ಇಪಿಎಫ್​ಒ ಹೊಸ ಆದೇಶ: ವೈದ್ಯಕೀಯ ಚಿಕಿತ್ಸೆಗೆ 1 ಲಕ್ಷ ರೂವರೆಗೆ ಪಿಎಫ್ ಹಣ ಪಡೆಯುವ ಅವಕಾಶ

|

Updated on: Apr 17, 2024 | 5:16 PM

EPF fund withdrawal for medical treatment: ಇಪಿಎಫ್​ಒ ಏಪ್ರಿಲ್ 16ರಂದು ಹೊರಡಿಸಲಾಗಿರುವ ಸುತ್ತೋಲೆ ಪ್ರಕಾರ ಇಪಿಎಫ್ ಸದಸ್ಯರು ವೈದ್ಯಕೀಯ ಚಿಕಿತ್ಸೆಗೆಂದು ವಿತ್​ಡ್ರಾ ಮಾಡಿಕೊಳ್ಳಬಹುದಾದ ಹಣದ ಮಿತಿಯನ್ನು ಒಂದು ಲಕ್ಷ ರೂಗೆ ಹೆಚ್ಚಿಸಲಾಗಿದೆ. ಈ ಮುಂಚೆ ಇದರ ಮಿತಿ 50,000 ರೂ ಇತ್ತು. ಇಪಿಎಫ್ ಖಾತೆಯಲ್ಲಿರುವ ಹಣದಲ್ಲಿ ಅಡ್ವಾನ್ಸ್ ಪಡೆದುಕೊಳ್ಳಬಹುದು. ಮದುವೆ, ಶಿಕ್ಷಣ, ಮನೆ ಖರೀದಿ, ಮನೆ ನಿರ್ಮಾಣ ಹೀಗೆ ಬೇರೆ ಬೇರೆ ಕಾರಣಗಳನ್ನು ನೀಡಿ ಹಣ ವಿತ್​ಡ್ರಾ ಮಾಡಿಕೊಳ್ಳಲು ಅರ್ಜಿ ಸಲ್ಲಿಕೆಗೆ ಫಾರ್ಮ್31ನಲ್ಲಿ ಅವಕಾಶ ಇದೆ.

ಇಪಿಎಫ್​ಒ ಹೊಸ ಆದೇಶ: ವೈದ್ಯಕೀಯ ಚಿಕಿತ್ಸೆಗೆ 1 ಲಕ್ಷ ರೂವರೆಗೆ ಪಿಎಫ್ ಹಣ ಪಡೆಯುವ ಅವಕಾಶ
ಇಪಿಎಫ್​
Follow us on

ನವದೆಹಲಿ, ಏಪ್ರಿಲ್ 17: ವೈದ್ಯಕೀಯ ಚಿಕಿತ್ಸೆಗಾಗಿ ಇನ್ಮುಂದೆ ಇಪಿಎಫ್​ನಿಂದ (epf) ಹೆಚ್ಚು ಹಣ ಬಳಸಿಕೊಳ್ಳಬಹುದು. ಇಪಿಎಫ್ ಖಾತೆಯಿಂದ 68ಜೆ ಅಡಿಯಲ್ಲಿ ವಿತ್​ಡ್ರಾ ಮಾಡಿಕೊಳ್ಳಬಹುದಾದ ಹಣದ ಮಿತಿಯನ್ನು 50,000 ರೂನಿಂದ ಒಂದು ಲಕ್ಷ ರೂಗೆ ಹೆಚ್ಚಿಸಲಾಗಿದೆ. ಅಂದರೆ, ವೈದ್ಯಕೀಯ ಚಿಕಿತ್ಸೆಯ (medical treatment) ಸಂದರ್ಭದಲ್ಲಿ ಒಂದು ಲಕ್ಷ ರೂವರೆಗೆ ಇಪಿಎಫ್ ಹಣವನ್ನು ಕ್ಲೈಮ್ ಮಾಡಲು ಸಾಧ್ಯ. 68ಜೆ ಅಡಿಯಲ್ಲಿ ವಿತ್​ಡ್ರಾ ಮಿತಿ ಹೆಚ್ಚಿಸಿ ಇಪಿಎಫ್​​ಒ ಸಂಸ್ಥೆ ನಿನ್ನೆ ಏಪ್ರಿಲ್ 16ರಂದು ಸುತ್ತೋಲೆ ಹೊರಡಿಸಿದೆ. ಏಪ್ರಿಲ್ 10ರಂದೇ ಇಪಿಎಫ್​ನ ಆ್ಯಪ್ ಸಾಫ್ಟ್​ವೇರ್​ನಲ್ಲಿ ಸೂಕ್ತ ಬದಲಾವಣೆ ಮಾಡಲಾಗಿದೆ. ಸೆಂಟ್ರಲ್ ಪ್ರಾವಿಡೆಂಟ್ ಫಂಡ್ ಕಮಿಷನರ್ (ಸಿಪಿಎಫ್​ಸಿ) ಅವರಿಂದಲೂ ಈ ಬದಲಾವಣೆಗೆ ಸಮಮ್ಮತಿ ಸಿಕ್ಕಿದೆ.

ಅರ್ಜಿ ನಮೂನೆ 31ರ ಮೂಲಕ ವಿವಿಧ ಉದ್ದೇಶಗಳಿಗೆ ಇಪಿಎಫ್ ಖಾತೆಯಲ್ಲಿನ ಹಣವನ್ನು ಭಾಗಶಃ ಹಿಂಪಡೆಯಬಹುದು. ಮದುವೆ, ಸಾಲ, ಮನೆ ಖರೀದಿ, ಮನೆ ನಿರ್ಮಾಣ, ವೈದ್ಯಕೀಯ ಚಿಕಿತ್ಸೆ ಹೀಗೆ ವಿವಿಧ ಕಾರಣಗಳ ಪಟ್ಟಿ ಇರುತ್ತದೆ. ಈ ಫಾರ್ಮ್​ನ 68ಜೆ ಪ್ಯಾರಾ ಅಡಿಯಲ್ಲಿ ವೈದ್ಯಕೀಯ ಚಿಕಿತ್ಸೆಗೆಂದು ಇಪಿಎಫ್ ಹಣಕ್ಕಾಗಿ ಅರ್ಜಿ ಸಲ್ಲಿಸಬಹುದು. ಇಪಿಎಫ್ ಸದಸ್ಯ ಮಾತ್ರವಲ್ಲ, ಅವರ ಕುಟುಂಬ ಸದಸ್ಯರಿಗೆ ಅನಾರೋಗ್ಯವಾಗಿ ವೈದ್ಯಕೀಯ ಚಿಕಿತ್ಸೆ ಮಾಡಿಸುವುದಿದ್ದಾಗಲೂ ಹಣ ಹಿಂಪಡೆಯುವ ಅವಕಾಶ ಇರುತ್ತದೆ.

ಇದನ್ನೂ ಓದಿ: ಕೆಲಸ ಬದಲಿಸಿದರೆ ಹಳೆಯ ಪಿಎಫ್ ಖಾತೆ ಬಗ್ಗೆ ಚಿಂತೆ ಬೇಡ; ತನ್ನಂತಾನೇ ಆಗುತ್ತೆ ಹಣ ವರ್ಗಾವಣೆ

ಇಲ್ಲಿ ಅರ್ಜಿ ನಮೂನೆ 31ರ ಜೊತೆಗೆ ಇಪಿಎಫ್ ಖಾತೆದಾರ ಕೆಲಸ ಮಾಡುವ ಸಂಸ್ಥೆ ಹಾಗೂ ವೈದ್ಯಕೀಯ ಚಿಕಿತ್ಸೆ ನೀಡುವ ವೈದ್ಯರಿಂದ ಸಹಿ ಮಾಡಿಸಲಾದ ಸಿ ಸರ್ಟಿಫಿಕೇಟ್ ಅನ್ನೂ ಸಲ್ಲಿಸಬೇಕು.

ಫಾರ್ಮ್ 31 ಅಲ್ಲಿ ಏನೇನಿದೆ?

ಇಪಿಎಫ್​ನ ಫಾರ್ಮ್ 31ನಲ್ಲಿ ವಿವಿಧ ಕಾರಣಗಳಿಗೆ ಹಣ ಹಿಂಪಡೆಯಲು ಅವಕಾಶ ಇದೆ. ಪ್ಯಾರಾ 68ಬಿ ಅಡಿಯಲ್ಲಿ ಮನೆ ಖರೀದಿ, ಮನೆ ನಿರ್ಮಾಣ, ನಿವೇಶನ ಖರೀದಿ ಕಾರಣ ನೀಡಬಹುದು.

ಇದನ್ನೂ ಓದಿ: ಇಪಿಎಫ್ ಖಾತೆ ವಿಲೀನಗೊಳಿಸಬಹುದು, ಆದರೆ ಎರಡು ಯುಎಎನ್ ಸಂಖ್ಯೆ ಸೇರಿಸಲು ಸಾಧ್ಯವಾ? ಇಲ್ಲಿದೆ ಕ್ರಮ

68ಬಿಬಿ ಪ್ಯಾರಾ ಅಡಿಯಲ್ಲಿ ಸಾಲ ಮರುಪಾವತಿ; 68ಎಚ್ ಅಡಿಯಲ್ಲಿ ವಿಶೇಷ ಸಂದರ್ಭಕ್ಕೆ ಅಡ್ವಾನ್ಸ್ ಅವಶ್ಯಕತೆ; 68ಜೆ ಅಡಿಯಲ್ಲಿ ವೈದ್ಯಕೀಯ ಚಿಕಿತ್ಸೆ; 68ಕೆ ಪ್ಯಾರಾ ಅಡಿಯಲ್ಲಿ ಮಕ್ಕಳ ಮದುವೆ ಮತ್ತು ಶಿಕ್ಷಣ ವೆಚ್ಚಕ್ಕೆ; 68ಎನ್ ಪ್ಯಾರಾ ಅಡಿಯಲ್ಲಿ ದೈಹಿಕ ವಿಶೇಷ ಚೇತನವಿರುವವರಿಗೆ; ಮತ್ತು 68ಎನ್ಎನ್ ಅಡಿಯಲ್ಲಿ ನಿವೃತ್ತಿಗೆ ಒಂದು ವರ್ಷ ಇರುವಂತೆ ಹಣ ವಿತ್​ಡ್ರಾ ಮಾಡಲು ಅವಕಾಶ ನೀಡಲಾಗಿರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ