ಭಾರತದಲ್ಲಿ ಅತಿ ಸಾಮಾನ್ಯವಾಗಿ ಬಳಕೆ ಆಗುವ ಹೂಡಿಕೆ ಮಾರ್ಗಗಳಲ್ಲಿ ಫಿಕ್ಸೆಡ್ ಡೆಪಾಸಿಟ್ (fixed deposit) ಪ್ರಮುಖವಾದುದು. ಮಾರುಕಟ್ಟೆ ವೈಪರೀತ್ಯಕ್ಕೆ ಒಳಪಡದ ಅವಧಿ ಠೇವಣಿ ಸ್ಕೀಮ್ ಇದಾದ್ದರಿಂದ ಆದಾಯ ಸ್ಥಿರ ಹಾಗೂ ನಿಶ್ಚಿತವಾಗಿರುತ್ತದೆ. ಸಾಮಾನ್ಯವಾಗಿ ಎಫ್ಡಿಯಲ್ಲಿ ನಿಶ್ಚಿತ ಮೊತ್ತದ ಠೇವಣಿಯನ್ನು ನಿಶ್ಚಿತ ಅವಧಿಯವರೆಗೆ ಠೇವಣಿ ಇಡಲಾಗುತ್ತದೆ. ಮೆಚ್ಯೂರಿಟಿ ಬಳಿಕ ಬಡ್ಡಿ ಸೇರಿ ರಿಟರ್ನ್ ಸಿಗುತ್ತದೆ. ಆದರೆ, ಎಫ್ಡಿಯಿಂದ ಮಾಸಿಕ ಆದಾಯವನ್ನೂ (FD monthly income) ಸೃಷ್ಟಿಸಲು ಸಾಧ್ಯವಿದೆ. ಎಫ್ಡಿ ಮಾಸಿಕ ಆದಾಯ ಪ್ಲಾನ್ನಿಂದ ಇದು ಸಾಧ್ಯವಾಗುತ್ತದೆ.
ನೀವು ಎಫ್ಡಿ ಮಾಡಿಸುವಾಗ ಎರಡು ಆಯ್ಕೆಗಳಿರುತ್ತವೆ. ಒಂದು, ಕ್ಯುಮುಲೇಟಿವ್ ಎಫ್ಡಿ; ಮತ್ತೊಂದು ನಾನ್ ಕ್ಯುಮುಲೇಟಿವ್ ಎಫ್ಡಿ. ಕ್ಯುಮುಲೇಟಿವ್ ಎಫ್ಡಿಯಲ್ಲಿ ಠೇವಣಿ ಹಣವು ಮೆಚ್ಯೂರಿಟಿ ಬಳಿಕ ಅಸಲು ಮತ್ತು ಬಡ್ಡಿ ಸಮೇತ ಮರಳುತ್ತದೆ.
ನಾನ್ ಕ್ಯುಮುಲೇಟಿವ್ ಎಫ್ಡಿ ಪ್ಲಾನ್ನಲ್ಲಿ ನಿಯಮಿತವಾಗಿ ನಿರ್ದಿಷ್ಟ ಮೊತ್ತದ ಹಣವನ್ನು ಖಾತೆದಾರರಿಗೆ ವರ್ಗಾಯಿಸಲಾಗುತ್ತದೆ. ಈ ಪೇಔಟ್ ಅವಧಿಯನ್ನು ತಿಂಗಳಿಗೊಮ್ಮೆಯೋ, ಮೂರು ತಿಂಗಳಿಗೊಮ್ಮೆಯೋ, ಆರು ತಿಂಗಳಿಗೊಮ್ಮೆಯೋ ಅಥವಾ ವರ್ಷಕ್ಕೊಮ್ಮೆಯೋ ಎಂದು ನಿಗದಿ ಮಾಡಬಹುದು. ಈ ಮೂಲಕ ಮಾಸಿಕ ಆದಾಯ ಸೃಷ್ಟಿಸಿಕೊಳ್ಳಬಹುದು.
ಇದನ್ನೂ ಓದಿ: Bank Nominee: ನಾಮಿನಿ ಯಾಕೆ ಬೇಕು? ಹತ್ತು ನಿಮಿಷ ಕೆಲಸಕ್ಕೆ ಹತ್ತಾರು ದಿನ ಅಲೆದಾಡಬೇಕಾದೀತು ಹುಷಾರ್
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ