ಐಸಿಐಸಿಐ ಬ್ಯಾಂಕ್ ತನ್ನ ಎಂಸಿಎಲ್ಆರ್ ದರಗಳನ್ನು (ICICI Hikes MCLR Rates) 10 ಬೇಸಿಸ್ ಪಾಯಿಂಟ್ಗಳಷ್ಟು ಏರಿಕೆ ಮಾಡಿದೆ. ಇದು ಇವತ್ತಿನಿಂದ, ಅಂದರೆ ಮಾರ್ಚ್ 1ರಿಂದಲೇ ಅನ್ವಯ ಆಗುತ್ತದೆ. ಇದರೊಂದಿಗೆ ಐಸಿಐಸಿಐನ ಎಂಸಿಎಲ್ಆರ್ ದರಗಳು ಶೇ. 8.5ರಿಂದ ಶೇ. 8.75ರವರೆಗಿನ ಶ್ರೇಣಿಯಲ್ಲಿ ಇರಲಿವೆ. ಐಸಿಐಸಿಐ ಬ್ಯಾಂಕ್ನ ವೆಬ್ಸೈಟ್ನಲ್ಲಿರುವ ಮಾಹಿತಿ ಪ್ರಕಾರ 15 ದಿನಗಳಿಂದ 1 ತಿಂಗಳವರೆಗಿನ ಅವಧಿಗೆ ಇದ್ದ ಎಲ್ಸಿಎಲ್ಆರ್ ದರ ಶೇ. 8.4ರಿಂದ ಶೇ. 8.50ಕ್ಕೆ ಏರಿಕೆ ಆಗಿದೆ. 3 ತಿಂಗಳ ಅವಧಿಗೆ ಶೇ. 8.45ರಷ್ಟಿದ್ದ ಎಂಸಿಎಲ್ಆರ್ ಇದೀಗ ಶೇ. 8.55ಕ್ಕೆ ಏರಿದೆ.
ಎಂಸಿಎಲ್ಆರ್ ದರ ಎಂದರೇನು?
ಎಂಸಿಎಲ್ಆರ್ ಎಂದರೆ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಬೇಸ್ಡ್ ಲೆಂಡಿಂಗ್ ರೇಟ್. ಇದು ಒಂದು ಹಣಕಾಸು ಸಂಸ್ಥೆ ತಾನು ನೀಡುವ ಸಾಲದ ಮೇಲೆ ವಿಧಿಸುವ ಕನಿಷ್ಠ ಬಡ್ಡಿ ದರ. ಸಾಮಾನ್ಯವಾಗಿ ಬ್ಯಾಂಕುಗಳು ಎಂಸಿಎಲ್ಆರ್ಗಿಂತ ಕಡಿಮೆ ಬಡ್ಡಿ ದರಕ್ಕೆ ಸಾಲ ನೀಡುವುದಿಲ್ಲ. ತೀರಾ ಮುಖ್ಯ ಗ್ರಾಹಕರಿಗೆ ಮಾತ್ರ ಎಂಸಿಎಲ್ಆರ್ ದರಕ್ಕೆ ಸಾಲ ನೀಡಲಾಗುತ್ತದೆ.
ಐಸಿಐಸಿಐ ಬ್ಯಾಂಕ್ನ ದರ ಏರಿಕೆ ಪರಿಣಾಮ
ಎಂಸಿಎಲ್ಆರ್ ದರ ಏರಿಕೆಯಿಂದ ಐಸಿಐಸಿಐನ ಗೃಹ ಸಾಲ, ವೈಯಕ್ತಿಕ ಸಾಲ ಮತ್ತು ವಾಹನ ಸಾಲಗಳ ಮೇಲೆ ಪರಿಣಾಮ ಬೀರಲಿದೆ. ಈಗಾಗಲೇ ಸಾಲ ಪಡೆದಿರುವವರು ತುಸು ಹೆಚ್ಚಿನ ಮೊತ್ತದ ಇಎಂಐ ಪಾವತಿಸಬೇಕಾಗಬಹುದು. ಫ್ಲೋಟಿಂಗ್ ಇಂಟರೆಸ್ಟ್ ಅನ್ವಯದಲ್ಲಿ ಸಾಲ ಪಡೆದವರಿಗೆ ಈ ಬದಲಾವಣೆ ಆಗುತ್ತದೆ. ಅದಲ್ಲದವರಿಗೆ ಹಳೆಯ ಬಡ್ಡಿ ದರಗಳೇ ಅನ್ವಯ ಆಗುತ್ತವೆ.
ಇದನ್ನೂ ಓದಿ: Money Double: ಆ್ಯಕ್ಸಿಸ್ ಬ್ಯಾಂಕ್ನಲ್ಲಿ ಠೇವಣಿ ಇಟ್ಟರೆ ಬೇಗ ಹಣ ಡಬಲ್; ಅತಿ ಹೆಚ್ಚು ಬಡ್ಡಿ ದರ; ಇಲ್ಲಿದೆ ವಿವರ
ಪ್ರಮುಖ ಬ್ಯಾಂಕುಗಳ ಪೈಕಿ ಆ್ಯಕ್ಸಿಸ್ ಬ್ಯಾಂಕ್ನಲ್ಲಿ ಎಂಸಿಎಲ್ಆರ್ ದರಗಳು ತುಸು ಕಡಿಮೆ ಇವೆ. ಇಲ್ಲಿ 15 ದಿನದ ಅವಧಿಗೆ ಎಂಸಿಎಲ್ಆರ್ ದರ ಶೇ. 7.85 ಇದೆ. ಗರಿಷ್ಠ ಶೇ. 8.20ವರೆಗೂ ದರ ಇದೆ.
ವಿವಿಧ ಬ್ಯಾಂಕುಗಳ ಎಂಸಿಎಲ್ಆರ್ ದರಗಳು
ಐಸಿಐಸಿಐ ಬ್ಯಾಂಕ್: 15 ದಿನದಿಂದ 12 ತಿಂಗಳವರೆಗಿನ ಅವಧಿಗೆ ಶೇ. 8.50ರಿಂದ ಶೇ. 8.75.
ಎಸ್ಬಿಐ: 3 ತಿಂಗಳಿಂದ 24 ತಿಂಗಳವರೆಗಿನ ಅವಧಿಗೆ ಶೇ. 8.10ರಿಂದ ಶೇ. 8.60
ಎಚ್ಡಿಎಫ್ಸಿ ಬ್ಯಾಂಕ್: 15 ದಿನದಿಂದ 36 ತಿಂಗಳ ಅವಧಿಗಳು ಶೇ. 7.90 ರಿಂದ ಶೇ. 8.40
ಆ್ಯಕ್ಸಿಸ್ ಬ್ಯಾಂಕ್: 15ದಿನದಿಂದ 36 ತಿಂಗಳ ಅವಧಿಗೆ ಶೇ. 7.85 ರಿಂದ 8.20
Published On - 6:00 pm, Wed, 1 March 23