ಮುಂಬರುವ ಬಜೆಟ್​ನಲ್ಲಿ ಮಧ್ಯಮ ವರ್ಗದವರಿಗೆ ಭರ್ಜರಿ ರಿಲೀಫ್ ಕಾದಿದೆಯಾ? ಇಲ್ಲಿದೆ ಖುಷಿ ಸುದ್ದಿ

|

Updated on: Dec 10, 2024 | 5:05 PM

2025-26 Budget: ಫೆಬ್ರುವರಿ 1ರಂದು ನಿರ್ಮಲಾ ಸೀತಾರಾಮನ್ ಮಂಡಿಸಲಿರುವ 2025-26ರ ಬಜೆಟ್​ನಲ್ಲಿ ಮಧ್ಯಮ ವರ್ಗದವರ ತೆರಿಗೆ ಹೊರೆ ಇಳಿಸುವ ಸಾಧ್ಯತೆ ಇದೆ. ವರದಿ ಪ್ರಕಾರ, 3ರಿಂದ 7 ಲಕ್ಷ ರೂ ಹಾಗೂ 7ರಿಂದ 10 ಲಕ್ಷ ರೂವರೆಗಿನ ಟ್ಯಾಕ್ಸ್ ಸ್ಲ್ಯಾಬ್ ದರಗಳಲ್ಲಿ ಇಳಿಕೆ ಆಗಬಹುದು. ಸದ್ಯ ಈ ಸ್ಲ್ಯಾಬ್​ಗಳಿಗೆ ಶೇ. 5 ಮತ್ತು ಶೇ. 10 ಟ್ಯಾಕ್ಸ್ ರೇಟ್ ಇದೆ.

ಮುಂಬರುವ ಬಜೆಟ್​ನಲ್ಲಿ ಮಧ್ಯಮ ವರ್ಗದವರಿಗೆ ಭರ್ಜರಿ ರಿಲೀಫ್ ಕಾದಿದೆಯಾ? ಇಲ್ಲಿದೆ ಖುಷಿ ಸುದ್ದಿ
ಬಜೆಟ್
Follow us on

ನವದೆಹಲಿ, ಡಿಸೆಂಬರ್ 10: ಮುಂಬರುವ ಫೆಬ್ರುವರಿ ತಿಂಗಳಲ್ಲಿ ಕೇಂದ್ರ ಬಜೆಟ್ ಮಂಡನೆಯಾಗಲಿದೆ. ನಿರ್ಮಲಾ ಸೀತಾರಾಮನ್ ಅವರು ಮಂಡಿಸಲಿರುವ ಆ ಬಜೆಟ್​ನಲ್ಲಿ ಮಧ್ಯಮ ವರ್ಗದವರು ಟ್ಯಾಕ್ಸ್ ದರ ಇಳಿಕೆಯ ಸಾಧ್ಯತೆಯನ್ನು ಸಣ್ಣ ಆಸೆಯಲ್ಲಿ ಎದುರು ನೋಡುತ್ತಿದ್ದಾರೆ. ಅಚ್ಚರಿ ಎಂದರೆ, ಕೆಲ ಮಾಧ್ಯಮ ವರದಿ ಪ್ರಕಾರ 2025-26ರ ಬಜೆಟ್​ನಲ್ಲಿ ಆದಾಯ ತೆರಿಗೆ ಪಾವತಿದಾರರಿಗೆ, ಅದರಲ್ಲೂ ಮಧ್ಯಮ ವರ್ಗದವರಿಗೆ ಸಾಕಷ್ಟು ಟ್ಯಾಕ್ಸ್ ರಿಲೀಫ್ ಸಿಗುವ ಸಾಧ್ಯತೆ ಇದೆಯಂತೆ.

ಹತ್ತು ಲಕ್ಷ ರೂವರೆಗಿನ ಆದಾಯ ಹೊಂದಿರುವವರಿಗೆ ತೆರಿಗೆ ಹೊರೆ ಸಾಕಷ್ಟು ಕಡಿಮೆ ಆಗಬಹುದು. ಇಟಿ ನೌ ವಾಹಿನಿಯ ವೆಬ್​ಸೈಟ್​ನಲ್ಲಿ ಪ್ರಕಟವಾಗಿರುವ ವರದಿ ಪ್ರಕಾರ 3 ಲಕ್ಷ ರೂ ಇರುವ ಟ್ಯಾಕ್ಸ್ ಎಕ್ಸೆಂಪ್ಷನ್​ನ ಮಿತಿಯನ್ನು ಹೆಚ್ಚಿಸಬಹುದು. ನಂತರ ಆರಂಭಿಕ ಟ್ಯಾಕ್ಸ್ ಸ್ಲ್ಯಾಬ್​ಗಳಲ್ಲಿ ತೆರಿಗೆ ದರವನ್ನು ಕಡಿತಗೊಳಿಸಬಹುದು ಎನ್ನಲಾಗಿದೆ. 3 ಲಕ್ಷ ರೂ ನಿಂದ 7 ಲಕ್ಷ ರೂವರೆಗಿನ ಟ್ಯಾಕ್ಸ್ ಸ್ಲ್ಯಾಬ್​ನಲ್ಲಿ ವ್ಯತ್ಯಯವಾಗುವ ಸಾಧ್ಯತೆ ದಟ್ಟವಾಗಿದೆ ಎಂದು ಈ ವರದಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ಬರುತ್ತಿದೆ ಇಪಿಎಫ್​ಒ 3.0: ನಿಮ್ಮ ಪಿಎಫ್ ಖಾತೆಗೆ ಇಷ್ಟಬಂದಷ್ಟು ಹಣ ಸೇರಿಸಿ; ಎಟಿಎಂನಲ್ಲೇ ವಿತ್​ಡ್ರಾ ಮಾಡಿ

2024-25ರ ಬಜೆಟ್​ನಲ್ಲಿ ಆದಾಯ ತೆರಿಗೆಯಲ್ಲಿ ಆಗಿದ್ದ ಬದಲಾವಣೆಗಳಿವು…

  • ಸಂಬಳದಾರರು ಮತ್ತು ಪಿಂಚಣಿದಾರರಿಗೆ ಇರುವ ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿಯನ್ನು 50,000 ರೂನಿಂದ 75,000 ರೂಗೆ ಹೆಚ್ಚಿಸಲಾಗಿದೆ.
  • ಕುಟುಂಬ ಪಿಂಚಣಿದಾರರಿಗೆ ಇರುವ ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿ 15,000 ರೂನಿಂದ 25,000 ರೂಗೆ ಹೆಚ್ಚಿಸಲಾಗಿದೆ.
  • ಉದ್ಯೋಗಿಗಳಿಗೆ ಕಂಪನಿಗಳಿಂದ ನೀಡಲಾಗುವ ಎನ್​ಪಿಎಸ್ ಕೊಡುಗೆಗಳಿಂದ ಸಿಗುವ ಡಿಡಕ್ಷನ್ ಅನ್ನು ಶೇ. 10ರಿಂದ ಶೇ. 14ಕ್ಕೆ ಏರಿಸಲಾಗಿದೆ.

2025-26ರ ಬಜೆಟ್​ನಲ್ಲಿ ಘೋಷಣೆ ಆಗಬಹುದಾದ ತೆರಿಗೆ ಬದಲಾವಣೆಗಳಿವು…

  • ಹತ್ತು ಲಕ್ಷ ರೂವರೆಗಿನ ಆದಾಯಗಳಿಗೆ ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್ ದರಗಳಲ್ಲಿ ಇಳಿಕೆ ಸಾಧ್ಯತೆ
  • 3 ಲಕ್ಷ ರೂನಿಂದ 7 ಲಕ್ಷ ರೂವರೆಗಿನ ಟ್ಯಾಕ್ಸ್ ಸ್ಲ್ಯಾಬ್​ನಲ್ಲಿ ತೆರಿಗೆ ಇಳಿಕೆ ಆಗಬಹುದು.

ಸದ್ಯ ಇರುವ ಹೊಸ ಟ್ಯಾಕ್ಸ್ ರೆಜಿಮೆಯಲ್ಲಿ ಇರುವ ದರಗಳಿವು…

  • 3 ಲಕ್ಷ ರೂವರೆಗೆ: ತೆರಿಗೆ ಇಲ್ಲ
  • 3ರಿಂದ 7 ಲಕ್ಷ ರೂವರೆಗಿನ ಆದಾಯ: ಶೇ. 5 (ಟ್ಯಾಕ್ಸ್ ರಿಬೇಟ್ ಇರುತ್ತದೆ)
  • 7ರಿಂದ 10 ಲಕ್ಷ ರೂ: ಶೇ. 10
  • 10ರಿಂದ 12 ಲಕ್ಷ ರೂ: ಶೇ. 15
  • 12ರಿಂದ 15 ಲಕ್ಷ ರೂ: ಶೇ. 20
  • 15 ಲಕ್ಷ ರೂ ಮೇಲ್ಪಟ್ಟ ಆದಾಯ: ಶೇ. 20ರಷ್ಟು ತೆರಿಗೆ

ಇದನ್ನೂ ಓದಿ: ಬ್ಯಾಂಕ್​ನಿಂದ ಕ್ಯಾಷ್ ಪಡೆದರೆ ತೆರಿಗೆ ಕಡಿತ ಆಗುತ್ತೆ… ನೀವು ತಿಳಿದಿರಲೇಬೇಕಾದ ನಿಯಮಗಳಿವು…

75,000 ರೂನ ಸ್ಟ್ಯಾಂಡರ್ಡ್ ಡಿಡಕ್ಷನ್ ಹಾಗೂ 7 ಲಕ್ಷ ರೂವರೆಗಿನ ಆದಾಯಕ್ಕೆ ಟ್ಯಾಕ್ಸ್ ರಿಬೇಟ್ ಇರುವುದನ್ನು ಪರಿಗಣಿಸಿದರೆ, 7.75 ಲಕ್ಷ ರೂವರೆಗೆ ಆದಾಯ ಹೊಂದಿರುವವರು ಟ್ಯಾಕ್ಸ್ ಕಟ್ಟುವ ಅವಶ್ಯಕತೆ ಇರುವುದಿಲ್ಲ. ಅದಕ್ಕೂ ಹೆಚ್ಚಿನ ಆದಾಯ ಇದ್ದರೆ ಆಗ ರಿಬೇಟ್ ಸಿಗುವುದಿಲ್ಲ. ಟ್ಯಾಕ್ಸ್ ಸ್ಲ್ಯಾಬ್ ದರ ಪ್ರಕಾರ ತೆರಿಗೆ ಪಾವತಿಸಬೇಕಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ