ಈ ವರ್ಷದ ಮೊದಲ ಪೂರ್ಣಪ್ರಮಾಣದ ಬಜೆಟ್ ಜುಲೈನಲ್ಲಿ ನಡೆಯುವ ಸಾಧ್ಯತೆ ಇದೆ. ಅಕ್ಷರಶಃ ಮೈತ್ರಿ ಸರ್ಕಾರ (NDA Alliance government) ಅಸ್ತಿತ್ವಕ್ಕೆ ಬರುವುದರಿಂದ ಸಾಕಷ್ಟು ತೆರಿಗೆ ಭತ್ಯೆಗಳನ್ನು (tax benefits) ನಿರೀಕ್ಷಿಸಬಹುದು. ಈ ಹಿನ್ನೆಲೆಯಲ್ಲಿ ಬಜೆಟ್ನಲ್ಲಿ ಆದಾಯ ತೆರಿಗೆ ಬಗ್ಗೆ ಎಲ್ಲರ ಕುತೂಹಲ ನೆಟ್ಟಿದೆ. ಸದ್ಯ ಐಟಿ ಪಾವತಿದಾರರ ಮುಂದೆ ಎರಡು ಆಯ್ಕೆಗಳಿಗೆ. ಒಂದು, ಹಳೆಯ ಟ್ಯಾಕ್ಸ್ ರೆಜಿಮೆ, ಮತ್ತೊಂದು ಹೊಸ ಟ್ಯಾಕ್ಸ್ ರೆಜಿಮೆ. ಹೊಸ ಟ್ಯಾಕ್ಸ್ ಸಿಸ್ಟಂ ಒಂದು ರೀತಿಯಲ್ಲಿ ಒನ್ವೇ. ಅಲ್ಲಿಗೆ ಹೋದರೆ ನಿಮಗೆ ಮತ್ತೊಂದು ಆಯ್ಕೆ ಇಲ್ಲ. ಒಮ್ಮೆ ನೀವು ಹೊಸ ಟ್ಯಾಕ್ಸ್ ರೆಜಿಮೆ (New Tax Regime) ಆಯ್ದುಕೊಂಡರೆ ಕೊನೆಯವರೆಗೂ ಅದೇ ಸಿಸ್ಟಂ ಅನ್ವಯ ಆಗುತ್ತದೆ. ಈಗಲೂ ಕೂಡ ಹೆಚ್ಚಿನ ಜನರು ಹಳೆಯ ಟ್ಯಾಕ್ಸ್ ಸಿಸ್ಟಂನಲ್ಲೇ ಮುಂದುವರಿಯುತ್ತಿದ್ದಾರೆ.
ಹಳೆಯ ಟ್ಯಾಕ್ಸ್ ರೆಜಿಮೆಯಲ್ಲಿ ಸ್ಲ್ಯಾಬ್ ರೇಟ್ ಹೆಚ್ಚಿದೆ. ಆದರೆ, ಅದರ ಜೊತೆಗೆ ವಿವಿಧ ತೆರಿಗೆ ವಿನಾಯಿತಿ, ತೆರಿಗೆ ರಿಯಾಯಿತಿಗಳೂ ಲಭ್ಯ ಇವೆ. ಮನೆ ಬಾಡಿಗೆ ಭತ್ಯೆ (ಹೌಸ್ ರೆಂಟ್ ಅಲೋಯನ್ಸ್), ಲೀವ್ ಟ್ರಾವಲ್ ರಿಯಾಯಿತಿ, ಸೆಕ್ಷನ್ 80ಸಿ ಅಡಿಯಲ್ಲಿನ ಡಿಡಕ್ಷನ್ಸ್, ಸೆಕ್ಷನ್ 80 ಡಿ ಅಡಿಯಲ್ಲಿ ಮೆಡಿಕಲ್ ಇನ್ಷೂರೆನ್ಸ್ ಪ್ರೀಮಿಯಮ್, ಸೆಕ್ಷನ್ 80ಸಿಸಿಡಿ ಅಡಿಯಲ್ಲಿ ಎನ್ಪಿಎಸ್ ಹೀಗೆ ವಿವಿಧ ಹೂಡಿಕೆಗಳ ನಿರ್ದಿಷ್ಟ ಮೊತ್ತಗಳಿಗೆ ತೆರಿಗೆ ವಿನಾಯಿತಿ ಸಿಗುತ್ತದೆ.
ಇದನ್ನೂ ಓದಿ: ಈ ನಮ್ಮ ಬೇಡಿಕೆ ಈಡೇರಿಸಿ: ಹೊಸ ಸರ್ಕಾರಕಕ್ಕೆ ರಿಯಲ್ ಎಸ್ಟೇಟ್ ಉದ್ಯಮದ ಕೋರಿಕೆ
ಸೆಕ್ಷನ್ 80ಸಿ ಅಡಿಯಲ್ಲಿ ಪಿಪಿಎಫ್, ಇಪಿಎಫ್, ಇಎಲ್ಎಸ್ಎಸ್ ಹೂಡಿಕೆಗಳಿಗೆ ಟ್ಯಾಕ್ಸ್ ಡಿಡಕ್ಷನ್ ಅವಕಾಶವು ಓಲ್ಡ್ ಟ್ಯಾಕ್ಸ್ ರೆಜಿಮೆಯಲ್ಲಿ ಲಭ್ಯ ಇರುತ್ತದೆ. ಹೀಗಾಗಿ, ಜನರಿಗೆ ಹಣ ಉಳಿಸಲು, ಹೂಡಿಕೆ ಮಾಡಲು ಉತ್ತೇಜನ ಸಿಗುತ್ತದೆ.
ಖಾಸಗಿ ಕಂಪನಿಗಳ ಉದ್ಯೋಗಿಗಳಿಗೆ ನಿವೃತ್ತಿ ಬಳಿಕ ಪಿಂಚಣಿ ಅವಕಾಶ ಇರುವುದಿಲ್ಲ. ದುಡಿಮೆಯ ಅವಧಿಯಲ್ಲಿ ಏನೆಲ್ಲಾ ಹಣ ಕೂಡಿಟ್ಟಿರುತ್ತಾರೋ ಅದಷ್ಟೇ ನಿವೃತ್ತಿ ಕಾಲಕ್ಕೆ ಆಗಿಬರುವುದು. ಈ ಹಿನ್ನೆಲೆಯಲ್ಲಿ ಉದ್ಯೋಗಿಗಳು ತಮ್ಮ ಸಂಬಳದಲ್ಲಿ ಹೆಚ್ಚಿನ ಹಣವನ್ನು ಇಪಿಎಫ್, ಎನ್ಪಿಎಸ್, ಪಿಪಿಎಫ್ ಮತ್ತು ಇಎಲ್ಎಸ್ಎಸ್ ಫಂಡ್ಗಳಿಗೆ ವಿನಿಯೋಗಿಸಬೇಕು. ಇದರಿಂದ ಉತ್ತಮ ಎನಿಸುವ ರಿಟೈರ್ಮೆಂಟ್ ಫಂಡ್ ನಿಮಗೆ ಸಿಗುತ್ತದೆ.
ಹಳೆಯ ಟ್ಯಾಕ್ಸ್ ರೆಜಿಮೆಯನ್ನು ರದ್ದುಗೊಳಿಸಿದರೆ ಟ್ಯಾಕ್ಸ್ ಬೆನಿಫಿಟ್ನ ಆಕರ್ಷಣೆ ಕಡಿಮೆ ಆಗುತ್ತದೆ. ಹೊಸ ಟ್ಯಾಕ್ಸ್ ರೆಜಿಮೆಯಲ್ಲಿ ಟ್ಯಾಕ್ಸ್ ಡಿಡಕ್ಷನ್ಗಳಿಲ್ಲ. ಒಟ್ಟಾರೆ ತೆರಿಗೆ ಪ್ರಮಾಣ ಕಡಿಮೆ ಆದರೂ ಜನರಲ್ಲಿ ನಿವೃತ್ತಿ ಸ್ಕೀಮ್ಗಳಿಗೆ ಹಣ ತೊಡಗಿಸಲು ಉತ್ತೇಜನ ಸಿಗದಂತಾಗುತ್ತದೆ. ಈ ಕಾರಣಕ್ಕೆ ಹೆಚ್ಚಿನ ಜನರು ಈಗಲೂ ಕೂಡ ಹಳೆಯ ಟ್ಯಾಕ್ಸ್ ರೆಜಿಮೆಯನ್ನೇ ಮುಂದುವರಿಸುತ್ತಿರಬಹುದು.
ಇದನ್ನೂ ಓದಿ: ಪರ್ಸನಲ್ ಲೋನ್ ಅನ್ನು ಮುಂಗಡವಾಗಿ ತೀರಿಸಬೇಕೆ? ಈ ಅಂಶಗಳು ತಿಳಿದಿರಲಿ
ಸರ್ಕಾರ ಹೊಸ ಟ್ಯಾಕ್ಸ್ ರೆಜಿಮೆಯಲ್ಲಿ ಸೂಕ್ತ ಬದಲಾವಣೆ ಮಾಡಿದರೆ ಉತ್ತಮ ಎನ್ನುವ ಸಲಹೆ ಕೇಳಿಬರುತ್ತಿದೆ. ಟ್ಯಾಕ್ಸ್ ಬೆನಿಫಿಟ್ ಅಥವಾ ತೆರಿಗೆ ವಿನಾಯಿತಿಗಳನ್ನು ಕಲ್ಪಿಸುವುದು ಸಮಂಜಸ ಎಂಬ ಅನಿಸಿಕೆ ಇದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ