FD Rates: ಎಸ್​ಬಿಐ, ಎಚ್​ಡಿಎಫ್​ಸಿ, ಐಸಿಐಸಿಐ; ಯಾವ ಬ್ಯಾಂಕಲ್ಲಿ ಹಿರಿಯ ನಾಗರಿಕರ ಎಫ್​ಡಿಗೆ ಹೆಚ್ಚು ಬಡ್ಡಿ?

| Updated By: Ganapathi Sharma

Updated on: Dec 19, 2022 | 12:01 PM

ಆರ್​ಬಿಐ ರೆಪೊ ದರ ಹೆಚ್ಚಿಸಿದ ಪರಿಣಾಮವಾಗಿ ವಿವಿಧ ಬ್ಯಾಂಕ್​ಗಳಲ್ಲಿ ಸಾಲದ ಮೇಲಿನ ಹಾಗೂ ಠೇವಣಿಗಳ ಮೇಲಿನ ಬಡ್ಡಿ ದರವೂ ತುಸು ಹೆಚ್ಚಾಗಿದೆ. ಎಸ್​ಬಿಐ, ಎಚ್​ಡಿಎಫ್​ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್​ಗಳು ಹಿರಿಯ ನಾಗರಿಕರ ಎಫ್​ಡಿಗೆ ನೀಡುತ್ತಿರುವ ಬಡ್ಡಿ ವಿವರ ಇಲ್ಲಿದೆ.

FD Rates: ಎಸ್​ಬಿಐ, ಎಚ್​ಡಿಎಫ್​ಸಿ, ಐಸಿಐಸಿಐ; ಯಾವ ಬ್ಯಾಂಕಲ್ಲಿ ಹಿರಿಯ ನಾಗರಿಕರ ಎಫ್​ಡಿಗೆ ಹೆಚ್ಚು ಬಡ್ಡಿ?
SBI vs ICICI vs HDFC vs PPF FD Rates 2023 Comparison of Latest Fixed Deposit Interest Rate
Follow us on

ಹಿರಿಯ ನಾಗರಿಕರ ಹೂಡಿಕೆಗೆ ಸ್ಥಿರ ಠೇವಣಿ (FD) ಕೂಡ ಒಂದು ಉತ್ತಮ ಆಯ್ಕೆಯಾಗಿದೆ. ಎಸ್​ಬಿಐ (SBI), ಎಚ್​ಡಿಎಫ್​ಸಿ (HDFC), ಐಸಿಐಸಿಐ ಬ್ಯಾಂಕ್​ (ICICI Bank) ಹಾಗೂ ಇತರ ಕೆಲವು ಬ್ಯಾಂಕ್​ಗಳು ಕಳೆದ ಕೆಲವು ತಿಂಗಳುಗಳಲ್ಲಿ ಹಿರಿಯ ನಾಗರಿಕರ ಮತ್ತು ಜನಸಾಮಾನ್ಯರ ಎಫ್​ಡಿ ಬಡ್ಡಿ ದರವನ್ನು (FD Rates) ಹೆಚ್ಚಿಸಿವೆ. ಆರ್​ಬಿಐ ಮೇ ತಿಂಗಳ ಬಳಿಕ ಈವರೆಗೆ ಒಟ್ಟಾರೆಯಾಗಿ ರೆಪೊ ದರವನ್ನು 225 ಮೂಲಾಂಶ ಹೆಚ್ಚಳ ಮಾಡಿದೆ. ಪರಿಣಾಮವಾಗಿ ವಿವಿಧ ಬ್ಯಾಂಕ್​ಗಳಲ್ಲಿ ಸಾಲದ ಮೇಲಿನ ಹಾಗೂ ಠೇವಣಿಗಳ ಮೇಲಿನ ಬಡ್ಡಿ ದರವೂ ತುಸು ಹೆಚ್ಚಾಗಿದೆ. ಎಸ್​ಬಿಐ, ಎಚ್​ಡಿಎಫ್​ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್​ಗಳು ಹಿರಿಯ ನಾಗರಿಕರ ಎಫ್​ಡಿಗೆ ನೀಡುತ್ತಿರುವ ಬಡ್ಡಿ ವಿವರ ಇಲ್ಲಿದೆ.

ಎಸ್​ಬಿಐ ಹಿರಿಯ ನಾಗರಿಕರ ಎಫ್​ಡಿ ಬಡ್ಡಿ ದರ

ಎಸ್​​ಬಿಐ ಬ್ಯಾಂಕ್ ಹಿರಿಯ ನಾಗರಿಕರ ಎಫ್​ಡಿಗೆ ಶೇಕಡಾ 7.25ರ ಬಡ್ಡಿ ನೀಡುತ್ತಿದೆ. ಹಿರಿಯ ನಾಗರಿಕರ ಎಲ್ಲ ಅವಧಿಯ ಎಫ್​ಡಿಗೆ ಎಸ್​ಬಿಐ ಬ್ಯಾಂಕ್ 50 ಮೂಲಾಂಶದಷ್ಟು ಹೆಚ್ಚು ಹೆಚ್ಚುವರಿ ಬಡ್ಡಿ ನೀಡುತ್ತಿದೆ. ಇತ್ತೀಚೆಗೆ ಬಡ್ಡಿ ದರವನ್ನು ಪರಿಷ್ಕರಿಸಿದ ಬಳಿಕ, 7 ದಿನಗಳಿಂದ ಆರಂಭವಾಗಿ 10 ವರ್ಷಗಳ ವರೆಗಿನ ವಿವಿಧ ಅವಧಿಯ ಹಿರಿಯ ನಾಗರಿಕರ ಎಫ್​ಡಿಗೆ ಎಸ್​ಬಿಐ ಶೇಕಡಾ 3.5ರಿಂದ 7.25ರ ವರೆಗೆ ಬಡ್ಡಿ ನೀಡುತ್ತಿದೆ. ಡಿಸೆಂಬರ್ 13ರಿಂದ ಈ ಬಡ್ಡಿ ದರಗಳು ಜಾರಿಯಲ್ಲಿವೆ.

  • 1 ವರ್ಷ ಮೇಲ್ಪಟ್ಟ, 2 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್​ಡಿ ಬಡ್ಡಿ ದರ – 7.25%
  • 2 ವರ್ಷ ಮೇಲ್ಪಟ್ಟು 3 ವರ್ಷಗಳಿಂದ ಕಡಿಮೆ ಅವಧಿಯ ಎಫ್​ಡಿ ಬಡ್ಡಿ ದರ – 7.25%
  • 5 ವರ್ಷಗಳಿಂದ 10 ವರ್ಷಗಳ ವರೆಗಿನ ಎಫ್​ಡಿ ಬಡ್ಡಿ ದರ – 7.25%

ಎಚ್​ಡಿಎಫ್​ಸಿ ಬ್ಯಾಂಕ್​ ಹಿರಿಯ ನಾಗರಿಕರ ಎಫ್​ಡಿ ಬಡ್ಡಿ ದರ

ಎಚ್​​ಡಿಎಫ್​ಸಿ ಬ್ಯಾಂಕ್​ 7 ದಿನಗಳಿಂದ 10 ವರ್ಷಗಳ ವರೆಗಿನ ವಿವಿಧ ಅವಧಿಯ ಹಿರಿಯ ನಾಗರಿಕರ ಎಫ್​ಡಿಗೆ ಶೇಕಡಾ 3.5ರಿಂದ 7.75ರ ವರೆಗೆ ಬಡ್ಡಿ ನೀಡುತ್ತಿದೆ. ಪರಿಷ್ಕೃತ ಬಡ್ಡಿ ದರ ಡಿಸೆಂಬರ್ 14ರಿಂದ ಜಾರಿಯಲ್ಲಿದೆ.

  • 1 ವರ್ಷದಿಂದ 15 ತಿಂಗಳವರೆಗಿನ ಎಫ್​ಡಿ ಬಡ್ಡಿ – 7.00%
  • 15 ತಿಂಗಳುಗಳಿಂದ 18 ತಿಂಗಳ ವರೆಗಿನ ಎಫ್​ಡಿ ಬಡ್ಡಿ – 7.50%
  • 18 ತಿಂಗಳುಗಳಿಂದ 21 ತಿಂಗಳ ವರೆಗಿನ ಎಫ್​ಡಿ ಬಡ್ಡಿ – 7.00%
  • 21 ತಿಂಗಳುಗಳಿಂದ 2 ವರ್ಷ ಅವಧಿಯ ಎಫ್​ಡಿ ಬಡ್ಡಿ – 7.50%
  • 2 ವರ್ಷ 1 ದಿನದಿಂದ 3 ವರ್ಷ ಅವಧಿಯ ಎಫ್​ಡಿ ಬಡ್ಡಿ – 7.50%
  • 3 ವರ್ಷ 1 ದಿನದಿಂದ ಆರಂಭವಾಗಿ 5 ವರ್ಷಗಳ ವರೆಗಿನ ಎಫ್​ಡಿ ಬಡ್ಡಿ – 7.50%
  • 5 ವರ್ಷ 1 ದಿನದಿಂದ ಆರಂಭವಾಗಿ 10 ವರ್ಷಗಳ ವರೆಗಿನ ಎಫ್​​ಡಿ ಬಡ್ಡಿ – 7.75%

ಇದನ್ನೂ ಓದಿ: CIBIL Score: ಸಿಬಿಲ್ ಸ್ಕೋರ್ ಉತ್ತಮವಾಗಿರಬೇಕೇ? ಹಾಗಿದ್ದರೆ ಈ ತಪ್ಪುಗಳನ್ನು ಮಾಡಬೇಡಿ

ಐಸಿಐಸಿಐ ಬ್ಯಾಂಕ್ ಹಿರಿಯ ನಾಗರಿಕರ ಎಫ್​ಡಿ ಬಡ್ಡಿ ದರ

ಐಸಿಐಸಿಐ ಬ್ಯಾಂಕ್ 7 ದಿನಗಳಿಂದ 10 ವರ್ಷಗಳ ವರೆಗಿನ ವಿವಿಧ ಅವಧಿಯ ಹಿರಿಯ ನಾಗರಿಕರ ಎಫ್​ಡಿಗೆ ಶೇಕಡಾ 3.5ರಿಂದ 7.50 ವರೆಗೆ ಬಡ್ಡಿ ನೀಡುತ್ತಿದೆ. ಡಿಸೆಂಬರ್ 16ರಿಂದ ಈ ಬಡ್ಡಿ ದರ ಚಾಲ್ತಿಯಲ್ಲಿದೆ.

  • 1 ವರ್ಷದಿಂದ 389 ದಿನಗಳ ಅವಧಿಯ ಎಫ್​​ಡಿ ಬಡ್ಡಿ ದರ – 7.10%
  • 390 ದಿನಗಳಿಂದ 15 ತಿಂಗಳ ಅವಧಿಯ ಎಫ್​ಡಿ ಬಡ್ಡಿ ದರ – 7.10%
  • 15 ತಿಂಗಳುಗಳಿಂದ 18 ತಿಂಗಳ ವರೆಗಿನ ಅವಧಿಯ ಎಫ್​ಡಿ ಬಡ್ಡಿ ದರ – 7.50%
  • 18 ತಿಂಗಳುಗಳಿಂದ 2 ವರ್ಷಗಳ ವರೆಗಿನ ಅವಧಿಯ ಎಫ್​ಡಿ ಬಡ್ಡಿ ದರ – 7.50%
  • 2 ವರ್ಷ 1 ದಿನದಿಂದ 3 ವರ್ಷಗಳ ಅವಧಿಯ ಬಡ್ಡಿ ದರ – 7.50%
  • 3 ವರ್ಷ 1 ದಿನದಿಂದ 5 ವರ್ಷಗಳ ವರೆಗಿನ ಅವಧಿಯ ಎಫ್​ಡಿ ದರ – 7.50%
  • 5 ವರ್ಷ 1 ದಿನದಿಂದ 10 ವರ್ಷಗಳ ವರೆಗಿನ ಅವಧಿಯ ಎಫ್​ಡಿ ದರ – 7.50%
  • 5 ವರ್ಷಗಳ ಅವಧಿಯ (80ಸಿ ಎಫ್​ಡಿ) ಗರಿಷ್ಠ 1.50 ಲಕ್ಷ ರೂ.ವರೆಗಿನ ಎಫ್​ಡಿ ಬಡ್ಡಿ ದರ – 7.50%

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ