ನೀವು ಹಳೆಯ ಟ್ಯಾಕ್ಸ್ ರೆಜಿಮೆಯಲ್ಲಿ ಐಟಿ ರಿಟರ್ನ್ಸ್ ಫೈಲ್ ಮಾಡುತ್ತಿದ್ದರೆ ನಿಮಗೆ ಟ್ಯಾಕ್ಸ್ ಡಿಡಕ್ಷನ್ಗೆ ಅವಕಾಶ ಇರುವುದನ್ನು ನೋಡಬಹುದು. ಹೆಚ್ಚಿನ ಜನರಿಗೆ ಒಂದೂವರೆ ಲಕ್ಷ ರೂವರೆಗೆ ಟ್ಯಾಕ್ಸ್ ಡಿಡಕ್ಷನ್ ಇರುವುದು ಗೊತ್ತು. ಅದಕ್ಕೂ ಹೆಚ್ಚಿನ ಮೊತ್ತದ ಡಿಡಕ್ಷನ್ ಅವಕಾಶ ಇರುತ್ತದೆ. ಎನ್ಪಿಎಸ್, ಮೆಡಿಕಲ್ ಇನ್ಷೂರೆನ್ಸ್ಗಳಲ್ಲಿ ನೀವು ಮಾಡಿರುವ ಹೂಡಿಕೆಗೆ ಒಂದಷ್ಟು ಡಿಡಕ್ಷನ್ ಪಡೆಯಬಹುದು. ಒಟ್ಟಾರೆ ಮೂರ್ನಾಲ್ಕು ಲಕ್ಷ ರೂವರೆಗೆ ಡಿಡಕ್ಷನ್ ಪಡೆಯುವ ಅವಕಾಶಗಳಿವೆ. ಆದರೆ, ಅಷ್ಟು ತೆರಿಗೆ ಉಳಿಸಲು ಹೋಗಿ ಅನಗತ್ಯ ಹೂಡಿಕೆಯೂ ಸಮಂಜಸ ಎನಿಸುವುದಿಲ್ಲ.
ತೆರಿಗೆ ಉಳಿಸಲು ಟ್ಯಾಕ್ಸ್ ಡಿಡಕ್ಷನ್ ಎಷ್ಟು ಮಹತ್ವದ್ದು ಎಂಬುದು ಮೊದಲಿಗೆ ತಿಳಿಯಲೇಬೇಕಾದ ಸಂಗತಿ. ನಿಮ್ಮ ಒಟ್ಟಾರೆ ಆದಾಯದಲ್ಲಿ ಟ್ಯಾಕ್ಸಬಲ್ ಇನ್ಕಮ್ಗೆ ಮಾತ್ರವೇ ತೆರಿಗೆ ಅನ್ವಯ ಆಗುತ್ತದೆ. ಈ ಡಿಡಕ್ಷನ್ಗಳು ಟ್ಯಾಕ್ಸಬಲ್ ಇನ್ಕಮ್ ಮೊತ್ತವನ್ನು ಕಡಿಮೆಗೊಳಿಸುತ್ತವೆ. ಉದಾಹರಣೆಗೆ, ನಿಮ್ಮ ಒಂದು ವರ್ಷದ ಆದಾಯ 10 ಲಕ್ಷ ರೂ ಇದೆ ಎಂದಿಟ್ಟುಕೊಳ್ಳಿ. ನೀವು ಸೆಕ್ಷನ್ 80 ಸಿ ಅಡಿಯಲ್ಲಿ ಪಿಪಿಎಫ್ ಮತ್ತಿತರ ಸ್ಕೀಮ್ಗಳಲ್ಲಿ ವರ್ಷಕ್ಕೆ ಮಾಡಿದ ಹೂಡಿಕೆಯಲ್ಲಿ ಒಂದೂವರೆ ಲಕ್ಷ ರೂವರೆಗೂ ಟ್ಯಾಕ್ಸ್ ಡಿಡಕ್ಷನ್ ಇರುತ್ತದೆ. ಅಂದರೆ 10 ಲಕ್ಷ ರೂನಲ್ಲಿ ಒಂದೂವರೆ ಲಕ್ಷ ರೂ ಮೈನಸ್ ಮಾಡಿದರೆ 8.5 ಲಕ್ಷ ರೂ ಟ್ಯಾಕ್ಸಬಲ್ ಇನ್ಕಮ್ ಆಗುತ್ತದೆ.
ಈ ಮೇಲಿನ ಮೂರು ಮಾರ್ಗಗಳ ಮೂಲಕ 2.25 ಲಕ್ಷ ರೂನಿಂದ 3 ಲಕ್ಷ ರೂವರೆಗೆ ಡಿಡಕ್ಷನ್ ಪಡೆಯಲು ಸಾಧ್ಯ.
ಇಲ್ಲಿ ಸೆಕ್ಷನ್ 80 ಸಿ ಅಡಿಯಲ್ಲಿ ಪಿಪಿಎಫ್, ಲೈಫ್ ಇನ್ಷೂರೆನ್ಸ್, ಗೃಹಸಾಲದ ಅಸಲು ಹಣ ಮರುಪಾವತಿ, ಸುಕನ್ಯಾ ಸಮೃದ್ಧಿ ಯೋಜನೆ, ಇಎಲ್ಎಸ್ಎಸ್, ಯುಲಿಪ್, ಪೆನ್ಷನ್ ಫಂಡ್ ಮೊದಲಾದವರು ಬರುತ್ತವೆ.
ನ್ಯಾಷನಲ್ ಪೆನ್ಷನ್ ಸಿಸ್ಟಂನಲ್ಲಿ ಮಾಡುವ ಹೂಡಿಕೆಗೆ ವರ್ಷಕ್ಕೆ 50,000 ರೂವರೆಗೆ ಡಿಡಕ್ಷನ್ ಪಡೆಯಬಹುದು. ಅಂದರೆ ನೀವು ಒಂದು ವರ್ಷದಲ್ಲಿ ಎನ್ಪಿಎಸ್ನಲ್ಲಿ 50,000 ರೂ ಹೂಡಿಕೆ ಮಾಡಿದರೆ ಅಷ್ಟು ಮೊತ್ತದಷ್ಟು ಟ್ಯಾಕ್ಸನ್ ಇನ್ಕಮ್ ಕಡಿಮೆ ಆಗುತ್ತದೆ.
ಇದನ್ನೂ ಓದಿ: ನಿಮಗೆ ಮತ್ತು ಕುಟುಂಬಕ್ಕೆ ಯಾವ ರೀತಿಯ ಇನ್ಷೂರೆನ್ಸ್ ಅಗತ್ಯ? ಹೇಗೆ ಆಯ್ಕೆ ಮಾಡುವುದು? ಇಲ್ಲಿದೆ ಸಿಂಪಲ್ ಟಿಪ್ಸ್
ಇಲ್ಲಿ ನಿಮ್ಮ ಕುಟುಂಬ ಎಂದರೆ ನೀವು, ಪತ್ನಿ ಮತ್ತು ಮಕ್ಕಳು. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಹೆಲ್ತ್ ಇನ್ಷೂರೆನ್ಸ್ ಪಾಲಿಸಿ ಮಾಡಿಸಿದ್ದರೆ 25,000 ರೂನಷ್ಟು ಟ್ಯಾಕ್ಸ್ ಡಿಡಕ್ಷನ್ ಪಡೆಯಬಹುದು.
ನಿಮ್ಮ ತಂದೆ ತಾಯಿ ಇದ್ದು ಅವರ ವಯಸ್ಸು 60 ವರ್ಷದೊಳಗೆ ಇದ್ದರೆ ಆಗ ಆಗ ಹೆಲ್ತ್ ಇನ್ಷೂರೆನ್ಸ್ ಪಾಲಿಸಿಗೆ 50,000 ರೂವರೆಗೆ ಡಿಡಕ್ಷನ್ ಪಡೆಯಬಹುದು. ನಿಮ್ಮ ತಂದೆ ತಾಯಿ 60 ವರ್ಷ ಮೇಲ್ಪಟ್ಟು ವಯಸ್ಸಿನವರಾಗಿದ್ದರೆ 75,000 ರೂ ಟ್ಯಾಕ್ಸ್ ಡಿಡಕ್ಷನ್ ಪಡೆಯಬಹುದು. ನೀವು ಸೇರಿದಂತೆ ಕುಟುಂಬದ ಪ್ರತಿಯೊಬ್ಬರ ವಯಸ್ಸೂ 60 ವರ್ಷ ಮೇಲ್ಪಟ್ಟಿದ್ದರೆ ಒಂದು ಲಕ್ಷ ರೂವರೆಗೆ ಟ್ಯಾಕ್ಸ್ ಡಿಡಕ್ಷನ್ ಪಡೆಯಬಹುದು.
ನಿಮ್ಮ ಸಂಬಳದಲ್ಲಿ ಎಚ್ಆರ್ಎ ಅಥವಾ ಹೌಸ್ ರೆಂಟ್ ಅಲೋಯನ್ಸ್ ಫೀಚರ್ ಇದ್ದರೆ ಆ ಹಣವನ್ನು ಟ್ಯಾಕ್ಸಬಲ್ ಇನ್ಕಮ್ನಿಂದ ಕಳೆಯಲಾಗುತ್ತದೆ. ಒಂದು ವೇಳೆ ಸಂಬಳದಲ್ಲಿ ಎಚ್ಆರ್ಎ ಇಲ್ಲದೇ ಇದ್ದಾಗ ನೀವು ಮನೆ ಬಾಡಿಗೆಗೆ ಟ್ಯಾಕ್ಸ್ ಡಿಡಕ್ಷನ್ ಪಡೆಯಬಹುದು. ಆದರೆ, ನಿಮ್ಮ ಹಾಗೂ ಕುಟುಂಬದವರ ಹೆಸರಲ್ಲಿ ಸ್ವಂತ ಮನೆ ಇರಬಾರದು. ಆಗ ನೀವು ಬಾಡಿಗೆ ಮನೆಯ ಮೊತ್ತಕ್ಕೆ ಡಿಡಕ್ಷನ್ ಪಡೆಯಲು ಸಾಧ್ಯ. ಇದು ಗರಿಷ್ಠ 60,000 ರೂವರೆಗೂ ಡಿಡಕ್ಷನ್ ಅವಕಾಶ ಇದೆ.
ಇದನ್ನೂ ಓದಿ: ಸುಕನ್ಯಾ ಸಮೃದ್ಧಿ, ಪಿಪಿಎಫ್ ಇತ್ಯಾದಿ ಸ್ಮಾಲ್ ಸೇವಿಂಗ್ ಸ್ಕೀಮ್ ದರಗಳ ಮುಂದುವರಿಕೆ; ಇಲ್ಲಿದೆ ಈ ಯೋಜನೆಗಳ ದರಪಟ್ಟಿ
ಶಿಕ್ಷಣ ಸಾಲ, ಗೃಹಸಾಲದ ಬಡ್ಡಿ, ಸೇವಿಂಗ್ಸ್ ಅಕೌಂಟ್ನಿಂದ ಬರುವ ಬಡ್ಡಿ ಇವಕ್ಕೆ ಸೀಮಿತ ಪ್ರಮಾಣದಲ್ಲಿ ಟ್ಯಾಕ್ಸ್ ಡಿಡಕ್ಷನ್ ಸಿಗುತ್ತದೆ. ಹಾಗೆಯೇ, ಪಿಎಂ ನ್ಯಾಷನಲ್ ರಿಲೀಫ್ ಫಂಡ್, ನ್ಯಾಷನಲ್ ಡಿಫೆನ್ಸ್ ಫಂಡ್, ನ್ಯಾಷನಲ್ ಸ್ಪೋರ್ಟ್ಸ್ ಫಂಡ್ ಇತ್ಯಾದಿ ಫಂಡ್ಗಳಿಗೆ ನೀವು ದೇಣಿಗೆಯ ಹಣಕ್ಕೆ ಪೂರ್ಣ ಡಿಡಕ್ಷನ್ ಇರುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:18 am, Thu, 4 July 24