ಫ್ರೀಡಂ ಎಸ್​ಐಪಿ: ಡಬಲ್ ಅನುಕೂಲ ಕೊಡುವ ಐಸಿಐಸಿಐ ಪ್ರುಡೆನ್ಷಿನ್ ಮ್ಯುಚುವಲ್ ಫಂಡ್ ಯೋಜನೆ ಇದು

Freedom SIP: ಐಸಿಐಸಿಐ ಮ್ಯೂಚುವಲ್ ಫಂಡ್ ಸಂಸ್ಥೆಯಿಂದ ಫ್ರೀಡಂ ಎಸ್​ಐಪಿ ಪ್ಲಾನ್ ನಡೆಸಲಾಗುತ್ತಿದೆ. ಎಸ್​ಐಪಿ ಮೂಲಕ ಹೂಡಿಕೆ ಮತ್ತು ಎಸ್​ಡಬ್ಲ್ಯುಪಿ ಮೂಲಕ ಆದಾಯ ಎರಡನ್ನೂ ಸೃಷ್ಟಿಸುವ ಸ್ಕೀಮ್ ಇದು. ಮೊದಲಿಗೆ ಎಸ್​ಐಪಿ ಪ್ಲಾನ್ ಚಾಲನೆಯಲ್ಲಿದ್ದರೆ ನಿರ್ದಿಷ್ಟ ಅವಧಿ ಬಳಿಕ ಎಸ್​ಡಬ್ಲ್ಯುಪಿ ಆಗಿ ಪರಿವರ್ತನೆ ಆಗುತ್ತದೆ.

ಫ್ರೀಡಂ ಎಸ್​ಐಪಿ: ಡಬಲ್ ಅನುಕೂಲ ಕೊಡುವ ಐಸಿಐಸಿಐ ಪ್ರುಡೆನ್ಷಿನ್ ಮ್ಯುಚುವಲ್ ಫಂಡ್ ಯೋಜನೆ ಇದು
ಮ್ಯೂಚುವಲ್ ಫಂಡ್

Updated on: Aug 15, 2024 | 10:23 AM

ಐಸಿಐಸಿಐ ಪ್ರುಡೆನ್ಷಿಯಲ್ ಮ್ಯೂಚುವಲ್ ಫಂಡ್​ನಿಂದ ‘ಫ್ರೀಡಂ ಎಸ್​ಐಪಿ’ ಪ್ಲಾನ್ ಚಾಲನೆಯಲ್ಲಿದೆ. ಇದು ಹೊಸ ಪ್ಲಾನ್ ಅಲ್ಲವಾದರೂ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಇದು ಟ್ರೆಂಡ್​ನಲ್ಲಿದೆ. ಫ್ರೀಡಂ ಎಸ್​ಐಪಿ ಎರಡು ರೀತಿಯ ಅನುಕೂಲಗಳನ್ನು ಒದಗಿಸುತ್ತದೆ. ಮಾಮೂಲಿಯ ಎಸ್​ಐಪಿ ರೀತಿಯಲ್ಲಿ ನಿರಂತರ ಹೂಡಿಕೆಗೆ ಅವಕಾಶ ಕೊಡುತ್ತದೆ. ಹಾಗೆಯೇ, ಎಸ್​ಡಬ್ಲ್ಯುಪಿ ಅಥವಾ ಸಿಸ್ಟಮ್ಯಾಟಿಕ್ ವಿತ್​ಡ್ರಾಯಲ್ ಪ್ಲಾನ್ ಮೂಲಕ ಆದಾಯ ಬಳಕೆಗೆ ಅವಕಾಶ ಕೊಡುತ್ತದೆ.

ರಿಟೈರ್ಮೆಂಟ್ ಪ್ಲಾನ್​ಗಳ ರೀತಿ ಈ ಫ್ರೀಡಂ ಎಸ್​ಐಪಿ ಕೆಲಸ ಮಾಡುತ್ತದೆ. ಮೊದಲಿಗೆ ಹೂಡಿಕೆದಾರರು ಎಸ್​ಐಪಿ ರೀತಿಯಲ್ಲಿ ನಿರ್ದಿಷ್ಟ ಅವಧಿಯವರೆಗೆ ಹೂಡಿಕೆ ಮಾಡಬಹುದು. 8 ವರ್ಷಗಳಿಂದ ಹಿಡಿದು 30 ವರ್ಷಗಳವರೆಗೆ ಯಾವುದಾದರೂ ಅವಧಿಯನ್ನು ಎಸ್​ಐಪಿಗೆ ಆಯ್ದುಕೊಳ್ಳಬಹುದು. ಉದಾಹರಣೆಗೆ, ತಿಂಗಳಿಗೆ 20,000 ರೂನಂತೆ 10 ವರ್ಷ ಕಾಲ ನೀವು ಎಸ್​ಐಪಿ ಪ್ಲಾನ್ ಪಡೆಯಬಹುದು.

ಈ 10 ವರ್ಷದ ಎಸ್​ಐಪಿ ಅವಧಿ ಮುಗಿದ ಬಳಿಕ ಫಂಡ್​ನಲ್ಲಿ ಜಮೆಯಾದ ಪೂರ್ಣ ಹಣವು ಹೊಸ ಸ್ಕೀಮ್​ಗೆ ರವಾನೆಯಾಗುತ್ತದೆ. ಇದು ಎಸ್​ಡಬ್ಲ್ಯುಪಿ ಯೋಜನೆ. ತಿಂಗಳಿಗೆ ಎಷ್ಟು ಹಣ ಬರಬೇಕು ಎಂಬುದನ್ನು ಹೂಡಿಕೆದಾರರು ಆಯ್ದುಕೊಳ್ಳಬಹುದು. ಇದನ್ನು ಆಯ್ದುಕೊಳ್ಳದಿದ್ದರೆ ಆರಂಭಿಕ ಎಸ್​ಐಪಿ ಮೊತ್ತದ ಆಧಾರದ ಮೇಲೆ ಡೀಫಾಲ್ಟ್ ಆಗಿ ನಿರ್ದಿಷ್ಟ ಹಣವನ್ನು ನಿಮ್ಮ ಖಾತೆಗೆ ಹಾಕಲಾಗುತ್ತಿರುತ್ತದೆ.

ಇದನ್ನೂ ಓದಿ: ಒಂದೂವರೆ ಲಕ್ಷ ರೂನಲ್ಲಿ ಸ್ವಲ್ಪವೂ ಉಳಿಸಲು ಆಗಲ್ವ? ಮೂರು ಜನರ ಕುಟುಂಬಕ್ಕೆ ಎಲ್ಲಿ ಸಾಲುತ್ತೆ ಈ ಸಂಬಳ? ಸೋಷಿಯಲ್ ಮೀಡಿಯಾದಲ್ಲಿ ಹೀಗೊಂದು ಚರ್ಚೆ

ರಿಟೈರ್ಮೆಂಟ್​ಗೆ ಪ್ಲಾನ್ ಮಾಡುತ್ತಿರುವವರಿಗೆ ಈ ಸ್ಕೀಮ್ ಅನುಕೂಲ ಮಾಡಿಕೊಡುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us