಲಾರದಲ್ಲಿ ಅನುಮಾನಾಸ್ಪದ ಸೂಟ್​ಕೇಸ್​ ಪತ್ತೆ, ಸ್ಥಳೀಯರಿಗೆ ಆತಂಕ
ಯುವ ದಸರಾ ವೇದಿಕೆ ಮೇಲೆ ನಕ್ಕ ರುಕ್ಮಿಣಿ ವಸಂತ್; ವಿಡಿಯೋ ನೋಡಿ
ಯುವ ದಸರಾ ವೇದಿಕೆ ಮೇಲೆ ನಕ್ಕ ರುಕ್ಮಿಣಿ ವಸಂತ್; ವಿಡಿಯೋ ನೋಡಿ
Daily Devotional: ಯಾವ ಗ್ರಹ ಪೂಜಿಸಿದರೆ ಏನೇನು ಫಲ ಸಿಗುತ್ತೆ?
Daily Devotional: ಯಾವ ಗ್ರಹ ಪೂಜಿಸಿದರೆ ಏನೇನು ಫಲ ಸಿಗುತ್ತೆ?
Nithya Bhavishya: ಈ ರಾಶಿಯ ಮಹಿಳೆಯರು ಇಂದು ಉದ್ಯಮದಲ್ಲಿ ಪ್ರಗತಿ ಕಾಣುವರು
Nithya Bhavishya: ಈ ರಾಶಿಯ ಮಹಿಳೆಯರು ಇಂದು ಉದ್ಯಮದಲ್ಲಿ ಪ್ರಗತಿ ಕಾಣುವರು
ರಸ್ತೆಯಲ್ಲಿ ಬಿದ್ದ ಮೀನುಗಳನ್ನು ಕವರ್​ನಲ್ಲಿ ತುಂಬಿಕೊಳ್ಳಲು ಮುಗಿಬಿದ್ದ ಜನ
ರಸ್ತೆಯಲ್ಲಿ ಬಿದ್ದ ಮೀನುಗಳನ್ನು ಕವರ್​ನಲ್ಲಿ ತುಂಬಿಕೊಳ್ಳಲು ಮುಗಿಬಿದ್ದ ಜನ
ರಾಜೀನಾಮೆ ಬಗ್ಗೆ ಕಡ್ಡಿ ಮುರಿದಂತೆ ಮಾತನಾಡಿದ ಸಿದ್ದರಾಮಯ್ಯ
ರಾಜೀನಾಮೆ ಬಗ್ಗೆ ಕಡ್ಡಿ ಮುರಿದಂತೆ ಮಾತನಾಡಿದ ಸಿದ್ದರಾಮಯ್ಯ
ನೈಸರ್ಗಿಕ ಅನಿಲ ಆಧಾರಿತ ವಿದ್ಯುತ್ ಸ್ಥಾವರ ಲೋಕಾರ್ಪಣೆ, ನೌಕರರಿಗೆ ಬೋನಸ್
ನೈಸರ್ಗಿಕ ಅನಿಲ ಆಧಾರಿತ ವಿದ್ಯುತ್ ಸ್ಥಾವರ ಲೋಕಾರ್ಪಣೆ, ನೌಕರರಿಗೆ ಬೋನಸ್
ನಾನಿನ್ನೂ ಮಾತು ನಿಲ್ಲಿಸಿಲ್ಲ..ಸಡನ್ ಸಿಟ್ಟಾದ ಸಿದ್ರಾಮಯ್ಯ ನೋಡಿ DCM ಶಾಕ್​
ನಾನಿನ್ನೂ ಮಾತು ನಿಲ್ಲಿಸಿಲ್ಲ..ಸಡನ್ ಸಿಟ್ಟಾದ ಸಿದ್ರಾಮಯ್ಯ ನೋಡಿ DCM ಶಾಕ್​