International Girl Child Day 2023: ನಿಮ್ಮ ಹೆಣ್ಮಗುವಿನ ಭವಿಷ್ಯಕ್ಕೆ ಈ ಯೋಜನೆ ಮಾಡಿಸಲು ಮರೆಯದಿರಿ; ಇದು ನಿಮ್ಮ ಮಗುವಿಗೆ ನೀಡುವ ಗಿಫ್ಟ್

|

Updated on: Oct 11, 2023 | 11:44 AM

Sukanya Samriddhi Yojana: ಇವತ್ತು 11 ಅಕ್ಟೋಬರ್, ಅಂತಾರಾಷ್ಟ್ರೀಯ ಹೆಣ್ಮಗು ದಿನ. ಹೆಣ್ಮಗುವಿನ ಭವಿಷ್ಯ, ವಿದ್ಯಾಭ್ಯಾಸ ಮತ್ತು ಪೋಷಕರ ತೆರಿಗೆ ಉಳಿತಾಯ ನೀಡುವ ಒಂದು ಸ್ಕೀಮ್ ಸುಕನ್ಯಾ ಸಮೃದ್ಧಿ ಯೋಜನೆ? 10 ವರ್ಷ ವಯಸ್ಸಿನವರೆಗಿನ ಹೆಣ್ಮಗುವಿನ ಹೆಸರಿನಲ್ಲಿ ಈ ಸ್ಕೀಮ್ ತೆರೆಯಬಹುದು. ನಿಮಗೆ 10 ವರ್ಷದೊಳಗಿನ ಹೆಣ್ಮಗು ಇದ್ದರೆ ಇಂದೇ ಈ ಯೋಜನೆ ಪಡೆದು ಆ ಹುಡುಗಿಗೆ ಉಡುಗೊರೆ ನೀಡಿ.

International Girl Child Day 2023: ನಿಮ್ಮ ಹೆಣ್ಮಗುವಿನ ಭವಿಷ್ಯಕ್ಕೆ ಈ ಯೋಜನೆ ಮಾಡಿಸಲು ಮರೆಯದಿರಿ; ಇದು ನಿಮ್ಮ ಮಗುವಿಗೆ ನೀಡುವ ಗಿಫ್ಟ್
ಹೆಣ್ಮಕ್ಕಳು
Follow us on

ಇವತ್ತು 11 ಅಕ್ಟೋಬರ್, ಅಂತಾರಾಷ್ಟ್ರೀಯ ಹೆಣ್ಮಗು ದಿನ (International Girl Child Day 2023). ಇವತ್ತಿನ ಕಾಲಘಟ್ಟದಲ್ಲಿ ಹೆಣ್ಣು ಅಬಲೆಯಾಗಿ ಉಳಿಯಬೇಕಿಲ್ಲ. ಬಹುತೇಕ ಕ್ಷೇತ್ರಗಳಲ್ಲಿ ಗಂಡಿಗೆ ಸರಿಸಮಾನವಾಗಿ ಹೆಣ್ಣು ಪೈಪೋಟಿ ನೀಡಬಲ್ಲುಳು. ವಿದ್ಯಾವಂತ ಹೆಣ್ಣು ಯಾವುದೇ ಕುಟುಂಬದ ಅಮೂಲ್ಯ ಆಸ್ತಿ. ಹೆಣ್ಣಿಗೆ ಅವಶ್ಯಕ ಶಿಕ್ಷಣ ಇತ್ಯಾದಿ ಸೌಕರ್ಯ ಒದಗಿಸುವುದು ಪೋಷಕರ ಆದ್ಯ ಕರ್ತವ್ಯ. ಇವತ್ತು ಹೆಣ್ಮಗು ದಿನವಾದ್ದರಿಂದ ಹೆಣ್ಮಕ್ಕಳಿಗೆಂದು ಸರ್ಕಾರ ರೂಪಿಸಿರುವ ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana) ಬಗ್ಗೆ ಮಾಹಿತಿ ನೀಡುವುದು ಬಹಳ ಸಾಂದರ್ಭಿಕ ಎನಿಸುತ್ತದೆ.

ಏನಿದು ಸುಕನ್ಯಾ ಸಮೃದ್ಧಿ ಯೋಜನೆ?

ಇದು ಹೆಣ್ಮಗುವಿನ ಭವಿಷ್ಯ, ವಿದ್ಯಾಭ್ಯಾಸ ಮತ್ತು ಪೋಷಕರ ತೆರಿಗೆ ಉಳಿತಾಯ ನೀಡುವ ಒಂದು ಸ್ಕೀಮ್. 10 ವರ್ಷ ವಯಸ್ಸಿನವರೆಗಿನ ಹೆಣ್ಮಗುವಿನ ಹೆಸರಿನಲ್ಲಿ ಈ ಸ್ಕೀಮ್ ತೆರೆಯಬಹುದು. ಈ ಸ್ಕೀಮ್ 21 ವರ್ಷಕ್ಕೆ ಮೆಚೂರ್ ಆಗುತ್ತದೆ. 15 ವರ್ಷಗಳ ಕಾಲ ಹೂಡಿಕೆ ಮಾಡಬಹುದು. ತಿಂಗಳಿಗೊಮ್ಮೆಯಂತೆಯೋ ಅಥವಾ ವರ್ಷಕ್ಕೊಮ್ಮೆಯಂತೆಯೋ ಇದರ ಮೇಲೆ ಹೂಡಿಕೆ ಮಾಡಬಹುದು. ಇದರಲ್ಲಿ ತೊಡಗಿಸುವ ಹಣಕ್ಕೆ ತೆರಿಗೆ ರಿಯಾಯಿತಿ ಇರುತ್ತದೆ.

ಇದನ್ನೂ ಓದಿ: ಪಬ್ಲಿಕ್ ಪ್ರಾವಿಡೆಂಟ್ ಫಂಡ್, ವಾಲಂಟರಿ ಪ್ರಾವಿಡೆಂಟ್ ಫಂಡ್, ನ್ಯಾಷನಲ್ ಪೆನ್ಷನ್ ಸಿಸ್ಟಂ; ಇವುಗಳಲ್ಲಿ ಯಾವುದರಲ್ಲಿ ಹೂಡಿಕೆ ಉತ್ತಮ?

ಈ ಯೋಜನೆ ಮೆಚ್ಯೂರ್ ಆಗುವುದು 21 ವರ್ಷಕ್ಕಾದರೂ ಹೆಣ್ಮಗುವಿನ ವಯಸ್ಸು 18 ವರ್ಷವಾದ ಬಳಿಕ ಶೇ. 50ರಷ್ಟರವರೆಗಿನ ಮೊತ್ತವನ್ನು ಹಿಂಪಡೆಯುವ ಅವಕಾಶ ಇರುತ್ತದೆ.

ಸುಕನ್ಯಾ ಸಮೃದ್ದಿ ಯೋಜನೆಯಲ್ಲಿ ಮಾಡಲಾಗುವ ಹೂಡಿಕೆಗೆ ವಾರ್ಷಿಕವಾಗಿ ಶೇ. 8ರಷ್ಟು ಬಡ್ಡಿ ನೀಡಲಾಗುತ್ತದೆ. ಈ ಬಡ್ಡಿದರವನ್ನು ಪ್ರತೀ ವರ್ಷವೂ ಸರ್ಕಾರ ಪರಿಷ್ಕರಿಸುತ್ತದೆ. ಕೆಲವೊಮ್ಮೆ ಬಡ್ಡಿ ಹೆಚ್ಚಬಹುದು, ಅಥವಾ ಕಡಿಮೆಯ ಆಗಬಹುದು.

ಎಷ್ಟು ಹೂಡಿಕೆಗೆ ಎಷ್ಟು ರಿಟರ್ನ್ ಸಿಗುತ್ತದೆ?

ನೀವು ಈ ವರ್ಷ (2023) ಸುಕನ್ಯಾ ಸಮೃದ್ಧಿ ಯೋಜನೆ ಆರಂಭಿಸುತ್ತೀರಿ ಎಂದಿಟ್ಟುಕೊಳ್ಳಿ. 2044ಕ್ಕೆ ಅದು ಮೆಚ್ಯೂರ್ ಆಗುತ್ತದೆ. ಒಂದು ವರ್ಷಕ್ಕೆ 1.5 ಲಕ್ಷ ರೂ ಅನ್ನು 15 ವರ್ಷ ಹೂಡಿಕೆ ಮಾಡುತ್ತೀರಿ. ನಿಮ್ಮ ಒಟ್ಟು ಹೂಡಿಕೆ 22,50,000 ರೂ ಆಗುತ್ತದೆ. 2044ಕ್ಕೆ ಮೆಚ್ಯೂರ್ ಆದಾಗ ಬಡ್ಡಿ ಎಲ್ಲವೂ ಸೇರಿ ನಿಮ್ಮ ಹೂಡಿಕೆಯ ಮೊತ್ತ 67,34,534 ರೂ ಆಗುತ್ತದೆ. ಅಂದರೆ, ನಿಮ್ಮ ಹೂಡಿಕೆಯು ಮೂರು ಪಟ್ಟು ಹೆಚ್ಚು ಬೆಳೆದಿರುತ್ತದೆ.

ಇದನ್ನೂ ಓದಿ: Investment Tips: ಒಂದು ಕೋಟಿ ರೂ ಕ್ರೋಢೀಕರಿಸಲು ತಿಂಗಳಿಗೆ ಎಷ್ಟು ಹೂಡಿಕೆ ಮಾಡಬೇಕು?

ಇದರ ಜೊತೆಗೆ, ನೀವು ಪ್ರತೀ ವರ್ಷ ಒಂದೂವರೆ ಲಕ್ಷ ರೂ ಹಣಕ್ಕೆ ಉಳಿಸುವ ತೆರಿಗೆಯನ್ನೂ ಗಣಿಸಿದರೆ ಸುಕನ್ಯಾ ಸಮೃದ್ಧಿ ಯೋಜನೆಯಿಂದ ಲಾಭ ಹೆಚ್ಚೇ ಇರುತ್ತದೆ. ನಿಮಗೆ 10 ವರ್ಷದೊಳಗಿನ ಹೆಣ್ಮಗು ಇದ್ದರೆ ಇಂದೇ ಈ ಯೋಜನೆ ಪಡೆದು ಆ ಹುಡುಗಿಗೆ ಉಡುಗೊರೆ ನೀಡಿ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:43 am, Wed, 11 October 23