ಅಪ್ಪ ಎಂದರೆ ಅದು ಸ್ವಾವಲಂಬನೆ, ರಕ್ಷಣೆಯ ಸಂಕೇತ. ಇಡೀ ಕುಟುಂಬದ ಒಳಿತಿಗಾಗಿ ಜೀವ ಸವೆಸುವ ವ್ಯಕ್ತಿ. ಮಕ್ಕಳಿಗೆ ಜೀವನದ ಪಾಠ ಕಲಿಸುವ ಮಾಸ್ತರ. ಇವತ್ತು ಜೂನ್ 16, ವಿಶ್ವ ಅಪ್ಪಂದಿರ ದಿನ. ಜಗತ್ತಿನ ಎಲ್ಲರ ಅಪ್ಪಂದಿರಿಗೆ ಗೌರವ ಸಲ್ಲಿಸಬಹುದು. ಗೌರವ ಸಲ್ಲಿಸುವುದಷ್ಟೇ ಅಲ್ಲ, ನಿಮ್ಮ ತಂದೆಗೆ ಉಡುಗೊರೆ ಕೊಡಬೇಕೆಂದಿದ್ದರೆ ಒಂದಷ್ಟು ಒಳ್ಳೆಯ ಐಡಿಯಾಗಳು ಇಲ್ಲಿವೆ. ಅದರಲ್ಲೂ ತಾವು ಜೀವನವಿಡೀ ದುಡಿದ ಹಣವನ್ನು ಸಂಸಾರಕ್ಕಾಗಿ ವಿನಿಯೋಗಿಸಿದ ಅಪ್ಪನಿಗೆ ನಿಮ್ಮಿಂದ ಸಾಧ್ಯವಾದರೆ ಹಣಕಾಸು ನೆರವು ಒದಗಿಸುವುದು ಬಹಳ ಉತ್ತಮ.
ನಿಮ್ಮ ತಂದೆಗೆ ತುರ್ತಾಗಿ ಹಣದ ಅಗತ್ಯ ಬೀಳಬಹುದು. ಅಂಥ ಸಂದರ್ಭದಲ್ಲಿ ಮಕ್ಕಳ ಬಳಿ ಅವರು ಹಣ ಕೇಳಲು ಹಿಂದೆ ಮುಂದೆ ನೋಡಬಹುದು. ನೀವು ಅವರ ತುರ್ತು ಅಗತ್ಯಕ್ಕೆಂದು ಒಂದಷ್ಟು ಹಣವನ್ನು ಎಫ್ಡಿಯಲ್ಲಿ ಇಡಿ. ಅಥವಾ ಆರ್ಡಿ ಮುಖಾಂತರ ನಿಯಮಿತವಾಗಿ ಎಮರ್ಜೆನ್ಸಿ ಫಂಡ್ ಸೇರಿಸುತ್ತಾ ಹೋಗಿ.
ಇದನ್ನೂ ಓದಿ: ITR filing: ಇನ್ಕಮ್ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡುವುದು ಹೇಗೆ? ಇಲ್ಲಿದೆ ಕ್ರಮ
ವಯಸ್ಸಾದ ಕಾಲಕ್ಕೆ ಸಾಲ ಇದ್ದರೆ ಅದು ಮಾನಸಿಕವಾಗಿ ಸಾಕಷ್ಟು ಬಾಧೆ ಮಾಡುತ್ತದೆ. ನಿಮ್ಮ ತಂದೆ ಯಾವುದೇ ಕಾರಣಕ್ಕಾದರೂ ಸಾಲ ಮಾಡಿದ್ದರೆ ಅದನ್ನು ತೀರಿಸಿರಿ. ಇದು ನಿಮ್ಮ ತಂದೆಗೆ ಕೊಡುವ ಅತ್ಯುತ್ತಮ ಹಣಕಾಸು ಗಿಫ್ಟ್ ಆಗಿರುತ್ತದೆ. ಎಷ್ಟೆಂದರೂ ಅವರು ನಿಮಗೆ ಮತ್ತು ಕುಟುಂಬಕ್ಕೋಸ್ಕರವೇ ಸಾಲ ಮಾಡಿರಬಹುದು.
ನಿಮ್ಮ ತಂದೆ ಷೇರು ಮಾರುಕಟ್ಟೆ ಅಥವಾ ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆ ಮಾಡಿ ಗೊತ್ತಿರದಿದ್ದರೆ ಮೊದಲು ಆ ಕೆಲಸ ಮಾಡಿ. ಲಂಪ್ಸಮ್ ಹಣ ಇದ್ದರೆ ಹಾಕಬಹುದು. ಅಥವಾ ಎಸ್ಐಪಿ ಆರಂಭಿಸಬಹುದು.
ಇದನ್ನೂ ಓದಿ: ಟ್ಯಾಕ್ಸ್ ಸೇವಿಂಗ್ ಫಿಕ್ಸೆಡ್ ಡೆಪಾಸಿಟ್ನ ಲಾಕ್ ಇನ್ ಅವಧಿ ಐದರಿಂದ ಮೂರು ವರ್ಷಕ್ಕೆ ಇಳಿಸಲು ಬ್ಯಾಂಕುಗಳು ಸಜ್ಜು
ನಿಮ್ಮ ತಂದೆಗೆ ಆರೋಗ್ಯ ವಿಮೆ ಇಲ್ಲದೇ ಹೋಗಿದ್ದರೆ, ಮತ್ತು ನಿಮ್ಮ ಬಳಿ ಇಡೀ ಕುಟುಂಬಕ್ಕೆ ಕವರ್ ಆಗುವಂತಹ ಹೆಲ್ತ್ ಇನ್ಷೂರೆನ್ಸ್ ಪ್ಲಾನ್ ಇಲ್ಲದೇ ಇದ್ದರೆ ಮೊದಲು ಅದನ್ನು ಮಾಡಿಸಿ. ಫ್ಯಾಮಿಲಿ ಫ್ಲೋಟರ್ ಪ್ಲಾನ್ ಪಡೆದರೆ ನಿಮ್ಮ ತಂದೆ, ತಾಯಿಯನ್ನು ಒಳಗೊಂಡಂತೆ ಕುಟುಂಬದ ಎಲ್ಲರಿಗೂ ವಿಮಾ ಕವರೇಜ್ ಸಿಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ