ಪ್ರಸಕ್ತ ಅತ್ಯಧಿಕ ರಿಟರ್ನ್ ಕೊಡಬಲ್ಲ ಹೂಡಿಕೆಗಳಲ್ಲಿ ಷೇರು ಮಾರುಕಟ್ಟೆ, ಚಿನ್ನ ಪ್ರಮುಖವಾದುದು. ಚಿನ್ನ (gold) ಸದಾ ಆಕರ್ಷಣೆ ಉಳಿಸಿಕೊಳ್ಳಬಲ್ಲ ವಸ್ತು. ಅದರ ಮೇಲೆ ಮಾಡುವ ಹೂಡಿಕೆ ಯಾವತ್ತು ನಷ್ಟ ತರುವಂಥದ್ದಲ್ಲ. ಇನ್ನೊಂದೆಡೆ ಈಕ್ವಿಟಿ ಅಥವಾ ಷೇರು ಮಾರುಕಟ್ಟೆ (share market) ಅದ್ವಿತೀಯ ರಿಟರ್ನ್ ಕೊಡಬಲ್ಲುದಾದರೂ ರಿಸ್ಕ್ ಅಂಶ ಹೆಚ್ಚು. ಹೀಗಾಗಿ ನೀವು ಚಿನ್ನ ಮತ್ತು ಈಕ್ವಿಟಿ ಎರಡರಲ್ಲೂ ಹೂಡಿಕೆ ಮಾಡುವುದು ಜಾಣತನ. ಒಂದು ವೇಳೆ ಎರಡರಲ್ಲಿ ಒಂದನ್ನು ಮಾತ್ರವೇ ಆಯ್ಕೆ ಮಾಡಿಕೊಳ್ಳಬೇಕು ಎಂಬ ಸಂದಿಗ್ದತೆ ಬಂದರೆ ಏನು ಮಾಡಬೇಕು? ಷೇರೋ, ಚಿನ್ನವೋ ಯಾವುದರಲ್ಲಿ ಹೂಡಿಕೆ ಮಾಡಬಹುದು ಎಂದು ತತ್ಕ್ಷಣಕ್ಕೆ ನಿರ್ಧರಿಸುವುದು ಕಷ್ಟ. ಆದರೆ, 2023-24ರ ಹಣಕಾಸು ವರ್ಷದಲ್ಲಿ ಚಿನ್ನ ಅದ್ಭುತ ರಿಟರ್ನ್ ಕೊಟ್ಟಿದೆ. ಆದರೆ, ಷೇರು ಮಾರುಕಟ್ಟೆಯ ಬಹುತೇಕ ಎಲ್ಲಾ ಸೂಚ್ಯಂಕಗಳೂ ಇನ್ನೂ ಅಚ್ಚರಿ ಹುಟ್ಟಿಸುವಷ್ಟು ಅದ್ವಿತೀಯವಾಗಿ ಬೆಳೆದಿವೆ.
ಎಂಸಿಎಕ್ಸ್ನಲ್ಲಿ ಚಿನ್ನದ ಬೆಲೆ 2023-24ರಲ್ಲಿ ಶೇ. 13.50ರಷ್ಟು ಹೆಚ್ಚಾಗಿದೆ. ಚಿನ್ನದ ಬೆಲೆ ಆಧಾರಿತವಾಗಿ ಮೌಲ್ಯ ಪಡೆಯುವ ಸಾವರಿನ್ ಗೋಲ್ಡ್ ಬಾಂಡ್ ಕೂಡ ಶೇ. 13ರ ಆಸುಪಾಸಿನಲ್ಲಿ ಕಳೆದ ಏಳೆಂಟು ವರ್ಷದಲ್ಲಿ ಬೆಳೆದಿದೆ. ಈ ಮಟ್ಟಿಗೆ ಚಿನ್ನದ ಬೆಲೆ ಹೆಚ್ಚಳ ಸ್ಥಿರತೆ ಹೊಂದಿದೆ.
ಇದನ್ನೂ ಓದಿ: ತಿಂಗಳಿಗೆ 10,000 ರೂನಂತೆ ಹೂಡಿಕೆ; 40 ವರ್ಷದಲ್ಲಿ ಆಗುತ್ತೆ ಕನಿಷ್ಠ 11 ಕೋಟಿ ರೂ
ಈಕ್ವಿಟಿ ಮತ್ತು ಚಿನ್ನದ ಮಾರುಕಟ್ಟೆಯ ಮೇಲೆ ಜಾಗತಿಕ ವಿದ್ಯಮಾನಗಳು ಪ್ರಭಾವ ಬೀರುತ್ತವೆ. ಅಮೆರಿಕದ ಆರ್ಥಿಕತೆ, ಅಲ್ಲಿನ ಬಡ್ಡಿದರ, ಹಣದುಬ್ಬರ, ಜಾಗತಿಕ ರಾಜಕೀಯ ಬಿಕ್ಕಟ್ಟು ಇವೆಲ್ಲವೂ ಕೂಡ ಷೇರು ಮಾರುಕಟ್ಟೆಗೂ ಪ್ರಭಾವಿಸುತ್ತವೆ, ಚಿನ್ನದ ಮಾರುಕಟ್ಟೆಯನ್ನೂ ಪ್ರಭಾವಿಸುತ್ತವೆ.
ಇದನ್ನೂ ಓದಿ: ಕಾಂಡೋಮ್ ಕಂಪನಿಯಿಂದ ಹಿಡಿದು ಡೈಮಂಡ್ ಪವರ್ವರೆಗೆ 6 ತಿಂಗಳಲ್ಲಿ ಭರ್ಜರಿ ಲಾಭ ತಂದ 7 ಮಲ್ಟಿಬ್ಯಾಗರ್ ಸ್ಟಾಕ್ಗಳು
ಭಾರತದಲ್ಲಿ ರಾಜಕೀಯ ಮತ್ತು ಆರ್ಥಿಕ ವಿದ್ಯಮಾನಗಳಿಗೆ ಷೇರುಪೇಟೆ ಸೂಕ್ಷ್ಮವಾಗಿ ಸ್ಪಂದಿಸುತ್ತದೆ. ಆದರೆ, ಚಿನ್ನದ ಬೆಲೆಯ ಮೇಲೆ ಇದರ ಪರಿಣಾಮ ಕಡಿಮೆ. ಭಾರತದಲ್ಲಿ ರಾಜಕೀಯ ಮತ್ತು ಆರ್ಥಿಕ ವಿದ್ಯಮಾನಗಳು ಸಕಾರಾತ್ಮಕವಾಗಿ ತೋರಿರುವುದರಿಂದ ಷೇರು ಮಾರುಕಟ್ಟೆ ಸಕಾರಾತ್ಮಕವಾಗಿ ಸ್ಪಂದಿಸಿದೆ. ವಿವಿಧ ಕಾರ್ಪೊರೇಟ್ ಕಂಪನಿಗಳು ಉತ್ತಮ ಲಾಭ ತೋರಿದ್ದೂ ಕೂಡ ಷೇರುಬೆಲೆಯ ಏರಿಕೆಗೆ ಕಾರಣವಾಗಿದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:20 pm, Sun, 31 March 24