ಹಣ ಹೂಡಿಕೆ ಮಾಡುವುದು ಒಂದು ಕಲೆಯಾದರೆ, ಹಣ ಉಳಿಸುವುದೂ (money savings) ಕೂಡ ಒಂದು ರೀತಿಯಲ್ಲಿ ಕಲೆಯೇ. ಜೊತೆಗೆ ಬದ್ಧತೆ, ಶಿಸ್ತೂ ಬೇಕು. ಬಹಳ ಬೇಗ ಶ್ರೀಮಂತರಾಗಲು ಯಾವುದೇ ಶಾರ್ಟ್ಕಟ್ ಇಲ್ಲ. ಆದರೆ, ದುಡ್ಡಿನ ವಿಚಾರದಲ್ಲಿ ಬದ್ಧತೆ, ಶಿಸ್ತು ಇಟ್ಟುಕೊಂಡರೆ ಸಾಧ್ಯವಾದಷ್ಟು ಬೇಗ ಸಂಪತ್ತು ಹೆಚ್ಚಿಸಿಕೊಳ್ಳುತ್ತಾ ಹೋಗಬಹುದು. ಈ ನಿಟ್ಟಿನಲ್ಲಿ 50-30-20 ನಿಯಮ ನಿಮಗೆ ನೆರವಾಗಬಹುದು.
ಸಾಲ ಮಾಡುವ ವಿಚಾರಕ್ಕೆ ಬಂದರೆ ಎಷ್ಟು ಸಾಲ ಮಾಡಬೇಕು ಎನ್ನುವ ಗೊಂದಲ ಬಹಳ ಮಂದಿಗೆ ಇರುತ್ತದೆ. ನಿಮ್ಮ ಆದಾಯದ ಹಣವನ್ನು ಯಾವ್ಯಾವುದಕ್ಕೆ ಎಷ್ಟು ವೆಚ್ಚ ಮಾಡಬೇಕು ಎಂಬ ಗೊಂದಲವೂ ಇರುತ್ತದೆ. ಇಂಥ ಸ್ಥಿತಿಯಲ್ಲಿ ನೀವು ಇದ್ದರೆ ನಿಮಗಿದೋ ಇದೆ 50-30-20 ಸೂತ್ರ.
ಇಲ್ಲಿ 50 ಎಂದರೆ ನಿಮ್ಮ ಆದಾಯದ ಶೇ. 50ರಷ್ಟು ಹಣವನ್ನು ಅಗತ್ಯಗಳಿಗೆ ಖರ್ಚು ಮಾಡಬಹುದು. ಅದಕ್ಕಿಂತ ಹೆಚ್ಚು ಹಣ ವೆಚ್ಚವಾಗದಂತೆ ನೋಡಿಕೊಳ್ಳಬೇಕು.
ಇಲ್ಲಿ ಅಗತ್ಯ ಖರ್ಚು ಎಂದರೆ ಮನೆ ಬಾಡಿಗೆ, ಬಿಲ್ಗಳು, ಇಎಂಐ, ದಿನಸಿ ವಸ್ತು ಇತ್ಯಾದಿಯವುಗಳಿಗೆ ಮಾಡುವ ವೆಚ್ಚ.
ಇನ್ನು, ನಿಮ್ಮ ಬಯಕೆಗಳಿಗೆ ಮಾಡುವ ವೆಚ್ಚ ಶೇ. 30 ಮೀರದಂತೆ ಎಚ್ಚರಿ ವಹಿಸಿ. ಇಲ್ಲಿ ಬಯಕೆಗಳೆಂದರೆ ಆಗಾಗ್ಗೆ ಹೋಟೆಲ್ಗೆ ಹೋಗಿ ಮಾಡುವ ಊಟ, ಪ್ರವಾಸ, ಸಿನಿಮಾ, ವಾಹನ ಖರೀದಿ ಇತ್ಯಾದಿ ಸೇರುತ್ತವೆ.
ಕೊನೆಯಲ್ಲಿ, ನಿಮ್ಮ ಉಳಿತಾಯವು ಕನಿಷ್ಠ ಶೇ. 20ರಷ್ಟಾದರೂ ಇರಬೇಕು. ಹೀಗಾಗಿ, ಮೊದಲಿಗೆ ಉಳಿತಾಯಕ್ಕೆ ಶೇ. 20ರಷ್ಟು ಆದಾಯವನ್ನು ಎತ್ತಿ ಇಟ್ಟುಕೊಂಡು ಉಳಿದ ಹಣವನ್ನು ನಿಮ್ಮ ಅಗತ್ಯಗಳಿಗೆ ಮತ್ತು ಬಯಕೆಗಳಿಗೆ ಬಳಸುವ ಅಭ್ಯಾಸ ಮಾಡಿಕೊಳ್ಳಿ.
ಇದನ್ನೂ ಓದಿ: ಸೂತ್ರ 72; ನಿಮ್ಮ ಹಣ ಡಬಲ್ ಅಗುವುದು ಯಾವಾಗ? ಎಷ್ಟು ಬಡ್ಡಿದರ ಅಗತ್ಯ? ಎಲ್ಲಕ್ಕೂ ಕೆಲಸ ಮಾಡುತ್ತೆ ಈ ಫಾರ್ಮುಲಾ
ನಿಮ್ಮ ಬಯಕೆಗಳಿಗೆ ಮಾಡುವ ಖರ್ಚನ್ನು ಸಾಧ್ಯವಾದಷ್ಟೂ ಮೊಟಕುಗೊಳಿಸಲು ಯತ್ನಿಸಿ. ಅಗತ್ಯಬಿದ್ದರೆ ಅಗತ್ಯಗಳಿಗೆ ಮಾಡುವ ವೆಚ್ಚವನ್ನೂ ಕಡಿಮೆ ಮಾಡಬಹುದು. ಇವುಗಳಿಂದ ಉಳಿಸಿದ ಹಣವನ್ನು ಉಳಿತಾಯಕ್ಕೆ ಸೇರಿಸುತ್ತಾ ಹೋಗಿ. ಹೀಗೆ ಮಾಡಿದರೆ ನಿಮ್ಮ ಸಂಪತ್ತು ಬೇಗ ಬೇಗ ಬೆಳೆಯುತ್ತಾ ಹೋಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ