Home Loan Interest Rates: ಎಸ್​ಬಿಐ, ಎಚ್​ಡಿಎಫ್​ಸಿ ಸೇರಿದಂತೆ ವಿವಿಧ ಬ್ಯಾಂಕುಗಳಲ್ಲಿ ಗೃಹಸಾಲಕ್ಕೆ ಬಡ್ಡಿದರ ಎಷ್ಟು?

|

Updated on: Nov 23, 2023 | 11:04 AM

Comparing HDFC, SBI, Karnataka Bank, PNB and ICICI Loan Interest Rates: ಗೃಹಸಾಲಗಳಿಗೆ ಯಾವತ್ತೂ ಬೇಡಿಕೆ ಇದ್ದಿದ್ದೇ. ಸಾಲಕ್ಕೆ ಬಡ್ಡಿ ಬಹಳ ಮುಖ್ಯ. ಹೆಚ್ಚು ಬಡ್ಡಿದರ ಇದ್ದರೆ ಸಾಲದ ಹೊರೆ ಬಹಳ ಹೆಚ್ಚಾಗಿರುತ್ತದೆ. ಹೀಗಾಗಿ, ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆಯುವುದು ಬಹಳ ಮುಖ್ಯ. ಅದರಲ್ಲೂ ಹಲವು ಲಕ್ಷಗಳವರೆಗೆ ಇರುವ ಗೃಹಸಾಲಗಳ ವಿಚಾರದಲ್ಲಂತೂ ಇದು ಅಕ್ಷರಶಃ ಸತ್ಯ. ಈ ಹಿನ್ನೆಲೆಯಲ್ಲಿ ವಿವಿಧ ಬ್ಯಾಂಕುಗಳಲ್ಲಿ ಗೃಹಸಾಲಗಳಿಗೆ ಬಡ್ಡಿದರಗಳು ಎಷ್ಟಿವೆ ಎಂಬ ಹೋಲಿಕೆ ಇಲ್ಲಿದೆ....

Home Loan Interest Rates: ಎಸ್​ಬಿಐ, ಎಚ್​ಡಿಎಫ್​ಸಿ ಸೇರಿದಂತೆ ವಿವಿಧ ಬ್ಯಾಂಕುಗಳಲ್ಲಿ ಗೃಹಸಾಲಕ್ಕೆ ಬಡ್ಡಿದರ ಎಷ್ಟು?
ಗೃಹಸಾಲ
Follow us on

ನವೆಂಬರ್ 23: ಸ್ವಂತ ಮನೆ ಹೊಂದುವುದು ಎಲ್ಲರ ಗುರಿ. ಆದರೆ, ಇವತ್ತು ನಮ್ಮದೇ ಸ್ವಂತ ನೆಲದಲ್ಲಿ ಮನೆ ಕಟ್ಟಿಕೊಳ್ಳುವುದಕ್ಕೆ ಬಹಳ ದುಬಾರಿ ಖರ್ಚಾಗುತ್ತದೆ. ಸಾಲ ಇಲ್ಲದೇ ನಿವೇಶನ ಪಡೆಯುವುದಾಗಲೀ, ಮನೆ ಕಟ್ಟುವುದಾಗಲೀ ಬಹಳ ಕಷ್ಟಸಾಧ್ಯ. ಹೀಗಾಗಿ, ಗೃಹಸಾಲಗಳಿಗೆ (Home Loans) ಯಾವತ್ತೂ ಬೇಡಿಕೆ ಇದ್ದಿದ್ದೇ. ಸಾಲಕ್ಕೆ ಬಡ್ಡಿ (interest rate) ಬಹಳ ಮುಖ್ಯ. ಹೆಚ್ಚು ಬಡ್ಡಿದರ ಇದ್ದರೆ ಸಾಲದ ಹೊರೆ ಬಹಳ ಹೆಚ್ಚಾಗಿರುತ್ತದೆ. ಹೀಗಾಗಿ, ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆಯುವುದು ಬಹಳ ಮುಖ್ಯ. ಅದರಲ್ಲೂ ಹಲವು ಲಕ್ಷಗಳವರೆಗೆ ಇರುವ ಗೃಹಸಾಲಗಳ ವಿಚಾರದಲ್ಲಂತೂ ಇದು ಅಕ್ಷರಶಃ ಸತ್ಯ. ಈ ಹಿನ್ನೆಲೆಯಲ್ಲಿ ವಿವಿಧ ಬ್ಯಾಂಕುಗಳಲ್ಲಿ ಗೃಹಸಾಲಗಳಿಗೆ ಬಡ್ಡಿದರಗಳು ಎಷ್ಟಿವೆ ಎಂಬ ಹೋಲಿಕೆ ಇಲ್ಲಿದೆ….

ಎಸ್​ಬಿಐ ಗೃಹಸಾಲ ದರ

ಭಾರತದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಎನಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಗೃಹಸಾಲಗಳಿಗೆ ಬಡ್ಡಿದರ ವರ್ಷಕ್ಕೆ ಶೇ. 8.6ರಿಂದ ಆರಂಭವಾಗಿ ಶೇ. 9.45ರವರೆಗೂ ಇದೆ. ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರೆ, ಮತ್ತು ಸಾಲಗಾರ ನಿಯಮಿತವಾಗಿ ಕಂತುಗಳನ್ನು ಕಟ್ಟಿಕೊಂಡು ಹೋಗುವುದು ಖಾತ್ರಿಯಾಗಿದ್ದರೆ ಅತಿ ಕಡಿಮೆ ಬಡ್ಡಿದರ ನಿಗದಿ ಮಾಡಲಾಗುತ್ತದೆ.

ಎಚ್​ಡಿಎಫ್​ಸಿ ಬ್ಯಾಂಕ್​ನಲ್ಲಿ ಗೃಹಸಾಲಕ್ಕೆ ಬಡ್ಡಿದರ

ದೇಶದ ಅತಿದೊಡ್ಡ ಬ್ಯಾಂಕ್ ಎನಿಸಿರುವ ಖಾಸಗಿ ವಲಯದ ಎಚ್​ಡಿಎಫ್​ಸಿ ಬ್ಯಾಂಕ್​ನಲ್ಲಿ ಗೃಹಸಾಲ ದರ ವರ್ಷಕ್ಕೆ ಶೇ. 8.50ರಿಂದ ಶೇ. 9.40ಯವರೆಗೂ ಇದೆ.

ಇದನ್ನೂ ಓದಿ: ಎಸ್​ಬಿಐ, ಎಚ್​ಡಿಎಫ್​ಸಿ ಬ್ಯಾಂಕುಗಳಲ್ಲಿ ಎಫ್​ಡಿ ದರಗಳು ಎಷ್ಟಿವೆ? ಇಲ್ಲಿದೆ ಪಟ್ಟಿ

ಪಂಜಾಬ್ ನ್ಯಾಷನಲ್ ಬ್ಯಾಂಕ್​ನಲ್ಲಿ ಗೃಹಸಾಲಕ್ಕೆ ಬಡ್ಡಿದರ

ಸರ್ಕಾರಿ ಸ್ವಾಮ್ಯದ ಪಿಎನ್​ಬಿ ಬ್ಯಾಂಕ್​ನಲ್ಲಿ ಗೃಹಸಾಲಗಳಿಗೆ ಬಡ್ಡಿದರ ವರ್ಷಕ್ಕೆ ಶೇ. 8.40ಯಿಂದ ಶೇ. 10.60ರವರೆಗೂ ಬಡ್ಡಿದರ ಇದೆ.

ಐಸಿಐಸಿಐ ಬ್ಯಾಂಕ್ ಗೃಹಸಾಲಕ್ಕೆ ಬಡ್ಡಿದರ

ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್​ನಲ್ಲಿ ಗೃಹಸಾಲ ದರಗಳು ಶೇ. 9ರಿಂದ ಆರಂಭವಾಗುತ್ತವೆ. ಶೇ. 10.05ರವರೆಗೂ ಬಡ್ಡಿದರ ಇದೆ.

ಇದನ್ನೂ ಓದಿ: ಬಡ್ಡಿದರ, ಇಎಂಐ, ದಂಡ ಎಷ್ಟು? ಬ್ಯಾಂಕ್​ನಲ್ಲಿ ವೈಯಕ್ತಿಕ ಸಾಲ ಪಡೆಯುವ ವಿಚಾರಿಸಬೇಕಾದ ಸಂಗತಿಗಳು

ಕರ್ಣಾಟಕ ಬ್ಯಾಂಕ್​ನಲ್ಲಿ ಗೃಹಸಾಲಕ್ಕೆ ಬಡ್ಡಿದರ

ಕರ್ಣಾಟಕ ಬ್ಯಾಂಕ್​ನಲ್ಲಿ ಗೃಹಸಾಲಕ್ಕೆ ಬಡ್ಡಿದರ ಶೇ. 8.75ರಿಂದ ಆರಂಭವಾಗುತ್ತದೆ. ಇದರಲ್ಲಿ ಶೇ. 11.02ರವರೆಗೂ ಬಡ್ಡಿದರ ವಿಧಿಸಲಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ