EPF Balance: ಮಿಸ್ಡ್ ಕಾಲ್ ಕೊಟ್ಟು ಪಿಎಫ್ ಬ್ಯಾಲೆನ್ಸ್ ತಿಳಿಯುವುದು ಹೇಗೆ? ಇಲ್ಲಿದೆ ವಿವರ

Missed Call To Check PF Amount: ನಿಮ್ಮ ಇಪಿಎಫ್ ಖಾತೆಯಲ್ಲಿ ಎಷ್ಟು ಬ್ಯಾಲೆನ್ಸ್ ಎಂದು ತಿಳಿಯುವುದು ಈಗ ಬಹಳ ಸುಲಭ. ಇದಕ್ಕೆ ಹಲವು ವಿಧಾನಗಳುಂಟು. ಅದರಲ್ಲಿ ಮೊಬೈಲ್​ನಿಂದ ಮಿಸ್ಡ್ ಕಾಲ್ ಕೊಡುವ ಸೌಲಭ್ಯ ಬಹಳ ಜನಪ್ರಿಯ ಎನಿಸಿದೆ. ಈ ಬಗ್ಗೆ ವಿವರ:

EPF Balance: ಮಿಸ್ಡ್ ಕಾಲ್ ಕೊಟ್ಟು ಪಿಎಫ್ ಬ್ಯಾಲೆನ್ಸ್ ತಿಳಿಯುವುದು ಹೇಗೆ? ಇಲ್ಲಿದೆ ವಿವರ
ಇಪಿಎಫ್​ಒ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 08, 2023 | 5:14 PM

ಉದ್ಯೋಗಿಗಳ ಭವಿಷ್ಯ ನಿಧಿ (Employee Provident Fund) ಅಥವಾ ಇಪಿಎಫ್ ಕೇಂದ್ರ ಸರ್ಕಾರದ ಇಪಿಎಫ್​ಒದಿಂದ (EPFO) ನಿರ್ವಹಿಸಲಾಗುತ್ತಿರುವ ಒಂದು ಪ್ರಮುಖ ಉಳಿತಾಯ ಯೋಜನೆ. ಉದ್ಯೋಗಿಗಳ ಜೀವನ ಭದ್ರತೆಗೆಂದು ರೂಪಿಸಲಾಗಿರುವ ಯೋಜನೆ ಇದು. ರೆಗ್ಯುಲರ್ ಎಂಪ್ಲಾಯೀ ಆಗಿ ನೇಮಕವಾದವರೆಲ್ಲರಿಗೂ ಸಾಮಾನ್ಯವಾಗಿ ಲಭ್ಯ ಇರುವ ಯೋಜನೆ ಇದು. ಉದ್ಯೋಗಿಯ ಬೇಸಿಕ್ ಸಂಬಳ ಮತ್ತು ಭತ್ಯೆ (DA- Dearness Allowance) ಮೊತ್ತದ ಶೇ. 12ರಷ್ಟು ಹಣ ಆ ಉದ್ಯೋಗಿಯ ಇಪಿಎಫ್ ಖಾತೆಗೆ ಪ್ರತೀ ತಿಂಗಳೂ ಸಂದಾಯವಾಗುತ್ತಾ ಹೋಗುತ್ತದೆ. ಈಗಂತೂ ಪ್ರತಿಯೊಬ್ಬ ಉದ್ಯೋಗಿಗೂ ಯುಎಎನ್ ನಂಬರ್ ಒದಗಿಸಲಾಗುತ್ತದೆ. ಈ ಯುಎಎನ್ ನಂಬರ್ ಅಡಿಯಲ್ಲಿ ಇಪಿಎಫ್ ಖಾತೆ ಸೃಷ್ಟಿಯಾಗುತ್ತದೆ. ನೀವು ಕಂಪನಿ ಬದಲಿಸಿದಾಗ ಹೊಸ ಇಪಿಎಫ್ ಖಾತೆ ಸೃಷ್ಟಿಯಾದರೂ ಯುಎಎನ್ ನಂಬರ್ ಅದೇ ಇರುತ್ತದೆ. ವಿವಿಧ ಪಿಎಫ್ ಖಾತೆಗಳನ್ನು ವಿಲೀನಗೊಳಿಸಿ ಒಂದೇ ಖಾತೆಯಾಗಿ ಉಳಿಸಿಕೊಳ್ಳುವ ಅವಕಾಶವೂ ಇದೆ.

ಈ ರೀತಿಯಾಗಿ ಇಪಿಎಫ್ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಬಹಳಷ್ಟು ಬದಲಾವಣೆಗಳನ್ನು ಮಾಡಿದೆ. ಪಿಎಫ್ ಖಾತೆಯಲ್ಲಿರುವ ಹಣ ಎಷ್ಟಿದೆ ಎಂದು ತಿಳಿದುಕೊಳ್ಳಲು, ಹಣ ಹಿಂಪಡೆಯುವುದು, ಮುಂಗಡ ಪಡೆಯುವುದು ಇತ್ಯಾದಿ ಹಲವು ಸವಲತ್ತುಗಳಿವೆ. ಉಮಂಗ್ ಇತ್ಯಾದಿ ಆ್ಯಪ್​ಗಳ ಮೂಲಕ ನಮ್ಮ ಪಿಎಫ್ ಖಾತೆಯ ಇಡೀ ವಿವರಗಳನ್ನು ನೋಡಬಹುದು, ವಿವಿಧ ಇಪಿಎಫ್ ಸೇವೆಗಳನ್ನೂ ಆನ್​ಲೈನ್ ಮೂಲಕವೇ ಪಡೆಯಬಹುದು. 12 ಅಂಕಿಗಳ ಯುಎಎನ್ ನಂಬರ್ ಅನ್ನು ಆಧಾರ್ ನಂಬರ್ ಜೊತೆ ಜೋಡಿಸಿರುವುದರಿಂದ ಎಲ್ಲವೂ ಒಂದೇ ಪ್ಲಾಟ್​ಫಾರ್ಮ್​ನಲ್ಲಿ ಲಭ್ಯ ಇರುತ್ತದೆ. ಎಸ್ಸೆಮ್ಮೆಸ್ ಮೂಲಕವೋ ಅಥವಾ ನೊಂದಾಯಿತ ಮೊಬೈಲ್ ನಂಬರ್ ಮೂಲಕ ಮಿಸ್ಡ್ ಕಾಲ್ (Missed Call Facility) ಕೊಡುವ ಮೂಲಕವೂ ಪಿಎಫ್ ಖಾತೆಯಲ್ಲಿ ಹಣ ಎಷ್ಟಿದೆ ಎಂದೂ ತಿಳಿದುಕೊಳ್ಳಬಹುದು. ಅದು ಹೇಗೆಂದು ಇಲ್ಲಿದೆ ವಿವರ

ಇದನ್ನೂ ಓದಿBIG Gifts: ನಿರುದ್ಯೋಗಿಗಳಿಗೆ ಭತ್ಯೆ; ಅಂಗನವಾಡಿ ಕಾರ್ಯಕರ್ತೆಯರಿಗೆ ಸಂಬಳ ಏರಿಕೆ; ಈ ರಾಜ್ಯದವರಿಗೆ ಹೋಳಿ ಗಿಫ್ಟ್

ಮಿಸ್ಡ್ ಕಾಲ್ ಮೂಲಕ ಪಿಎಫ್ ಬ್ಯಾಲನ್ಸ್ ತಿಳಿಯುವುದು ಹೀಗೆ:

ಯುಎಎನ್ ಪೋರ್ಟಲ್​ನಲ್ಲಿ ನೊಂದಾಯಿಸಲಾದ ಇಪಿಎಫ್ ಸದಸ್ಯರು ತಮ್ಮ ನೊಂದಾಯಿತ ಮೊಬೈಲ್ ನಂಬರ್​ನಿಂದ ಮಿಸ್ಡ್ ಕಾಲ್ ಕೊಟ್ಟರೆ ಪಿಎಫ್ ಬ್ಯಾಲನ್ಸ್ ತಿಳಿಯಬಹುದು. 9966044425 ಈ ನಂಬರ್​ಗೆ ಮಿಸ್ಡ್ ಕಾಲ್ ಕೊಟ್ಟರೆ ನಿಮ್ಮ ಈಗಿನ ಪಿಎಫ್ ಖಾತೆಯಲ್ಲಿರುವ ಹಣದ ಮೊತ್ತ ಎಷ್ಟೆಂದು ಗೊತ್ತಾಗುತ್ತದೆ. ನೀವು ಕೆಲಸ ಮಾಡುವ ಕಂಪನಿಯು ನಿಮ್ಮ ಯುಎಎನ್ ನಂಬರ್, ಆಧಾರ್, ಪಾನ್ ನಂಬರ್, ಬ್ಯಾಂಕ್ ಖಾತೆ ಇವುಗಳನ್ನು ನೊಂದಾಯಿಸಿರುತ್ತಾದ್ದರಿಂದ ಈ ಸೌಲಭ್ಯ ಸಾಧ್ಯವಾಗುತ್ತದೆ.

ಇದನ್ನೂ ಓದಿFoxconn: ಬೆಂಗಳೂರು ಏರ್​ಪೋರ್ಟ್​ನ ಹೊಸ ಟರ್ಮಿನಲ್ ಕಂಡು ಅಸ್ತು ಎಂದರಾ ಐಫೋನ್ ತಯಾರಕರು?

ಯುಎಎನ್ ಪೋರ್ಟಲ್​ನಲ್ಲಿ ನೊಂದಾಯಿಸಿರಬೇಕು

ಯುಎಎನ್ ಅಥವಾ ಯೂನಿವರ್ಸಲ್ ಅಕೌಂಟ್ ನಂಬರ್​ನ ಡಿಡಿಕೇಟೆಡ್ ಪೋರ್ಟಲ್ ಇರುತ್ತದೆ. ಅಲ್ಲಿ ಹೋಗಿ ನಿಮ್ಮ ಯುಎಎನ್ ನಂಬರ್​ಗೆ ಮೊಬೈಲ್ ನಂಬರ್ ಅನ್ನು ಆ್ಯಕ್ಟಿವೇಟ್ ಮಾಡಬೇಕು.

ಪೋರ್ಟಲ್​ನಲ್ಲಿ ಕೆವೈಸಿ ಸರಿಯಾಗಿರಬೇಕು. ಅಂದರೆ ನಿಮ್ಮ ಯುಎಎನ್ ನಂಬರ್​ಗೆ ಬ್ಯಾಂಕ್ ಖಾತೆ ಸಂಖ್ಯೆಯೋ, ಆಧಾರ್ ನಂಬರೋ ಅಥವಾ ಪಾನ್ ಕಾರ್ಡೋ ಈ ದಾಖಲೆಗಳನ್ನು ಒದಗಿಸಿರಬೇಕು.

ಇವಾಗಿದ್ದರೆ ನೀವು 9966044425 ನಂಬರ್​ಗೆ ಮಿಸ್ಡ್ ಕಾಲ್ ಕೊಡಬಹುದು. ನೀವು ಕಾಲ್ ಮಾಡಿದಾಗ ಅದು ಒಂದು ಕ್ಷಣ ರಿಂಗ್ ಆಗಿ ಸ್ವಯಂ ಆಗಿಯೇ ಡಿಸ್​ಕನೆಕ್ಟ್ ಆಗುತ್ತದೆ. ಬಳಿಕ ಎಸ್ಸೆಮ್ಮೆಸ್ ಮೂಲಕ ನಿಮಗೆ ಪಿಎಫ್ ಬ್ಯಾಲನ್ಸ್ ಎಷ್ಟೆಂದು ಮಾಹಿತಿ ಮೊಬೈಲ್​ಗೆ ಬರುತ್ತದೆ.

ಇನ್ನಷ್ಟು ವ್ಯವಹಾರಗಳ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:14 pm, Wed, 8 March 23

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ