AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಊಟದ ಜೊತೆಗೆ ಉಪ್ಪಿನಕಾಯಿ ಇದ್ದಂತೆ; ಹೂಡಿಕೆದಾರರಿಗೆ 80:20 ಸೂತ್ರ ಕೊಟ್ಟ ರಾಧಿಕಾ ಗುಪ್ತ

Radhika Gupta on balanced investment: ಊಟಕ್ಕಿಂತ ಉಪ್ಪಿನಕಾಯಿ ಜಾಸ್ತಿಯಾದ್ರೆ ಸುತಾರಾಂ ಚೆನ್ನಾಗಿರಲ್ಲ. ಹೂಡಿಕೆಗಳಲ್ಲೂ ಕೂಡ ತೀರಾ ರಿಸ್ಕಿ ಇನ್ವೆಸ್ಟ್​ಮೆಂಟ್​ಗಳೇ ಹೆಚ್ಚಾದರೆ ಚೆನ್ನಾಗಿರಲ್ಲ. ಎಡೆಲ್​ವೀಸ್ ಮ್ಯುಚುವಲ್ ಫಂಡ್ ಸಿಇಒ ರಾಧಿಕಾ ಗುಪ್ತಾ ಈ ವಿಚಾರದ ಬಗ್ಗೆ ಮಾತನಾಡುತ್ತಾ 80:20 ಸೂತ್ರ ಮುಂದಿಟ್ಟಿದ್ದಾರೆ. 80 ಭಾಗವು ಸ್ಥಿರ ಹೂಡಿಕೆಗಳಲ್ಲಿರಬೇಕು. 20 ಭಾಗವು ರಿಸ್ಕಿ ಹೂಡಿಕೆಗಳಾಗಿರಬಹುದು.

ಊಟದ ಜೊತೆಗೆ ಉಪ್ಪಿನಕಾಯಿ ಇದ್ದಂತೆ; ಹೂಡಿಕೆದಾರರಿಗೆ 80:20 ಸೂತ್ರ ಕೊಟ್ಟ ರಾಧಿಕಾ ಗುಪ್ತ
ರಾಧಿಕಾ ಗುಪ್ತಾ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 25, 2024 | 3:32 PM

Share

ನಿಮ್ಮ ತಲೆ ಗಟ್ಟಿ ಇದೆ ಎಂದು ಕಲ್ಲಿಗೆ ಹೊಡೆದುಕೊಳ್ಳಲು ಆಗುತ್ಯೆ? ತಲೆಯನ್ನು ಎಷ್ಟು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕೋ ಅದು ಅವಶ್ಯಕವಾಗಿ ಆಗಬೇಕು. ಅಂತೆಯೇ, ನಮ್ಮ ಸೇವಿಂಗ್ಸ್ ಹಣವೂ ಕೂಡ. ಸಿಕ್ಕಾಪಟ್ಟೆ ಹಣ ಇದೆ ಅಂತ ಸಿಕ್ಕಲ್ಲಿ ಹೂಡಿಕೆ ಮಾಡಿದರೆ ಎಲ್ಲವನ್ನೂ ಕಳೆದುಕೊಳ್ಳಬೇಕಾದೀತು. ಹಣಕಾಸು ಸಲಹೆಗಾರರು ಇದನ್ನೇ ರಿಸ್ಕ್ ಮ್ಯಾನೇಜ್ಮೆಂಟ್ ಎನ್ನುವುದು. ಎಡೆಲ್ವೀಸ್ ಮ್ಯೂಚುವಲ್ ಫಂಡ್ ಸಂಸ್ಥೆಯ ಸಿಇಒ ರಾಧಿಕಾ ಗುಪ್ತಾ ಅವರು ಹೂಡಿಕೆಗಳು ಹೇಗಿರಬೇಕು ಎನ್ನುವುದಕ್ಕೆ ಊಟ ಮತ್ತು ಉಪ್ಪಿನಕಾಯಿ ಸಂಯೋಜನೆಯನ್ನು ಉದಾಹರಣೆಯಾಗಿ ನೀಡಿದ್ದಾರೆ.

‘ಅನ್ನ ಮತ್ತು ಸಾಂಬಾರ್ (ದಾಲ್ ಚಾವಲ್) ಸಮತೋಲಿತ ಆಹಾರ ಆಗಿದೆ. ಅಂತೆಯೇ, ಮಲ್ಟಿ ಕ್ಯಾಪ್, ಫ್ಲೆಕ್ಸಿಕ್ಯಾಪ್, ಹೈಬ್ರಿಡ್ ಫಂಡ್, ಬ್ಯಾಲನ್ಸ್ಡ್ ಅಡ್ವಾಂಟೇಜ್, ಇಂಡೆಕ್ಸ್ ಫಂಡ್ ಇತ್ಯಾದಿ ಸ್ಥಿರ ಹೂಡಿಕೆ ಆಯ್ಕೆಗಳು ಕೂಡ ಯಾವುದೇ ಹೂಡಿಕೆ ಯೋಜನೆಯಲ್ಲಿ ಪ್ರಮುಖ ಭಾಗವಾಗಿರಬೇಕು. ಊಟದ ಜೊತೆ ಉಪ್ಪಿನಕಾಯಿಯಂತೆ, ಸ್ಥಿರ ಹೂಡಿಕೆಗಳ ಜೊತೆಗೆ ತುಂಬಾ ರಿಸ್ಕ್ ಇರುವ ಹೂಡಿಕೆಗಳೂ ಸ್ವಲ್ಪ ಇರಬೇಕು’ ಎಂದು ಹೇಳಿರುವ ರಾಧಿಕಾ ಗುಪ್ತ ಅವರು 80:20 ಫಾರ್ಮುಲಾ ಮುಂದಿಡುತ್ತಾರೆ.

ಇದನ್ನೂ ಓದಿ: ಕ್ರೆಡಿಟ್ ಕಾರ್ಡ್ ಪರ್ಸನಲ್ ಲೋನ್​ಗೆ ಜಿಎಸ್​ಟಿ ತೆರಿಗೆ ಇದೆಯಾ? ಇಲ್ಲಿದೆ ಡೀಟೇಲ್ಸ್

ಅವರ ಪ್ರಕಾರ ಶೇ. 80ರಷ್ಟು ಹೂಡಿಕೆಗಳು ರಿಸ್ಕ್​ನಿಂದ ಕೂಡಿರದ ಸ್ಟೇಬಲ್ ಫಂಡ್​ಗಳಾಗಿರಬೇಕು. ಇನ್ನುಳಿದ ಶೇ. 20ರಷ್ಟು ಹೂಡಿಕೆಗಳು ಹೈರಿಸ್ಕ್​ನದ್ದಾಗಿದ್ದರೆ ಪರವಾಗಿಲ್ಲ.

ಚಿಕ್ಕ ವಯಸ್ಸಿನ ಹೂಡಿಕೆದಾರರು ಮತ್ತು ಅಧಿಕ ಆಸ್ತಿವಂತ ವ್ಯಕ್ತಿಗಳು ಹೈರಿಸ್ಕ್ ಹೂಡಿಕೆಗಳತ್ತ ಹೆಚ್ಚೆಚ್ಚು ಆಕರ್ಷಿತರಾಗುತ್ತಿರುವ ಬಗ್ಗೆ ರಾಧಿಕಾ ಆತಂಕ ವ್ಯಕ್ತಪಡಿಸಿದ್ದಾರೆ.

‘ನಾವು ಶ್ರೀಮಂತರಿದ್ದೇವೆ. ಈಗಲೂ ಅನ್ನ ಸಾಂಬಾರ್ ತಿಂದುಕೊಂಡಿರಬೇಕಾ ಅಂತ ಸುಶಿ ತಿನ್ನಲು ಮುಂದಾಗುತ್ತಾರೆ. ಆದರೆ, ಸುಶಿಯನ್ನು ತಿಂದು ಜೀರ್ಣಿಸಿಕೊಳ್ಳುವುದು ಕಷ್ಟ ಅಂತ ಗೊತ್ತಾದಾಗ ಸಾಂಪ್ರದಾಯಿಕ ಆಹಾರ ಕ್ರಮಕ್ಕೆ ಮರಳುತ್ತಾರೆ. ವ್ಯಕ್ತಿಗಳ ಆಹಾರಕ್ಕೆ ವೈದ್ಯರೂ ಕೂಡ ಮನೆಯಲ್ಲಿ ತಯಾರಿಸಿದ ಆಹಾರವನ್ನೇ ತಿನ್ನಬೇಕೆಂದು ಶಿಫಾರಸು ಮಾಡುತ್ತಾರೆ. ಹೂಡಿಕೆದಾರರೂ ಕೂಡ ತಮ್ಮ ಹಣಕಾಸು ಆರೋಗ್ಯ ಕಾಪಾಡಿಕೊಳ್ಳಲು ತಮ್ಮ ಪೋರ್ಟ್​ಫೋಲಿಯೋದಲ್ಲಿ ಸಮತೋಲಿತವಾಗಿರುವಂತಹ ಫಂಡ್​ಗಳನ್ನು ಹೊಂದಿರಬೇಕು’ ಎಂದು ಎಡೆಲ್​ವೀಸ್ ಮ್ಯುಚುವಲ್ ಫಂಡ್​ನ ಸಿಇಒ ತಿಳಿಸಿದ್ದಾರೆ.

ಇದನ್ನೂ ಓದಿ: ಏರ್ಟೆಲ್ ಬಳಕೆದಾರರಿಗೆ ಸಖತ್ ಆಫರ್; ತಿಂಗಳಿಗೆ ಸಾವಿರ ರೂಗೂ ಹೆಚ್ಚು ಕ್ಯಾಷ್​ಬ್ಯಾಕ್ ಪಡೆಯುವುದು ಹೇಗೆ?

ಬರೀ ಮನೆ ಆಹಾರ ತಿನ್ನು ಎನ್ನಲಾದೀತೆ..?

‘ಮನೆಯ ಆಹಾರ ಮಾತ್ರವೇ ಸೇವಿಸಬೇಕು, ರೆಸ್ಟೋರೆಂಟ್​ಗೆ ಹೋಗಿ ತಿನ್ನಬಾರದು. ಆನ್​ಲೈನ್​ನಲ್ಲಿ ಆರ್ಡರ್ ಮಾಡಬಾರದು ಎಂದು ಯಾರಿಗಾದರೂ ಹೇಳಿ ಒಪ್ಪಿಸಲು ಆಗುವುದಿಲ್ಲ. ಇಲ್ಲಿ 80:20 ಸೂತ್ರ ಸರಿ ಆಗುತ್ತದೆ. ಶೇ. 80ರಷ್ಟು ಮನೆ ಊಟ, ಶೇ. 20ರಷ್ಟು ಹೊರಗಿನ ಊಟ. ಇದರಿಂದ ಜೀವನ ಚೆನ್ನಾಗಿರುತ್ತದೆ’ ಎಂದು ರಾಧಿಕಾ ಗುಪ್ತಾ ಹೇಳಿದ್ದಾರೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?