ಜನಸಾಮಾನ್ಯರು ಸಾಮಾನ್ಯವಾಗಿ ಬಳಸುವ ಸೇವಿಂಗ್ ಸ್ಕೀಮ್ ಎಂದರೆ ಅದು ನಿಶ್ಚಿತ ಠೇವಣಿ. ಬಹಳ ಸುಲಭ, ಸರಳ ಎನಿಸಿರುವ ಎಫ್ಡಿ ಸ್ಕೀಮ್ಗಳು (Fixed Deposit Plans) ಉತ್ತಮ ಬಡ್ಡಿ ಕೊಡುವುದರ ಜೊತೆಗೆ ಸುರಕ್ಷಿತ ಹೂಡಿಕೆಯಾಗಿಯೂ ಪರಿಗಣಿತವಾಗಿದೆ. ಬಹಳಷ್ಟು ಬ್ಯಾಂಕುಗಳು ನಿಶ್ಚಿತ ಠೇವಣಿಗಳಿಗೆ ಅಧಿಕ ಬಡ್ಡಿ ಕೊಡುತ್ತವೆ. ಎಚ್ಡಿಎಫ್ಸಿ ಬ್ಯಾಂಕ್ ಗ್ರಾಹಕರಿಗೆ ಇದೇ ವೇಳೆ ಖುಷಿಯ ಸುದ್ದಿ ಇದೆ. ಭಾರತದ ಅತಿದೊಡ್ಡ ಖಾಸಗಿ ಬ್ಯಾಂಕ್ ಎನಿಸಿದ ಎಚ್ಡಿಎಫ್ಸಿ ಎರಡು ವಿಶೇಷ ಎಫ್ಡಿ ಪ್ಲಾನ್ ಅನಾವರಣಗೊಳಿಸಿದೆ. 35 ತಿಂಗಳು ಮತ್ತು 55 ತಿಂಗಳ ಅವಧಿಯ ಈ ಎರಡು ಪ್ಲಾನ್ನಲ್ಲಿ ಎಫ್ಡಿಗಳಿಗೆ ಹೆಚ್ಚು ಬಡ್ಡಿ ಸಿಗುತ್ತದೆ. ಕೆಲವೇ ದಿನಗಳವರೆಗೆ ಈ ಆಫರ್ ಇರುತ್ತದೆ.
ಹೆಚ್ಡಿಎಫ್ಸಿ ಬ್ಯಾಂಕ್ನ ಠೇವಣಿ ದರಗಳ ಪರಿಷ್ಕರಣೆ ಆಗಿದೆ. ಹಿರಿಯ ನಾಗರಿಕ ಠೇವಣಿಗಳಿಗೆ ಶೇ. 7.75ರವರೆಗೆ ಬಡ್ಡಿ ಕೊಡಲಾಗುತ್ತದೆ. 35 ತಿಂಗಳ ಸ್ಪೆಷಲ್ ಎಡಿಶನ್ ಎಫ್ಡಿ ಪ್ಲಾನ್ನಲ್ಲಿ ಹಿರಿಯ ನಾಗರಿಕರ ಠೇವಣಿಗೆ ಶೇ. 7.70ರಷ್ಟು ಬಡ್ಡಿ ಸಿಗುತ್ತದೆ. ಇನ್ನು, 55 ತಿಂಗಳ ಠೇವಣಿಗಳಿಗೆ ಶೇ. 7.75ರಷ್ಟು ಬಡ್ಡಿ ಸಿಗುತ್ತದೆ.
ಇತರ ಸಾಮಾನ್ಯ ಗ್ರಾಹಕರ 35 ತಿಂಗಳ ಎಫ್ಡಿಗಳಿಗೆ ಶೇ. 7.20ರಷ್ಟು ವಾರ್ಷಿಕ ಬಡ್ಡಿ ಬರುತ್ತದೆ. 55 ತಿಂಗಳ ಠೇವಣಿಗಳಿಗೆ ಶೇ. 7.25ರಷ್ಟು ಬಡ್ಡಿ ಸಿಗುತ್ತದೆ. ಈ ಪರಿಷ್ಕೃತ ದರಗಳು 2023 ಮೇ 29, ಅಂದರೆ ಇಂದು ಸೋಮವಾರದಿಂದಲೇ ಜಾರಿಗೆ ಬರುತ್ತಿವೆ.
ಇದನ್ನೂ ಓದಿ: PPF: ಕೇವಲ 500 ರೂ ಹೂಡಿಕೆಗೆ ಲಕ್ಷಾಧಿಪತಿ ಮಾಡುವ ಸ್ಕೀಮ್; ಪಿಪಿಎಫ್ ಖಾತೆ ತೆರೆಯುವುದು ಹೇಗೆ? ಇಲ್ಲಿದೆ ಡೀಟೇಲ್ಸ್