ITR: ಐಟಿಆರ್ ಫೈಲ್ ಮಾಡುತ್ತಿದ್ದೀರಾ? ಈ ಕೊನೆಯ ಹಂತ ಮರೆಯದಿರಿ; ಇವೆರಿಫಿಕೇಶನ್ ಪ್ರಕ್ರಿಯೆ ಪೂರ್ಣಗೊಳ್ಳದಿದ್ದರೆ ರೀಫಂಡ್ ಸಿಗಲ್ಲ

|

Updated on: Jul 26, 2023 | 10:55 AM

e-Verification of ITR: ಐಟಿ ರಿಟರ್ನ್ ಸಲ್ಲಿಸುವ ಪ್ರಕ್ರಿಯೆಯಲ್ಲಿ ಹಲವು ಹಂತಗಳಿದ್ದು, ಅದರಲ್ಲಿ ಕೊನೆಯ ಕ್ರಿಯೆ ಇವೆರಿಫಿಕೇಶನ್ ಆಗಿರುತ್ತದೆ. ಅದನ್ನು ತಪ್ಪದೇ ಮಾಡಿದರೆ ಬೇಗ ರೀಫಂಡ್ ಬರುತ್ತದೆ. ಇ ವೆರಿಫೈ ಮಾಡುವ ಪ್ರಕ್ರಿಯೆಯ ವಿವರ ಇಲ್ಲಿದೆ...

ITR: ಐಟಿಆರ್ ಫೈಲ್ ಮಾಡುತ್ತಿದ್ದೀರಾ? ಈ ಕೊನೆಯ ಹಂತ ಮರೆಯದಿರಿ; ಇವೆರಿಫಿಕೇಶನ್ ಪ್ರಕ್ರಿಯೆ ಪೂರ್ಣಗೊಳ್ಳದಿದ್ದರೆ ರೀಫಂಡ್ ಸಿಗಲ್ಲ
ಐಟಿಆರ್
Follow us on

ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿದೆ. ಐಟಿಆರ್-6 ಹೊರತುಪಡಿಸಿ ಉಳಿದ ಎಲ್ಲಾ ನಮೂನೆಯ ಐಟಿಆರ್ ಸಲ್ಲಿಸುವವರಿಗೆ ಈ ತಿಂಗಳವರೆಗೂ ಕಾಲಾವಕಾಶ ಇದೆ. ನಾಲ್ಕೈದು ದಿನಗಳ ಹಿಂದೆ ಸರ್ಕಾರ ನೀಡಿದ ಮಾಹಿತಿ ಪ್ರಕಾರ 11 ಕೋಟಿಗೂ ಹೆಚ್ಚು ನೊಂದಾಯಿತ ತೆರಿಗೆ ಪಾವತಿದಾರರ ಪೈಕಿ ಈಗಾಗಲೇ 7.40 ಕೋಟಿ ಮಂದಿ ರಿಟರ್ನ್ ಸಲ್ಲಿಸಿದ್ದಾರೆ. ಇದು ಈವರೆಗಿನ ಗರಿಷ್ಠ ಸಂಖ್ಯೆಯಾಗಿದೆ. ಇನ್ನೂ ಹಲವರು ಟ್ಯಾಕ್ಸ್ ರಿಟರ್ನ್ ಫೈಲ್ (Income Tax Return) ಮಾಡುವುದು ಬಾಕಿ ಇದೆ. ಇತ್ತೀಚಿನ ವರ್ಷಗಳಿಂದ ಐಟಿಆರ್ ಸಲ್ಲಿಸುವ ಪ್ರಕ್ರಿಯೆ ಸರಳಗೊಳಿಸುತ್ತಾ ಬರಲಾಗಿದೆ. ಆದರೂ ರಿಟರ್ನ್ ಸಲ್ಲಿಕೆಯ ಪ್ರಕ್ರಿಯೆ ಹಲವು ಹಂತಗಳಲ್ಲಿದೆ. ಕೊನೆಯ ಹಂತ ಬಹಳ ಮುಖ್ಯ. ಅದು ಇ ವೆರಿಫಿಕೇಶನ್ (e Verification) ಕ್ರಿಯೆ. ಇದಾದಾಗ ಮಾತ್ರ ಇಫೈಲಿಂಗ್ ಪೂರ್ಣಗೊಂಡಂತಾಗುತ್ತದೆ, ನಿಮಗೆ ರೀಫಂಡ್ ಬರುವುದಿದ್ದರೆ ಬೇಗ ಬರುತ್ತದೆ.

ಐಟಿ ರಿಟರ್ನ್ ಯಾಕೆ ಸಲ್ಲಿಸುವುದು?

ತೆರಿಗೆ ಪಾವತಿದಾರರು ತಮ್ಮ ಆದಾಯವನ್ನು ಪ್ರಕಟಿಸುವ ಪದ್ಧತಿ ಐಟಿ ರಿಟರ್ನ್ ಮೂಲಕ ನಡೆಯುತ್ತದೆ. ಹಿಂದಿನ ಹಣಕಾಸು ವರ್ಷದಲ್ಲಿ ತಮ್ಮ ಆದಾಯ ಮತ್ತು ವೆಚ್ಚಗಳನ್ನು ಐಟಿಆರ್​ನಲ್ಲಿ ಘೋಷಿಸಬೇಕು. ತಮ್ಮ ಸಾಲ, ಹೂಡಿಕೆ ಇತ್ಯಾದಿಗಳನ್ನು ತೋರಿಸಬೇಕು. ಎಷ್ಟು ತೆರಿಗೆ ಬಾಧ್ಯತೆಗಳಿವೆ, ಎಷ್ಟು ತೆರಿಗೆ ರೀಫಂಡ್ ಆಗಬೇಕು ಎಂಬೆಲ್ಲಾ ಲೆಕ್ಕಾಚಾರಗಳು ಈ ಐಟಿಆರ್​ನಲ್ಲಿ ಆಗುತ್ತವೆ. ಎಲ್ಲವನ್ನೂ ಭರ್ತಿ ಮಾಡಿದ ಬಳಿಕ ಅಂತಿಮವಾಗಿ ಇವೆರಿಫಿಕೇಶನ್ ಮಾಡಲು ಮರೆಯದಿರಿ.

ಇದನ್ನೂ ಓದಿ: PhonePe: ಫೋನ್​ಪೇ ಆ್ಯಪ್​ನಲ್ಲಿ ಇನ್ಕಮ್ ಟ್ಯಾಕ್ಸ್ ಹೊಸ ಫೀಚರ್; ಇಲಾಖೆ ಪೋರ್ಟಲ್​ಗೆ ಹೋಗೋ ಅಗತ್ಯ ಇಲ್ಲ

ಐಟಿಆರ್ ಇ-ವೆರಿಫೈ ಮಾಡುವ ವಿಧಾನಗಳು

  • ಇನ್ಕಮ್ ಟ್ಯಾಕ್ಸ್ ಇಫೈಲಿಂಗ್ ಪೋರ್ಟಲ್​ಗೆ ಹೋಗಿ; ಅದರ ವಿಳಾಸ ಇಲ್ಲಿದೆ: www.incometax.gov.in/iec/foportal/
  • ಇ-ಫೈಲ್ ಮೆನು ಮೇಲೆ ಕ್ಲಿಕ್ ಮಾಡಿ, ‘ಇವೆರಿಫೈ ರಿಟರ್ನ್’ ಅನ್ನು ಆಯ್ಕೆಮಾಡಿ
  • ನಿಮ್ಮ ಪ್ಯಾನ್ ನಮೂದಿಸಿ, ಅಸೆಸ್ಮೆಂಟ್ ವರ್ಷ, ಐಟಿಆರ್ ಸಲ್ಲಿಸಿರುವುದಕ್ಕೆ ದೃಢೀಕರಣ ಸಂಖ್ಯೆ, ಮೊಬೈಲ್ ಸಂಖ್ಯೆ ನಮೂದಿಸಿ, ಕಂಟಿನ್ಯೂ ಕ್ಲಿಕ್ ಮಾಡಿ
  • ಯಾವ ವಿಧಾನದ ಇ ವೆರಿಫಿಕೇಶನ್ ಮಾಡುತ್ತೀರಿ ಎಂಬುದನ್ನು ಆರಿಸಿ
  • ಇ ವೆರಿಫಿಕೇಶನ್ ಪ್ರಕ್ರಿಯೆ ಪೂರ್ಣಗೊಳ್ಳಲು ಸೂಚನೆಗಳನ್ನು ಅನುಸರಿಸಿ.

ಇದನ್ನೂ ಓದಿ: ITR Deadline: ಐಟಿ ರಿಟರ್ನ್ ಫೈಲ್ ಮಾಡುವ ಗಡುವು ವಿಸ್ತರಣೆಯಾಗುತ್ತಾ? ಇಲ್ಲಿಯವರೆಗೆ ಐಟಿಆರ್ ಸಲ್ಲಿಸಿದವರೆಷ್ಟು? ಇಲ್ಲಿದೆ ಡೀಟೇಲ್ಸ್

ಐಟಿಆರ್ ಇವೆರಿಫಿಕೇಶನ್ ಮಾಡಲು ಇತರ ವಿಧಾನಗಳು

  • ಆಧಾರ್ ಜೊತೆ ನೊಂದಾಯಿತವಾದ ಮೊಬೈಲ್ ನಂಬರ್​ಗೆ ಒಟಿಪಿ ಪಡೆದು ಆ ಮೂಲಕ ಇವೆರಿಫಿಕೇಶನ್ ಮಾಡಬಹುದು.
  • ಪ್ರೀ-ವ್ಯಾಲಿಡೇಟೆಟ್ ಬ್ಯಾಂಕ್ ಅಕೌಂಟ್ ಮೂಲಕ ಇವಿಸಿ ಜನರೇಟ್ ಮಾಡುವುದು
  • ಪ್ರೀ ವ್ಯಾಲಿಡೇಟೆಟ್ ಡೀಮ್ಯಾಟ್ ಅಕೌಂಟ್ ಮೂಲಕ ಇವಿಸಿ ಪಡೆಯುವುದು
  • ನೆಟ್ ಬ್ಯಾಂಕಿಂಗ್ ಮೂಲಕ
  • ಡಿಜಿಟಲ್ ಸಿಗ್ನೇಚರ್ ಸರ್ಟಿಫಿಕೇಟ್ ಮೂಲಕ
  • ಹಾಗೆಯೇ, ಎಟಿಎಂ ಸೆಂಟರ್​ಗೆ ಹೋಗಿ ಇವಿಸಿ ಜನರೇಟ್ ಮಾಡಬಹುದು.

ಇದನ್ನೂ ಓದಿ: IT Return: ಒಂದಿಷ್ಟು ತೆರಿಗೆ ಉಳಿಸಲು ಆದಾಯ ಕಡಿಮೆ ತೋರಿಸದಿರಿ; ಜೈಲಿಗೆ ಹೋಗಬೇಕಾದೀತು ಜೋಕೆ..!

ಆನ್​ಲೈನ್​ನಲ್ಲಿ ಬೇಡವೆಂದರೆ ಐಟಿಆರ್ ಫಾರ್ಮ್ ಅನ್ನು ಬೆಂಗಳೂರಿನ ಸಿಪಿಸಿ ಸೆಂಟರ್​ಗೆ ಪೋಸ್ಟ್ ಮೂಲಕ ಕಳುಹಿಸಿಕೊಡಬಹುದು. ಅಲ್ಲಿ ಅದರ ವೆರಿಫಿಕೇಶನ್ ನಡೆಯುತ್ತದೆ.

ಐಟಿಆರ್​ನ ವೆರಿಫಿಕೇಶನ್ ಪೂರ್ಣಗೊಂಡರೆ ನಿಮಗೆ ಮೆಸೇಜ್ ಬರುತ್ತದೆ. ನೊಂದಾಯಿತ ಇಮೇಲ್ ಐಡಿಗೆ ಮೇಲ್ ಕೂಡ ಬರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:55 am, Wed, 26 July 23