EPF Rate: ಈ ವರ್ಷಕ್ಕೆ ಇಪಿಎಫ್ ಹಣಕ್ಕೆ ಶೇ. 8 ಬಡ್ಡಿ? ಪಿಎಫ್ ಬಡ್ಡಿ ದರ ನಿರ್ಧಾರ ಆಗೋದು ಹೇಗೆ?

|

Updated on: Mar 05, 2023 | 4:03 PM

EPF May Give 8% Interest This Year's Deposits: 2022-23ರ ಹಣಕಾಸು ವರ್ಷದಲ್ಲಿ ಇಪಿಎಫ್ ಹಣಕ್ಕೆ ಸರ್ಕಾರ ಶೇ. 8.1ರ ದರವನ್ನೇ ಮುಂದುವರಿಸಬಹುದು. ಇದೇ ಮಾರ್ಚ್ 25-26ರಂದು ಇಪಿಎಫ್​ಒ ಸಭೆ ನಡೆಸಲಿದ್ದು, ಪಿಎಫ್ ಹಣಕ್ಕೆ ಎಷ್ಟು ಬಡ್ಡಿ ಎಂಬುದನ್ನು ನಿರ್ಧರಿಸಲಿದ್ದಾರೆ.

EPF Rate: ಈ ವರ್ಷಕ್ಕೆ ಇಪಿಎಫ್ ಹಣಕ್ಕೆ ಶೇ. 8 ಬಡ್ಡಿ? ಪಿಎಫ್ ಬಡ್ಡಿ ದರ ನಿರ್ಧಾರ ಆಗೋದು ಹೇಗೆ?
ಇಪಿಎಫ್​ಒ
Follow us on

ನವದೆಹಲಿ: ಉದ್ಯೋಗಿಗಳ ಪಿಂಚಣಿ ನಿಧಿ (EPF- Employee Provident Fund) ಸರ್ಕಾರ ಒದಗಿಸುತ್ತಿರುವ ಹಲವು ಅಗತ್ಯ ಸೇವೆಗಳಲ್ಲಿ ಒಂದು. ಪ್ರತಿಯೊಬ್ಬ ಉದ್ಯೋಗಿಯ ಪಿಎಫ್ ಖಾತೆಗೆ ಜಮೆಯಾಗುವ ಹಣಕ್ಕೆ ಸರ್ಕಾರ ಬಡ್ಡಿ ನೀಡುತ್ತದೆ. ಈ ಬಡ್ಡಿ ಎಷ್ಟೆಂದು ಸರ್ಕಾರ ಕಳೆದ ಕೆಲ ವರ್ಷಗಳಿಂದ ಪ್ರತೀ ವರ್ಷವೂ ಪರಿಷ್ಕರಿಸುತ್ತಾ ಬರುತ್ತದೆ. 2021-22ರ ಅವಧಿಯ ಪಿಎಫ್ ಹಣಕ್ಕೆ ಸರ್ಕಾರ ಶೇ. 8.1 ರಷ್ಟು ಬಡ್ಡಿಯನ್ನು ನಿಗದಿ ಮಾಡಿತ್ತು. ಈ ವರ್ಷ, ಅಂದರೆ 2022-23ರ ಹಣಕಾಸು ವರ್ಷದಲ್ಲಿ ಇಪಿಎಫ್ ಹಣಕ್ಕೆ ಸರ್ಕಾರ ಶೇ. 8.1ರ ದರವನ್ನೇ ಮುಂದುವರಿಸಬಹುದು. ಅಥವಾ ಶೇ. 8ಕ್ಕೆ ಇಳಿಸಬಹುದು ಎಂಬ ಮಾತು ಕೇಳಿಬರುತ್ತಿದೆ. ಇದೇ ಮಾರ್ಚ್ 25-26ರಂದು ಇಪಿಎಫ್​ಒ ಸಂಸ್ಥೆಯ ಕೇಂದ್ರೀಯ ಟ್ರಸ್ಟಿ ಮಂಡಳಿಯ ಸದಸ್ಯರು ಸಭೆ ನಡೆಸಲಿದ್ದು, ಪಿಎಫ್ ಹಣಕ್ಕೆ ಎಷ್ಟು ಬಡ್ಡಿ ಹಾಕುವುದು ಎಂಬುದನ್ನು ನಿರ್ಧರಿಸಲಿದ್ದಾರೆ.

2015ರಿಂದಲೂ ಸರ್ಕಾರ ಪಿಎಫ್ ನಿಧಿಗೆ ಬಡ್ಡಿ ದರವನ್ನು ಬಹುತೇಕ ಇಳಿಸುತ್ತಲೇ ಬಂದಿದೆ. 2015-16ರ ವರ್ಷದಲ್ಲಿ ಶೇ. 8.80ಯಷ್ಟು ಬಡ್ಡಿ ಇತ್ತು. ಈಗ ಅದು ಶೇ. 8.10ಕ್ಕೆ ಇಳಿದಿದೆ. ಆದರೆ, ಮುಂದಿನ ವರ್ಷ ಲೋಕಸಭಾ ಚುನಾವಣೆಗಳು ಇರುವ ಹಿನ್ನೆಲೆಯಲ್ಲಿ ಸರ್ಕಾರ ಹೆಚ್ಚು ಬಡ್ಡಿದರ ಇಳಿಸುವ ಸಾಧ್ಯತೆ ಕಡಿಮೆ. ಈಗಿರುವ ಯಥಾಸ್ಥಿತಿಯನ್ನೇ, ಅಂದರೆ ಶೇ. 8.1ರ ಬಡ್ಡಿದರವನ್ನೇ ಮುಂದುವರಿಸುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ. ದೇಶದಲ್ಲಿ 7 ಕೋಟಿಗೂ ಹೆಚ್ಚು ಪಿಎಫ್ ಖಾತೆದಾರರಿದ್ದಾರೆ. ಆದ್ದರಿಂದ ಸರ್ಕಾರವೂ ಎಚ್ಚರಿಕೆಯಿಂದ ಹೆಜ್ಜೆ ಇಡಬಹುದು.

ಪಿಎಫ್ ಬಡ್ಡಿ ನಿರ್ಧಾರ ಹೇಗೆ?

2015ರಿಂದ ಇಪಿಎಫ್​ಒ ಸಂಸ್ಥೆ ಪಿಎಫ್ ಖಾತೆಗಳಲ್ಲಿನ ಹಣವನ್ನು ಷೇರು ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡುವ ಕಾರ್ಯ ಅರಂಭಿಸಿತು. ಅದರಿಂದ ಸಿಗುವ ರಿಟರ್ನ್ಸ್ ಆಧಾರದ ಮೇಲೆ ಪಿಎಫ್ ಖಾತೆಯ ಹಣಕ್ಕೆ ಬಡ್ಡಿ ದರವನ್ನು ನಿಗದಿ ಮಾಡಲಾಗುತ್ತದೆ. ಆದರೆ, 2018ರ ವರ್ಷ ಬಿಟ್ಟರೆ ಉಳಿದಂತೆ 2015ರಿಂದಲೂ ಬಡ್ಡಿ ದರ ಇಳಿಮುಖಗೊಂಡಿರುವುದು ಗಮನಾರ್ಹ.

ಇದನ್ನೂ ಓದಿOil Imports: ರಷ್ಯಾದಿಂದ ಭಾರತಕ್ಕೆ ಕಚ್ಛಾ ತೈಲ ಪೂರೈಕೆ ಇನ್ನಷ್ಟು ಹೆಚ್ಚಳ; ಪೆಟ್ರೋಲಿಯಂ ಕಂಪನಿಗಳಿಗೆ ಸುಗ್ಗಿಯೋ ಸುಗ್ಗಿ

ವಿವಿಧ ವರ್ಷಗಳಲ್ಲಿ ಪಿಎಫ್ ಹಣಕ್ಕೆ ಇದ್ದ ಬಡ್ಡಿ:

2015-16: ಶೇ. 8.60

2016-17: ಶೇ. 8.65

2017-18: ಶೇ. 8.55

2018-19: ಶೇ. 8.65

2019-20: ಶೇ. 8.50

2020-21: ಶೇ. 8.50

2021-22: ಶೇ. 8.10

ಇನ್ನಷ್ಟು ವ್ಯವಹಾರಗಳ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ