ನವದೆಹಲಿ, ಜೂನ್ 11: ಗ್ರಾಹಕರಿಂದ ಹೆಚ್ಚೆಚ್ಚು ಠೇವಣಿಗಳನ್ನು ಆಕರ್ಷಿಸುವಂತಹ ಪ್ಲಾನ್ಗಳನ್ನು ಘೋಷಿಸಲು ಅನುಮತಿಸುವಂತೆ ಎಸ್ಬಿಐ ಸೇರಿದಂತೆ ವಿವಿಧ ಸರ್ಕಾರಿ ಬ್ಯಾಂಕುಗಳು ಸರ್ಕಾರಕ್ಕೆ ಮನವಿ ಮಾಡಿವೆ. ಬ್ಯಾಂಕುಗಳಲ್ಲಿ ಠೇವಣಿ ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ ಬ್ಯಾಂಕುಗಳು ಹೊಸ ಮಾದರಿ ಕ್ರಮಗಳಿಗೆ ಆಲೋಚಿಸುತ್ತಿವೆ. ಈ ನಿಟ್ಟಿನಲ್ಲಿ ವಿವಿಧ ಸಲಹೆಗಳನ್ನು ಸರ್ಕಾರಕ್ಕೆ ನೀಡಲಾಗಿದೆ. ತೆರಿಗೆ ಉಳಿಸುವ ನಿಶ್ಚಿತ ಠೇವಣಿಗಳಿಗೆ (Tax saving Fixed Deposit) ಸದ್ಯ ಐದು ವರ್ಷದವರೆಗೆ ಲಾಕ್ ಇನ್ ಅವಧಿ ಇದೆ. ಇದನ್ನು ಮೂರು ವರ್ಷಕ್ಕೆ ಇಳಿಸಲು ಅವಕಾಶ ಕೊಡಬೇಕೆಂಬುದು ಈ ಸಲಹೆಗಳಲ್ಲಿ ಒಂದು.
2023-24ರ ಹಣಕಾಸು ವರ್ಷದಲ್ಲಿ ಬ್ಯಾಂಕುಗಳಲ್ಲಿ ಪಡೆಯಲಾಗುವ ಸಾಲಕ್ಕೆ ಹೋಲಿಸಿದರೆ, ಠೇವಣಿಗಳ ಪ್ರಮಾಣ ಬಹಳ ಕಡಿಮೆ ಇದೆ. ಹಣ ಸಂಗ್ರಹಕ್ಕಾಗಿ ಬ್ಯಾಂಕುಗಳು ಸರ್ಟಿಫಿಕೇಟ್ ಆಫ್ ಡೆಪಾಸಿಟ್ (ಸಿಡಿ) ಪ್ಲಾನ್ಗಳ ಮೊರೆ ಹೋಗುವಂತಾಗಿದೆ. ಈ ರೀತಿಯ ಸಿಡಿ ಠೇವಣಿಗಳಿಗೆ ಬ್ಯಾಂಕುಗಳು ಹೆಚ್ಚು ಬಡ್ಡಿ ನೀಡುತ್ತವೆ.
ಇದನ್ನೂ ಓದಿ: ಆರ್ಬಿಐ ರೆಪೋ ದರ ಇಳಿಸದಿದ್ದರೂ ಬ್ಯಾಂಕುಗಳು ಬಡ್ಡಿದರ ಹೆಚ್ಚಿಸುವ ಸಾಧ್ಯತೆ
ಸಾಮಾನ್ಯವಾಗಿ ಜನರು ಬ್ಯಾಂಕುಗಳಲ್ಲಿ ಎಫ್ಡಿ ಇಡುವುದಕ್ಕಿಂತ ಹೆಚ್ಚಾಗಿ ಷೇರುಗಳಲ್ಲಿ, ಮ್ಯೂಚುವಲ್ ಫಂಡ್ಗಳಲ್ಲಿ, ಇಎಲ್ಎಸ್ಎಸ್ ಫಂಡ್ಗಳಲ್ಲಿ ಇತ್ಯಾದಿ ಕಡೆ ಹಣ ಹೂಡಿಕೆ ಮಾಡಲು ಆದ್ಯತೆ ನೀಡುತ್ತಿದ್ದಾರೆ. ಅಲ್ಲಿ ಲಾಕ್ ಇನ್ ಪೀರಿಯಡ್ ಐದು ವರ್ಷ ಇದ್ದರೂ ಹೆಚ್ಚು ರಿಟರ್ನ್ ಸಿಗುವ ಅವಕಾಶ ಹೆಚ್ಚಿರುತ್ತದೆ. ಹೀಗಾಗಿ, ಹೆಚ್ಚು ಜನರು ಷೇರು ಮಾರುಕಟ್ಟೆಯತ್ತ ವಾಲುತ್ತಿರುವುದು ಬ್ಯಾಂಕುಗಳ ಗಮನಕ್ಕೆ ಬಂದಿದೆ.
ಈ ಹಿನ್ನೆಲೆಯಲ್ಲಿ ಬ್ಯಾಂಕುಗಳ ಸಾಂಪ್ರದಾಯಿಕ ನಿಶ್ಚಿತ ಠೇವಣಿಗಳಲ್ಲೇ ಒಂದಷ್ಟು ಬದಲಾವಣೆಗಳನ್ನು ತಂದು ಹೂಡಿಕೆದಾರರನ್ನು ಆಕರ್ಷಿಸಬೇಕೆನ್ನುವುದು ಬ್ಯಾಂಕುಗಳ ವಾದ. ಟ್ಯಾಕ್ಸ್ ಸೇವಿಂಗ್ ಫಿಕ್ಸೆಡ್ ಡೆಪಾಸಿಟ್ಗಳಲ್ಲಿ ಲಾಕ್ ಇನ್ ಪೀರಿಯಡ್ ಅನ್ನು ಐದು ವರ್ಷದಿಂದ ಮೂರು ವರ್ಷಕ್ಕೆ ಇಳಿಸುವುದರಿಂದ ಲಾಭವಾಗಬಹುದು ಎಂಬ ಅನಿಸಿಕೆ ಬ್ಯಾಂಕುಗಳದ್ದು.
ಇದನ್ನೂ ಓದಿ: ಕ್ರೆಡಿಟ್ ಕಾರ್ಡ್ ಎಷ್ಟು ಬಳಸುತ್ತೀರಿ? ನಿಮ್ಮ ಸಿಬಿಲ್ ಸ್ಕೋರ್ ಕಡಿಮೆ ಆಗದಂತೆ ಎಚ್ಚರವಹಿಸಿ
2023-24ರ ವರ್ಷದಲ್ಲಿ ಬ್ಯಾಂಕುಗಳಲ್ಲಿ ನೀಡಲಾದ ಸಾಲದ ಪ್ರಮಾಣದಲ್ಲಿ ಶೇ. 16.3ರಷ್ಟು ಹೆಚ್ಚಳವಾಗಿದೆ. ಠೇವಣಿಗಳ ಪ್ರಮಾಣದಲ್ಲಿ ಏರಿಕೆ ಆಗಿರುವುದು ಶೇ. 12.9 ಮಾತ್ರ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ