ಇಪಿಎಫ್​ಒ 3.0, ಬರಲಿದೆ ಎಟಿಎಂ ವಿತ್​ಡ್ರಾಯಲ್, ಯುಪಿಐ ವಿತ್​ಡ್ರಾಯಲ್ ಇತ್ಯಾದಿ ಸೌಲಭ್ಯ

EPFO 3.0 to be rolled out soon: 2025ರ ಜೂನ್​ನಲ್ಲಿ ಬರಬೇಕಿದ್ದ ಇಪಿಎಫ್​ಒ 3.0 ಕೆಲ ತಾಂತ್ರಿಕ ಕಾರಣಗಳಿಂದ ಜಾರಿಯಲ್ಲಿ ವಿಳಂಬವಾಗಿದೆ. ಸದ್ಯದಲ್ಲೇ ಅದು ಜಾರಿಗೊಳ್ಳುವ ಸಾಧ್ಯತೆ ಇದೆ. ಹೊಸ ಫೀಚರ್​ಗಳು ಈ ಹೊಸ ಇಪಿಎಫ್​ಒ ಸಿಸ್ಟಂನಲ್ಲಿ ಇರಲಿವೆ. ಎಟಿಎಂಗಳಲ್ಲಿ ಪಿಎಫ್ ಹಣ ವಿತ್​​ಡ್ರಾ ಮಾಡುವುದು, ಯುಪಿಐ ಮೂಲಕ ಪಿಎಫ್ ಹಣ ಪಡೆಯುವುದು ಇತ್ಯಾದಿ ಫೀಚರ್ಸ್ ಇವೆ.

ಇಪಿಎಫ್​ಒ 3.0, ಬರಲಿದೆ ಎಟಿಎಂ ವಿತ್​ಡ್ರಾಯಲ್, ಯುಪಿಐ ವಿತ್​ಡ್ರಾಯಲ್ ಇತ್ಯಾದಿ ಸೌಲಭ್ಯ
ಇಪಿಎಪ್​ಒ

Updated on: Aug 28, 2025 | 12:23 PM

ನವದೆಹಲಿ, ಆಗಸ್ಟ್ 28: ಉದ್ಯೋಗಿಗಳ ಭವಿಷ್ಯ ನಿದಿ ಸಂಸ್ಥೆಯಾದ ಇಪಿಎಫ್​ಒ (EPFO) ಇದೀತ ತನ್ನ ಪ್ಲಾಟ್​ಫಾರ್ಮ್ ಅನ್ನು ಮತ್ತೆ ಅಪ್​ಗ್ರೇಡ್ ಮಾಡಿದೆ. ಸದ್ಯದಲ್ಲೇ ಹೊಸ ಇಪಿಎಫ್​ಒ 3.0 ಸಿಸ್ಟಂ ಚಾಲ್ತಿಗೆ ಬರಲಿದೆ. ಪ್ರಾವಿಡೆಂಟ್ ಫಂಡ್ ಹಣದ ನಿರ್ವಹಣೆ ಮತ್ತಷ್ಟು ಸುಲಭಗೊಳ್ಳಲಿದೆ. ಸರ್ವಿಸ್ ವೇಗ, ಪಾರದರ್ಶಕತೆ ಹೆಚ್ಚಲಿದೆ. ಭಾರತದ ಐಟಿ ದಿಗ್ಗಜರಾದ ಇನ್ಫೋಸಿಸ್, ವಿಪ್ರೋ ಮತ್ತು ಟಿಸಿಎಸ್ ನೆರವಿನಿಂದ ಇಪಿಎಫ್​ಒ ಪ್ಲಾಟ್​ಫಾರ್ಮ್ ಅನ್ನು ಅಪ್​ಗ್ರೇಡ್ ಮಾಡಲಾಗುತ್ತಿದೆ.

2025ರ ಜೂನ್ ತಿಂಗಳಲ್ಲೇ ಇಪಿಎಫ್​ಒ 3.0 ಸಿಸ್ಟಂ ಜಾರಿಗೆ ಬರಬೇಕಿತ್ತು. ಆದರೆ, ತಾಂತ್ರಿಕ ಪರೀಕ್ಷೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಅದರ ಜಾರಿ ವಿಳಂಬವಾಗಿದೆ. ಸದ್ಯದಲ್ಲೇ ಇದು ರೋಲೌಟ್ ಆಗುವ ನಿರೀಕ್ಷೆ ಇದೆ. ಈ ಇಪಿಎಫ್​ಒ 3.0 ಸಿಸ್ಟಂನಲ್ಲಿ ಏನೆಲ್ಲಾ ವಿಶೇಷತೆಗಳಿವೆ? ಇಲ್ಲಿದೆ ಹೈಲೈಟ್ಸ್:

ಎಟಿಎಂಗಳಲ್ಲಿ ಕ್ಯಾಷ್ ವಿತ್​ಡ್ರಾಯಲ್

ಪಿಎಫ್ ಖಾತೆ ಹೊಂದಿರುವವರು ಎಟಿಎಂಗಳಿಂದ ನೇರವಾಗಿ ಹಣ ವಿತ್​ಡ್ರಾ ಮಾಡಬಹುದು. ಆದರೆ, ಪಿಎಫ್ ಖಾತೆದಾರರ ಯುಎಎನ್ ಅಥವಾ ಯೂನಿವರ್ಸಲ್ ಅಕೌಂಟ್ ನಂಬರ್ ಸಕ್ರಿಯಗೊಂಡಿರಬೇಕು. ಮತ್ತು ಬ್ಯಾಂಕ್ ಖಾತೆ ಆಧಾರ್ ಜೊತೆ ಲಿಂಕ್ ಆಗಿರಬೇಕು. ಆದರೆ ಎಷ್ಟು ಮೊತ್ತದ ಹಣ ವಿತ್​ಡ್ರಾ ಮಾಡಬಹುದು ಎಂಬಿತ್ಯಾದಿ ವಿವರ ಇನ್ನೂ ಬಹಿರಂಗಗೊಂಡಿಲ್ಲ.

ಇದನ್ನೂ ಓದಿ: ಇಪಿಎಫ್ ಅಕೌಂಟ್​ನಲ್ಲಿ ಎಷ್ಟೇ ಹಣ ಇದ್ದರೂ ಖಾತೆದಾರ ಸತ್ತರೆ ಕುಟುಂಬಕ್ಕೆ ಪರಿಹಾರ: ಹೊಸ ನಿಯಮ ಜಾರಿಗೆ

ಯುಪಿಐ ಮೂಲಕ ಹಣ ವರ್ಗಾವಣೆ

ಎಟಿಎಂ ಬಳಸಿ ಪಿಎಫ್ ಹಣ ವಿತ್​ಡ್ರಾ ಮಾಡಬಹುದಾದಂತೆ ಯುಪಿಐ ಮೂಲಕವೂ ಪಿಎಫ್ ಹಣವನ್ನು ವರ್ಗಾವಣೆ ಮಾಡಿಕೊಳ್ಳಬಹುದು.

ಆನ್​ಲೈನ್​ನಲ್ಲಿ ಕ್ಲೇಮ್ ಪ್ರಕ್ರಿಯೆ ಸರಳ

ಇಪಿಎಪ್​ಒ 3.0 ವ್ಯವಸ್ಥೆಯಲ್ಲಿ ಪಿಎಫ್ ಹಣಕ್ಕೆ ಕ್ಲೇಮ್ ಸಲ್ಲಿಸುವ ಪ್ರಕ್ರಿಯೆ ಮತ್ತಷ್ಟು ಸರಳಗೊಳ್ಳಲಿದೆ.

ಡೆತ್ ಕ್ಲೇಮ್ ಸೆಟಲ್ಮೆಂಟ್ ವೇಗ ಹೆಚ್ಚಳ

ಪಿಎಫ್ ಖಾತೆದಾರರು ನಿಧನ ಹೊಂದಿದಾಗ ಅದರ ನಾಮಿನಿಗಳು ಕ್ಲೇಮ್ ಸಲ್ಲಿಸಿದಾಗ ಅದನ್ನು ತ್ವರಿತವಾಗಿ ವಿಲೇವಾರಿ ಮಾಡುವಂತಹ ವ್ಯವಸ್ಥೆಯನ್ನು ನಿರೀಕ್ಷಿಸಬಹುದು. ಈಗ ಡೆತ್ ಕ್ಲೇಮ್ ಸಂದರ್ಭದಲ್ಲಿ ನಾಮಿನಿ ಅಪ್ರಾಪ್ತರಾಗಿದ್ದರೆ ಗಾರ್ಡಿಯನ್ ಸರ್ಟಿಫಿಕೇಟ್ ಸಲ್ಲಿಸಬೇಕಿತ್ತು. ಆದರೆ, ಹೊಸ ವ್ಯವಸ್ಥೆಯಲ್ಲಿ ಈ ಪ್ರಕ್ರಿಯೆಯನ್ನು ತೆಗೆಯಲಾಗಿದೆ.

ಇದನ್ನೂ ಓದಿ: ಕೆಲಸ ಬಿಡೋವರೆಗೂ ಕಾಯಬೇಕಿಲ್ಲ… 10 ವರ್ಷಕ್ಕೊಮ್ಮೆ ಪೂರ್ಣ ಇಪಿಎಫ್ ಹಣ ಹಿಂಪಡೆಯಲು ಅವಕಾಶ

ಮೊಬೈಲ್ ಬಳಕೆದಾರರಿಗೆ ಸುಲಭ

ಸ್ಮಾರ್ಟ್​ಫೋನ್​ನಲ್ಲಿ ಇಪಿಎಫ್​ಒದ ಆ್ಯಪ್​ಗಳಲ್ಲಿ ಎಲ್ಲಾ ಫೀಚರ್​ಗಳು ಸುಲಭವಾಗಿ ಸಿಗುವ ರೀತಿಯಲ್ಲಿ ಡಿಸೈನ್ ಮಾಡಲಾಗಿರುತ್ತದೆ. ಸುಲಭವಾಗಿ ಪಿಎಫ್ ಖಾತೆಗಳನ್ನು ವೀಕ್ಷಿಸಲು, ಕ್ಲೇಮ್ ಸಲ್ಲಿಸಲು ಸಾಧ್ಯವಾಗುವಂತೆ ರೂಪಿಸಲಾಗಿರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ