AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Investment: ಟ್ರೆಷರಿ ಬಿಲ್​ನಲ್ಲಿ ಹೂಡಿಕೆ ಮಾಡಿ; ಎಫ್​ಡಿಗೆ ಉತ್ತಮ ಪರ್ಯಾಯ, ಹೆಚ್ಚು ಬಡ್ಡಿ, ಹೆಚ್ಚು ಸುರಕ್ಷತೆ

Treasury Bill vs Fixed Deposit: ಬ್ಯಾಂಕುಗಳಲ್ಲಿ 1 ವರ್ಷದವರೆಗಿನ ಎಫ್​ಡಿಗಳಿಗೆ ಶೇ. 4.5ರಿಂದ ಶೇ. 6ರವರೆಗೂ ಬಡ್ಡಿ ಸಿಗುತ್ತದೆ. ಅದೇ ಸರ್ಕಾರದ ಟ್ರೆಷರಿ ಬಿಲ್ ಅಥವಾ ಬಾಂಡ್​ಗಳಲ್ಲಿ ಇದೇ ಅವಧಿಗೆ ಹೂಡಿಕೆ ಮಾಡಿದರೆ ಶೇ. 6.7ರಷ್ಟು ಬಡ್ಡಿ ಪಡೆಯಬಹುದು.

Investment: ಟ್ರೆಷರಿ ಬಿಲ್​ನಲ್ಲಿ ಹೂಡಿಕೆ ಮಾಡಿ; ಎಫ್​ಡಿಗೆ ಉತ್ತಮ ಪರ್ಯಾಯ, ಹೆಚ್ಚು ಬಡ್ಡಿ, ಹೆಚ್ಚು ಸುರಕ್ಷತೆ
ಟ್ರೆಷರಿ ಬಿಲ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 25, 2023 | 5:01 PM

Share

ಹಣಕಾಸು ಸಮೃದ್ಧಿಗೆ ಎರಡು ಪ್ರಮುಖ ಅಂಶಗಳಿವೆ. ಒಂದು, ಗಳಿಸಿದ ಹಣವನ್ನು ಸಾಧ್ಯವಾದಷ್ಟೂ ಉಳಿಸುವುದು. ಉಳಿಸಿದ ಹಣವನ್ನು ಸಾಧ್ಯವಾದಷ್ಟೂ ಹೂಡಿಕೆ ಮಾಡುವುದು. ಭಾರತೀಯರಲ್ಲಿ ದಿನೇ ದಿನೇ ಹೂಡಿಕೆ ಪ್ರವೃತ್ತಿ ಹೆಚ್ಚುತ್ತಿದೆ. ಹೆಚ್ಚಿನ ಮಂದಿಗೆ ಈಗಲೂ ಎಫ್​ಡಿ ಯೋಜನೆಯು ಪ್ರಮುಖ ಹೂಡಿಕೆ ಸಾಧನವಾಗಿದೆ. ವರದಿಗಳ ಪ್ರಕಾರ ಭಾರತದಲ್ಲಿ ಪ್ರತೀ ವರ್ಷ 60 ಲಕ್ಷಕೋಟಿ ರೂನಷ್ಟು ಹೂಡಿಕೆಗಳಾಗುತ್ತಿವೆ. ಬ್ಯಾಂಕ್ ಠೇವಣಿಗಳಿಂದ ಹಿಡಿದು ಷೇರುಮಾರುಕಟ್ಟೆಯವರೆಗೂ ಹೂಡಿಕೆಗಳು (Investment) ಇದರಲ್ಲಿವೆ. ಈ ಪೈಕಿ ಎಫ್​ಡಿ ಮತ್ತು ಚಿನ್ನದ ಮೇಲೆ ಶೇ. 15ರಷ್ಟು ಹೂಡಿಕೆಯಾಗುತ್ತವಂತೆ. ಎಫ್​ಡಿ ವಿಚಾರಕ್ಕೆ ಬಂದರೆ ಬ್ಯಾಂಕುಗಳು, ಪೋಸ್ಟ್ ಆಫೀಸ್ ಇತ್ಯಾದಿಯಲ್ಲಿ ಠೇವಣಿ ಸ್ಕೀಮ್​ಗಳುಂಟು. ಉತ್ತಮ ಬಡ್ಡಿ ಮತ್ತು ಸುರಕ್ಷತೆ ಹಾಗೂ ಸುಲಭ ನಿರ್ವಹಣೆ ಕಾರಣದಿಂದ ನಿಶ್ಚಿತ ಠೇವಣಿಗಳು ಜನಪ್ರಿಯವಾಗಿವೆ. ಈಗ ಸರ್ಕಾರದ್ದೇ ಟ್ರೆಷರಿ ಬಿಲ್​ಗಳು (Treasury Bills) ಎಫ್​ಡಿಗೆ ಉತ್ತಮ ಪರ್ಯಾಯ ಎನಿಸಿವೆ. ಇವು ಹೆಚ್ಚು ಬಡ್ಡಿ ಮತ್ತು ಸುರಕ್ಷತೆಯನ್ನು ಒದಗಿಸುತ್ತವೆ.

ಏನಿವು ಟ್ರೆಷರಿ ಬಿಲ್​ಗಳು?

ಹೂಡಿಕೆದಾರರು ಅಥವಾ ಜನಸಾಮಾನ್ಯರಿಂದ ಸಾಲ ಪಡೆಯಲು ಸರ್ಕಾರ ನೀಡುವ ಬಿಲ್ ಅಥವಾ ಸಾಲ ಪತ್ರಗಳಿವು. ನಿಶ್ಚಿತ ಠೇವಣಿಗಳಂತೆ ನಿರ್ದಿಷ್ಟ ಅವಧಿಗೆ ಇವು ಮೆಚ್ಯೂರ್ ಆಗುತ್ತವೆ. ನಿಗದಿತ ಬಡ್ಡಿ ದರದಲ್ಲಿ ರಿಟರ್ನ್ ಸಿಗುತ್ತದೆ.

ಇದನ್ನೂ ಓದಿ: Youtube Income: ಫೇಸ್ಬುಕ್, ಇನ್​ಸ್ಟಾ ರೀಲ್ಸ್, ಯೂಟ್ಯೂಬ್​ನಿಂದ ಗಳಿಸಿದ ಆದಾಯಕ್ಕೆ ತೆರಿಗೆ ಎಷ್ಟು? ಹೇಗೆ ಸಲ್ಲಿಸುವುದು?

ಟ್ರೆಷರಿ ಬಿಲ್​ಗಳನ್ನು ಸರ್ಕಾರದ ಪರವಾಗಿ ಆರ್​ಬಿಐ ಪ್ರತೀ ವಾರ ವಿತರಿಸುತ್ತದೆ. 91 ದಿನ, 182 ದಿನ ಮತ್ತು 364 ದಿನಗಳ ಮೆಚ್ಯೂರಿಟಿ ಇರುವ ವಿವಿಧ ಟ್ರೆಷರಿ ಬಿಲ್​ಗಳ ಆಯ್ಕೆ ಹೂಡಿಕೆದಾರರಿಗೆ ಇರುತ್ತದೆ. ಇವುಗಳಿಗೆ ಶೇ. 6.7 ರಷ್ಟು ವಾರ್ಷಿಕ ಬಡ್ಡಿ ದರ ಇರುತ್ತದೆ. ಇದೇ ಅವಧಿಗೆ ಬೇರೆ ಸಾಮಾನ್ಯ ಎಫ್​ಡಿಗಳಲ್ಲಿ ಸಿಗುವ ಬಡ್ಡಿ ಶೇ. 4.5ರಿಂದ ಶೇ. 6ರಷ್ಟು ಮಾತ್ರ.

ಸರ್ಕಾರವೇ ವಿತರಿಸುವ ಸಾಲಪತ್ರವಾದ್ದರಿಂದ ನಿಮ್ಮ ಹಣ ಸುರಕ್ಷಿತವಾಗಿರುತ್ತದೆ. ಜೊತೆಗೆ ಉತ್ತಮ ಬಡ್ಡಿಯನ್ನೂ ಕೊಡುತ್ತದೆ. ಎಫ್​ಡಿಯಲ್ಲಿ ಎಷ್ಟು ಬೇಕಾದರೂ ಹಣವನ್ನು ಠೇವಣಿಗೆ ಇಡಬಹುದು. ಆದರೆ, ಟ್ರೆಷರಿ ಬಿಲ್​ನಲ್ಲಿ ಕನಿಷ್ಠ ಹೂಡಿಕೆ 25,000 ರೂ ಇರಬೇಕು.

ಆದರೆ ಎಫ್​ಡಿಯಲ್ಲಿ ಟಿಡಿಎಸ್ ಮುರಿದುಕೊಳ್ಳುವಂತೆ ಟ್ರೆಷರಿ ಬಿಲ್​ನಿಂದ ಬರುವ ಆದಾಯವನ್ನು ಅಲ್ಪಾವಧಿ ಲಾಭ ಹೆಚ್ಚಳ ಎಂದು ಪರಿಗಣಿಸಿ ಅದಕ್ಕೆ ತೆರಿಗೆ ಹಾಕಲಾಗುತ್ತದೆ.

ಇದನ್ನೂ ಓದಿ: LIC Loan: ಎಲ್​ಐಸಿ ಪಾಲಿಸಿ ಮೇಲೆ ಸಾಲ ಪಡೆಯುವುದು ಹೇಗೆ? ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸುವ ವಿಧಾನ

ಟ್ರೆಷರಿ ಬಿಲ್​ಗಳನ್ನು ಎಲ್ಲಿ ಪಡೆಯುವುದು?

ನೀವು ಟ್ರೆಷರಿ ಬಿಲ್ ಪಡೆಯಬೇಕಾದರೆ ಡೀಮ್ಯಾಟ್ ಅಕೌಂಟ್ ಹೊಂದಿರಬೇಕು. ಆರ್​ಬಿಐ ಪ್ರತೀ ವಾರ ನಡೆಸುವ ಹರಾಜಿನಲ್ಲಿ ಇದನ್ನು ಖರೀದಿಸಬಹುದು. ಹೂಡಿಕೆದಾರ ನೇರವಾಗಿ ಹರಾಜಿನಲ್ಲಿ ಪಾಲ್ಗೊಳ್ಳಲು ಆಗುವುದಿಲ್ಲ. ಬ್ಯಾಂಕ್ ಅಥವಾ ಬ್ರೋಕರ್ ಮೂಲಕ ಈ ಬಾಂಡ್​ಗಳನ್ನು ಪಡೆಯಬಹುದು. ನಂತರ ಬೇಕಾದರೆ ಈ ಟ್ರೆಷರಿ ಬಿಲ್​ಗಳನ್ನು ಎನ್​ಎಸ್​ಇ, ಬಿಎಸ್​ಇ ಇತ್ಯಾದಿ ಷೇರು ವಿನಿಮಯ ಕೇಂದ್ರಗಳಲ್ಲಿ ಮಾರಾಟ ಮಾಡಬಹುದು. ಈ ಬಿಲ್​ಗಳು ಮೆಚ್ಯೂರ್ ಆಗುವ ಮುನ್ನ ಅವನ್ನು ಮಾರಿ ಹಣ ಪಡೆದುಕೊಳ್ಳಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಜಸ್ಥಾನದಲ್ಲಿ ಭಾರೀ ಪ್ರವಾಹ; ಒಂದೇ ದಿನದಲ್ಲಿ 6 ಜನ ಸಾವು
ರಾಜಸ್ಥಾನದಲ್ಲಿ ಭಾರೀ ಪ್ರವಾಹ; ಒಂದೇ ದಿನದಲ್ಲಿ 6 ಜನ ಸಾವು
ಭಾವಿ ಪತಿಯ ಜೊತೆಗೆ ಆರತಿ ಮಾಡಿದ ಆಂಕರ್ ಅನುಶ್ರೀ, ಹಳೆ ವಿಡಿಯೋ ವೈರಲ್
ಭಾವಿ ಪತಿಯ ಜೊತೆಗೆ ಆರತಿ ಮಾಡಿದ ಆಂಕರ್ ಅನುಶ್ರೀ, ಹಳೆ ವಿಡಿಯೋ ವೈರಲ್
ಬುಧವಾರ ಪುನಃ ವಿಚಾರಣೆಗೆ ಬರಲು ಹೇಳಿದ್ದಾರೆ: ಭೈರತಿ ಬಸವರಾಜ
ಬುಧವಾರ ಪುನಃ ವಿಚಾರಣೆಗೆ ಬರಲು ಹೇಳಿದ್ದಾರೆ: ಭೈರತಿ ಬಸವರಾಜ
ಭೂಪಾಲ್​ನ ಶಾಲೆಯಲ್ಲಿ ಸೀಲಿಂಗ್ ಪ್ಲಾಸ್ಟರ್ ಬಿದ್ದು ಇಬ್ಬರಿಗೆ ಗಾಯ
ಭೂಪಾಲ್​ನ ಶಾಲೆಯಲ್ಲಿ ಸೀಲಿಂಗ್ ಪ್ಲಾಸ್ಟರ್ ಬಿದ್ದು ಇಬ್ಬರಿಗೆ ಗಾಯ
ಶ್ರೀಗಳ ವಿರುದ್ಧ ಆಡಿದ ಮಾತನ್ನು ಕಾಶಪ್ಪನವರ್ ವಾಪಸ್ಸ ಪಡೆಯಬೇಕು: ವೀರಣ್ಣ
ಶ್ರೀಗಳ ವಿರುದ್ಧ ಆಡಿದ ಮಾತನ್ನು ಕಾಶಪ್ಪನವರ್ ವಾಪಸ್ಸ ಪಡೆಯಬೇಕು: ವೀರಣ್ಣ
ಬಸವರಾಜ ಆಸಂಗಿ, ಲಕ್ಷ್ಮಿ ವಿರುದ್ಧ ಪೊಲೀಸ್ ದೂರು ಸಲ್ಲಿಸಿರುವ ಸಂತ್ರಸ್ತೆ
ಬಸವರಾಜ ಆಸಂಗಿ, ಲಕ್ಷ್ಮಿ ವಿರುದ್ಧ ಪೊಲೀಸ್ ದೂರು ಸಲ್ಲಿಸಿರುವ ಸಂತ್ರಸ್ತೆ
ಎಂಎ ಸಲೀಂರನ್ನು ಐಜಿ-ಡಿಜಿಪಿ ನೇಮಕಾತಿ ಹಿಂದೆ ರಾಜಕೀಯ ಇದೆ: ಅನುಪಮಾ ಶೆಣೈ
ಎಂಎ ಸಲೀಂರನ್ನು ಐಜಿ-ಡಿಜಿಪಿ ನೇಮಕಾತಿ ಹಿಂದೆ ರಾಜಕೀಯ ಇದೆ: ಅನುಪಮಾ ಶೆಣೈ
ಹ್ಯಾಟ್ರಿಕ್ ವಿಕೆಟ್ ಉರುಳಿಸಿದ ಪಾಕ್ ಮೂಲದ ಫರ್ಹಾನ್
ಹ್ಯಾಟ್ರಿಕ್ ವಿಕೆಟ್ ಉರುಳಿಸಿದ ಪಾಕ್ ಮೂಲದ ಫರ್ಹಾನ್
ಸಮಸ್ಯೆ ಹೆಚ್ಚುತ್ತಿದೆ, ಕೂಡಲೇ ಸರ್ಕಾರ ಮಧ್ಯಪ್ರವೇಶಿಸಬೇಕು: ಧಾಬಾ ಮಾಲೀಕ
ಸಮಸ್ಯೆ ಹೆಚ್ಚುತ್ತಿದೆ, ಕೂಡಲೇ ಸರ್ಕಾರ ಮಧ್ಯಪ್ರವೇಶಿಸಬೇಕು: ಧಾಬಾ ಮಾಲೀಕ
ಸಾಧನಾ ಸಮಾವೇಶದಿಂದ ವಾಪಸ್​ ಬರುತ್ತಿದ್ದ ಡಿಕೆಶಿ ಎಸ್ಕಾರ್ಟ್​​ ವಾಹನ ಪಲ್ಟಿ
ಸಾಧನಾ ಸಮಾವೇಶದಿಂದ ವಾಪಸ್​ ಬರುತ್ತಿದ್ದ ಡಿಕೆಶಿ ಎಸ್ಕಾರ್ಟ್​​ ವಾಹನ ಪಲ್ಟಿ