ಇಪಿಎಫ್ಒ
ಉದ್ಯೋಗಿಗಳ ನಿವೃತ್ತಿಕಾಲದ ಭದ್ರಗೆಗಾಗಿ ಸರ್ಕಾರ ರೂಪಿಸಿದ ಕೆಲ ಪ್ರಮುಖ ಸ್ಕೀಮ್ಗಳಲ್ಲಿ ಇಪಿಎಫ್ ಒಂದು. ಇದು ಕೇವಲ ಸರ್ಕಾರಿ ಉದ್ಯೋಗಿಗಳಷ್ಟೇ ಅಲ್ಲ ಖಾಸಗಿ ವಲಯದ ಉದ್ಯೋಗಿಗಳಿಗೂ ಲಭ್ಯ ಇರುವ ಯೋಜನೆ. ಎಲ್ಲಾ ಖಾಸಗಿ ಸಂಸ್ಥೆ ಉದ್ಯೋಗಿಗಳಿಗೂ ಕೆಲಸಕ್ಕೆ ಸೇರುವಾಗ ಅವರ ಹೆಸರಿನಲ್ಲಿ ಇಪಿಎಫ್ ಖಾತೆ (EPF- employee provident fund) ತೆರೆಯಲಾಗುತ್ತದೆ. ಮೂಲ ವೇತನದ ಶೇ. 12ರಷ್ಟು ಹಣವನ್ನು ಕಡಿತಗೊಳಿಸಿ ಈ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ. ಕಂಪನಿ ಕೂಡ ಇಷ್ಟೇ ಮೊತ್ತವನ್ನು ಖಾತೆಗೆ ತುಂಬಿಸುತ್ತದೆ. ಸರ್ಕಾರ ಪ್ರತೀ ವರ್ಷ ಈ ಖಾತೆಯಲ್ಲಿರುವ ಮೊತ್ತಕ್ಕೆ ಬಡ್ಡಿ ಸೇರಿಸಿ ಕೊಡುತ್ತದೆ. ಸದ್ಯ ಇಪಿಎಫ್ಗೆ ಶೇ. 8.15ರಷ್ಟು ಬಡ್ಡಿ ನೀಡಲಾಗುತ್ತಿದೆ.
ನಿವೃತ್ತಿಕಾಲಕ್ಕೆ ಭದ್ರತೆಗೆಂದು ಇಪಿಎಫ್ ಸ್ಕೀಮ್ ನಡೆಸಲಾಗುತ್ತಿದೆಯಾದರೂ ಉದ್ಯೋಗಿಗೆ ಮಧ್ಯದಲ್ಲಿ ತುರ್ತು ಸಂದರ್ಭಕ್ಕೆ ಹಣದ ಅವಶ್ಯಕತೆ ಎದುರಾದಾಗ ಮಾತ್ರ ಇಪಿಎಫ್ ಖಾತೆಯಲ್ಲಿರುವ ಒಂದಷ್ಟು ಭಾಗದ ಹಣವನ್ನು ಹಿಂಪಡೆಯಲು ಅವಕಾಶ ಇರುತ್ತದೆ.
ಇದನ್ನೂ ಓದಿ: Home Loan Tricks: ಗೃಹಸಾಲ ಕಟ್ಟಿಕಟ್ಟಿ ಸಾಕಾಗಿದೆಯಾ? ಹೋಲ್ ಲೋನ್ ಬೇಗ ತೀರಿಸುವ ಟ್ರಿಕ್ಸ್ ಇಲ್ಲಿದೆ
ಇಪಿಎಫ್ ಹಿಂಪಡೆಯುವ ನಿಯಮಗಳು ಇಂತಿವೆ:
- ಇಪಿಎಫ್ಒ ರೂಪಿಸಿರುವ ನಿಯಮಗಳ ಪ್ರಕಾರ ಉದ್ಯೋಗಿ ನಿವೃತ್ತಿ ಹೊಂದಿದ ಬಳಿಕ ಪಿಎಫ್ ಹಣ ಹಿಂಪಡೆಯಬೇಕು. ಈ ನಿವೃತ್ತಿ ವಯಸ್ಸು 55 ವರ್ಷ ಎಂದು ನಿಗದಿ ಮಾಡಲಾಗಿದೆ.
- ನಿವೃತ್ತಿಗೆ ಒಂದು ವರ್ಷ ಮುನ್ನ, ಅಂದರೆ 54ನೇ ವಯಸ್ಸಿನಲ್ಲಿ ಶೇ. 90ರಷ್ಟು ಪಿಎಫ್ ಮೊತ್ತವನ್ನು ವಿತ್ಡ್ರಾ ಮಾಡಬಹುದು.
- ಉದ್ಯೋಗ ಕಳೆದುಕೊಂಡಾಗ, ಒಂದು ತಿಂಗಳ ಬಳಿಕ ಶೇ. 75ರಷ್ಟು ಪಿಎಫ್ ಹಣ ಹಿಂಪಡೆಯಬಹುದು. ಎರಡು ತಿಂಗಳ ಬಳಿಕ ಇಡೀ ಪಿಎಫ್ ಮೊತ್ತವನ್ನು ಬೇಕಾದರೆ ಪಡೆಯಬಹುದು.
- ಅನಾರೋಗ್ಯ ಇತ್ಯಾದಿ ತುರ್ತು ಸಂದರ್ಭಗಳು ಬಂದಾಗಲೂ ಉದ್ಯೋಗಿ ತನ್ನ ಪಿಎಫ್ ಖಾತೆಯಿಂದ ಅಡ್ವಾನ್ಸ್ ರೂಪದಲ್ಲಿ ಹಣ ಹಿಂಪಡೆಯಬಹುದು.
ಇದನ್ನೂ ಓದಿ: ಪಬ್ಲಿಕ್ ಪ್ರಾವಿಡೆಂಟ್ ಫಂಡ್, ವಾಲಂಟರಿ ಪ್ರಾವಿಡೆಂಟ್ ಫಂಡ್, ನ್ಯಾಷನಲ್ ಪೆನ್ಷನ್ ಸಿಸ್ಟಂ; ಇವುಗಳಲ್ಲಿ ಯಾವುದರಲ್ಲಿ ಹೂಡಿಕೆ ಉತ್ತಮ?
ಇಪಿಎಫ್ ಹಣಕ್ಕೆ ಮತ್ತು ಅದನ್ನು ಹಿಂಪಡೆಯುವುದಕ್ಕೆ ತೆರಿಗೆ ಅನ್ವಯ ಆಗುತ್ತದಾ?
- ಇಪಿಎಫ್ ಖಾತೆಗೆ ಕಂಪನಿ ವತಿಯಿಂದ ತುಂಬಿಸಲಾಗುವ ಹಣ ಮತ್ತು ಅದರ ಮೇಲಿನ ಬಡ್ಡಿಗೆ ತೆರಿಗೆ ಅನ್ವಯ ಆಗುತ್ತದೆ.
- ಇಪಿಎಫ್ ಖಾತೆಗೆ ಉದ್ಯೋಗಿಯ ಸಂಬಳದಿಂದ ಕಡಿತ ಆಗುವ ಹಣಕ್ಕೂ ತೆರಿಗೆ ಅನ್ವಯ ಆಗುತ್ತದೆ.
- ಐದು ವರ್ಷ ಸೇವೆಗಿಂತ ಮುನ್ನವೇ ಇಪಿಎಫ್ ಖಾತೆಯಿಂದ 50,000ಕ್ಕೂ ಹೆಚ್ಚು ಹಣವನ್ನು ವಿತ್ಡ್ರಾ ಮಾಡಿದರೆ ಆ ಮೊತ್ತಕ್ಕೆ ಟಿಡಿಎಸ್ ಕಡಿತ ಆಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ