ಐಪಿಒದಲ್ಲಿ ಷೇರು ಖರೀದಿಸಿ ಲಿಸ್ಟಿಂಗ್​ನಲ್ಲಿ ಮಾರಿದಾಗ ಎಷ್ಟು ತೆರಿಗೆ ಕಟ್ಟಬೇಕು?

|

Updated on: Jun 03, 2024 | 6:16 PM

Stock market taxes and charges: ಷೇರು ಮಾರಾಟ ಮಾಡಿದಾಗ ಅದಕ್ಕೆ ವಿವಿಧ ರೀತಿಯ ಶುಲ್ಕಗಳನ್ನು ವಿಧಿಸಲಾಗುತ್ತದೆ. ಮಾರಾಟದಿಂದ ಲಾಭ ಬಂದರೆ ಅದಕ್ಕೆ ತೆರಿಗೆಗಳು ಇರುತ್ತವೆ. ಷೇರು ಖರೀದಿಸಿ ಒಂದು ವರ್ಷದೊಳಗೆ ಅದನ್ನು ಮಾರಿ ಲಾಭ ಮಾಡಿದರೆ ಆ ಲಾಭದ ಹಣಕ್ಕೆ ಶೇ. 15ರಷ್ಟು ಶಾರ್ಟ್ ಟರ್ಮ್ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಕಟ್ಟಬೇಕಾಗುತ್ತದೆ. ಒಂದು ವರ್ಷದ ಬಳಿಕ ಲಾಭಕ್ಕೆ ಮಾರಿದರೆ ಅದಕ್ಕೆ ಕಟ್ಟಬೇಕಾದ ತೆರಿಗೆ ಕಡಿಮೆ ಇರುತ್ತದೆ. ಅಲ್ಲದೇ ಒಂದು ಲಕ್ಷ ರೂವರೆಗಿನ ಲಾಭದ ಹಣಕ್ಕೆ ತೆರಿಗೆ ವಿನಾಯಿತಿ ಇರುತ್ತದೆ.

ಐಪಿಒದಲ್ಲಿ ಷೇರು ಖರೀದಿಸಿ ಲಿಸ್ಟಿಂಗ್​ನಲ್ಲಿ ಮಾರಿದಾಗ ಎಷ್ಟು ತೆರಿಗೆ ಕಟ್ಟಬೇಕು?
ಷೇರು ಮಾರಾಟ
Follow us on

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಐಪಿಒಗಳು ಒಳ್ಳೆಯ ಲಿಸ್ಟಿಂಗ್ ಬೆಲೆ ಪಡೆದುಕೊಳ್ಳುತ್ತಿವೆ. ಅಂದರೆ ಐಪಿಒದಲ್ಲಿ ಷೇರುಗಳು ಬಿಕರಿಯಾದಾಗ ಇದ್ದ ಬೆಲೆ ಲಿಸ್ಟಿಂಗ್ ವೇಳೆ ಬದಲಾಗಬಹುದು. ಗ್ರೇ ಮಾರ್ಕೆಟ್​ನಲ್ಲಿ (GMP) ಇರುವ ಬೇಡಿಕೆಗೆ ಅನುಗುಣವಾದ ಬೆಲೆಗೆ ಷೇರು ಲಿಸ್ಟ್ ಆಗಬಹುದು. ಐಪಿಒಗಿಂತ ಹೆಚ್ಚಿನ ಬೆಲೆಗೆ ಷೇರು ಲಿಸ್ಟ್ ಆದಾಗ ಅದು ಷೇರುದಾರರಿಗೆ ಲಿಸ್ಟಿಂಗ್ ಗೇಯ್ನ್ (listing gain) ಆಗುತ್ತದೆ. ಇಂಡಿಜೀನ್ ಇತ್ಯಾದಿ ಷೇರುಗಳು ಹೆಚ್ಚಿನ ಮಟ್ಟದ ಬೆಲೆಗೆ ಲಿಸ್ಟಿಂಗ್ ಆಗಿವೆ. ಹಲವು ಹೂಡಿಕೆದಾರರು ಲಿಸ್ಟಿಂಗ್ ಲಾಭಕ್ಕಾಗೆಂದೇ ಐಪಿಒದಲ್ಲಿ ಷೇರು ಪಡೆಯಲು ಹವಣಿಸುತ್ತಾರೆ. ಈ ರೀತಿ ಐಪಿಒದಲ್ಲಿ ಷೇರು ಖರೀದಿಸಿ, ಲಿಸ್ಟಿಂಗ್ ಲಾಭಕ್ಕೆ ಮಾರಿದರೆ ತೆರಿಗೆ ಕಟ್ಟಬೇಕಾಗುತ್ತದೆ.

ಎಸ್​ಟಿಸಿಜಿ ತೆರಿಗೆ ಅನ್ವಯ

ಎಸ್​ಟಿಸಿಜಿ ಎಂದರೆ ಶಾರ್ಟ್ ಟರ್ಮ್ ಕ್ಯಾಪಿಟಲ್ ಗೇಯ್ನ್ ಟ್ಯಾಕ್ಸ್. ಹೂಡಿಕೆ ಮಾಡಿ ಒಂದು ವರ್ಷದೊಳಗೆ ಅದನ್ನು ಮಾರಿ ಗಳಿಸುವ ಲಾಭದ ಮೊತ್ತಕ್ಕೆ ಶಾರ್ಟ್ ಟರ್ಮ್ ಕ್ಯಾಪಿಟಲ್ ಗೇನ್ ತೆರಿಗೆ ಅನ್ವಯ ಆಗುತ್ತದೆ. ಲಿಸ್ಟಿಂಗ್ ಲಾಭಕ್ಕೆ ಷೇರು ಮಾರಿದಾಗ ಅದಕ್ಕೆ ಈ ತೆರಿಗೆ ಅನ್ವಯ ಆಗುತ್ತದೆ. ಸದ್ಯ ಈ ತೆರಿಗೆ ಮೊತ್ತ ಶೇ. 15ರಷ್ಟು ಇದೆ. ಅಂದರೆ ನೀವು ಗಳಿಸಿದ ಲಾಭದ ಮೊತ್ತದ ಮೇಲೆ ಶೇ. 15ರಷ್ಟು ಶಾರ್ಟ್ ಟರ್ಮ್ ಕ್ಯಾಪಿಟಲ್ ಗೇಯ್ನ್ ಟ್ಯಾಕ್ಸ್ ಹಾಗೂ ಸೆಸ್ ವಿಧಿಸಲಾಗುತ್ತದೆ.

ಇದನ್ನೂ ಓದಿ: ವಿಮಾ ಪಾಲಿಸಿ ನಿಯಮ ತಪ್ಪದೇ ಓದಿ; ರೋಗದಿಂದ ಸತ್ತರೂ ಹಣ ಕ್ಲೇಮ್ ಅಸಾಧ್ಯವಾಗಬಹುದು

ಲಾಂಗ್ ಟರ್ಮ್ ಕ್ಯಾಪಿಟಲ್ ಗೇಯ್ನ್ ಟ್ಯಾಕ್ಸ್

ಷೇರು ಖರೀದಿಸಿ ಒಂದು ವರ್ಷದ ಬಳಿಕ ಅದನ್ನು ಮಾರಿದರೆ ಸಿಗುವ ಲಾಭವನ್ನು ಲಾಂಗ ಟರ್ಮ್ ಕ್ಯಾಪಿಟಲ್ ಗೇನ್ ಎನ್ನುತ್ತಾರೆ. ಇದಕ್ಕೆ ಶೇ. 10ರಷ್ಟು ತೆರಿಗೆ ಅನ್ವಯ ಆಗುತ್ತದೆ. ಆದರೆ, ಒಂದು ವರ್ಷದಲ್ಲಿ ಒಂದು ಲಕ್ಷ ರೂವರೆಗಿನ ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್​ಗೆ ತೆರಿಗೆ ಅನ್ವಯ ಆಗುವುದಿಲ್ಲ. ಒಂದು ಲಕ್ಷ ರೂ ಮೇಲ್ಪಟ್ಟ ಲಾಭಕ್ಕೆ ಎಲ್​ಟಿಸಿಜಿ ಟ್ಯಾಕ್ಸ್ ಅನ್ವಯ ಆಗುತ್ತದೆ.

ಈ ತೆರಿಗೆ ಜೊತೆಗೆ ಷೇರು ಮಾರುವಾಗ ಬೇರೆ ಕೆಲ ಶುಲ್ಕ ಮತ್ತು ತೆರಿಗೆಗಳ ಬಗ್ಗೆಯೂ ತಿಳಿದಿರಲಿ. ನೀವು ಒಂದು ಷೇರನ್ನೇ ಮಾರಲಿ ಅಥವಾ ಒಟ್ಟಿಗೆ ಹಲವು ಷೇರುಗಳನ್ನೇ ಮಾರಲಿ ಅದಕ್ಕೆ ಸೆಕ್ಯೂರಿಟೀಸ್ ಟ್ರಾನ್ಸಾಕ್ಷನ್ ಟ್ಯಾಕ್ಸ್ (ಎಸ್​ಟಿಟಿ) ಅನ್ವಯ ಆಗುತ್ತದೆ. ಇದರ ಜೊತೆಗೆ ರಿಜಿಸ್ಟ್ರೇಶನ್ ಚಾರ್ಜ್, ಬ್ರೋಕರೇಜ್ ಚಾರ್ಜ್ ಇತ್ಯಾದಿ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ