
ನವದೆಹಲಿ, ಅಕ್ಟೋಬರ್ 20: ಚಿನ್ನದ ಬೆಲೆ (gold rate) ಕಳೆದ ವಾರ ಹೊಸ ದಾಖಲೆ ಮಟ್ಟಕ್ಕೆ ಏರಿತ್ತು. ಇಷ್ಟು ಮಟ್ಟದ ಬೆಲೆಯು ಹೂಡಿಕೆದಾರರಲ್ಲೇ ಆತಂಕ ಮೂಡಿಸಿದೆ ಎಂದು ಆಭರಣ ಉದ್ಯಮಿ ಮನೋಜ್ ಝಾ ಹೇಳಿದ್ದಾರೆ. ಚಿನ್ನದ ಬೆಲೆ ಈಗ ಬಬ್ಬಲ್ ಝೋನ್ (Bubble zone) ತಲುಪಿದೆ. ಮುಂಬರುವ ದಿನಗಳಲ್ಲಿ ಹೂಡಿಕೆದಾರರು ಪ್ರಾಫಿಟ್ ಬುಕಿಂಗ್ ಮಾಡಲಿದ್ದಾರೆ ಎಂದು ಕಾಮಾಖ್ಯ ಜ್ಯುವೆಲ್ಸ್ (Kamakhya Jewels) ಸಂಸ್ಥೆಯ ಸಂಸ್ಥಾಪಕರಾದ ಅವರು ಅಭಿಪ್ರಾಯಪಟ್ಟಿದ್ದಾರೆ.
‘ಚಿನ್ನವು ತನ್ನ ಗರಿಷ್ಠ ಮಟ್ಟವನ್ನು ಮುಟ್ಟಿದೆ. ಸ್ವತಃ ಹೂಡಿಕೆದಾರರಿಗೂ ಚಿಂತೆ ತಂದಿದೆ. ಹಿಂದೆ ಚಿನ್ನದ ಬೆಲೆ ವಿಪರೀತ ಏರಿದಾಗೆಲ್ಲಾ ತೀಕ್ಷ್ಣ ಇಳಿಕೆಯೂ ಆಗಿದೆ. 1979-80ರಲ್ಲಿ, ಹಾಗೂ 2010-11ರಲ್ಲೂ ಚಿನ್ನ ಭಾರೀ ಬೆಲೆ ಏರಿಕೆ ಪಡೆದಿತ್ತು. ಆ ಸಂದರ್ಭಗಳಲ್ಲಿ ಅದರ ಪ್ರೈಸ್ ಕರೆಕ್ಷನ್ ತೀಕ್ಷ್ಣವಾಗಿ ಆಗಿತ್ತು’ ಎಂದು ಮನೋಜ್ ಝಾ ಅವರು ಹಿಂದಿನ ದತ್ತಾಂಶಗಳನ್ನು ಉಲ್ಲೇಖಿಸುತ್ತಾ ವಿವರಿಸಿದ್ದಾರೆ.
ಇದನ್ನೂ ಓದಿ: ಚಿನ್ನಕ್ಕೆ ಮೇಕಿಂಗ್ ಚಾರ್ಜ್ ಇಲ್ಲ ಅಂತಾರೆ, ಆದರೆ ನಯವಾಗಿ ಬೇರೆ ಚಾರ್ಜಸ್ ಹಾಕ್ತಾರೆ, ಹುಷಾರ್
ಮನೋಜ್ ಝಾ ಅವರ ಪ್ರಕಾರ ಚಿನ್ನದ ಬೆಲೆ ಮುಂದಿನ ಕೆಲ ಅವಧಿಯಲ್ಲಿ ಔನ್ಸ್ಗೆ 300-400 ಡಾಲರ್ನಷ್ಟು ಬೆಲೆ ಇಳಿಕೆ ಆಗಬಹುದು. ಇಲ್ಲಿ ಒಂದು ಔನ್ಸ್ ಎಂದರೆ 28-29 ಗ್ರಾಮ್ನಷ್ಟಾಗುತ್ತದೆ. ಅಂದರೆ, ಒಂದು ಗ್ರಾಮ್ಗೆ 1,000-1,200 ರೂಗಳಷ್ಟು ಬೆಲೆ ಇಳಿಕೆಯನ್ನು ಚಿನ್ನ ಹೊಂದುವ ಸಾಧ್ಯತೆ ಇದೆ.
ಸದ್ಯ ಅಪರಂಜಿ ಚಿನ್ನದ ಬೆಲೆ ಗ್ರಾಮ್ಗೆ 13,000 ರೂಗಿಂತ ತುಸು ಹೆಚ್ಚಿದೆ. ಇದರ ಬೆಲೆ ಸದ್ಯೋಭವಿಷ್ಯದಲ್ಲಿ 12,000 ರೂ ಗಡಿಗಿಂತ ಕೆಳಗೆ ಇಳಿಯುವ ಸಾಧ್ಯತೆ ಇಲ್ಲದಿಲ್ಲ.
ಇದನ್ನೂ ಓದಿ: ಚಿನ್ನ, ಬೆಳ್ಳಿ ಬೆಲೆಗಳು ಎಷ್ಟು ಕಡಿಮೆ ಆಗಬಹುದು? ಇಲ್ಲಿದೆ ತಜ್ಞರ ಅಂದಾಜು
ಕಾಮಾಖ್ಯ ಜುವೆಲ್ಸ್ನ ಮಾಲೀಕರಾದ ಮನೋಜ್ ಝಾ ಹೇಳುವ ಪ್ರಕಾರ, ಹೂಡಿಕೆದಾರರು ಈಗ ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಚಿನ್ನ ಹೊಂದಿದ್ದಾರೆ. ‘ಹೂಡಿಕೆದಾರರು ತಮ್ಮ ಪೋರ್ಟ್ಫೋಲಿಯೋದಲ್ಲಿ ಶೇ. 10-12ರಷ್ಟು ಚಿನ್ನ ಹೊಂದಿರುವುದು ಸಾಮಾನ್ಯ. ಆದರೆ, ಈಗ ಚಿನ್ನದ ಬೆಲೆ ಏರಿಕೆಯಿಂದಾಗಿ ಹೂಡಿಕೆಯಲ್ಲಿ ಚಿನ್ನದ ಪಾಲು ಶೇ. 18-22ರಷ್ಟಾಗಿದೆ. ಹೀಗಾಗಿ, ಹೂಡಿಕೆದಾರರು ಚಿನ್ನವನ್ನು ಮಾರಿ ಲಾಭ ಮಾಡಲು ಯತ್ನಿಸಬಹುದು’ ಎಂದು ಮನೋಜ್ ಝಾ ಅಭಿಪ್ರಾಯಪಟ್ಟಿದ್ದಾರೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ